ಆಂಡ್ರಾಯ್ಡ್ ಮೊಬೈಲ್ ಪಾಸ್‌ವರ್ಡ್ ಅಥವಾ ಪ್ಯಾಟರ್ನ್ ಲಾಕ್‌ ಮರೆತಲ್ಲಿ, ಅನ್‌ಲಾಕ್‌ ಹೇಗೆ?

ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಆಕಸ್ಮಿಕವಾಗಿ ಪಾಸ್‌ವರ್ಡ್ ಅಥವಾ ಪ್ಯಾಟರ್ನ್‌ ಲಾಕ್ ಮರೆತಲ್ಲಿ, ಮೊಬೈಲ್ ಅನ್‌ಲಾಕ್‌ ಮಾಡಲು ಈ ಸರಳ ಟ್ರಿಕ್ಸ್ ಫಾಲೋ ಮಾಡಿ.

Written By:

ಮೊಬೈಲ್‌ ಪಾಸ್‌ವರ್ಡ್‌ ಅಥವಾ ಪ್ಯಾಟರ್ನ್‌ ಲಾಕ್‌ ಸೆಟ್‌ ಮಾಡುವುದು ಏಕೆ? ಸಂಶಯವಿಲ್ಲದೇ ವೈಯಕ್ತಿಕ ಮಾಹಿತಿ ಇತರರಿಗೆ ತಿಳಿಯದಿರಲಿ ಅಂತ. ಆದರೆ ಕೆಲವೊಮ್ಮೆ ಕೆಲವರು ಆಗಾಗ ಪಾಸ್‌ವರ್ಡ್‌ ಅಥವಾ ಪ್ಯಾಟರ್ನ್ ಅನ್ನು ಚೇಂಜ್‌ ಮಾಡುತ್ತಾರೆ. ಈ ರೀತಿಯ ಅಚಾನಕ್‌ ಬದಲಾವಣೆಯಿಂದ ಪಾಸ್‌ವರ್ಡ್‌ ಮತ್ತು ಸ್ಕ್ರೀನ್ ಲಾಕ್‌ ಪ್ಯಾಟರ್ನ್ ಮರೆತುಹೋಗಬಹುದು.

ಪಾಸ್‌ವರ್ಡ್‌(Password) ಅಥವಾ ಸ್ಕ್ರೀನ್ ಲಾಕ್‌ ಪ್ಯಾಟರ್ನ್ ಮರೆತ ನಂತರ ಸಮಸ್ಯೆ ಆರಂಭವಾದಂತೆ. ಅಂದಹಾಗೆ ಇಂದಿನ ಲೇಖನದಲ್ಲಿ ಕಾರಣಾಂತರಗಳಿಂದ ಪಾಸ್‌ವರ್ಡ್‌ ಅಥವಾ ಸ್ಕ್ರೀನ್‌ ಲಾಕ್‌ ಪ್ಯಾಟರ್ನ್‌ ಮರೆತು ಹೋದಲ್ಲಿ ಆಂಡ್ರಾಯ್ಡ್(Android) ಅನ್ನು ಅನ್‌ಲಾಕ್‌ ಮಾಡುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಮಾಹಿತಿಯನ್ನು ಕೆಳಗಿನ ಸ್ಲೈಡರ್‌ನಲ್ಲಿ ಓದಿರಿ.

ವಾಟ್ಸಾಪ್‌ನಲ್ಲಿ ವೀಡಿಯೊ ಆಟೊ ಡೌನ್‌ಲೋಡ್ ನಿಲ್ಲಿಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಟ್ರಿಕ್ 1: ಫ್ಯಾಕ್ಟರಿ ರೀಸೆಟ್‌ ಮೂಲಕ ಪ್ಯಾಟರ್ನ್‌ ಲಾಕ್‌ ಅನ್‌ಲಾಕ್‌ ಮಾಡಿ

ಇದು ಲಾಕ್‌ ಆದ ಆಂಡ್ರಾಯ್ಡ್ ಅನ್‌ಲಾಕ್‌ ಮಾಡಲು ಸರಳ ಟ್ರಿಕ್ ಆಗಿದೆ. ಈ ಟ್ರಿಕ್ ಬಳಸಿದಲ್ಲಿ, ನಿಮ್ಮ ಫೋನ್‌ನಲ್ಲಿ ಸೇವ್‌ ಆಗಿರುವ ಎಲ್ಲಾ ಡಾಟಾ ಡಿಲೀಟ್ ಆಗುತ್ತದೆ. ಈ ಟ್ರಿಕ್‌ ಬಳಸಲು ಕೆಳಗಿನ ಹಂತಗಳನ್ನು ಫಾಲೋ ಮಾಡಿ.

ಹಂತ 1 : ನಿಮ್ಮ ಆಂಡ್ರಾಯ್ಡ್ ಸ್ವಿಚ್‌ ಆಫ್‌ ಮಾಡಿ, ಸ್ವಲ್ಪ ಸಮಯ ಕಾಯಿರಿ

ಹಂತ 2: ನಂತರ '+' ಸೌಂಡ್‌ ಬಟನ್ ಮತ್ತು ಪವರ್‌ ಬಟನ್‌ ಅನ್ನು ಒಂದೇ ಸಮಯದಲ್ಲಿ ಪ್ರೆಸ್ ಮಾಡಿ.

ಹಂತ 3: ಮೇಲಿನಂತೆ ಮಾಡಿದಲ್ಲಿ, ನಿಮ್ಮ ಆಂಡ್ರಾಯ್ಡ್ ಡಿವೈಸ್‌ ರಿಕವರಿ ಮೋಡ್‌ನಲ್ಲಿ ಓಪನ್ ಆಗುತ್ತದೆ. ಈ ಫ್ಯಾಕ್ಟರಿ ರೀಸೆಟ್ ಬಟನ್ ಅನ್ನು ಮೆನುವಿನಲ್ಲಿ ಆಯ್ಕೆ ಮಾಡಿ.

