ಆನ್‌ಲೈನ್ ವ್ಯವಹಾರ ಏಕೆ ಮಾಡಬೇಕು ಮತ್ತು ಏಕೆ ಮಾಡಬಾರದು? 10 ಕಾರಣಗಳು!?

ಆನ್‌ಲೈನ್‌ ಪೇಮೆಂಟ್ ಕಂಪೆನಿಗಳ ಮೂಲಕ ಆನ್‌ಲೈನ್‌ ವ್ಯವಹಾರ ನಡೆಸಲು ಇರುವ 5 ಕಾರಣಗಳು ಮತ್ತು ನಡಸದೇ ಇರಲು 5 ಕಾರಣಗಳನ್ನ ನಾವು ಪಟ್ಟಿ ಮಾಡಿದ್ದೇವೆ.

Written By:

1000 ಮತ್ತು 500 ರೂಪಾಯಿ ನೋಟುಗಳು ರದ್ದಾದ ನಂತರ ಭಾರತದಲ್ಲಿ ಇ-ವಾಲೆಟ್ ಕಂಪೆನಿಗಳ ವ್ಯವಹಾರ 1000 ಪಟ್ಟು ಹೆಚ್ಚಾಗಿದೆ. ಇನ್ನು ಕ್ಯಾಶ್‌ಲೆಸ್‌ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಪಣತೊಟ್ಟಿರುವ ಕೇಂದ್ರ ಸರ್ಕಾರ ಕೂಡ ಡಿಜಿಟಲ್‌ ಪೇಮೆಂಟ್ ಅನ್ನು ಪ್ರೋತ್ಸಾಹಿಸುತ್ತಿದೆ.

ಆದರೆ, ಭಾರತದಲ್ಲಿ ಆನ್‌ಲೈನ್‌ ಬ್ಯಾಂಕಿಂಗ್ ವ್ಯವಹಾರದ ಕಲ್ಪನೆ ಇತ್ತೀಚಿಗೆ ಅಂಬೆಗಾಲಿಡುತ್ತಿದೆ. ಇನ್ನು ಇದಕ್ಕಾಗಿಯೇ ಪೇಟಿಎಂ ಮತ್ತು ಫ್ರೀಚಾರ್ಜ್ ನಂತಹ ಆನ್‌ಲೈನ್‌ ಪೇಮೆಂಟ್ ಕಂಪೆನಿಗಳು ಹುಟ್ಟಿದ್ದು, ಜನರಲ್ಲಿ ಆನ್‌ಲೈನ್ ವ್ಯವಹಾರದ ಬಗ್ಗೆ ಕುತೋಹಲ ಉಂಟಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ 8 ಫೀಚರ್ಸ್ ಲೀಕ್..ಸ್ಮಾರ್ಟ್‌ಫೋನ್‌ನಲ್ಲಿ ಬ್ಲೂಟೂತ್‌ 5.0!!

ಹಾಗಾಗಿ ಪೇಟಿಎಂ ಮತ್ತು ಫ್ರೀಚಾರ್ಜ್ ನಂತಹ ಆನ್‌ಲೈನ್‌ ಪೇಮೆಂಟ್ ಕಂಪೆನಿಗಳ ಮೂಲಕ ಆನ್‌ಲೈನ್‌ ವ್ಯವಹಾರ ನಡೆಸಲು ಇರುವ 5 ಕಾರಣಗಳು ಮತ್ತು ನಡಸದೇ ಇರಲು 5 ಕಾರಣಗಳನ್ನ ನಾವು ಪಟ್ಟಿ ಮಾಡಿದ್ದೇವೆ ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

#1 ಸುಲಭ ಹಣಪಾವತಿ .

