ಕೇವಲ 1 ರೂ.ಗೆ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್‌: ಇದು ಸುಳ್ಳಲ್ಲ, 100% ನಿಜ

'ಮಿ ಫ್ಯಾನ್ ಫೆಸ್‌ಟಿವಲ್' ಆಯೋಜನೆ ಮಾಡಿದೆ. ಏಪ್ರಿಲ್ 6 ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಿ ಗ್ರಾಹಕರಿಗೆ ಅಚ್ಚರಿಯ ಕೊಡುಗೆಗಳನ್ನು ನೀಡಲಿದೆ.

Written By:

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಶೀಘ್ರಗತಿಯಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಶಿಯೋಮಿ, ಈ ಬಾರಿ ತನ್ನ ಅಭಿಮಾನಿಗಳಿಗಾಗಿಯೇ 'ಮಿ ಫ್ಯಾನ್ ಫೆಸ್‌ಟಿವಲ್' ಆಯೋಜನೆ ಮಾಡಿದೆ. ಏಪ್ರಿಲ್ 6 ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಿ ಗ್ರಾಹಕರಿಗೆ ಅಚ್ಚರಿಯ ಕೊಡುಗೆಗಳನ್ನು ನೀಡಲಿದೆ.

ಕೇವಲ 1 ರೂ.ಗೆ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್‌: ಇದು ಸುಳ್ಳಲ್ಲ, 100% ನಿಜ

ಓದಿರಿ: ಲೀಕ್ ಆಗಿದೆ ಜಿಯೋ ಡಿಟಿಹೆಚ್ ಸೆಟಪ್‌ ಬಾಕ್ಸ್: ಬೆಲೆ ಎಷ್ಟು..? ಇಲ್ಲಿದೇ ಸಂಪೂರ್ಣ ವಿವರ.!!!

ಏಪ್ರಿಲ್ 6 ರಂದು ಮಿ.ಕಾಮ್ ಸೈಟಿನಲ್ಲಿ ಫ್ಲಾಷ್ ಸೇಲ್ ನಡೆಯಲಿದ್ದು, ಅಲ್ಲದೇ ಮೊಬೈಲ್ ಆಪ್‌ನಲ್ಲಿ 1 ರೂ. ಸೇಲ್ ನಡೆಯಲಿದ್ದು, ಮೊನ್ನೆ ಬಿಡುಗಡೆಯಾದ ರೆಡ್‌ಮಿ ನೋಟ್ 4 ಕೇವಲ 1 ರೂಗಳಿಗೆ ದೊರೆಯಲಿದ್ದು, ಅದು ಅದೃಷ್ಠವಂತರಿಗೆ ಮಾತ್ರ. ಇದಕ್ಕಾಗಿ ನೀವು ಮಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ.

ಓದಿರಿ: ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್: ನೀವು ತಿಳಿಯಲೇಬೇಕಾದ ಸಂಗತಿಗಳು..!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಮಿ ಫ್ಯಾನ್ ಫೆಸ್‌ಟಿವಲ್:

ಏಪ್ರಿಲ್ 6 ರಂದು ಮಿ ಫ್ಯಾನ್ ಫೆಸ್‌ಟಿವಲ್ ನಡೆಯಲಿದ್ದು, ಅಂದು ದಿನವಿಡಿ ರೆಡ್‌ಮಿ ಅಭಿಮಾನಿಗಳಿಗೆ ಒಂದೊಂದು ಆಚ್ಚರಿಯ ಸೇಲ್‌ಗಳು ನಡೆಯುತ್ತಿರುತ್ತವೆ. ಅನೇಕ ಮೊಬೈಲ್‌ಗಳ ಫ್ಲಾಷ್ ಸೇಲ್, ಅಲ್ಲದೇ ರೆಡ್‌ಮಿ ಉತ್ಪನ್ನಗಳ ಸೇಲ್‌ ಸಹ ನಡೆಯಲಿದ್ದು, ಇದರೊಂದಿಗೆ ಅಚ್ಚರಿ ಬೆಲೆಯ ಫ್ಲಾಷ್ ಸೇಲ್‌ ಸಹ ಒಂದರ ಹಿಂದೆ ಒಂದು ನಡೆಯಲಿದೆ.

ರೆಡ್‌ಮಿ ನೋಟ್ 4 ಕೇವಲ 1 ರೂಗಳಿಗೆ:

ಏಪ್ರಿಲ್ 6 ರಂದು ಮಿ ಫ್ಯಾನ್ ಫೆಸ್‌ಟಿವಲ್ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ಕೇವಲ 1 ರೂಗಳಿಗೆ ರೆಡ್‌ಮಿ ನೋಟ್ 4 ಫ್ಲಾಷ್ ಸೇಲ್ ಆರಂಭವಾಗಲಿದೆ. ಇದು ಕೆಲವೇ ಕ್ಷಣಗಳಲ್ಲಿ ಮುಗಿಯಲಿದೆ. ಕಾರಣ ಅಂದು ಸೇಲಿಗೆ ಇರುವುದು ಕೇವಲ 20 ಫೋನ್‌ಗಳು ಮಾತ್ರ.