ಹಂತ 4: ಹಲವು ಆಪ್ಶನ್‌ಗಳ ಲೀಸ್ಟ್ ಪಡೆದ ನಂತರ, 'Wipe Cache Partition To Clean Data' ಎಂಬಲ್ಲಿ ಟ್ಯಾಪ್‌ ಮಾಡಿ

ಹಂತ 5: ನಂತರ ಆಂಡ್ರಾಯ್ಡ್ ಡಿವೈಸ್‌ ಸ್ವಿಚ್‌ ಆನ್‌ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ರಿಕ್ಸ್ 2: ADM ಬಳಸಿ ಪಾಸ್‌ವರ್ಡ್‌ ಅನ್‌ಲಾಕ್‌ ಮಾಡಿ

ADM ಎಂದರೆ 'ಆಂಡ್ರಾಯ್ಡ್ ಡಿವೈಸ್‌ ಮ್ಯಾನೇಜರ್‌. ನಿಮ್ಮ ಮೊಬೈಲ್‌ ಅನ್ನು ಡೆಸ್ಕ್‌ಟಾಪ್‌ ಅಥವಾ ಲ್ಯಾಪ್‌ಟಾಪ್‌ನಿಂದ ಸರಳವಾಗಿ ADM ಅನ್‌ಲಾಕ್‌ ಮಾಡಬಹುದು. ಕೆಳಗಿನ ಹಂತಗಳನ್ನು ಫಾಲೋ ಮಾಡಿ.

ಹಂತ 1: ಆಂಡ್ರಾಯ್ಡ್ ಡಿವೈಸ್‌ ಮ್ಯಾನೇಜರ್‌ ಸೈಟ್‌ಗೆ ಹೋಗಿ

ಹಂತ 2: ನಿಮ್ಮ ಗೂಗಲ್‌ ಖಾತೆಗೆ ಸೈನ್‌ ಇನ್‌ ಆಗಿರಿ.

ಹಂತ 3: 'ಲಾಕ್‌' ಆಪ್ಶನ್‌ ಮೇಲೆ ಕ್ಲಿಕ್ ಮಾಡಿ.

ಹಂತ 4: ಹೊಸ ಪಾಸ್‌ವರ್ಡ್‌ ಎಂಟರ್ ಮಾಡಿ, ಹೊಸ ಪಾಸ್‌ವರ್ಡ್‌ ಅನ್ನು ಮೊತ್ತೊಮ್ಮೆ ಕನ್‌ಫರ್ಮ್ ಮಾಡಿ.

ಹಂತ 5: ಈ ಹಂತದಲ್ಲಿ ಲಾಕ್‌ ಆದ ಫೋನ್‌ ಅನ್ನು ರೀಬೂಟ್ ಮಾಡಿ ಮತ್ತು ಹೊಸದಾಗಿ ಸೆಟ್‌ ಮಾಡಿದ ಪಾಸ್‌ವರ್ಡ್‌ ಅನ್ನು ಎಂಟರ್‌ ಮಾಡಿ. ನಿಮ್ಮ ಫೋನ್‌ ಅನ್ನು ಯಶಸ್ವಿಯಾಗಿ ಅನ್‌ಲಾಕ್‌ ಮಾಡುತ್ತೀರಿ.

 

ಟ್ರಿಕ್ಸ್ 3: ಬೈಪಾಸಿಂಗ್ ಪ್ಯಾಟರ್ನ್‌ ಲಾಕ್‌

ಈ ಟ್ರಿಕ್ಸ್ ನಿಮ್ಮ ಲಾಕ್‌ ಆದ ಮೊಬೈಲ್‌ನಲ್ಲಿ ಡಾಟಾ ಕನೆಕ್ಷನ್‌ ಆನ್‌ಆಗಿದ್ದಲ್ಲಿ ಮಾತ್ರ ವರ್ಕ್‌ ಆಗುತ್ತದೆ.

ಹಂತ 1: 5 ಬಾರಿ ತಪ್ಪು ಪ್ಯಾಟರ್ನ್ ಲಾಕ್‌ ಡ್ರಾ ಮಾಡಿ

ಹಂತ 2: '30 ಸೆಕೆಂಡ್‌ನಲ್ಲಿ ಪ್ರಯತ್ನಿಸಿ' ಎಂಬ ನೋಟಿಫಿಕೇಶನ್‌ ಬರುತ್ತದೆ.

ಹಂತ 3: ನಂತರ 'Forgot Password' ಆಪ್ಶನ್ ಬರುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ.

ಹಂತ 4: ಅಟ್‌ ಲೀಸ್ಟ್‌ ನಿಮ್ಮ ಜಿಮೇಲ್‌ ವಿಳಾಸ ಮತ್ತು ಪಾಸ್‌ವರ್ಡ್‌ ಎಂಟರ್‌ ಮಾಡಿ, ಈ ಜಿಮೇಲ್ ಲಾಕ್ ಆದ ಡಿವೈಸ್‌ನಲ್ಲಿ ಬಳಸುತ್ತಿದ್ದ ಖಾತೆಯದ್ದಾಗಿರಬೇಕು. ನಂತರ ಹೊಸ ಪ್ಯಾಟರ್ನ್‌ ಲಾಕ್‌ ಸೆಟ್‌ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
3 Easy Tricks to Crack Android Mobile Password or Pattern Lock. To know more visit kannada.gizbot.com
Please Wait while comments are loading...
Opinion Poll

Social Counting