ಮನೆಯಲ್ಲೇ ನೀರಿನಿಂದ ಬಿಯರ್‌ ತಯಾರಿಸುವ ಮಷಿನ್

By Suneel
|

ಬಹುಸಂಖ್ಯಾತರು ಟೆಕ್ನಾಲಜಿ ಅಂದ್ರೆ ಗಣಿತ ವಿಷಯಕ್ಕೆ ಹೆದರುವಷ್ಟೇ ಹೆದರುತ್ತಾರೆ. ಆದರೆ ಗಣಿತ ಮತ್ತು ಟೆಕ್ನಾಲಜಿಗೆ ಹೆದರುವವರೂ ಸಹ ತಮ್ಮ ದಿನನಿತ್ಯ ಸೇವೆಗಳಿಗೆ ಟೆಕ್ನಾಲಜಿಯನ್ನೇ ಆಧರಿಸಿದ್ದಾರೆ.

ಅಂದಹಾಗೆ ರಿಯಲ್‌ ಟ್ರೆಂಡ್‌ ಸೆಟ್ಟರ್‌ಗಳು ಕೇವಲ ಯಾವಾಗಲು ಹಳೆ ಉತ್ಪನ್ನಗಳ ಮೇಲೆ ಆಧಾರಿತವಾಗಿರುವುದಿಲ್ಲ. ದಾಕ್ಷಾರಸದಿಂದ ಮಾಡಿದ ಬಿಯರ್‌ ಅನ್ನೇ ಕುಡಿಯುವುದು ಟ್ರೆಂಡ್ ಅಲ್ಲ. ಯಾಕಂದ್ರೆ ಹಿಂದಿನಿಂದಲೂ ಸಹ ದ್ರಾಕ್ಷಾರಸದಿಂದಲೇ ಬಿಯರ್‌ ತಯಾರಿ ಮಾಡುತ್ತಾರೆ.

ಆದ್ರೆ ಈಗ ರಿಯಲ್‌ ಟ್ರೆಂಡ್‌ ಸೆಟ್ಟರ್‌ಗಳು ಬಿಯರ್‌ ತಯಾರಿಸಲು ಟೆಕ್ನಾಲಜಿ ಬಳಸಿಕೊಂಡು ಹೊಸ ವಿಧಾನವನ್ನೇ ಕಂಡುಹಿಡಿದಿದ್ದಾರೆ. ಇಸ್ರೇಲ್‌ ಮೂಲದ 'ಸೋಡಾಸ್ಟ್ರೀಮ್‌ ಇಂಟರ್‌ನ್ಯಾಷನಲ್‌' ಕಂಪನಿ ತಯಾರಿಸಿರುವ ಡಿವೈಸ್‌ ಮನೆಯಲ್ಲೇ ನೀರಿನಿಂದ ಬಿಯರ್‌ ತಯಾರಿ ಮಾಡಿಕೊಡುತ್ತದೆ. ಅದ್‌ ಹೇಗೆ ಎಂಬ ವಿಶೇಷ ಮಾಹಿತಿಯನ್ನು ಸ್ಲೈಡರ್‌ನಲ್ಲಿ ಓದಿ. ಹಾಗೆ ವೀಡಿಯೊವನ್ನು ನೋಡಿ.

ತಲೆ ಕತ್ತರಿಸಿದರೂ 2 ವರ್ಷ ಬದುಕಿದ ಹುಂಜ 'ದಿ ಮೈಕ್‌'

1

1

ಇಸ್ರೇಲ್‌ ಮೂಲದ ಸೋಡಾಸ್ಟ್ರೀಮ್ ಇಂಟರ್‌ನ್ಯಾಷನಲ್‌ ಅಭಿವೃದ್ದಿಪಡಿಸಿರುವ ಡಿವೈಸ್ ಹೆಸರು 'ಸೋಡಾಸ್ಟ್ರೀಮ್'. ಈ ಡಿವೈಸ್‌ ಮನೆಯಲ್ಲೇ ವಿಶೇಷ ಬಿಯರ್‌ ತಯಾರಿಸಿಕೊಡುತ್ತದೆ. ಆದರೆ ಮನೆಯಲ್ಲಿನ ಸ್ಪಾರ್ಕ್ಲಿಂಗ್‌ ನೀರನ್ನು ಕಾಂಕ್ರೀಟ್‌ ಫಾರ್ಮುಲಾ 'ಬ್ಲಾಂಡೀ (Blondi)' ಸೇರಿಸಬೇಕಾಗುತ್ತದೆ.
ಫೋಟೋ ಕೃಪೆ: cPRESS ASSOCIATION VIA AP IMAGES

2

2

ಸೋಡಾಸ್ಟ್ರೀಮ್'ನಲ್ಲಿ ತಯಾರಿಸಿದ ಬಿಯರ್‌ ಶೇಕಡ 4.5 ರಷ್ಟು ಆಲ್ಕೋಹಾಲ್‌ ಕಂಟೆಂಟ್‌ ಹೊಂದಿರುತ್ತದೆ. ಅಲ್ಲದೇ ನೋಡಲು ಮತ್ತು ಟೇಸ್ಟ್‌ ಬಾರ್‌ನಲ್ಲಿ ಕೊಳ್ಳವ ಬಿಯರ್‌ನಂತೆ ಇರುತ್ತದೆ.
ಫೋಟೋ ಕೃಪೆ:SODASTREAM INTERNATIONAL

