ವಿಶ್ವದ ಅತೀ ವೇಗದ SD Card ಬಿಡುಗಡೆ ಮಾಡಿದ ಸೋನಿ

ಪ್ರತಿಯೊಂದು ಡಿಜಿಟಲ್ ವಸ್ತುವು ತನ್ನ ವೇಗವನ್ನು ವೃದ್ಧಿಸಿಕೊಂಡು ಮಾರುಕಟ್ಟೆಯಲ್ಲಿ ಉಳಿದುಕೊಳ್ಳುವ ಪ್ರಯತ್ನ ಮಾಡುತ್ತಿವೆ. ಇದೇ ಯತ್ನದಲ್ಲಿ ಸೋನಿ ವಿಶ್ವದ ಅತೀ ವೇಗದ SD Card ಬಿಡುಗಡೆ ಮಾಡಿದೆ.

|

ಸದ್ಯ ಡಿಜಿಟಲ್ ಜಗತ್ತಿನಲ್ಲಿ ಎಲ್ಲವೂ ವೇಗವಾಗಿ ಇರಲೇ ಬೇಕು. ವೇಗ ಕಡಿಮೆ ಆದರೆ ಯಾವ ವಸ್ತುವಿಗೂ ಬೆಲೆ ಇಲ್ಲ. ಹಾಗಾಗೀ ದಿನದಿಂದ ದಿನಕ್ಕೆ ಪ್ರತಿಯೊಂದು ಡಿಜಿಟಲ್ ವಸ್ತುವು ತನ್ನ ವೇಗವನ್ನು ವೃದ್ಧಿಸಿಕೊಂಡು ಮಾರುಕಟ್ಟೆಯಲ್ಲಿ ಉಳಿದುಕೊಳ್ಳುವ ಪ್ರಯತ್ನ ಮಾಡುತ್ತಿವೆ. ಇದೇ ಯತ್ನದಲ್ಲಿ ಸೋನಿ ವಿಶ್ವದ ಅತೀ ವೇಗದ SD Card ಬಿಡುಗಡೆ ಮಾಡಿದೆ.

ವಿಶ್ವದ ಅತೀ ವೇಗದ SD Card ಬಿಡುಗಡೆ ಮಾಡಿದ ಸೋನಿ

ಓದಿರಿ: ಫೆ.26ರಂದು ನೋಕಿಯಾ ಪೋನ್ ಬಿಡುಗಡೆ ಮಾಡುವುದನ್ನು ನಿಮ್ಮ ಸ್ಮಾರ್ಟ್‌ಪೋನುನಲ್ಲೇ ಲೈವ್ ನೋಡಿ..!

SF-G ಸರಣಿಯ SD card

SF-G ಸರಣಿಯ SD card

ಸೋನಿ ಸದ್ಯ ಬಿಡುಗಡೆ ಮಾಡಿರುವ SF-G ಸರಣಿಯ SD cardಗಳು ವಿಶ್ವದಲ್ಲೇ ಲಭ್ಯವಿರುವ ಅತೀ ವೇಗದ SD cardಗಳು ಎನ್ನುವ ಖ್ಯಾತಿಯನ್ನು ಪಡೆದುಕೊಳ್ಳಲಿದ್ದು, SF-G ಸರಣಿಯ SD cardಗಳು 299MBpsನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿವೆ. 32GB, 64GB, ಮತ್ತು 128GB ಮೆಮೊರಿ ಕಾರ್ಡ್‌ಗಳು ಮಾರುಕಟ್ಟೆಗೆ ಪ್ರವೇಶಿಸಿವೆ ಆದರೆ ಸದ್ಯ ಬೆಲೆ ಇನ್ನು ತಿಳಿದಿಲ್ಲ.

DSLR ಕ್ಯಾಮೆರಾಗಳಲ್ಲಿ ಬಳಸಲು ಸೂಕ್ತ

DSLR ಕ್ಯಾಮೆರಾಗಳಲ್ಲಿ ಬಳಸಲು ಸೂಕ್ತ

ಈ SF-G ಸರಣಿಯ SD cardಗಳು DSLR ಕ್ಯಾಮೆರಾಗಳಲ್ಲಿ ಬಳಸಲು ಸೂಕ್ತವಾಗಿದ್ದು, ವಿಡಿಯೋ ತೆಗೆಯುವವರಿಗೆ ಮತ್ತು ಪೋಟೋಗ್ರಫಿಯಲ್ಲಿ ಬಳಸಲು ಹೇಳಿ ಮಾಡಿಸಿದಂತಿದೆ. ಈ ಮೆಮೊರಿ ಕಾರ್ಡ್‌ಗಳು UHS-II ಸಪೋರ್ಟ್ ಮಾಡುವ ಕ್ಯಾಮೆರಗಳಲ್ಲಿ HD ಪೋಟೋಗಳನ್ನು ಸೆರೆಹಿಡಿಯಲು ಈ ಕಾರ್ಡ್‌ಗಳನ್ನು ಬಳಸಬಹುದಾಗಿದೆ.

ಹೊಸ ತಂತ್ರಜ್ಞಾನ

ಹೊಸ ತಂತ್ರಜ್ಞಾನ

ಈ SF-G ಸರಣಿಯ SD cardಗಳು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ತಯಾರಿಸಲಾಗಿದ್ದು, ಇವುಗಳು ಶಾಕ್‌ ಪ್ರೂಫ್ ಆಗಿದ್ದು, ಟೆಪರೆಚರ್ ಫ್ರೂಪ್, ವಾಟರ್‌ ಫ್ರೂಪ್ ಮತ್ತು ಎಕ್ಸ್‌ರೇ ಫ್ರೂಫ್ ಆಗಿವೆ.

ರಿಕವರಿ ಸಾಫ್ಟ್‌ವೇರ್‌

ರಿಕವರಿ ಸಾಫ್ಟ್‌ವೇರ್‌

ಈ ಕಾರ್ಡ್‌ ಜೊತೆಯಲ್ಲಿ ಸೋನಿ ಫೈಲ್ ರೆಸ್ಕ್ಯೂ ಸಾಫ್ಟ್‌ವೇರ್‌ ನೀಡಲಿದ್ದು, ಇದು ಪೋಟೋ ಮತ್ತು ವಿಡಿಯೋಗಳನ್ನು ರಿಕವರಿ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಈ ಸಾಫ್ಟವೇರ್ RAW ಇಮೇಜ್‌ಗಳನ್ನು ರಿಕವರಿ ಮಾಡಿಕೊಡಲಿದೆ.

Best Mobiles in India

Read more about:
English summary
Sony has launched its SF-G Series of SD cards, which as per the company's claims, are the world's fastest SD cards with write speeds of up to 299MBps. to know more viait.kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X