ಸ್ಮಾರ್ಟ್‌ಫೋನ್‌ ಕಳುವಾದರೆ ದೂರದಿಂದಲೇ ಪತ್ತೆ ಹಚ್ಚುವುದು ಹೇಗೆ?

By Ashwath
|

ಸ್ಮಾರ್ಟ್‌ಫೋನ್‌ ಟ್ಯಾಬ್ಲೆಟ್‌ ಬಳಕೆ ಹೆಚ್ಚಾದಂತೆ ಅದನ್ನು ಕದಿಯುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಇಂದು ಈ ಸಾಧನಗಳನ್ನು ಕದ್ದರೂ ಅದನ್ನು ಪತ್ತೆ ಮಾಡವುದು ಸುಲಭ. ಪೊಲೀಸರಿಗೆ ಇಎಂಇಐ ನಂಬರ್‌ ನೀಡುವ ಮೂಲಕ ಸಾಧನಗಳನ್ನು ಪತ್ತೆ ಮಾಡಬಹುದು, ಅದರೆ ಸಾಧನವನ್ನು ಪತ್ತೆ ಹಚ್ಚಬೇಕಾದರೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ.

ಇನ್ನೂ ಫೋನ್‌ ನಂಬರ್‌ನ್ನು ಬ್ಲಾಕ್‌ ಮಾಡುವುದು ಸುಲಭ. ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ಸಿಮ್‌ ಖರೀದಿಸಿದಾಗ ನೀಡಿದ ಮಾಹಿತಿಯನ್ನು ಸರಿಯಾಗಿ ಹೇಳಿ, ಕೊನೆಯ ಎರಡು ಕರೆ ಮಾಹಿತಿಯನ್ನು ಸರಿಯಾಗಿ ಹೇಳಿ ಸಿಮ್‌ನ್ನು ಬ್ಲಾಕ್‌ ಮಾಡಬಹುದು.

ಆದರೆ ಸ್ಮಾರ್ಟ್‌ಫೋನಿನಲ್ಲಿರುವ ಬಹಳ ಅಮೂಲ್ಯವಾದ ಡೇಟಾಗಳು ಇರುತ್ತದೆ. ಕಳೆದು ಹೋದರೆ ಅದು ಸಹ ಕಳೆದು ಹೋಯಿತು ಎಂದು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಆ ಡೇಟಾಗಳನ್ನು ಮರಳಿ ಪಡೆಯಬಹುದು. ಡೇಟಾಗಳನ್ನು ಡಿಲೀಟ್‌ ಮಾಡಬಹುದು. ಜೊತೆಗೆ ಸದ್ಯ ಆ ಸ್ಮಾರ್ಟ್‌ಫೋನ್‌ ಎಲ್ಲಿದೆ ಎನ್ನುವ ಮಾಹಿತಿಯನ್ನು ತಿಳಿಯಬಹುದು. ಅಷ್ಟೇ ಅಲ್ಲದೇ ಅದನ್ನೂ ಬ್ಲಾಕ್‌ ಮಾಡಬಹುದು.

ಹೀಗಾಗಿ ಇಲ್ಲಿ ಆಂಡ್ರಾಯ್ಡ್‌,ವಿಂಡೋಸ್‌,ಐಓಎಸ್‌,ಬ್ಲ್ಯಾಕ್‌ಬೆರಿ ಸಾಧನಗಳನ್ನು ದೂರದಿಂದಲೇ ಪತ್ತೆ ಹಚ್ಚುವುದು ಹೇಗೆ ಎನ್ನುವ ವಿವರವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಸ್ಮಾರ್ಟ್‌ಫೋನ್‌ ಸುರಕ್ಷತೆಗಾಗಿ ಏನು ಮಾಡಬೇಕು?

 ಸ್ಮಾರ್ಟ್‌ಫೋನ್‌ ಕಳುವಾದರೆ ದೂರದಿಂದಲೇ ಪತ್ತೆ ಹಚ್ಚುವುದು ಹೇಗೆ?

ಸ್ಮಾರ್ಟ್‌ಫೋನ್‌ ಕಳುವಾದರೆ ದೂರದಿಂದಲೇ ಪತ್ತೆ ಹಚ್ಚುವುದು ಹೇಗೆ?

ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳನ್ನು ಓದುವಾಗ ಅದರಲ್ಲಿ ಜಿಪಿಎಸ್‌, ಎ-ಜಿಪಿಎಸ್‌ ವಿಶೇಷತೆ ಇರುವುದನ್ನು ನೀವು ಗಮನಿಸರಬಹುದು. ಎ ಜಿಪಿಎಸ್‌ಗೆ ನೇರವಾಗಿ ಜಿಪಿಎಸ್‌ ಉಪಗ್ರಹಗಳ ಅಗತ್ಯವಿಲ್ಲ ಬದಲಾಗಿ ಮೊಬೈಲ್‌ ನೆಟ್‌ವರ್ಕ್‌‌ಗಳ ರೆಡಿಯೋ ಸಿಗ್ನಲ್‌ ಬಳಸಿ ಕಾರ್ಯ‌ನಿರ್ವ‌ಹಿಸುತ್ತದೆ. ಹೀಗಾಗಿ ಕಳೆದು ಹೋದ ಸಾಧನಗಳಲ್ಲಿ ಜಿಪಿಎಸ್‌ ಇದ್ದರೆ ಸುಲಭ,ಒಂದು ವೇಳೆ ಕಳ್ಳತನ ಮಾಡಿರುವ ವ್ಯಕ್ತಿ ಜಿಪಿಎಸ್‌ ಬಳಸದಿದ್ದರೂ ಎ-ಜಿಪಿಎಸ್‌ ಇದ್ದರೂ ಕಳೆದು ಹೋಗಿರುವ ಸಾಧನಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು.

ದಿಕ್ಸೂಚಿ ಉಪಗ್ರಹದ  ಕೆಲಸ ಏನು?ದಿಕ್ಸೂಚಿ ಉಪಗ್ರಹದ ಕೆಲಸ ಏನು?

 ಸ್ಮಾರ್ಟ್‌ಫೋನ್‌ ಕಳುವಾದರೆ ದೂರದಿಂದಲೇ ಪತ್ತೆ ಹಚ್ಚುವುದು ಹೇಗೆ?

ಸ್ಮಾರ್ಟ್‌ಫೋನ್‌ ಕಳುವಾದರೆ ದೂರದಿಂದಲೇ ಪತ್ತೆ ಹಚ್ಚುವುದು ಹೇಗೆ?

ಆಂಡ್ರಾಯ್ಡ್‌‌ ಸಾಧನಗಳನ್ನು ಹುಡುಕುಲು ನೀವು ಗೂಗಲ್‌ ಅಕೌಂಟ್‌ ಲಾಗಿನ್‌ ಆಗಿ http://google.com/android/devicemanager ಹೋಗಿ ಸಾಧನ ಇರುವ ಸ್ಥಳವನ್ನು ಪತ್ತೆ ಮಾಡಬಹುದು.ಜೊತೆಗೆ ಸಾಧನದಲ್ಲಿರುವ ಡೇಟಾಗಳನ್ನು ಡಿಲೀಟ್‌ ಮಾಡಬಹುದು. ಅಷ್ಟೇ ಅಲ್ಲದೇ ಲಾಕ್‌ ಸಹ ಮಾಡಬಹುದು.

 ಸ್ಮಾರ್ಟ್‌ಫೋನ್‌ ಕಳುವಾದರೆ ದೂರದಿಂದಲೇ ಪತ್ತೆ ಹಚ್ಚುವುದು ಹೇಗೆ?

ಸ್ಮಾರ್ಟ್‌ಫೋನ್‌ ಕಳುವಾದರೆ ದೂರದಿಂದಲೇ ಪತ್ತೆ ಹಚ್ಚುವುದು ಹೇಗೆ?

ಆಪಲ್‌ ಸಾಧನಗಳನ್ನು ಪತ್ತೆ ಹಚ್ಚಲು ಆಪಲ್‌ ಒಂದು ಆಪ್‌ನ್ನು ತಯಾರಿಸಿದೆ. ಐ ಕ್ಲೌಡ್‌‌ ಅಕೌಂಟ್‌ ಮೂಲಕ ಲಾಗಿನ್‌ Find my iPhone ಅಪ್ಲಿಕೇಶನ್‌ ಹೋಗಿ ದೂರದಿಂದಲೇ ಆಪಲ್‌ ಸಾಧನದಲ್ಲಿರುವ ಡೇಟಾವನ್ನು ಡಿಲೀಟ್‌ ಮಾಡಬಹುದು ಮತ್ತು ಸಾಧನಗಳನ್ನು ಲಾಕ್‌ ಮಾಡಬಹುದು.