ಎಲ್ಲೆಡಯೂ ಕ್ಯಾಶ್‌ ನೀಡಿ ವ್ಯವಹಾರ ಮಾಡುವುದಕ್ಕಿಂತ ಅನ್‌ಲೈನ್‌ ವ್ಯವಹಾರ ಬಹಳ ಸುಲಭವಾಗಿದೆ. ವಾಟರ್‌ ಬಿಲ್‌, ಕರೆಂಟ್ ಬಿಲ್‌ಗಳನ್ನು ಆನ್‌ಲೈನ್‌ ಮುಖಾಂತರ ಮನೆಯಲ್ಲಿಯೇ ಪಾವತಿಸಬಹುದಾಗಿದೆ.

#2 ಡಿಸ್ಕೌಂಟ್ಸ್

ಆನ್‌ಲೈನ್ ಕಂಪೆನಿಗಳ ಮೂಲಕ ವ್ಯವಹರಿಸುವುದರಿಂದ ಆಗುವ ಪ್ರಮುಖ ಉಪಯೋಗವೇ ನಮಗೆ ಸಿಗುವ ಡಿಸ್ಕೌಂಟ್ಸ್ ಪೇ! ಆನ್‌ಲೈನ್‌ ಪೇಮೆಂಟ್‌ ನಿಂದ ನಾವು 10 ರಿಂದ 15 ಪರ್ಸೆಂಟ್ ಹಣ ಉಳಿತಾಯ ಮಾಡಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#3 ಖರ್ಚಿನ ಲೆಕ್ಕ ಸಿಗುತ್ತದೆ!.

ಪ್ರತಿ ತಿಂಗಳು ನಾವು ಖರ್ಚು ಮಾಡುವ ಹಣವನ್ನು ಲೆಕ್ಕ ಬರೆದಿಡುವ ಕಾರ್ಯ ಬಹಳ ಕಷ್ಟಕರ! ಹಾಗಾಗಿ ಆನ್‌ಲೈನ್‌ ಪೆಮೆಂಟ್ ಮಾಡಿದರೆ ಇದರ ಲೆಕ್ಕ ನಿಮಗೆ ಪೂರ್ಣವಾಗಿ ಸಿಗುತ್ತದೆ.

#4 ಸೇವೆಗೆ ಹೆಚ್ಚುವರಿ ಹಣವಿಲ್ಲ

ಆನ್‌ಲೈನ್‌ ವ್ಯವಹಾರ ಕಂಪೆನಿಗಳು ನೀಡುವ ಸೇವೆಗೆ ಯಾವುದೇ ಹೆಚ್ಚುವರಿ ಹಣವನ್ನು ಭರಿಸಬೇಕಿಲ್ಲ. ಆನ್‌ಲೈನ್‌ ಕಂಪೆನಿಗಳು ಇತರ ಶುಲ್ಕಗಳನ್ನು ಪಡೆಯದೇ ಇರುವುದರಿಂದ ದಾರಾಳವಾಗಿ ನಾವು ಇವುಗಳನ್ನು ಉಪಯೋಗಿಸಬಹುದು.

#5 ಸಮಯ ಉಳಿತಾಯ

ಆನ್‌ಲೈನ್‌ ವ್ಯವಹಾರ ಕಂಪೆನಿಗಳಿಂದ ನಿತ್ಯ ಜೀವನದಲ್ಲಿ ನಡೆಯುವ ಎಲ್ಲಾ ವ್ಯವಹಾರಗಳಿಗೂ ಮನೆಯಲ್ಲಿಯೇ ಆನ್‌ಲೈನ್‌ ಪೇಮೆಂಟ್ ಮಾಡುವುದರಿಂದ ದಿನದ ಬಹುಪಾಲು ಸಮಯ ನಮಗೆ ಉಳಿಯುತ್ತದೆ. ಸಮಯಕ್ಕಿಂತ ಹೆಚ್ಚು ಉಳಿತಾಯವಿಲ್ಲ!

