ಸ್ಯಾಮ್ಸಂಗ್ ಗೇರ್ ಎಸ್3 ಕ್ಲಾಸಿಕ್ vs ಗೇರ್ ಎಸ್3 ಫ್ರಾಂಟೀರ್ vs ಆ್ಯಪಲ್ ವಾಚ್: 6 ಮುಖ್ಯ ವ್ಯತ್ಯಾಸಗಳು.

|

ಬಹುನಿರೀಕ್ಷಿತ ಗೇರ್ ಎಸ್3 ವಾಚನ್ನು ಸ್ಯಾಮ್ಸಂಗ್ ಬರ್ಲಿನ್ನಿನ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿತು. ಸ್ಯಾಮ್ಸಂಗ್ ಎರಡು ಆವೃತ್ತಿಯ ವಾಚುಗಳನ್ನು ಬಿಡುಗಡೆಗೊಳಿಸಿತು: ಗೇರ್ ಎಸ್3 ಫ್ರಾಂಟೀರ್ ಮತ್ತು ಗೇರ್ ಎಸ್3 ಕ್ಲಾಸಿಕ್.

ಸ್ಯಾಮ್ಸಂಗ್ ಗೇರ್ ಎಸ್3 ಕ್ಲಾಸಿಕ್ vs ಗೇರ್ ಎಸ್3 ಫ್ರಾಂಟೀರ್ vs ಆ್ಯಪಲ್ ವಾಚ್: 6

ಆ್ಯಪಲ್ ವಾಚ್ ನ ಮಾರುಕಟ್ಟೆಯನ್ನು ಕಿತ್ತುಕೊಳ್ಳುವುದು ಸ್ಯಾಮ್ಸಂಗ್ ನ ಮುಖ್ಯ ಉದ್ದೇಶ ಎನ್ನುವುದು ಸ್ಪಷ್ಟ. ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ತನ್ನ ಹಿಂದಿನ ವಾಚುಗಳಲ್ಲಿ ಯಶ ಕಂಡಿತ್ತು ಮತ್ತು ಮಾರುಕಟ್ಟೆಯಲ್ಲಿ ಚೆನ್ನಾಗಿ ಮಾರಾಟವಾಗಿ ಪೈಪೋಟಿ ನೀಡಿತ್ತು.

ಓದಿರಿ:ಯಶಸ್ಸಿನ ಕದದ ಬೋಲ್ಟ್ ತೆರೆಯಲು ಜಿಯೋ ಬಳಸಿದ 'ವೋಲ್ಟ್'

ಈ ಲೇಖನದಲ್ಲಿ, ಹೊಸದಾಗಿ ಬಿಡುಗಡೆಗೊಂಡ ಗೇರ್ ಎಸ್3 ಸ್ಮಾರ್ಟ್ ವಾಚುಗಳನ್ನು ಈಗಾಗಲೇ ಇರುವ ಆ್ಯಪಲ್ ವಾಚಿನೊಂದಿಗೆ ಹೋಲಿಕೆ ಮಾಡಿದ್ದೇವೆ.

ಹೊಸ ಸ್ಮಾರ್ಟ್‌ವಾಚ್ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಚಿನ ವ್ಯಾಸ.

ವಾಚಿನ ವ್ಯಾಸ.

ಗೇರ್ ಎಸ್3 ಫ್ರಾಂಟೀರ್ ಮತ್ತು ಗೇರ್ ಎಸ್3 ಕ್ಲಾಸಿಕ್ ದೊಡ್ಡದಾಗಿದೆ, ಇದರ ವ್ಯಾಸ 46ಎಂ.ಎಂನಷ್ಟಿದೆ, ಆ್ಯಪಲ್ ವಾಚಿನ 42 ಎಂ.ಎಂ ವ್ಯಾಸಕ್ಕೆ ಹೋಲಿಸಿದರೆ ಇದು ತುಂಬಾನೇ ದೊಡ್ಡದಾಗಿದೆ.

ಆದರೆ ಗೇರ್ ಎಸ್3ಯಲ್ಲಿನ ಪರದೆ ಚಿಕ್ಕದು. 1.3ಇಂಚಿನ ಅಮೊಲೆಡ್ ಪರದೆಯಿದೆ, 360x360 ಪಿಕ್ಸೆಲ್ ರೆಸೊಲ್ಯೂಷನ್ ಇದೆ. ಆ್ಯಪಲ್ ವಾಚಿನಲ್ಲಿ 1.3ಇಂಚಿನ ಅಮೊಲೆಡ್ ಪರದೆ ಹಾಗೂ 390x312 ಪಿಕ್ಸೆಲ್ ರೆಸೊಲ್ಯೂಷನ್ ಇದೆ.

ಪ್ರೊಸೆಸರ್ ಮತ್ತು ರ್ಯಾಮ್.

ಪ್ರೊಸೆಸರ್ ಮತ್ತು ರ್ಯಾಮ್.