 ಸ್ಮಾರ್ಟ್‌ಫೋನ್‌ ಕಳುವಾದರೆ ದೂರದಿಂದಲೇ ಪತ್ತೆ ಹಚ್ಚುವುದು ಹೇಗೆ?

ಸ್ಮಾರ್ಟ್‌ಫೋನ್‌ ಕಳುವಾದರೆ ದೂರದಿಂದಲೇ ಪತ್ತೆ ಹಚ್ಚುವುದು ಹೇಗೆ?

ಕಳವಾದ ವಿಂಡೋಸ್‌ ಓಎಸ್‌ ಸಾಧನವಿರುವ ಸ್ಥಳವನ್ನು Find My Phone ಮೂಲಕ ಪತ್ತೆ ಹಚ್ಚಬಹುದು. http://windowsphone.comಗೆ ವಿಂಡೋಸ್‌ ಲೈವ್‌ ಐಡಿ ಮೂಲಕ ಲಾಗಿನ್‌ ಆಗಿ ಸ್ಥಳ,ಪಾಸ್‌ವರ್ಡ್, ಅದರಲ್ಲಿರುವ ಡೇಟಾಗಳನ್ನು ಡಿಲೀಟ್‌ ಮಾಡಬಹುದು.

 ಸ್ಮಾರ್ಟ್‌ಫೋನ್‌ ಕಳುವಾದರೆ ದೂರದಿಂದಲೇ ಪತ್ತೆ ಹಚ್ಚುವುದು ಹೇಗೆ?

ಸ್ಮಾರ್ಟ್‌ಫೋನ್‌ ಕಳುವಾದರೆ ದೂರದಿಂದಲೇ ಪತ್ತೆ ಹಚ್ಚುವುದು ಹೇಗೆ?

ಕಳುವಾದ ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ನ್ನು BlackBerry Protect ಮೂಲಕ ಬ್ಲಾಕ್‌ಮಾಡಬಹುದು. ಬ್ಲ್ಯಾಕ್‌ಬೆರಿ ಅಕೌಂಟ್‌ ಮೂಲಕ ಲಾಗಿನ್‌ ಆಗಿ ಸದ್ಯ ಸ್ಮಾರ್ಟ್‌ಫೋನ್‌ ಇರುವ ಸ್ಥಳ, ಸ್ಮಾರ್ಟ್‌ಫೋನಲ್ಲಿರುವ ಡೇಟಾವನ್ನು ಡಿಲೀಟ್‌ ಮಾಡಬಹುದು.

 ಸ್ಮಾರ್ಟ್‌ಫೋನ್‌ ಕಳುವಾದರೆ ದೂರದಿಂದಲೇ ಪತ್ತೆ ಹಚ್ಚುವುದು ಹೇಗೆ?

ಸ್ಮಾರ್ಟ್‌ಫೋನ್‌ ಕಳುವಾದರೆ ದೂರದಿಂದಲೇ ಪತ್ತೆ ಹಚ್ಚುವುದು ಹೇಗೆ?

ಆಂಡ್ರಾಯ್ಡ್‌ ಸಾಧನಗಳು ಕಳುವಾದರೆ ಅದನ್ನು ಪತ್ತೆ ಹಚ್ಚಲು ಮತ್ತಷ್ಟು ಅಪ್ಲಿಕೇಶನ್‌ಗಳಿದ್ದು ಕಳ್ಳರ ಫೋಟೋಗಳನ್ನು ನಿಮ್ಮ ಇ ಮೇಲ್‌ಗೆ ಕಳುಗಿಸುವ ಆಪ್‌ಗಳಿವೆ. ಆ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ:ಆಂಡ್ರಾಯ್ಡ್‌ ಫೋನ್‌ ಕಳ್ಳರನ್ನು ಪತ್ತೆ ಹಚ್ಚುವುದು ಹೇಗೆ..?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X