ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಕೆದಾರರು ಟೈಪಿಸದೇ 'ವಾಟ್ಸಾಪ್' ಮೆಸೇಜ್‌ ಸೆಂಡ್ ಮಾಡುವುದು ಹೇಗೆ?

ವಾಟ್ಸಾಪ್‌ ಮೆಸೇಜ್‌ ಅನ್ನು ಟೈಪ್‌ ಮಾಡದೇ ಸೆಂಡ್‌ ಮಾಡಲು ಕೇವಲ 4 ಹಂತಗಳನ್ನು ಫಾಲೋ ಮಾಡಿ.

Written By:

ನಮ್‌ ಹುಡುಗಿ ಸಂಜೆ ವೇಳೆಯಲ್ಲಿ ದಿನ ಚಾಟ್‌ ಮಾಡಲು ಬಯಸುತ್ತಾಳೆ, ಆದ್ರೆ ನನ್‌ಗೆ ಕೆಲಸ ಮುಗಿಸಿ ಆಗ್‌ತಾನೆ ಫ್ರೀ ಆಗಿರ್‌ತೀನಿ, ಟೈಪ್‌ ಮಾಡಿ ಚಾಟ್‌ ಮಾಡ್‌ಬೇಕು ಅಂದ್ರೆ ಕೋಪ ನೆತ್ತಿಗೆ ಏರುತ್ತೆ ಗುರು. ಇತ್ತ ಕಾಲ್‌ ಮಾಡಿ ಒಂದಷ್ಟು ಹೊತ್ತು ಮಾತಾಡೋಣ ಅಂದ್ರೆ ಈ ಡಬ್ಬ ಸಿಮ್‌ನಲ್ಲಿ ಕಾಲ್‌(ಕರೆ) ರೇಟ್‌ ಜಾಸ್ತಿ! ಹೀಗೆ ಹೇಳೋರು ಬಹುಸಂಖ್ಯಾತ ಜನರು ಸಿಗುತ್ತಾರೆ ಅಲ್ವಾ.. ಅಥವಾ ನಮ್ಮ ಸುತ್ತಮುತ್ತಲ ಸ್ನೇಹಿತಾರೆ ಇರುತ್ತಾರೆ. ಅಂದಹಾಗೆ ಕೇವಲ ಹುಡುಗಿಗೆ ಮಾತ್ರವಲ್ಲ, ಹಲವು ಹುಡುಗ ಹುಡುಗಿಯರು ಸೇರಿದಂತೆ ಬಹುಸಂಖ್ಯಾತ ಮೊಬೈಲ್‌ ಬಳಕೆದಾರರು ಈ ರೀತಿಯ ಬೇಸರವನ್ನು ಮೆಸೇಜ್‌ ಟೈಪ್‌ ಮಾಡುವುದರಲ್ಲಿ ತೋರಿಸುತ್ತಾರೆ.

ಇನ್ನು ಆಫೀಸ್‌ನಲ್ಲಿ ಇದ್ದಾಗ ಟೈಪ್ ಮಾಡಿ ಮೆಸೇಜ್‌ ಕಳುಹಿಸುವುದು ಎಂದರೆ, ತುಂಬಾ ಒತ್ತಡದ ಸಮಸ್ಯೆ. ವಾಟ್ಸಾಪ್‌ನಲ್ಲಿ ಸ್ನೇಹಿತರೊಂದಿಗೆ ಎಲ್ಲಾ ಸಮಯದಲ್ಲೂ ಟೈಪಿಸಿಯೇ ಮೆಸೇಜ್‌ ಮಾಡುವುದು ಕಿರಿಕಿರಿ ಅನಿಸುವಷ್ಟು ಒತ್ತಡ. ಆದ್ದರಿಂದಲೇ ಈಗ ಪರಿಹಾರ ಒಂದನ್ನು ಕಂಡುಹಿಡಿಯಲಾಗಿದೆ. ಇನ್ನುಮುಂದೆ ವಾಟ್ಸಾಪ್‌ನಲ್ಲಿ ರೀಪ್ಲೇ ಮತ್ತು ಮೆಸೇಜ್‌ಗಳನ್ನು ಸೆಂಡ್‌ ಮಾಡಲು ಟೈಪಿಸುವ ಅಗತ್ಯವಿಲ್ಲ.

ವಾಟ್ಸಾಪ್'ನಲ್ಲಿ ವೀಡಿಯೊ ಕರೆ ಮಾಡುವುದು ಹೇಗೆ?

ಹೌದು, ಮೆಸೇಜ್‌ ಟೈಪಿಸದೇ ಮತ್ತು ವಾಟ್ಸಾಪ್(WhatsApp) ಆಪ್‌ ಓಪನ್‌ ಮಾಡದೆಯೇ ಇತರರಿಗೆ ಮೆಸೇಜ್‌ ಸೆಂಡ್‌ ಮಾಡಬಹುದು. ಹೇಗೆ ಎಂದು ತಿಳಿಯಲು ಕೆಳಗಿನ ವಾಟ್ಸಾಪ್‌ ಟ್ರಿಕ್‌ಗಳನ್ನು ಓದಿರಿ. ಅಲ್ಲದೇ ನಿಮಗೆ ಇಷ್ಟವಾಗದವರಿಂದ ನೀವು ಆನ್‌ಲೈನ್‌ನಲ್ಲಿರುವ ಬಗ್ಗೆ ತಿಳಿಯದಂತೆ, ಲಾಸ್ಟ್ ಸೀನ್‌ ಕಾಣದಂತೆ ಸಹ ಸೇವ್‌ ಆಗಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಗೂಗಲ್‌ ನಿಮ್ಮನ್ನು ಕಾಪಾಡುತ್ತದೆ

