500 ರೂಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಟಾಪ್ 5 ಮೊಬೈಲ್‌ ಆಕ್ಸೆಸರೀಸ್‌ಗಳು

ರೂ.500 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಅತ್ಯುತ್ತಮ ಮೊಬೈಲ್‌ ಆಕ್ಸೆಸರೀಸ್'ಗಳು ಯಾವುವು ತಿಳಿಯಿರಿ

By Suneel
|

ಪ್ರಸ್ತುತ ದಿನಗಳಲ್ಲಿ ಶೇ.99 ನಿಜವಾಗಲು ಜನರು ತಮ್ಮ ಸ್ಮಾರ್ಟ್‌ಫೋನ್‌ ಬಿಟ್ಟು ಇರಲಾರರು. ಇನ್ನೂ ಉಚಿತ ಇಂಟರ್ನೆಟ್ ಇದ್ದರಂತು ಸೋ ಸಾರಿ.. ಇನ್ನೊಬ್ಬರ ಕೈಗೆ ಮೊಬೈಲ್‌ನು ಕೊಡಲ್ಲ ಹಾಗೆ ಅವರ ಕೈಲಿಂದಲೂ ಬಿಡಲ್ಲ. ಬೆಳಿಗ್ಗೇನೆ ಎದ್ದು ಮೇಲ್‌ಗಳನ್ನು ಚೆಕ್‌ ಮಾಡುವುದು, ಅದ್ಭುತ ಸನ್ನಿವೇಶಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು, ಇಂಟರ್ನೆಟ್ ಬ್ರೌಸಿಂಗ್ ಮಾಡುವುದು ಇತರೆ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ.

ಅಂದಹಾಗೆ ಕೆಲವರು ಮೊಬೈಲ್ ಸಂಬಂಧಿತ ಗ್ಯಾಜೆಟ್‌ಗಳನ್ನು ಖರೀದಿಸಲು ಬಹಳಷ್ಟು ಹಿಂಜರಿಯುತ್ತಾರೆ. ಯಾಕಂದ್ರೆ ಸಣ್ಣ ಪುಟ್ಟ ಅಗತ್ಯ, ಆದರೆ ತೀರ ಅಗತ್ಯವಲ್ಲದ ಗ್ಯಾಜೆಟ್‌ಗಳಿಗೂ ಬೆಲೆ ಅತ್ಯಧಿಕ ಎಂದು. ಈ ರೀತಿ ಯೋಚಿಸುವವರು ಗಿಜ್‌ಬಾಟ್‌ಗೆ ಆಗಾಗ ಭೇಟಿ ನೀಡುತ್ತಿದ್ದರೆ ಕೈಗೆಟಕುವ ಬೆಲೆಯ, ಉತ್ತಮ ಆಫರ್‌ಗಳ ಮೊಬೈಲ್ ಗ್ಯಾಜೆಟ್‌ ಖರೀದಿ ಬಗ್ಗೆ ಮಾಹಿತಿ ಸಿಗುತ್ತದೆ.

6.4ಇಂಚು ಡಿಸ್‌ಪ್ಲೇ ಲೆನೊವೋ ಫ್ಯಾಬ್ 2 ಬಜೆಟ್ ಬೆಲೆಯಲ್ಲಿ ನಾಳೆ ಲಾಂಚ್‌: ವಿಶೇಷತೆಗಳೇನು?

ಹೌದು, ಇಂದಿನ ಲೇಖನದಲ್ಲಿ ರೂ.500 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಅತ್ಯುತ್ತಮ ಮೊಬೈಲ್‌ ಆಕ್ಸೆಸರೀಸ್ ಬಗ್ಗೆ ನಾವು ಮಾಹಿತಿ ನೀಡುತ್ತಿದ್ದೇವೆ. ಈ ಗ್ಯಾಜೆಟ್‌ಗಳು ಯಾವುವು ಎಂದು ಮುಂದೆ ಓದಿ ತಿಳಿಯಿರಿ.

