1000 ರೂ ಒಳಗಿನ ಟಾಪ್ 5 ಉತ್ತಮ ಇಯರ್ ಪೋನ್ಸ್

ಮಾರುಕಟ್ಟೆಯಲ್ಲಿ ಲಭ್ಯವಿರುವ 1 ಸಾವಿರ ರೂಗಳಿಗೂ ಕಡಿಮೆ ಬೆಲೆಯ ಟಾಪ್ 5 ಇಯರ್ ಪೋನ್ಸ್‍ಗಳ ಕುರಿತಾದ ಮಾಹಿತಿ ಇಲ್ಲಿದೆ. ಉತ್ತಮ ಸಂಗೀತ ಕೇಳಲು ಮತ್ತು ಬೆಲೆಯ ಕುರಿತ ಮಾಹಿತಿ ತಿಳಿಯಲು ಈ ಲೇಖನ ನಿಮಗೆ ಸಹಾಯಕಾರಿಯಾಗಬಹುದು.

|

ಇಂದಿನ ಹಲವು ಕಂಪನಿಗಳು ಸ್ಮಾರ್ಟ್‌ಪೋನಿನೊಂದಿಗೆ ಇಯರ್ ಪೋನ್ಸ್ ಗಳನ್ನು ನೀಡುವ ವಾಡಿಕೆಯನ್ನು ಮರೆತಂತಿದೆ. ಇನ್ನು ಹಲವು ಕಂಪನಿಗಳು ಇಯರ್ ಪೋನ್ಸ್ ಕೊಟ್ಟರು ಕಳಪೆ ಗುಣಮಟ್ಟದನ್ನು ನೀಡಿರುತ್ತಾರೆ. ಇದರಿಂದ ಉತ್ತಮ ಸಂಗೀತವನ್ನು ಆಲಿಸಲು ಸಾಧ್ಯವಿಲ್ಲ. ಅಲ್ಲದೇ ಎಂಪಿ3 ಪ್ಲೇಯರ್ ಮುಂತಾದವುಗಳಿಂದ ಸಂಗೀತ-ಹಾಡು ಕೇಳಲು ಉತ್ತಮ ಇಯರ್ ಪೋನ್ಸ್ ಅಗತ್ಯವಾಗಿದೆ.

1000 ರೂ ಒಳಗಿನ ಟಾಪ್ 5 ಉತ್ತಮ ಇಯರ್ ಪೋನ್ಸ್

ಅಸಸ್ ನಿಂದ 6,999ಕ್ಕೆ 128 ಜಿಬಿ ಸ್ಮಾರ್ಟ್‌ಪೋನ್..!

ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ 1 ಸಾವಿರ ರೂಗಳಿಗೂ ಕಡಿಮೆ ಬೆಲೆಯ ಟಾಪ್ 5 ಇಯರ್ ಪೋನ್ಸ್‍ಗಳ ಕುರಿತಾದ ಮಾಹಿತಿ ಇಲ್ಲಿದೆ. ಉತ್ತಮ ಸಂಗೀತ ಕೇಳಲು ಮತ್ತು ಬೆಲೆಯ ಕುರಿತ ಮಾಹಿತಿ ತಿಳಿಯಲು ಈ ಲೇಖನ ನಿಮಗೆ ಸಹಾಯಕಾರಿಯಾಗಬಹುದು.

