ಗೂಗಲ್‌ ಖಾತೆ ಸುರಕ್ಷತೆಗಾಗಿ ಈ 5 ಟಿಪ್ಸ್‌ಗಳನ್ನು ಮಿಸ್‌ಮಾಡದೇ ಬಳಸಿ

ನಿಮ್ಮ ಗೂಗಲ್‌ ಖಾತೆಯನ್ನು ನಾವು ತಿಳಿಸುವ ಈ 5 ಟಿಪ್ಸ್‌ಗಳಿಂದ ಸುರಕ್ಷಿತಗೊಳಿಸಿ.

Written By:

ಇತ್ತೀಚಿನ ದಿನಗಳಲ್ಲಿ ಗೂಗಲ್‌ ಸೇವೆಯನ್ನು ಪ್ರತಿಯೊಂದಕ್ಕೂ ಬಳಸುತ್ತೇವೆ. ಇಮೇಲ್‌ಗಳನ್ನು ಓದುವಾಗಲು ಗೂಗಲ್‌ನ ಜಿಮೇಲ್‌ ಅನ್ನೇ ಬಳಸುತ್ತೇವೆ. ಯೂಟ್ಯೂಬ್‌ ವೀಡಿಯೊ ನೋಡಲು ಹೋದರೆ ಪುನಃ ಗೂಗಲ್‌ ಅನ್ನೇ ಬಳಸುತ್ತೇವೆ. ಅಲ್ಲದೇ ಗೂಗಲ್ ಕ್ರೋಮ್, ಡಾಕ್ಯುಮೆಂಟ್, ಶೀಟ್, ಕ್ಯಾಲೆಂಡರ್, ಕಾಂಟ್ಯಾಕ್ಟ್, ಮ್ಯಾಪ್ಸ್ ಮತ್ತು ಆಂಡ್ರಾಯ್ಡ್ ಸಹ ಗೂಗಲ್‌ ಸೇವೆಯೆ.

ಗೂಗಲ್‌ ಖಾತೆ ಸುರಕ್ಷತೆಗಾಗಿ ಈ 5 ಟಿಪ್ಸ್‌ಗಳನ್ನು ಮಿಸ್‌ಮಾಡದೇ ಬಳಸಿ

ಮೇಲಿನವುಗಳು ಮಾತ್ರವಲ್ಲದೇ ಹಲವು ವಿವಿಧ ವೆಬ್‌ಸೈಟ್‌ಗಳ ಆಕ್ಸೆಸ್‌ಗಾಗಿ ಗೂಗಲ್‌ ಖಾತೆಯನ್ನು ಬಳಸುತ್ತೇವೆ. ವೆಬ್‌ಸೈಟ್ ಕನೆಕ್ಷನ್‌ ಪಡೆಯುವವರು ಆಗಾಗ ದಿನನಿತ್ಯ ಗೂಗಲ್‌ ಅನ್ನು ಬಳಸದೇ ಇರಲಾರರು. ಇಂತಹವರು ಗೂಗಲ್‌ ಖಾತೆಯಲ್ಲೇ ತಮ್ಮ ಅತ್ಯಮೂಲ್ಯ ಹೆಚ್ಚಿನ ಮಾಹಿತಿಗಳನ್ನು ಸ್ಟೋರ್‌ ಮಾಡಿರುತ್ತಾರೆ. ಅಂತಹವರು ತಮ್ಮ ಯಾವುದೇ ಮಾಹಿತಿಯನ್ನು ಯಾರು ದಾಳಿ ಮಾಡದಂತೆ ಸುರಕ್ಷಿತಗೊಳಿಸುವುದು ಉತ್ತಮ.

ಇಂದಿನಿಂದ ಗೂಗಲ್‌ ಸರ್ಚ್‌ನಲ್ಲಿ ನಿಖರ ಮಾಹಿತಿಗಾಗಿ ಈ ಟ್ರಿಕ್ಸ್‌ಗಳನ್ನು ಫಾಲೋ ಮಾಡಲೇಬೇಕು!

ನಿಮ್ಮ ಗೂಗಲ್‌ ಖಾತೆಯನ್ನು ನಾವು ತಿಳಿಸುವ ಈ 5 ಟಿಪ್ಸ್‌ಗಳಿಂದ ಸುರಕ್ಷಿತಗೊಳಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಗೂಗಲ್ ಸೆಕ್ಯೂರಿಟಿ ಚೆಕಪ್

ಗೂಗಲ್‌, ಬಳಕೆದಾರರು ತಮ್ಮ ಖಾತೆ ಸುರಕ್ಷತೆ ಚೆಕ್‌ ಮಾಡಿಕೊಳ್ಳಲು ಇನ್‌ಬಿಲ್ಟ್ ಸೆಕ್ಯೂರಿಟಿ ಸೆಟ್ಟಿಂಗ್ಸ್ ಹೊಂದಿದೆ. ಮೈ ಅಕೌಂಟ್ಸ್'ಗೆ ಹೋಗಿ ಸೆಕ್ಯೂರಿಟಿ ಚೆಕಪ್ ಆಕ್ಸೆಸ್ 'ಗಾಗಿ 'Sing &Security' ಆಪ್ಶನ್‌ ಕ್ಲಿಕ್ ಮಾಡಿ. ನಂತರ ನಿಮ್ಮ ಪೂರ್ಣ ರಿಕವರಿ ಮತ್ತು ಸೆಕ್ಯೂರಿಟಿ ಮಾಹಿತಿ ನೋಡಲು ಕೇಳಲ್ಪಡುವ ವಿಂಡೋ ಒಂದು ಓಪನ್‌ ಆಗುತ್ತದೆ. ನಂತರ ಅಲ್ಲಿನ ಎಲ್ಲಾ ಮಾಹಿತಿಗಳನ್ನು ಚೆಕ್‌ ಮಾಡಬಹುದು. ಚಿತ್ರ ಗಮನಿಸಿ.

ರಿಕವರಿ ಮತ್ತು ಫೋನ್ ಇಮೇಲ್ ಸೆಟ್ಟಿಂಗ್

ರಿಕವರಿ ಮೇಲ್‌ ಮತ್ತು ಬ್ಯಾಕಪ್‌ ಫೋನ್‌ ಸೆಟ್ಟಿಂಗ್ಸ್ ಅನ್ನು ಚೆಕ್‌ ಮಾಡಿ. ನೀವೇನಾದರೂ ಇಮೇಲ್‌ ಲಾಗೌಟ್‌ ಮಾಡಿದರೆ ಇದು ಬಹುಮುಖ್ಯವಾಗಿದೆ. ರಿಕವರಿ ಮೇಲ್‌ ಅಲರ್ಟ್ ಇಮೇಲ್‌ ಅನ್ನು ನಿಮ್ಮ ಪ್ರಾಥಮಿಕ ಮೇಲ್‌ ಲಾಗ್‌ ಆನ್‌ ಆದಲ್ಲಿ ನೀಡುತ್ತದೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಡಿವೈಸ್ ