1000 ರೂ. ಒಳಗಿನ 32/64GB ಸಾಮಾರ್ಥ್ಯದ ಬೆಸ್ಟ್ ಟಾಪ್ 5 ಪೆನ್‌ಡ್ರೈವ್‌ಗಳು

1000 ರೂ.ಗಳಿಗೆ ಸದ್ಯ 32GB ರಿಂದ 64GB ಸಾಮಾರ್ಥ್ಯವಿರುವ ಪೆನ್ ಡ್ರೈವ್‌ಗಳು ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಆ ಕುರಿತಂತೆ ತಿಳಿಸುವ ಪ್ರಯತ್ನ ಇದಾಗಿದೆ. ನೋಡಿ ನಿಮ್ಮ ಬಜೆಟ್‌ಗೆ ಸರಿಹೊಂದುವ ಪೈನ್‌ಡ್ರೈವ್ ಆಯ್ಕೆ ಮಾಡಿಕೊಳ್ಳಿ.

Written By:

ಇಂದಿನ ದಿನಗಳಲ್ಲಿ ಪೆನ್‌ಡೈವ್ ಗಳ ಅವಶ್ಯಕತೆ ಹೆಚ್ಚಾಗಿದ್ದು, ದೂರದ ಊರುಗಳಿಗೆ ಡಿಜಿಟಲ್ ಮಾಹಿತಿಯನ್ನು ಸಾಗಿಸಲು ಅಥವಾ ಸ್ಟೊರ್ ಮಾಡಿಡಲು ಪೆನ್‌ಡ್ರೈವ್‌ಗಳ ಅಗತ್ಯತೆ ತೀರಾ ಹೆಚ್ಚಾಗಿದೆ. ಹಾಗಾಗಿಯೇ ಇಂದು ಕೈಗೆಟುವ ಬೆಲೆಯಲ್ಲಿ ಹೆಚ್ಚಿನ ಮೊಮೊರಿ ಹೊಂದಿರುವ ಪೆನ್‌ಡ್ರೈವ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹೀಗೆ ಸದ್ಯದ ಮಾರುಕಟ್ಟೆಯಲ್ಲಿ ಸಾವಿರ ರೂಗಳಿಗೆ ಲಭ್ಯವಿರುವ ಟಾಪ್ 5 ಪೆನ್‌ಡ್ರೈವ್‌ಗಳ ಕುರಿತು ಮಾಹಿತಿ ಇಲ್ಲಿದೆ.

1000 ರೂ. ಒಳಗಿನ ಬೆಸ್ಟ್ ಟಾಪ್ 5 ಪೆನ್‌ಡ್ರೈವ್‌ಗಳು

15,600mAh ಪವರ್ ಬ್ಯಾಂಕಿನ ಬೆಲೆ ಕೇವಲ ರೂ. 999....!!!!!

1000 ರೂ.ಗಳಿಗೆ ಸದ್ಯ 32GB ರಿಂದ 64GB ಸಾಮಾರ್ಥ್ಯವಿರುವ ಪೆನ್ ಡ್ರೈವ್‌ಗಳು ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಆ ಕುರಿತಂತೆ ತಿಳಿಸುವ ಪ್ರಯತ್ನ ಇದಾಗಿದೆ. ನೋಡಿ ನಿಮ್ಮ ಬಜೆಟ್‌ಗೆ ಸರಿಹೊಂದುವ ಪೈನ್‌ಡ್ರೈವ್ ಆಯ್ಕೆ ಮಾಡಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಟಾಪ್ 5: HP V236w 32 GB ಬೆಲೆ- 999

HP ಕಂಪನಿಯ V236w ಪೆನ್‌ಡ್ರೈವ್ ಟಾಪ್ 5ನೇ ಸ್ಥಾನದಲ್ಲಿದ್ದು, 999 ರೂಗಳಿಗೆ 32 GB ಸಾಮಾರ್ಥ್ಯವಿರುವ ಪೆನ್‌ಡ್ರೈವ್ ಇದಾಗಿದ್ದು, ಮೂರು ವರ್ಷಗಳ ವ್ಯಾರೆಂಟಿ ಹೊಂದಿದೆ. ಈ ಪೆನ್‌ಡ್ರೈವ್ 2.0 USB ಸಪೋರ್ಟ ಮಾಡಲಿದ್ದು, 20 mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಒಟ್ಟಾರೆಯಾಗಿ ಈ ಪೆನ್‌ಡ್ರೈವ್‌ಗೆ 10ಕ್ಕೆ 8.2 ಅಂಕಗಳು.