ಟಾಪ್ 5: Sennheiser CX-180 Street II

ಟಾಪ್ 5: Sennheiser CX-180 Street II

ಸೆನೈಜರ್ ಕಂಪನಿಯು ಇಯರ್ ಪೋನ್ಸ್‍ ತಯಾರಿಕೆಯಲ್ಲಿ ಸಾಕಷ್ಟು ಹೆಸರು ಮಾಡಿದೆ. ಸದ್ಯ ಬಿಡುಗಡೆ ಮಾಡಿರುವ CX-180 Street II ಇಯರ್ ಪೋನ್ಸ್‍ ಉತ್ತಮ ಗುಣಮಟ್ಟದ ಸಂಗೀತವನ್ನು ಆಲಿಸಲು ಹೇಳಿ ಮಾಡಿಸಿದಂತಿದೆ. 1 ಸಾವಿರ ರೂ ಒಳಗಿನ ಇಯರ್ ಪೋನ್ಸ್‍ಗಳಲ್ಲಿ ಇದು ಉತ್ತಮವಾಗಿದೆ. ಈ ಇಯರ್ ಪೋನ್ಸ್‍ ವಿನ್ಯಾಸ ಚೆನ್ನಾಗಿದ್ದು, ಬೆಸ್ಟ್ ಕ್ವಾಲಿಟಿ ಎನ್ನಬಹುದು. ಈ ಇಯರ್ ಪೋನ್ಸ್‍ ಹೊರಭಾಗದ ಶಬ್ದವನ್ನು ಸಂಪೂರ್ಣವಾಗಿ ತಡೆಯಲಿದ್ದು, ಬೆಸ್ ಇಮಪ್ರೆಸಿವ್ ಟೆಕ್ನೊಲಜಿ ಹೊಂದಿದ್ದು, ಒಳ್ಳೆ ಬೆಸ್ ಔಟ್ ಪುಟ್ ನೀಡುತ್ತದೆ.

Sennheiser CX-180 Street II ಬೆಲೆ: ರೂ.819.

ಟಾಪ್ 4: JBL T150 In-Ear Headset

ಟಾಪ್ 4: JBL T150 In-Ear Headset

ಜೆಬಿಎಲ್ ಕಂಪನಿಯು ಆಡಿಯೋಗೆ ಸಂಬಂಧಿಸಿದ ವಿಚಾರದಲ್ಲಿ ತನ್ನದೇ ಛಾಪು ಮೂಡಿಸಿದ್ದು, ಸದ್ಯ ಕಡಿಮೆ ಬೆಲೆಯ ಇಯರ್ ಪೋನ್ಸ್‍ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. JBL T150 In-Ear Headset ಗುಣಮಟ್ಟದಲ್ಲಿ ಉತ್ತಮವಾಗಿದ್ದು, ವಿನ್ಯಾಸವು ಚೆನ್ನಾಗಿದೆ.
ಈ ಇಯರ್ ಪೋನ್ಸ್‍ ನಲ್ಲಿ ಜೆಬಿಎಲ್ ಸಿಗ್ನೇಚರ್ ಸೌಂಡ್ ನೊಂದಿಗೆ ಒಳ್ಳೆಯ ಮ್ಯೂಸಿಕ್ ಕೇಳಲು ಬೇಕಾದ ನಿಶಬ್ದತೆಯನ್ನು ಕ್ರಿಯೆಟ್ ಮಾಡಲಿದೆ. ಅಲ್ಲದೇ ಉತ್ತಮ ಬೆಸ್ ಸೌಂಡ್ ಕೇಳಿಬರಲಿದ್ದು, ಇನ್-ಇಯರ್ ಹೆಡೆಸೆಟ್ ಇದ್ದಾಗಿದ್ದು, ಆದರೆ ಕಡಿಮೆ ವಾಲ್ಯುಮ್ ನಲ್ಲಿ ಅಷ್ಟಾಗಿ ಆಡಿಯೋ ಕೇಳುವುದಿಲ್ಲ.

