ಐಪೋನಿಗಿಂತಲೂ ತೆಳುವಾದ ಟಿವಿ ಬಿಡುಗಡೆ ಮಾಡಿದ ಕ್ಸಿಯೋಮಿ

ಮೊಬೈಲ್ ನಂತೆ ಟಿವಿಯಲ್ಲೂ ಎಂಐ ಸರಣಿಯನ್ನು ಪರಿಚಯಿಸಿದ್ದು, ಸದ್ಯಕ್ಕೆ Mi TV 4 ಎಂಬ ಟಿವಿಯನ್ನು ಬಿಡುಗಡೆಗೊಳಿಸಿದ್ದು, ಸದ್ಯ ಈ ವರ್ಷದ ಮಧ್ಯಭಾಗದಲ್ಲಿ ಈ ಟಿವಿಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿವೆ ಎನ್ನಲಾಗಿದೆ.

|

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಭರ್ಜರಿ ವಹಿವಾಟು ನಡೆಸುತ್ತಿರುವ ಚೀನಾ ಮೂಲದ ಕ್ಸಿಯೋಮಿ ಸದ್ಯ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಮುಂದಾಗಿದ್ದು, ಸ್ಮಾರ್ಟ್‌ಪೋನ್ ಲೋಕದಲ್ಲಿ ಖ್ಯಾತಿಗಳಿಸಿದ ನಂತರ ಈಗ ಟಿವಿ ಲೋಕದ ಕಡೆಗೆ ಮುಖಮಾಡಿದ್ದು, ಸದ್ಯ ಲಾಸ್‌ವೇಗಸ್ ನಲ್ಲಿ ನಡೆಯುತ್ತಿರುವ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋನಲ್ಲಿ ಮೊಬೈಲ್‌ಗಿಂತಲೂ ತೆಳುವಾದ ಟಿವಿಯನ್ನು ಬಿಡುಗಡೆ ಮಾಡಿ ಆಚ್ಚರಿ ಮೂಡಿಸಿದೆ.

ಜನವರಿ 11ಕ್ಕೆ 5100mAh ಬ್ಯಾಟರಿ ಸಾಮರ್ಥ್ಯದ Lenovo P2 ಬಿಡುಗಡೆ

ಮೊಬೈಲ್ ನಂತೆ ಟಿವಿಯಲ್ಲೂ ಎಂಐ ಸರಣಿಯನ್ನು ಪರಿಚಯಿಸಿದ್ದು, ಸದ್ಯಕ್ಕೆ Mi TV 4 ಎಂಬ ಟಿವಿಯನ್ನು ಬಿಡುಗಡೆಗೊಳಿಸಿದ್ದು, ಸದ್ಯ ಈ ವರ್ಷದ ಮಧ್ಯಭಾಗದಲ್ಲಿ ಈ ಟಿವಿಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿವೆ ಎನ್ನಲಾಗಿದೆ.

ಅತ್ಯಂತ ತೆಳುವಾದ ಟಿವಿ:

ಅತ್ಯಂತ ತೆಳುವಾದ ಟಿವಿ:

Mi TV 4 ಅತ್ಯಂತ ತೆಳುವಾದ ಟಿವಿ ಎನ್ನಲಾಗಿದೆ, ನಿಮ್ಮ ಸ್ಮಾರ್ಟ್‌ಪೋನಿನ ದಪ್ಪಕ್ಕಿಂತಲೂ ಕಡಿಮೆ ಇದೆ ಎನ್ನಲಾಗಿದೆ. ಇಲ್ಲಿವರೆಗೆ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಟಿವಿಗಳಿಗಿಂತ ಇದು ತೆಳ್ಳಗೆ ಇದೆ ಎಂಬುದು ಕಂಪನಿಯ ವಾದವಾಗಿದೆ. Mi TV 4 s ಟಿವಿ 4.9mm ನಷ್ಟು ದಪ್ಪವಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಐಪೋನಿಗಿಂತ 3೦ % ತೆಳುವಾಗಿದೆಯಂತೆ.