10 ಇಂಚಿನ ಮೊಬೈಲ್ ಟ್ರೈಪಾಡ್

10 ಇಂಚಿನ ಮೊಬೈಲ್ ಟ್ರೈಪಾಡ್

ಸ್ಮಾರ್ಟ್‌ಫೋನ್‌ಗಳು ಈಗ ಹೊಸ ಕ್ಯಾಮೆರಾಗಳಾಗಿವೆ. ಹಾಗಂತ ಹೈಎಂಡ್ ಸ್ಮಾರ್ಟ್‌ಫೋನ್‌ ಕೆಲಸವನ್ನು ಸರಾಗವಾಗಿ ಮಾಡುವುದಿಲ್ಲ. ಸ್ಮಾರ್ಟ್‌ಫೋನ್‌ಗಳಿಗೂ ಇಂದು ಟ್ರೈಪಾಡ್ ಆಡಿಯೋ, ವೀಡಿಯೊ, ಫೋಟೋ ಕ್ಯಾಪ್ಚರ್ ಮಾಡುವ ವೇಳೆ 10 ಇಂಚಿನ ಈ ಟ್ರೈಪಾಡ್ ಸಹಾಯಕವಾಗಿದೆ.

ಆನ್‌ಲೈನ್ ಮಾರುಕಟ್ಟೆಯಲ್ಲಿ ಹಲವು ರೀತಿಯ ಟ್ರೈಪಾಡ್‌ಗಳು ಲಭ್ಯವಿದ್ದು, 500 ರೂಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊಬೈಲ್‌ಗಳಿಗೆ ಫ್ಲೆಕ್ಸಿಬಲ್ ಟ್ರೈಪಾಡ್

ಮೊಬೈಲ್‌ಗಳಿಗೆ ಫ್ಲೆಕ್ಸಿಬಲ್ ಟ್ರೈಪಾಡ್

ಮೊದಲೇ ಹೇಳಿದ ಟ್ರೈಪಾಡ್ ಡೀಸೆಂಟ್ ಜಾಬ್‌ ನಿರ್ವಹಿಸಬಲ್ಲದು. ಹಾಗೆಯೇ ಫ್ಲೆಕ್ಸಿಬಲ್ ಟ್ರೈಪಾಡ್ ಮೊದಲೇ ಹೇಳಿದಕ್ಕಿಂತ ಉತ್ತಮವಾಗಿ ಯಾವುದೇ ಜಾಗದಲ್ಲಿ ಇರಿಸಬಹುದಾದ ನಮ್ಯ ಫೀಚರ್ ಹೊಂದಿದೆ.

ಈ ಫ್ಲೆಕ್ಸಿಬಲ್ ಟ್ರೈಪಾಡ್‌ ಸಹ 500 ರೂಗಿಂಗ ಕಡಿಮೆ ಬೆಲೆಯಲ್ಲಿ ಆನ್‌ಲೈನ್‌ ಖರೀದಿ ತಾಣಗಳಲ್ಲಿ ಲಭ್ಯ.