ಟಾಪ್ 4: Strontium Ammo SR32GSLAMMO 32 GB ಬೆಲೆ- 929

ಸ್ಟ್ರಾಂಟಿಯಮ್ ಅಮೋ ಕಂಪನಿಯ SR32GSLAMMO ಪೆನ್‌ಡ್ರೈವ್ 32 GB ವರೆಗೂ ಸ್ಟೋರೆಜ್ ಸಾಮಾರ್ಥ್ಯವನ್ನು ಹೊಂದಿದ್ದು, ಇದು ಸಹ 2.0 USB ಸಪೋರ್ಟ ಮಾಡಲಿದೆ, 20 mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಒಟ್ಟಾರೆಯಾಗಿ ಈ ಪೆನ್‌ಡ್ರೈವ್‌ಗೆ 10ಕ್ಕೆ 8.4 ಅಂಕಗಳು.

ಟಾಪ್ 3: Kingston DTIG4/32GB 32 GB ಬೆಲೆ- 748

ಕಿಂಗ್‌ಸ್ಟನ್ ಕಂಪನಿಯ DTIG4 ಪೆನ್‌ಡ್ರೈವ್‌ ಸಹ 32 GB ಮೆಮೊರಿಯನ್ನು ಹೊಂದಿದ್ದು, ಎಂಟು ವರ್ಷಗಳ ವ್ಯಾರೆಂಟಿಯನ್ನು ಹೊಂದಿದೆ. 3.0 USB ಸಪೋರ್ಟ ಮಾಡುವ ಈ ಪೆನ್‌ಡ್ರೈವ್ 40mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಒಟ್ಟಾರೆಯಾಗಿ ಈ ಪೆನ್‌ಡ್ರೈವ್‌ಗೆ 10ಕ್ಕೆ 8 ಅಂಕಗಳು.

ಟಾಪ್ 2: Sony USM32W 32 GB ಬೆಲೆ-839

ಸೋನಿ ಕಂಪನಿಯ USM32W ಪೆನ್‌ಡ್ರೈವ್‌ ಸಹ 32 GB ಶೇಕರಣಾ ಸಾಮಾರ್ಥ್ಯವನ್ನು ಹೊಂದಿದ್ದು, ಐದು ವರ್ಷಗಳ ಗ್ಯಾರೆಂಟಿಯೊಂದಿಗೆ ದೊರೆಯಲಿದೆ. USB ಸಪೋರ್ಟ ಮಾಡಲಿದೆ, 20 mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಒಟ್ಟಾರೆಯಾಗಿ ಈ ಪೆನ್‌ಡ್ರೈವ್‌ಗೆ 10ಕ್ಕೆ 8.2 ಅಂಕಗಳು.

ಟಾಪ್ 1: Transcend JetFlash 700 32 GB ಬೆಲೆ- 766

ಪೆನ್‌ಡ್ರೈಪ್ ತಯಾರಿಕೆಯಲ್ಲಿ ಖ್ಯಾತಿಗಳಿಸಿದರು Transcend ಕಂಪನಿಯ JetFlash 700 ಪೆನ್‌ಡ್ರೈವ್ 32 GB ಮೆಮೊರಿಯನ್ನು ಹೊಂದಿದ್ದು, ಮೂರು ವರ್ಷಗಳ ವ್ಯಾರೆಂಟಿ ಹೊಂದಿದೆ. 40mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಒಟ್ಟಾರೆಯಾಗಿ ಈ ಪೆನ್‌ಡ್ರೈವ್‌ಗೆ 10ಕ್ಕೆ 8.8 ಅಂಕಗಳು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿRead more about:
English summary
Are you looking for best pen drives under 1000 rs with more storage up to 64gb..? Then you landed in the right place in this list we are providing top 5 best pen drives under 1000 rs to know more visit kannada.gizbot.com
Please Wait while comments are loading...
Opinion Poll

Social Counting