ವಾಟ್ಸಾಪ್‌ನ ಟಾಪ್ 15 ಫೀಚರ್ಸ್: ನೀವು ಬಳಸುತ್ತಿದ್ದೀರಿ ತಾನೇ?

By Shwetha
|

ಹೆಚ್ಚು ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್ ಇತರ ಪ್ಲಾಟ್‌ಫಾರ್ಮ್‌ಗಳಿಗೆ ಹೋಲಸಿದಾಗ ಹೆಚ್ಚು ರೀಚ್ ಅನ್ನು ತಲುಪಿದೆ. ಅದರಲ್ಲೂ ದಿನದಿಂದ ದಿನಕ್ಕೆ ಈ ಅಪ್ಲಿಕೇಶನ್ ಹೆಚ್ಚು ವೈಶಿಷ್ಟ್ಯಪೂರ್ಣವಾದ ಫೀಚರ್‌ಗಳನ್ನು ಬಳಕೆದಾರರಿಗೆ ಒದಗಿಸುತ್ತಿದೆ. ಮೆಸೇಜಿಂಗ್ ವ್ಯವಸ್ಥೆ ಅಲ್ಲದೆ, ಅಪ್ಲಿಕೇಶನ್ ವಾಯ್ಸ್ ಕಾಲ್ ಮತ್ತು ಇತರ ಸೇವೆಗಳನ್ನು ಒದಗಿಸುತ್ತಿದೆ.

ಓದಿರಿ: ವಾಟ್ಸಾಪ್‌ನ ಹೊಸ ಫೀಚರ್ ಡೌನ್‌ಲೋಡ್ ಮಾಡಿಕೊಂಡಿದ್ದೀರಾ?

ಇಂದಿನ ಲೇಖನದಲ್ಲಿ ವಾಟ್ಸಾಪ್‌ನ ಟಾಪ್ 15 ಫೀಚರ್‌ಗಳನ್ನು ನಿಮ್ಮ ಮುಂದೆ ಇಡುತ್ತಿದ್ದು ಇನ್ನಷ್ಟು ಪರಿಣಾಮಕಾರಿಯಾಗಿ ವಾಟ್ಸಾಪ್ ಅನ್ನು ಬಳಸಲು ಈ ಟಿಪ್ಸ್ ಸಹಕಾರಿಯಾಗಲಿದೆ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ವಾಟ್ಸಾಪ್‌ನ ಈ ವಿಶೇಷ ಫೀಚರ್‌ಗಳನ್ನು ನಿಮ್ಮ ಮುಂದೆ ಇಡುತ್ತಿದ್ದು ನಿಜಕ್ಕೂ ಇದು ಉಪಯೋಗಕಾರಿಯಾಗಿದೆ.

ಹೆಚ್ಚಿನ ಜನರಿಗೆ ಸಂದೇಶ ಕಳುಹಿಸಿ

ಹೆಚ್ಚಿನ ಜನರಿಗೆ ಸಂದೇಶ ಕಳುಹಿಸಿ

ಹೆಚ್ಚಿನ ಜನರಿಗೆ ಸಂದೇಶವನ್ನು ಕಳುಹಿಸುವುದು ವಾಟ್ಸಾಪ್‌ನಲ್ಲಿ ಸಾಧ್ಯವಾಗಲಿದೆ. ಮೆನುವಿನ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ ಮತ್ತು ನ್ಯೂ ಬ್ರಾಡ್‌ಕಾಸ್ಟ್ ಆಪ್ಶನ್ ಆಯ್ಕೆಮಾಡಿ. ನಿಮ್ಮ ರೆಸಿಪೀಂಟ್ಸ್‌ನಲ್ಲಿರುವ ಸಂಪರ್ಕಗಳು ಸೇರಿದಂತೆ ಒಂದೇ ಸಂದೇಶವನ್ನು ಹೆಚ್ಚಿನ ಜನರಿಗೆ ನಿಮಗೆ ಕಳುಹಿಸಬಹುದಾಗಿದೆ.