 ಮಲ್ಟಿಪೋರ್ಟ್ ವಾಲ್‌ ಅಡಾಪ್ಟರ್ ಚಾರ್ಜರ್

ಮಲ್ಟಿಪೋರ್ಟ್ ವಾಲ್‌ ಅಡಾಪ್ಟರ್ ಚಾರ್ಜರ್

ಹಲವು ಡಿವೈಸ್‌ಗಳನ್ನು ಹೊಂದಿರುವವರು ಎಲ್ಲಾ ಡಿವೈಸ್‌ಗಳ ಚಾರ್ಜರ್ ಅನ್ನು ಹೋದಲೆಲ್ಲಾ ಹೊತ್ತಿಕೊಂಡು ಹೋಗಲು ಆಗುವುದಿಲ್ಲ. ಅಂತಹವರು ಮಲ್ಟಿಪೋರ್ಟ್ ಚಾರ್ಜರ್ ಅನ್ನು ಸುಲಭವಾಗಿ ಬಳಸಬಹುದು. ಒಂದೇ ಚಾರ್ಜರ್, ಆದರೆ ಹಲವು ಡಿವೈಸ್‌ಗಳನ್ನು ಒಂದೇ ಸಮಯದಲ್ಲಿ ಚಾರ್ಜ್‌ ಮಾಡಬಹುದು. ಆದರೆ ಹಲವು ಕೇಬಲ್‌ಗಳು ಮಾತ್ರ ಅಗತ್ಯ. 'LDNIO 4 port USB Max 4.2A AC' ಅಡಾಪ್ಟರ್‌ ಅನ್ನು ರೂ.500 ಕ್ಕೆ ಆಯ್ಕೆ ಮಾಡಬಹುದು.

ಫೋನ್‌/ಟ್ಯಾಬ್ಲೆಟ್ ಸ್ಟ್ಯಾಂಡ್

ಫೋನ್‌/ಟ್ಯಾಬ್ಲೆಟ್ ಸ್ಟ್ಯಾಂಡ್

ಇದು ವೀಡಿಯೊ ನೋಡಲು ಮತ್ತು ಈ-ಬುಕ್ಸ್ ಓದಲು, ಇಂಟರ್ನೆಟ್ ಬ್ರೌಸಿಂಗ್‌ಗಾಗಿ ಮತ್ತು ಸುಲಭವಾಗಿ ಚಾರ್ಜ್‌ ಮಾಡಲು.

ವೈಟಿ ಮೊಬೈಲ್‌ ಫೋನ್‌ ಮೆಟಲ್ ಸ್ಟ್ಯಾಂಡ್ ಗುಡ್‌ ಆಪ್ಶನ್‌ ಎಂದರೆ ತಪ್ಪಾಗಲಾರದು. ಇದರ ಬೆಲೆ ರೂ.399 ಆಗಿದ್ದು, ಪ್ರಸ್ತುತದಲ್ಲಿ ರೂ.249 ಕ್ಕೆ ಖರೀದಿಸಬಹುದು.

ಯುಎಸ್ಬಿ ಒಟಿಜಿ ಅಡಾಪ್ಟರ್

ಯುಎಸ್ಬಿ ಒಟಿಜಿ ಅಡಾಪ್ಟರ್

ಸ್ಮಾರ್ಟ್‌ಫೋನ್‌ಗಳಲ್ಲಿ ಹೈಬ್ರಿಡ್ ಸಿಮ್ ಸ್ಲಾಟ್ ಸೆಟಪ್‌ ಸಾಮಾನ್ಯ ಸಮಸ್ಯೆ ಆಗಿಬಿಟ್ಟಿದೆ. ನೀವು ಸಹ ಇಂತದೇ ಡಿವೈಸ್ ಬಳಸುತ್ತಿದ್ದಲ್ಲಿ, ಅತಿ ಹೆಚ್ಚಿನ ಮಲ್ಟಿಮೀಡಿಯಾ ಬಳಸುತ್ತಿದ್ದಲ್ಲಿ, ಸೆಕೆಂಡರಿ ಸಿಮ್‌ ಸ್ಲಾಟ್ ಅನ್ನು ಕಳೆದುಕೊಳ್ಳದಿರಲು 'ಯುಎಸ್ಬಿ ಒಟಿಜಿ ಅಡಾಪ್ಟರ್' ನಿಮಗೆ ಉತ್ತಮ ಆಯ್ಕೆಯಾಗಿದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ (ಸ್ಟ್ಯಾಂಡರ್ಡ್ ಮತ್ತು ಟೈಪ್-ಸಿ)ಅಡಾಪ್ಟರ್‌ ಅನ್ನು ವೆಬ್‌ಸೈಟ್‌ನಲ್ಲಿ ರೂ.500 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Must Read: Top 5 Tech Accessories You Can Get Under Rs. 500 in India. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X