ವಾಟ್ಸಾಪ್‌ ಆಪ್‌ ಓಪನ್‌ ಮಾಡದಂತೆ ಮೆಸೇಜ್‌ ಸೆಂಡ್‌ ಮಾಡಲು, ಗೂಗಲ್‌ ಮಾತ್ರ ಸಹಾಯಮಾಡಬಲ್ಲದು. ಗೂಗಲ್‌ ವಾಯ್ಸ್ ಬಳಸಿ ಲೈಫ್‌ ಅನ್ನು ಇನ್ನಷ್ಟು ಸುಲಭಗೊಳಿಸಿ. ಅಲ್ಲದೇ ಆಪ್‌ ಓಪನ್ ಮಾಡದಂತೆ ವಾಟ್ಸಾಪ್ ಮೆಸೇಜ್‌ ಸೆಂಡ್ ಮಾಡಲು ಅವಕಾಶ ನೀಡುತ್ತದೆ.

ಗೂಗಲ್ ವಾಯ್ಸ್, ನೀವು ಆನ್‌ಲೈನ್‌ನಲ್ಲಿ ಇರುವುದನ್ನು ಸಹ ತೋರಿಸುವುದಿಲ್ಲ, ಅಲ್ಲದೇ ಲಾಸ್ಟ್‌ ಸೀನ್‌ ಅನ್ನು ರಹಸ್ಯವಾಗಿ ಇಡುತ್ತದೆ. ಈ ಫೀಚರ್‌ಗಳು ವರ್ಕ್‌ ಆಗಲು ವಾಟ್ಸಾಪ್ ಬಳಕೆದಾರರು ಕೆಳಗಿನ ಮಾಹಿತಿಗಳನ್ನು ಓದಿರಿ.

 

#1 ಗೂಗಲ್‌ ಆಪ್‌ ಓಪನ್‌ ಮಾಡಿ' OK Google' ಹೇಳಿ

ಗೂಗಲ್‌ ಫೋಲ್ಡರ್‌ ಅಥವಾ ಆಪ್‌ ಡ್ರಾವರ್‌ನಿಂದ ಗೂಗಲ್‌ ಆಪ್‌ ಓಪನ್‌ ಮಾಡಿ ಜೋರಾಗಿ 'OK Google' ಎಂದು ಹೇಳಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#2 ವಾಟ್ಸಾಪ್‌ ಮೆಸೇಜ್‌ ಹೇಳಿರಿ

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಕೆದಾರರು ವಾಟ್ಸಾಪ್‌ನಲ್ಲಿ ಲಾಂಗ್‌ ಮೆಸೇಜ್‌ ಟೈಪಿಸುವ ಬದಲು, ಸೆಂಡ್‌ ಮಾಡಬೇಕಾದ ಮೆಸೇಜ್‌ ಅನ್ನು ಹೇಳಿರಿ. ನಂತರ ಗೂಗಲ್‌ ಯಾವ ಮೆಸೇಜ್‌ ಅನ್ನು ಸೆಂಡ್ ಮಾಡಬೇಕು ಎಂದು ಕೇಳುತ್ತದೆ.

ಈ ರೀತಿಯಲ್ಲಿ ಟೈಪಿಸುವ ಸಮಸ್ಯೆಯಿಂದ ವಾಟ್ಸಾಪ್‌ ಮೆಸೇಜ್‌ ಸೆಂಡ್‌ ಮಾಡಬಹುದು.

 

#3 ಮೆಸೇಜ್‌ ಅನ್ನು ಯಾರಿಗೆ ಸೆಂಡ್‌ ಮಾಡಬೇಕೋ ಅವರ ಹೆಸರು ಹೇಳಿ

ಮೊದಲು ಮೆಸೇಜ್‌ ಹೇಳಿದ ನಂತರ, ಗೂಗಲ್‌ ಮೆಸೇಜ್‌ ಕಳುಹಿಸಬೇಕಾದ ನಿಮ್ಮ ಸ್ನೇಹಿತರ ಹೆಸರು ಕೇಳುತ್ತದೆ, ಅವರ ಹೆಸರನ್ನು ಹೇಳಿ. ಗೂಗಲ್‌ ಅವರ ಹೆಸರನ್ನು ಪತ್ತೆ ಮಾಡುತ್ತದೆ.

#4 ಸೆಂಡ್ ಎಂದು ಹೇಳಿ

ನೀವು ಹೇಳಿದ ನಿಮ್ಮ ಸ್ನೇಹಿತರಿಗೆ ವಾಟ್ಸಾಪ್ ಮೆಸೇಜ್‌ ಸೆಂಡ್‌ ಆಗಲು 'Send it' ಎಂದು ಹೇಳಿರಿ. ಅಥವಾ ಮೆಸೇಜ್‌ನಲ್ಲಿ ಯಾವುದಾದರೂ ಬದಲಾವಣೆ ಆಗಬೇಕು ಎಂದರೆ, 'Change it' ಎಂದು ಹೇಳಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
4 Steps to Send WhatsApp Messages Without Typing On Your Android Smartphone. To know more visit kannada.gizbot.com
Please Wait while comments are loading...
Opinion Poll

Social Counting