ಮೊಬೈಲ್ ನೆಟ್‌ವರ್ಕ್‌ನಲ್ಲಿ ಡೇಟಾ ಉಳಿಕೆ

ಮೊಬೈಲ್ ನೆಟ್‌ವರ್ಕ್‌ನಲ್ಲಿ ಡೇಟಾ ಉಳಿಕೆ

ಹೆಚ್ಚು ದರದ ಮತ್ತು ನಿಧಾನ ಗತಿಯ ಡೇಟಾ ಪ್ಯಾಕ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ಡೇಟಾ ಉಳಿಕೆಗಾಗಿ ಈ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ. ಅಪ್ಲಿಕೇಶನ್‌ನಲ್ಲಿ ಏನು ಡೌನ್‌ಲೋಡ್ ಆಗಬೇಕು ಎಂಬುದನ್ನು ಆರಿಸುವ ಆಯ್ಕೆ ಇಲ್ಲಿದೆ. ಫೋಟೋ, ವೀಡಿಯೊ, ಆಡಿಯೊ ಹೀಗೆ ಆಯ್ಕೆಯಗಳನ್ನು ಆರಿಸಬಹುದಾಗಿದೆ. ಅಂತೆಯೇ ಲೊ ಡೇಟಾ ಯೂಸೇಜ್ ಆಯ್ಕೆಯನ್ನು ಆರಿಸಿ ವಾಟ್ಸಾಪ್ ಕರೆಯಲ್ಲಿರುವಾಗ ಡೇಟಾ ಖರ್ಚಾಗುವುದನ್ನು ಮಿತಿಗೊಳಿಸಬಹುದಾಗಿದೆ.

ಚಾಟ್ಸ್ ಮ್ಯೂಟ್ ಮಾಡುವುದು

ಚಾಟ್ಸ್ ಮ್ಯೂಟ್ ಮಾಡುವುದು

ನೀವು ಒಂದು ಗುಂಪಿನ ಭಾಗವಾಗಿದ್ದರೆ ನಿಮಗೆ ಅವರುಗಳು ಕಳುಹಿಸುವ ಸಂದೇಶಗಳು ಬೇಡ ಎಂಬ ಸಂದರ್ಭದಲ್ಲಿ, ಸಂವಾದವನ್ನು ಮ್ಯೂಟ್ ಮಾಡಬಹುದಾಗಿದೆ. ಚಾಟ್ ಕಾನ್‌ವರ್ಸೇಶನ್ ಅನ್ನು ತೆರೆದು ಮ್ಯೂಟ್ ಆಪ್ಶನ್ ಆಯ್ಕೆಮಾಡಿ ಇದನ್ನು ಮಾಡಬಹುದಾಗಿದೆ.

ಗೌಪ್ಯತೆಯನ್ನು ನಿಯಂತ್ರಿಸುವುದು

ಗೌಪ್ಯತೆಯನ್ನು ನಿಯಂತ್ರಿಸುವುದು

ನೀವು ವಾಟ್ಸಾಪ್ ಬಳಸುತ್ತಿದ್ದೀರಿ ಎಂಬುದನ್ನು ಹೊರಹಾಕಲು ಇಷ್ಟವಿಲ್ಲ ಎಂದಾದಲ್ಲಿ, ನಿಮ್ಮ ಲಾಸ್ಟ್ ಸೀನ್ ಆಪ್ಶನ್ ಅನ್ನು ಆಫ್ ಮಾಡಬಹುದಾಗಿದೆ. ಅಂತೆಯೇ ಬ್ಲ್ಯೂ ಟಿಕ್ ಅನ್ನು ಕೂಡ ಮರೆಮಾಚಬಹುದು. ಪ್ರೊಫೈಲ್ ಫೋಟೋ ಬರದಂತೆ ಕೂಡ ನೋಡಿಕೊಳ್ಳಬಹುದಾಗಿದೆ. ಈ ಸೌಲಭ್ಯಗಳನ್ನು ನೀವು ಪಡೆದುಕೊಂಡ ನಂತರ ಇತರ ಸಂಪರ್ಕಗಳ ಈ ದಾಖಲೆಗಳನ್ನು ನಿಮಗೆ ಕಾಣಲು ಸಾಧ್ಯವಾಗುವುದಿಲ್ಲ.