#6 ಮಾಹಿತಿ ಕಳವು ಅಪಾಯ

ನಾವು ಅಂತರ್ಜಾಲದಲ್ಲಿ ಎಷ್ಟೇ ಸುರಕ್ಷಿತವಾಗಿದ್ದರೂ ನಮ್ಮ ಮಾಹಿತಿಗಳನ್ನು ಸೈಬರ್‌ ಕ್ರಿಮಿನಲ್‌ಗಳು ಕದಿಯುವ ಅಪಾಯವಿರುತ್ತದೆ. ಹಾಗಾಗಿ ಅಂತರ್ಜಾಲದ ವ್ಯವಹಾರದ ಬಗ್ಗೆ ಎಚ್ಚರಿಕೆ ಅಗತ್ಯ.

#7 ಪರಿಹಾರಕ್ಕೆ ಕಾಯಬೇಕು.

ಕೋಟ್ಯಾಂತರ ಜನರು ಆನ್‌ಲೈನ್‌ ವ್ಯವಹಾರದಲ್ಲಿ ತಡಗಿರುವಾಗ ನಿಮ್ಮ ವ್ಯವಹಾರದಲ್ಲಿ ಅಣದರೆ ಹಣದಲ್ಲಿ ಸ್ವಲ್ಪ ಏರುಪೇರಾದರೂ ಅದರ ಪರಿಹಾರಕ್ಕೆ ಹಲವು ದಿನಗಳು ಕಾಯಬೇಕಾಗುತ್ತದೆ.

#8 ಫೋನ್‌ ಕಳೆದುಹೋದರೆ?

ನಿಮ್ಮೆಲ್ಲಾ ಆನ್‌ಲೈನ್ ಮಾಹಿತಿಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೇ ಇರುವಾಗ ಒಂದು ವೇಳೆ ಸ್ಮಾರ್ಟ್‌ಫೋನ್ ಕಳೆದುಹೋದರೆ ಆಗುವ ತೊಂದರೆ ಬಹಳ ಹೆಚ್ಚು. ಇದರಿಮದ ನಿಮ್ಮ ಹಣವನ್ನು ಬೇರೆಯವರು ದುರುಪಯೋಗ ಪಡಿಸಿಕೊಳ್ಳಬಹುದು.

#9 ಆನ್‌ಲೈನ್‌ ಶಾಪಿಂಗ್‌ ಗೀಳು

ಆನ್‌ಲೈನ್‌ ವ್ಯವಹಾರ ನಡೆಸುವುದರಿಂದ ಅವುಗಳು ನೀಡುವ ಜಾಹಿರಾತಿಗೆ ಮರುಳಾಗಿ ದುಂದು ವೆಚ್ಚ ಆಗುವ ಸಮಸ್ಸೆ ಮೂಡುತ್ತದೆ. ಆನ್‌ಲೈನ್‌ ಶಾಪಿಂಗ್‌ ಗೀಳು ಉಂಟಾಗಬಹುದು.

#10 ಬಳಕೆಗೆ ಇಂಟರ್‌ನೆಟ್ ವೆಚ್ಚ

ಜಿಯೋ ಬಂದ ನಂತರ ಇಂಟರ್‌ನೆಟ್ ಬಳಕೆಗೆ ಹಣ ಹಾಕುವುದು ಸ್ವಲ್ಪ ಕಡಿಮೆಯಾಗಿದೆ. ಆದರೆ ಜಿಯೋ ಉಚಿತ ನೆಟ್‌ ನಿಲ್ಲಿಸಿದ ನಂತರ ಪ್ರತಿ ತಿಂಗಳು ಇಂಟರ್‌ನೆಟ್‌ಗಾಗಿ ಹನ ವಿನಿಯೋಗ ಮಾಡಬೇಕಾಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
As the country moves towards a cashless environment after demonetisation, the initial awe and confusion have given way to a flurry of concerns. to Know More visit to kannada.gizbot.com
Please Wait while comments are loading...
Opinion Poll

Social Counting