ಆಟಮ್ ಆಡಿಯೋ ಟೆಕ್ನಾಲಜಿ

ಆಟಮ್ ಆಡಿಯೋ ಟೆಕ್ನಾಲಜಿ

ಸದ್ಯ ಕ್ಸಿಯೋಮಿ ಬಿಡುಗಡೆ ಮಾಡಿರುವ ಟಿವಿಗಳಲ್ಲಿ ಮೊದಲ ಬಾರಿಗೆ ಆಟಮ್ ಆಡಿಯೋ ಟೆಕ್ನಾಲಜಿಯನ್ನು ಬಳಸಿಕೊಂಡಿದ್ದು, ಉತ್ತಮ ಸೌಂಡ್ ಕ್ವಾಲಿಟಿಯನ್ನು ಹೊಂದಿದ್ದು, ಸಿನಿಮಾ ವಿಕ್ಷಣೆಯ ಕ್ರಮವನ್ನು ಉತ್ತಮ ಪಡಿಸಲಿದೆ ಎನ್ನಲಾಗಿದೆ. Mi TV 4 ಜೊತೆಯಲ್ಲಿ Mi TV ಬಾರ್ ಸಹ ದೊರೆಯಲಿದ್ದು, 10 ಸ್ಪೀಕರ್ಸ್ ಮತ್ತು ಸಬ್‌ಉಫರ್ ಜೊತೆ ಲಭ್ಯವಿದೆ.

ಸ್ಮಾರ್ಟ್‌ ತಂತ್ರಜ್ಞಾನ:

ಸ್ಮಾರ್ಟ್‌ ತಂತ್ರಜ್ಞಾನ:

ಸದ್ಯ ಪ್ರದರ್ಶನಕ್ಕೆ ಇಟ್ಟಿರುವ Mi TVಗಳಲ್ಲಿ Mi TV 4 ಯಲ್ಲಿ ಮಾತ್ರ ಸ್ಮಾರ್ಟ್‌ ತಂತ್ರಜ್ಞಾನವನ್ನು ಅಳವಡಿಸಿದೆ. ಆರ್ಟಿಫಿಷಿಯಲ್ ಇಟೆಲಿಜನ್ಸಿಯನ್ನು ತನ್ನ ಟಿವಿಗಳಲ್ಲಿ ಕ್ಸಿಯೋಮಿ ನೀಡಿದೆ. ಇದು ಆಂಡ್ರಾಯ್ಡ್ ನಿಂದ ಕಾರ್ಯ ನಿರ್ವಹಿಸಲಿದ್ದು, ಇದು ಟಿವಿ ವಿಕ್ಷಕರಿಗೆ ಹೊಸದೊಂದು ಅನುಭವನ್ನು ನೀಡಲಿದೆ.

ವಿವಿಧ ಮಾದರಿಯಲ್ಲಿ ಲಭ್ಯ

ವಿವಿಧ ಮಾದರಿಯಲ್ಲಿ ಲಭ್ಯ

ಸದ್ಯ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋನಲ್ಲಿ ತಿಳಿಸಿದಂತೆ ಕ್ಸಿಯೋಮಿಯ ಈ ಟಿವಿಗಳು 49, 55, ಮತ್ತು 65 ಇಂಚಿನಲ್ಲಿ ಲಭ್ಯವಿರಲಿದೆ. ಗ್ರಾಹಕರು ತಮ್ಮ ಅವಶ್ಯಕತೆಗೆ ತಕ್ಕಂತೆ ಬೇಕಾದ ಮಾಡಲ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಕ್ಸಿಯೋಮಿಯ ಈ ಹೊಸ ಟಿವಿಗಳು ಮತ್ತೊಂಮ್ಮೆ ಟಿವಿ ಲೋಕದಲ್ಲಾಗುತ್ತಿರುವ ಬದಲಾವಣೆಯನ್ನು ಎತ್ತಿತೋರಿಸುತ್ತಿದೆ.

Best Mobiles in India

English summary
Xiaomi Mi TV 4 sports a frameless design, measures 4.9mm at its thinnest point 30 percent thinner than the iPhone 7. to konw more kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X