ಡಾಕ್ಯುಮೆಂಟ್ಸ್ ಹಂಚಿಕೆ

ಡಾಕ್ಯುಮೆಂಟ್ಸ್ ಹಂಚಿಕೆ

ಡಾಕ್ಯುಮೆಂಟ್‌ಗಳನ್ನು ಹಂಚುವುದು ಮತ್ತು ಸ್ವೀಕರಿಸುವ ವ್ಯವಸ್ಥೆಯನ್ನು ವಾಟ್ಸಾಪ್ ನೀಡಿದೆ. ಇದರ ಮೂಲಕ ನಿಮಗೆ ಪಿಡಿಎಫ್, ವರ್ಡ್, ಎಕ್ಸೆಲ್ ಫೈಲ್‌ಗಳನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಬಹುದಾಗಿದೆ. ಇನ್ನು ಜಿಫ್ ಫೈಲ್‌ಗಳನ್ನು ಸೇರಿಸುವ ವದಂತಿ ಕೂಡ ಇದೆ.

ಹೋಮ್ ಸ್ಕ್ರೀನ್‌ಗೆ ಶಾರ್ಟ್ ಕಟ್ ಸೇರ್ಪಡೆ

ಹೋಮ್ ಸ್ಕ್ರೀನ್‌ಗೆ ಶಾರ್ಟ್ ಕಟ್ ಸೇರ್ಪಡೆ

ನೀವು ಇತರ ಸ್ನೇಹಿತರೊಂದಿಗೆ ಚಾಟ್ ಮಾಡುತ್ತಿದ್ದೀರಿ ಎಂದಾದಲ್ಲಿ, ಆಗಾಗ್ಗೆ ಅಪ್ಲಿಕೇಶನ್ ತೆರೆಯುವ ಜಂಜಾಟವನ್ನು ನಿಲ್ಲಿಸಲು ಹೋಮ್ ಸ್ಕ್ರೀನ್‌ನಲ್ಲಿ ಶಾರ್ಟ್ ಕಟ್ ಅನ್ನು ಸೇರಿಸಿಕೊಳ್ಳಬಹುದಾಗಿದೆ. ದೀರ್ಘವಾಗಿ ಸಂರ್ಕವನ್ನು ಒತ್ತಿರಿ ಮತ್ತು ಆಪ್ಶನ್ ಆಯ್ಕೆಮಾಡಿಕೊಳ್ಳಿ ಇಲ್ಲಿ ಚಾಟ್ ಶಾರ್ಟ್ ಕಟ್ ಅನ್ನು ಸೇರಿಸಿಕೊಳ್ಳಿ.

ನಿಮ್ಮಷ್ಟಕ್ಕೆ ಸಂದೇಶ ರವಾನೆ

ನಿಮ್ಮಷ್ಟಕ್ಕೆ ಸಂದೇಶ ರವಾನೆ

ಮುಖ್ಯವಾದ ಸಂದೇಶವನ್ನು ನಿಮಗೆ ಎಲ್ಲಿಯಾದರೂ ಸೇವ್ ಮಾಡಿಕೊಳ್ಳಬೇಕೆಂಬ ಇರಾದೆ ಇದೆ ಎಂದಾದಲ್ಲಿ ನೀವು ಇತರರೊಂದಿಗೆ ಇದನ್ನು ಹಂಚಿಕೊಳ್ಳುವ ಮುನ್ನ ನಿಮಗೆ ನೀವೇ ಕಳುಹಿಸಿಕೊಳ್ಳಬಹುದಾಗಿದೆ. ವಾಟ್ಸಾಪ್ ಗ್ರೂಪ್ ರಚಿಸಿಕೊಳ್ಳಿ ಮತ್ತು ಸ್ನೇಹಿತನನ್ನು ಸೇರಿಸಿ ನಂತರ ಅಳಿಸಿ. ಹೀಗೆ ಮಾಡುವುದರಿಂದ ಗುಂಪಿನಲ್ಲಿ ನೀವು ಒಬ್ಬರೇ ಉಳಿದುಕೊಳ್ಳುತ್ತೀರಿ. ಮತ್ತು ನಿಮಗೆ ನೀವೇ ಸಂದೇಶವನ್ನು ಕಳುಹಿಸಿಕೊಳ್ಳಬಹುದಾಗಿದೆ.