3

3

"ಕೋರ್‌ ಕಾರ್ಬೋನೇಷನ್‌ ಟೆಕ್ನಾಲಜಿ ಮತ್ತು ಡಿಸ್ಟ್ರಿಬ್ಯೂಷನ್‌ ಇನ್ಫ್ರಾಸ್ಟ್ರಕ್ಚರ್‌ ಉತ್ತಮ ವೇದಿಕೆಯನ್ನು ಬ್ಯುಸಿನೆಸ್‌ ಬೆಳವಣಿಗೆಗೆ ನೀಡಿರುವುದರಿಂದ ಬೀರ್‌ ಬ್ರಾಂಡ್‌ ಅನ್ನು ಆಯ್ಕೆ ಮಾಡಿ ಡಿವೈಸ್‌ ಅಭಿವೃದ್ದಿಪಡಿಸಲಾಗಿದೆ" ಎಂದು ಸೋಡಾಸ್ಟ್ರೀಮ್‌ ಸಿಇಓ 'ಡೇನಿಯಲ್‌ ಬರ್ನ್‌ಬಾಮ್‌' ಕಂಪನಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಿದ್ದಾರೆ.

4

4

ಮನೆಯಲ್ಲೇ ಬಿಯರ್‌ ತಯಾರಿಸುವುದು ಹೇಗೆ ಎಂದು ತಿಳಿಯಲು, ಸ್ಪಾರ್ಕ್ಲಿಂಗ್ ನೀರನ್ನು ಕಾರ್ಬೋನೇಟೆಡ್‌ ನೀರಾಗಿ ಡಿವೈಸ್‌ ಹೇಗೆ ಮಾಡುತ್ತದೆ ಎಂಬುದನ್ನು ತಿಳಿಯಲು ಕಂಪನಿ ನೀಡಿರುವ ವೀಡಿಯೊವನ್ನು ಎಚ್ಚರದಿಂದ ನೋಡಿದರೆ ಸಾಕು ಎಂದು ಕಂಪನಿ ಹೇಳಿದೆ.

5

5

ಸೋಡಾಸ್ಟ್ರೀಮ್‌ ತಯಾರಿಸಿರುವ ಬಿಯರ್‌ ತಯಾರಿಕೆಯ ಡಿವೈಸ್‌ ಪ್ರಸ್ತುತದಲ್ಲಿ ಕೇವಲ ಕಂಪನಿಯ ಜರ್ಮನಿ ವೆಬ್‌ಸೈಟ್ www.sodastream.de ನಲ್ಲಿ ಲಭ್ಯವಿದೆ. ಸ್ವಿಟ್ಜರ್ಲ್ಯಾಂಡ್‌ನಲ್ಲೂ ಲಭ್ಯವಿದೆ.

6

6

ಬಿಯರ್‌ ಫ್ಯಾನ್ಸ್‌ಗಳಿಗೆ ಶೀಘ್ರದಲ್ಲಿ ಬೀರ್‌ ಬಾರ್‌ ಗ್ಯಾಜೆಟ್‌ ಇತರ ಮಾರುಕಟ್ಟೆಗಳಿಗೂ ಬರಲಿದೆಯಂತೆ. ಬಿಯರ್‌ ಅನ್ನು ಮನೆಯಲ್ಲೇ ತಯಾರಿಕೊಳ್ಳುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ನಲ್ಲಿ ವೀಡಿಯೊ ನೋಡಿ.

7

ಸೋಡಾಸ್ಟ್ರೀಮ್ ಬಿಯರ್‌ ತಯಾರಿಸುವ ಡಿವೈಸ್‌.
ವೀಡಿಯೊ ಕೃಪೆ: SodaStream

ಗಿಜ್‌ಬಾಟ್‌

ಗಿಜ್‌ಬಾಟ್‌

ಮೊಬೈಲ್‌ ನೀರಿಗೆ ಬಿದ್ದಲ್ಲಿ ರಕ್ಷಿಸುವುದು ಹೇಗೆ?ಮೊಬೈಲ್‌ ನೀರಿಗೆ ಬಿದ್ದಲ್ಲಿ ರಕ್ಷಿಸುವುದು ಹೇಗೆ?

ತಲೆ ಕತ್ತರಿಸಿದರೂ 2 ವರ್ಷ ಬದುಕಿದ ಹುಂಜ 'ದಿ ಮೈಕ್‌' ತಲೆ ಕತ್ತರಿಸಿದರೂ 2 ವರ್ಷ ಬದುಕಿದ ಹುಂಜ 'ದಿ ಮೈಕ್‌'

ಗಿಜ್‌ಬಾಟ್‌

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
This machine lets you turn water into beer at home. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X