JBL T150 In-Ear Headset ಬೆಲೆ; ರೂ.1095

ಟಾಪ್ 3: Cowon EM1

ಟಾಪ್ 3: Cowon EM1

ಕೊವಾನ್ ಕಂಪನಿಯ ಇಯರ್ ಪೋನ್ಸ್‍ ಸದ್ಯ ಮಾರುಕಟ್ಟೆಯಲ್ಲಿ ಮುಂಚುಣಿಯಲ್ಲಿದ್ದು, ಇನ್-ಇಯರ್ ಹೆಡೆಸೆಟ್ ಇದ್ದಾಗಿದ್ದು, ಪ್ಲಾಟ್ ಕೇಬಲ್ ವಿನ್ಯಾಸ ಹೊಂದಿದೆ. ಗುಣಮಟ್ಟದ ಆಡಿಯೋ ಔಟ್‌ಪುಟ್ ನೀಡುತ್ತದೆ. ಲೈಟ್ ವೈಟ್ ಹೆಡೆಸೆಟ್ ಆಗಿರುವುದರಿಂದ ಕಿವಿಯಲ್ಲಿ ಆರಾಮವಾಗಿ ಇರಲಿದೆ. ಈ ಇಯರ್ ಪೋನ್ಸ್‍ ಸಹ ಹೊರ ಭಾಗದ ಬೇಡದಿರುವ ಶಬ್ದಗಳನ್ನು ನಿಯಂತ್ರಿಸಿ ಉತ್ತಮ ಸಂಗೀತ ಕೇಳಲು ಸಹಾಯಕಾರಿಯಾಗಿದೆ. ಇದರ ಆಡಿಯೋ ಔಟ್‌ಪುಟ್ ಹೈ ಕ್ವಾಲಿಟಿಯದ್ದಾಗಿದೆ.

Cowon EM1 ಬೆಲೆ : ರೂ.749

ಟಾಪ್ 2: Brainwavz Omega

ಟಾಪ್ 2: Brainwavz Omega

ಬ್ರೈನ್ ವೈವ್ಜ್ ಇಯರ್ ಪೋನ್ಸ್‍ ನಿಮ್ಮ ಹಣಕ್ಕೆ ತಕ್ಕದಾಗಿದ್ದು, ಉತ್ತಮ ಗುಣಮಟ್ಟದ ಆಡಿಯೋ ಆಲಿಸಲು ಇದು ಹೇಳಿ ಮಾಡಿಸಿದಂತಹ ಇಯರ್ ಪೋನ್ಸ್‍ ಆಗಿದೆ, ಈ ಇಯರ್ ಪೋನ್ಸ್‍ ಸಹ ಲೈಟ್ ವೈಟ್ ಆಗಿರುವ ಇದರ ವಿನ್ಯಾಸವೂ ಹೊಸತನದಿಂದ ಕೂಡಿದ್ದು, ಬಳಹ ಹೊತ್ತು ಕಿವಿಯಲ್ಲಿ ಇರಿಸಿಕೊಂಡರು ಯಾವುದೇ ತೊಂದರೆಯಾಗುವುದಿಲ್ಲ.

Brainwavz Omega ಬೆಲೆ ರೂ.999

ಟಾಪ್ 1:  Panasonic RP-TCM 125 Ergo Fit

ಟಾಪ್ 1: Panasonic RP-TCM 125 Ergo Fit

ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚುಣಿಯಲ್ಲಿರುವ ಪ್ಯಾನಸೋನಿಕ್ ಕಂಪನಿಯ ಇಯರ್ ಪೋನ್ಸ್‍ ಕಡಿಮೆ ಬೆಲೆ ಮತ್ತು ಉತ್ತಮ ಗುಣಮಟ್ಟದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಸಧ್ಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಗುಣಮಟ್ಟದ ಇಯರ್ ಪೋನ್ಸ್‍ ಎಂದರೆ Panasonic RP-TCM 125 Ergo Fit ಮಾತ್ರ. ನೋಡಲು ಉತ್ತಮ ವಿನ್ಯಾಸ ಹೊಂದಿಲ್ಲವಾದರು, ಆಡಿಯೋ ಕೇಳಲು ಉತ್ತಮವಾಗಿದೆ. ಅಲ್ಲದೇ ಇದರ ಬೆಲೆಯು ಕಡಿಮೆ ಇದೆ.

Panasonic RP-TCM 125 Ergo Fit ಬೆಲೆ ರೂ.541

Best Mobiles in India

English summary
a list best 5 Earphones priced under Rs 1,000 which are capable of producing excellent audio output and soothe your ears. to konw more visit kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X