ಮೊಬೈಲ್ ಮತ್ತು ಪಿಸಿಯ ನಡುವೆ ಫೈಲ್ ವರ್ಗಾವಣೆ

ಮೊಬೈಲ್ ಮತ್ತು ಪಿಸಿಯ ನಡುವೆ ಫೈಲ್ ವರ್ಗಾವಣೆ

ನಿಮ್ಮ ಫೋನ ಮತ್ತು ಮೊಬೈಲ್ ನಡುವೆ ಡಾಕ್ಯುಮೆಂಟ್‌ಗಳನ್ನು ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ. ನಿಮ್ಮಷ್ಟಕ್ಕೇ ನಿರ್ದಿಷ್ಟ ಫೈಲ್ ಅಥವಾ ಡಾಕ್ಯುಮೆಂಟ್ ಅನ್ನು ಟ್ರಾನ್ಸ್‌ಫರ್ ಮಾಡಿಕೊಳ್ಳಿ. ಇದನ್ನೇ ನಿಮ್ಮ ಪಿಸಿಯಲ್ಲಿ ವಾಟ್ಸಾಪ್ ವೆಬ್ ಫೀಚರ್ ಅನ್ನು ಬಳಸಿಕೊಂಡು ಇದನ್ನು ಉಳಿಸಿಕೊಳ್ಳಿ.

ನೋಟಿಫಿಕೇಶನ್ ಪ್ರಿವ್ಯೂ ನಿಷ್ಕ್ರಿಯಗೊಳಿಸಿ ಚಾಟ್ ಸಂರಕ್ಷಿಸಿ

ನೋಟಿಫಿಕೇಶನ್ ಪ್ರಿವ್ಯೂ ನಿಷ್ಕ್ರಿಯಗೊಳಿಸಿ ಚಾಟ್ ಸಂರಕ್ಷಿಸಿ

ವಾಟ್ಸಾಪ್‌ನಲ್ಲಿ ನೀವು ಸಂದೇಶವನ್ನು ಪಡೆದುಕೊಂಡಾಗ, ಅಪ್ಲಿಕೇಶನ್ ತೆರೆಯಿದೇ ಇದ್ದಾಗ ಕೂಡ ಸಂದೇಶವನ್ನು ನಿಮಗೆ ಕಾಣಬಹುದಾಗಿದೆ. ಇತರರು ಓದಬಾರದೆನ್ನುವ ಸೂಕ್ಷ್ಮ ಸಂದೇಶವನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ, ಸೆಟ್ಟಿಂಗ್‌ಗೆ ಹೋಗಿ ಮತ್ತು ವಾಟ್ಸಾಪ್‌ನಲ್ಲಿ ಅಧಿಸೂಚನೆ ನಿಷ್ಕ್ರಿಯಗೊಳಿಸಿ. ಇದರಿಂದ ನೋಟಿಫೀಕೇಶನ್ ಬಾರ್‌ನಲ್ಲಿ ಸಂದೇಶ ಗೋಚರಿಸುವುದಿಲ್ಲ.

