ದೇಹದ ಉಷ್ಣತೆಯನ್ನು ಅಳತೆಯಲು 'ಥರ್ಮೊ' ಆವಿಷ್ಕಾರ

By Shwetha
|

ನೋಕಿಯಾ ಆಧಾರಿತ ಸಂಸ್ಥೆಯೊಂದು ಥರ್ಮೊ ಎಂಬ ಉತ್ಪನ್ನವನ್ನು ಪ್ರಸ್ತುತಪಡಿಸಿದ್ದು, ಡಿಜಿಟಲ್ ಥರ್ಮೋಮೀಟರ್ ಇದಾಗಿದ್ದು ನಿಮ್ಮ ದೇಹದ ತಾಪಮಾನವನ್ನು ಇದು ಹೆಚ್ಚು ಪರಿಣಾಮಕಾರಿಯಾಗಿ ಅಳತೆ ಮಾಡುತ್ತದೆ. ಭಾರತದ ಮಾರುಕಟ್ಟೆಯನ್ನು ಇದು ಇತ್ತೀಚೆಗೆ ತಾನೇ ಪ್ರವೇಶಿಸಿದ್ದು ನಿಖರವಾದ ಮತ್ತು ಹೆಚ್ಚು ಸ್ಮಾರ್ಟ್ ಆಗಿರುವ ದೇಹದ ತಾಪಮಾನ ಅಳತೆ ಮಾಡುವ ಸಾಧನ ಇದಾಗಿದೆ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ಥರ್ಮೊ ಕುರಿತ ಮತ್ತಷ್ಟು ಅಂಶಗಳನ್ನು ಅರಿತುಕೊಳ್ಳೋಣ.

ಓದಿರಿ: ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಡಿಲೀಟ್‌ ಮಾಡಿದ್ದಾರೆ ತಿಳಿಯುವುದು ಹೇಗೆ?

ಥರ್ಮೊ

ಥರ್ಮೊ

ಭಾರತೀಯ ಮಾರುಕಟ್ಟೆಯನ್ನು ಇದೀಗ ತಾನೇ ಪ್ರವೇಶಿಸಿರುವ ಥರ್ಮೊ ಇನ್ನಷ್ಟು ಫಿಟ್‌ನೆಸ್ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಬೆಲೆ $99.5 ಆಗಿದೆ.

ದೇಹದ ತಾಪಮಾನ

ದೇಹದ ತಾಪಮಾನ

1 ಸೆಂ.ಮೀ ದೂರದಲ್ಲಿದ್ದರೂ ಥರ್ಮೊ ದೇಹದ ತಾಪಮಾನವನ್ನು ಅಳತೆ ಮಾಡಬಲ್ಲುದು. ಹಣೆಯಲ್ಲಿ ಇದನ್ನು ಇರಿಸಿ ಎರಡು ಸೆಕೆಂಡ್‌ಗಳಲ್ಲಿ ಇದು 4,00 ಅಳತೆಗಳನ್ನು ನೀಡಿ ಹೆಚ್ಚು ಬಿಸಿ ಇರುವ ಸ್ಥಾನವನ್ನು ಗುರುತಿಸಲಿದೆ.

ಬಣ್ಣದ ಎಲ್‌ಇಡಿ ಇಂಡಿಕೇಟರ್

ಬಣ್ಣದ ಎಲ್‌ಇಡಿ ಇಂಡಿಕೇಟರ್

ಈ ಡಿವೈಸ್ ಬಣ್ಣದ ಎಲ್‌ಇಡಿ ಇಂಡಿಕೇಟರ್ ಅನ್ನು ಪಡೆದುಕೊಂಡಿದ್ದು ದೇಹದ ತಾಪಮಾನವನ್ನು ಇದು ಸೂಚಿಸುತ್ತದೆ. ಥರ್ಮೊ ಅಪ್ಲಿಕೇಶನ್‌ನೊಂದಿಗೆ ಇದು ಲಿಂಕ್ ಅನ್ನು ಪಡೆದುಕೊಂಡಿದ್ದು ಬಳಕೆದಾರರ ಸ್ಮಾರ್ಟ್‌ಫೋನ್‌ನಲ್ಲಿ ಥರ್ಮೊ ಅಪ್ಲಿಕೇಶನ್ ಎಲ್ಲಾ ದಾಖಲೆಗಳನ್ನು ಸ್ವಯಂಚಾಲಿತವಾಗಿ ಸಿಂಕ್ ಮಾಡುತ್ತದೆ.

ಸುಧಾರಿತ ಆರೋಗ್ಯ ಸಲಹೆ

ಸುಧಾರಿತ ಆರೋಗ್ಯ ಸಲಹೆ

ಥರ್ಮೊ ಅಪ್ಲಿಕೇಶನ್ ಸುಧಾರಿತ ಆರೋಗ್ಯ ಸಲಹೆಗಳನ್ನು ನಿಮಗೆ ನೀಡುತ್ತದೆ. ಹೆಚ್ಚು ರೀಡಿಂಗ್‌ಗಳನ್ನು ನಡೆಸಲು ವೈಫೈ ಬಳಕೆಯನ್ನು ಥರ್ಮೊ ಪಡೆದುಕೊಳ್ಳುತ್ತದೆ. ಸಂಪೂರ್ಣ ಕುಟುಂಬ ಇದನ್ನು ಬಳಸಿಕೊಂಡು ದೇಹದ ತಾಪಮಾನವನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.

ಕಾಮೆಂಟ್, ಅಧಿಸೂಚನೆ

ಕಾಮೆಂಟ್, ಅಧಿಸೂಚನೆ

ತಾಪಮಾವನ್ನು ಪರಿಶೀಲಿಸಿಕೊಳ್ಳುವುದು ಮಾತ್ರವಲ್ಲದೆ, ಕಾಮೆಂಟ್, ಅಧಿಸೂಚನೆ ಮತ್ತು ಬಳಕೆದಾರರು ತಮ್ಮ ಪ್ರೊಫೈಲ್ ಚಿತ್ರವನ್ನು ಇಲ್ಲಿ ಲಗತ್ತಿಸಿಕೊಳ್ಳಬಹುದಾಗಿದೆ.

Best Mobiles in India

English summary
The Nokia-owned company recently introduced Thermo, a digital thermometer which it claims is the smartest and most accurate way of measuring body temperature.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X