1 ರೂಗೆ ಪವರ್ ಬ್ಯಾಂಕ್ ಮತ್ತು ಫಿಟ್‌ನೆಸ್ ಬ್ಯಾಂಡ್‌:

ಏಪ್ರಿಲ್ 6 ರಂದು ಮಿ ಫ್ಯಾನ್ ಫೆಸ್‌ಟಿವಲ್ ಅಂಗವಾಗಿ ಬೆಳಿಗ್ಗೆ 10ಕ್ಕೆ ರೆಡ್‌ಮಿ ನೋಟ್ 4 ಫ್ಲಾಷ್ ಸೇಲ್ ಕೊನೆಯಾದ ನಂತರ ಮಧ್ಯಾಹ್ನ 2ಕ್ಕೆ ಮಿ ಬ್ಯಾಂಡ್ ಮತ್ತು 10000 mAh ಸಾಮಾರ್ಥ್ಯದ ಮಿ ಪವರ್ ಬ್ಯಾಂಕ್‌ಗಳ 1 ರೂ ಸೇಲ್ ಆರಂಭವಾಗಲಿದೆ.

ರೆಡ್‌ಮಿ 4A ಮತ್ತು ರೆಡ್‌ಮಿ ನೋಟ್ 4 ಫ್ಲಾಷ್ ಸೇಲ್:

ಫ್ಯಾನ್ ಫೆಸ್‌ಟಿವಲ್ ಅಂಗವಾಗಿ ರೆಡ್‌ಮಿ 4A ರೋಸ್ ಗೋಲ್ಡ್ ಆವೃತ್ತಿ ಮತ್ತು ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್‌ಗಳ ಫ್ಲಾಷ್ ಸೇಲ್ ಗಳು ನಡೆಯಲಿದೆ. ಈಗಾಗಲೇ ರೆಡ್‌ಮಿ ನೋಟ್ 4 ಭಾರತದಲ್ಲಿ 1 ಮಿಲಿಯನ್‌ಗೂ ಹೆಚ್ಚು ಮಾರಾಟವಾಗಿದ್ದು, ರೆಡ್‌ಮಿ 4A ಸಹ ಇದೇ ಹಾದಿಯಲ್ಲಿ ಸಾಗಿದೆ.

ಇದಲ್ಲದೇ ಇನ್ನು ಇದೆ;

ಇದಲ್ಲದೇ ರೆಡ್‌ಮಿ ತಯಾರಿಸಿರುವ ಎಲ್ಲಾ ವಸ್ತುಗಳ ಮೇಲೆಯೂ ಆಫರ್ ದೊರೆಯಲಿದೆ. ರೆಡ್‌ಮಿ 3S ಪ್ರೈಮ್, ಮಿ ಮಾಕ್ಸ್ ಪ್ರೈಮ್, ಶಿಯೋಮಿ ಮಿ 5 ಸೇರಿದಂತೆ ಏರ್‌ಪ್ಯೂರಿ ಫೈಯರ್, ಇಯರ್ ಫೋನ್, VR ಪ್ಲೈ, ಮಿ ಬ್ಯಾಂಡ್ ಸೇರಿದಂತೆ ಇನ್ನು ಅನೇಕ ವಸ್ತುಗಳ ಸೇಲ್ ನಡೆಯಲಿದೆ.

ಶಿಯೋಮಿ ವಸ್ತುಗಳ ಖರೀದಿಗೆ ಸುಸಮಯ:

ನೀವು ಶಿಯೋಮಿ ವಸ್ತುಗಳನ್ನು ಖರೀದಿಸ ಬೇಕು ಎನ್ನುವ ಮನಸ್ಸು ಹೊಂದಿದ್ದರೆ ಇದು ಸುಸಮಯ, ಏಕೆಂದರೆ ಎಲ್ಲಾ ವಸ್ತುಗಳು ಅಂದು ಸೇಲಿಗೆ ಲಭ್ಯವಿರಲಿದ್ದು ಮತ್ತು ಆಕರ್ಷಕ ಡಿಸ್‌ಕೌಂಟ್ ಗಳನ್ನು ಪಡೆಯಬಹುದಾಗಿದೆ. ನಿಮ್ಮ ಅದೃಷ್ಟ ಕೈ ಹಿಡಿದರೆ ಕೇವಲ 1 ರೂ.ಗಳಲ್ಲೇ ನಿಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Xiaomi is hosting another Mi Fan Festival on Thursday, April 6, and it is putting a lot of devices and accessories on sale on the Mi.com site. to know more visit kannada.gizbot.com
Please Wait while comments are loading...
Opinion Poll

Social Counting