ಚಾಟ್‌ಗಳಲ್ಲಿ ಸಂದೇಶ ಉಲ್ಲೇಖ

ಚಾಟ್‌ಗಳಲ್ಲಿ ಸಂದೇಶ ಉಲ್ಲೇಖ

ಈ ಫೀಚರ್ ಅನ್ನು ವಾಟ್ಸಾಪ್ ಹೊಸದಾಗಿ ಪ್ರಾಯೋಜಿಸಿದೆ. ನೀವು ನಿರ್ದಿಷ್ಟ ಸಂದೇಶವನ್ನು ಉಲ್ಲೇಖಿಸಿ ಅದಕ್ಕೆ ಉತ್ತರಿಸಬಹುದಾಗಿದೆ.

ಬೇಡದ ಜನರನ್ನು ಬ್ಲಾಕ್ ಮಾಡುವುದು

ಬೇಡದ ಜನರನ್ನು ಬ್ಲಾಕ್ ಮಾಡುವುದು

ಯಾವುದೇ ಜಾಹೀರಾತು ಮತ್ತು ಪ್ರಮೋಶನ್ ಇಲ್ಲದೆ ನಿಮಗೆ ಸ್ಪ್ಯಾಮ್ ಸಂದೇಶಗಳನ್ನು ಆಗಂತುಕರು ಕಳುಹಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸಂಪರ್ಕಗಳನ್ನು ಸ್ಪ್ಯಾಮ್ ಅಥವಾ ಬ್ಲಾಕ್ ಮಾಡುವುದರ ಮೂಲಕ ನಿಮಗೆ ಅವರನ್ನು ನಿರ್ಬಂಧಿಸಬಹುದಾಗಿದೆ. ಮೆನು ಆಪ್ಶನ್ ಮೇಲೆ ಸ್ಪರ್ಶಿಸಿ ಮತ್ತು ಬ್ಲಾಕ್ ಕಾಂಟಾಕ್ಟ್ ಆಪ್ಶನ್ ಆರಿಸಿ.

ಬಹು ಚಾಟ್‌ಗಳನ್ನು ಅಳಿಸುವುದು

ಬಹು ಚಾಟ್‌ಗಳನ್ನು ಅಳಿಸುವುದು

ನಿಮ್ಮ ಚಾಟ್‌ ಪಟ್ಟಿಯಿಂದ ಸುಲಭವಾಗಿ ಬಹು ಸಂದೇಶಗಳನ್ನು ಅಳಿಸಬಹುದಾಗಿದೆ. ಚಾಟ್‌ನಲ್ಲಿರುವ ಬಹುಸಂದೇಶಗಳನ್ನು ಆಯ್ಕೆಮಾಡಲು ವಾಟ್ಸಾಪ್ ನಿಮ್ಮನ್ನು ಅನುಮತಿಸುತ್ತದೆ ಅಂತೆಯೇ ಒಂದೇ ಕ್ಲಿಕ್‌ನಲ್ಲಿ ಅವುಗಳನ್ನು ಅಳಿಸಬಹುದಾಗಿದೆ. ಚಾಟ್ ಅಥವಾ ಸಂದೇಶದ ಮೇಲೆ ದೀರ್ಘವಾಗಿರಿ ಒತ್ತಿರಿ ಮತ್ತು ಅಳಿಸಬೇಕೆಂದಿರುವುದರ ಮೇಲೆ ಸ್ಪರ್ಶಿಸಿ.