ಆ್ಯಪಲ್ ವಾಚಿನ ಪ್ರೊಸೆಸರ್ ಸ್ವಲ್ಪ ಕಡಿಮೆ ಶಕ್ತಿಶಾಲಿ ಯಾಕೆಂದರೆ ಅವರು ತಮ್ಮದೇ ಚಿಪ್ ಗಳನ್ನು ಉಪಯೋಗಿಸುತ್ತಾರೆ. ಆ್ಯಪಲ್ ವಾಚಿನಲ್ಲಿ 520MHzನ ಆ್ಯಪಲ್ ಎಸ್1 ಚಿಪ್ ಇದೆ. ಗೇರ್ ಎಸ್3 ಯಲ್ಲಿ 1GHzನ ಡುಯಲ್ ಕೋರ್ ಪ್ರೊಸೆಸರ್ ಇದೆ.

ಆ್ಯಪಲ್ ವಾಚಿನ ರ್ಯಾಮ್ ಗೇರ್ ವಾಚುಗಳಿಗಿಂತ ಕಡಿಮೆ. ಗೇರ್ ವಾಚುಗಳಲ್ಲಿ 786ಎಂಬಿ ರ್ಯಾಮ್ ಇದ್ದರೆ ಆ್ಯಪಲ್ ವಾಚಿನಲ್ಲಿ 521ಎಂಬಿ ರ್ಯಾಮ್ ಇದೆ.

ಸಂಗ್ರಹ ಸಾಮರ್ಥ್ಯ.

ಸಂಗ್ರಹ ಸಾಮರ್ಥ್ಯ.

ಇಲ್ಲಿ ಆ್ಯಪಲ್ ವಾಚ್ ಗೆಲ್ಲುತ್ತದೆ. ಗೇರ್ ವಾಚುಗಳಿಗಿಂತ ಆ್ಯಪಲ್ ವಾಚ್ ಹಳೆಯದಾದರೂ ಅದರಲ್ಲಿ 8ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿದೆ, ಹೊಸ ಗೇರ್ ವಾಚಿನಲ್ಲಿ 4ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯವಿದೆ.

ಟೈಜನ್ ಒಎಸ್ vs ವಾಚ್ ಒಎಸ್2.

ಟೈಜನ್ ಒಎಸ್ vs ವಾಚ್ ಒಎಸ್2.

ಸ್ಯಾಮ್ಸಂಗ್ ನ ಟೈಜನ್ ಒಎಸ್ ಗೆ ಹೋಲಿಸಿದರೆ ಆ್ಯಪಲ್ ನ ವಾಚ್ ಒಎಸ್ ಚೆನ್ನಾಗಿದೆ. ಟೈಜನ್ ಒಎಸ್ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ ಮತ್ತು ವಾಚ್ ಒಎಸ್ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿದೆ. ಆ್ಯಪಲ್ ವಾಚ್ 2 ಬಿಡುಗಡೆಯಾದ ನಂತರ ಆ್ಯಪಲ್ ವಾಚ್ ಒಎಸ್3 ಬಿಡುಗಡೆಗೊಳಿಸುತ್ತದೆ.

ಬ್ಯಾಟರಿ.

ಬ್ಯಾಟರಿ.

ಆ್ಯಪಲ್ ವಾಚಿನಲ್ಲಿ 250ಎಂ.ಎ.ಹೆಚ್ ನ ಚಿಕ್ಕ ಬ್ಯಾಟರಿಯಿದೆ, 22 ಘಂಟೆಗಳವರೆಗೆ ಬರುತ್ತದೆ. ಸ್ಯಾಮ್ಸಂಗ್ ಗೇರ್ ಎಸ್3 ವಾಚಿನಲ್ಲಿರುವ 380ಎಂ.ಎ.ಹೆಚ್ ಬ್ಯಾಟರಿ ಕಂಪನಿಯವರ ಪ್ರಕಾರ 24ಘಂಟೆಗಳ ಕಾಲ ಬರುತ್ತದೆ.

ಇತರೆ.

ಇತರೆ.

ಎರಡೂ ವಾಚ್ ತಯಾರಕರು ಈ ವಾಚುಗಳು ಜಲನಿರೋಧಕ ಎನ್ನುತ್ತವಾದರೂ ಎಷ್ಟು ಸಮಯ ನೀರಿನಲ್ಲಿರಬಹುದೆಂದು ತಿಳಿಸುವುದಿಲ್ಲ.

ಕೆಲವು ಮಾರುಕಟ್ಟೆಗಳಲ್ಲಿ ಮಾತ್ರ ಲಭ್ಯವಿರುವ ಗೇರ್ ಎಸ್3 ಫ್ರಾಂಟೀಯರ್ ನಲ್ಲಿ 4ಜಿ ಸಿಮ್ ಕೂಡ ಹಾಕಬಹುದು ಎನ್ನುವುದು ವಿಶೇಷವೇ ಸರಿ.

Best Mobiles in India

English summary
Samsung launched the much-anticipated Gear S3 at the ongoing IFA in Berlin. Unlike previous iterations of Gear smartwatches, Samsung launched two variants of the Gear S3 dubbed as the Gear S3 Frontier and Gear S3 Classic.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X