ಅಮೆಜಾನ್ "ದಿ ಗ್ರೇಟ್ ಇಂಡಿಯನ್ ಸೇಲ್"..ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್!!

ಅಮೆಜಾನ್ ರೆಡ್‌ಮಿ ಪ್ರೈಮ್ ಎಸ್, ಮೋಟೊ ಜಿ4 ಮತ್ತು ಒನ್‌ಪ್ಲಸ್ 3ಟಿ ಸ್ಮಾರ್ಟ್‌ಫೊನ್‌ಗಳ ಮೇಲೆ ಉತ್ತಮ ಆಫರ್ ನೀಡಿದೆ.

Written By:

ಭಾರತದ ಬಹುದೊಡ್ಡ ಆನ್‌ಲೈನ್‌ ಶಾಪಿಂಗ್ ಜಾಲತಾಣ ಅಮೆಜಾನ್ ಇದೀಗ ಮೂರು ದಿವಸಗಳ ಕಾಲ "ದಿ ಗ್ರೇಟ್ ಇಂಡಿಯನ್ ಸೇಲ್" ಮಾರಾಟವನ್ನು ಆರಂಭಿಸಿದೆ.! 20 ನೇ ತಾರೀಕಿನಿಂದ ಮೂರು ದಿವಸಗಳ ಕಾಲ ಈ ಗ್ರೇಟ್‌ ಇಂಡಿಯನ್ ಆಫರ್‌ ಸೇಲ್ ಇರಲಿದೆ.

ಸ್ಮಾರ್ಟ್‌ಫೋನ್ , ಸ್ಮಾರ್ಟ್‌ಫೋನ್ ಅಸೆಸರಿಸ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಭಾರಿ ಡಿಸ್ಕೌಂಟ್ ನೀಡಿ ಅಮೇಜಾನ್‌ ಈ ಸೇಲ್ ಆರಂಭಿಸಿದ್ದು, ಮುಖ್ಯವಾಗಿ ರೆಡ್‌ಮಿ ಪ್ರೈಮ್ ಎಸ್, ಮೋಟೊ ಜಿ4 ಮತ್ತು ಒನ್‌ಪ್ಲಸ್ 3ಟಿ ಸ್ಮಾರ್ಟ್‌ಫೊನ್‌ಗಳ ಮೇಲೆ ಉತ್ತಮ ಆಫರ್ ನೀಡಿದೆ.

ಅಮೆಜಾನ್

ಪೇಟಿಎಂ ತೆರೆಯುತ್ತಿದೆ ಪೇಮೆಂಟ್ ಬ್ಯಾಂಕ್!.ತಿಳಿಯಬೇಕಿರುವ ಪೂರ್ಣ ಮಾಹಿತಿ!!?

ಮೋಟೊ ಜಿ4 ಸ್ಮಾರ್ಟ್‌ಫೋನ್ 1000 ರೂಪಾಯಿಗಳ ಡಿಸ್ಕೌಂಟ್ಸ್‌ನೊಂದಿಗೆ ಕೇವಲ 7,999 ರೂಗಳಿಗೆ ಅಮೇಜಾನ್‌ನಲ್ಲಿ ಸೇಲ್‌ಗಿದೆ. ಇನ್ನು ಐಫೋನ್ 5 15,999 ರೂಪಾಯಿಗಳಿಗೆ ಇದ್ದು, ಅತ್ಯುತ್ತಮ ಎನ್ನುವ ದರದಲ್ಲಿ ಖರೀಸದಿಸಬಹುದು.

ಲ್ಯಾಪ್‌ಟಾಪ್, ಮತ್ತು ಇತರ ಎಲ್ಲಾ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ಡಿಸ್ಕೌಂಟ್ಸ್ ಇದ್ದು, ಮೂರು ದಿನಗಳ ಈ ಆಫರ್‌ ಸೇಲ್‌ನಲ್ಲಿ 10 ಗ್ರಾಹಕರು ರೆನಾಲ್ಟ್ ಕ್ವಿಡ್ ಕಾರ್‌ ಗೆಲ್ಲುವ ಅವಕಾಶವನ್ನು ಅಮೆಜಾನ್ ನೀಡಿದೆ. ಜೊತೆಗೆ ಹತ್ತು ಜೋಡಿಗಳು ಸಂಪೂರ್ಣ ಉಚಿತವಾದ ಯೂರೋಪ್‌ ಟ್ರಿಪ್ ಆಫರ್ ಪಡೆಯಲಿದ್ದಾರೆ.

ಅಮೆಜಾನ್

ಎಸ್‌ಬಿಐ ಬ್ಯಾಂಕ್‌ ಕ್ರಿಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ಮೇಲೆ 10 ಪರ್ಸೆಂಟ್‌ ಡಿಸ್ಕೌಂಟ್‌ ನೀಡಲಾಗಿದ್ದು, ಎಸ್‌ಬಿಐ ಬ್ಯಾಂಕ್‌ ಗ್ರಾಹಕರು ಈ ಆಫರ್‌ ಸದುಪಯೋಗಪಡಿಸಿಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Amazon Great Indian Sale, which will go on from January 20 to January 22. to know more visit to kannada.gizbot.com
Please Wait while comments are loading...
Opinion Poll

Social Counting