ಸ್ಟಾರ್ ಸಂದೇಶಗಳು

ಸ್ಟಾರ್ ಸಂದೇಶಗಳು

ಈ ಆಯ್ಕೆಯನ್ನು ಬಳಸಿಕೊಂಡು, ಕೆಲವು ಮುಖ್ಯ ಸಂದೇಶಗಳನ್ನು ಹೈಲೈಟ್ ಮಾಡಿಕೊಳ್ಳಬಹುದಾಗಿದೆ. ಅಂತೆಯೇ ಅವುಗಳನ್ನು ಮೆಚ್ಚಿನವುಗಳೆಂದು ಉಳಿಸಿಕೊಳ್ಳಬಹುದು. ಇವುಗಳನ್ನು ಸ್ಟಾರ್ ಸಂದೇಶಗಳು ಎಂದು ಕರೆಯಲಾಗಿದೆ. ನಿಮ್ಮ ಚಾಟ್‌ನಲ್ಲಿ ಇಂತಹ ಸಂದೇಶವನ್ನು ದೀರ್ಘವಾಗಿ ಒತ್ತಿರಿ ಮತ್ತು ಸ್ಟಾರ್ ಐಕಾನ್ ಮೇಲೆ ಸ್ಪರ್ಶಿಸಿ. ಚಾಟ್ ಅಳಿಸಬೇಕಾದ ಸಂದರ್ಭದಲ್ಲಿ ಸ್ಟಾರ್ ಸಂದೇಶಗಳನ್ನು ಉಳಿಸಿಕೊಂಡು ಉಳಿದವುಗಳನ್ನು ಅಳಿಸಬಹುದಾಗಿದೆ.

ಅನ್‌ರೀಡ್‌ನಂತೆ ಮಾರ್ಕ್ ಮಾಡಿ

ಅನ್‌ರೀಡ್‌ನಂತೆ ಮಾರ್ಕ್ ಮಾಡಿ

ಇದೀಗ ನೀವು ಚಾಟ್‌ಗಳನ್ನು ಅನ್‌ರೀಡ್‌ನಿಂದ ರೀಡ್ ದೆಮ್ ಲೇಟರ್‌ಗೆ ಮಾಡಿಕೊಳ್ಳಬಹುದಾಗಿದೆ. ಇವುಗಳನ್ನು ಅನ್‌ರೀಡ್ ಮಾಡಿಕೊಂಡು ಈ ಸಂದೇಶಗಳನ್ನು ನಂತರ ಓದಿಕೊಳ್ಳಬಹುದಾಗಿದೆ. ಚಾಟ್‌ ಮೇಲೆ ದೀರ್ಘವಾಗಿ ಒತ್ತಿರಿ ಮತ್ತು ಮೆನುವಿನಿಂದ ಅನ್‌ರೀಡ್ ಎಂಬುದಾಗಿ ಆಯ್ಕೆಮಾಡಿ.

ನೋಟಿಫಿಕೇಶನ್ ಬಾರ್‌ನಿಂದ ಉತ್ತರಿಸುವುದು

ನೋಟಿಫಿಕೇಶನ್ ಬಾರ್‌ನಿಂದ ಉತ್ತರಿಸುವುದು

ವಾಟ್ಸಾಪ್‌ನಲ್ಲಿ ನೀವು ಸಂದೇಶವನ್ನು ಪಡೆದುಕೊಂಡರೆ, ನೀವು ಅದನ್ನು ಆಫ್ ಮಾಡುವವರೆಗೆ ಸಂದೇಶವನ್ನು ನೋಟಿಫಿಕೇಶನ್ ಬಾರ್ ತೋರಿಸುತ್ತದೆ. ಅದಾಗ್ಯೂ ಸಂದೇಶಕ್ಕೆ ಉತ್ತರಿಸಲು, ವಾಟ್ಸಾಪ್ ಅನ್ನು ನೀವು ತೆರೆಯಬೇಕು ಮತ್ತು ಸಂದೇಶವನ್ನು ಕ್ಲಿಕ್ ಮಾಡಿ ಉತ್ತರಿಸಬೇಕು. ಈಗ, ನೋಟಿಫೀಕೇಶನ್ ಬಾರ್ ಅನ್ನು ಎಳೆದು ರಿಫ್ಲೈ ಆಪ್ಶನ್ ಅನ್ನು ಸ್ಪರ್ಶಿಸಿ ಅಧಿಸೂಚನೆ ಪಟ್ಟಿಯಿಂದಲೇ ಚಾಟ್ ಸಂದೇಶಕ್ಕೆ ನೀವು ಉತ್ತರವನ್ನು ನೀಡಬಹುದಾಗಿದೆ.

Best Mobiles in India

English summary
Check out the same from below. We are sure that you will get to know that there are several tweaks and tricks that can be done with WhatsApp after going through the slider given below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X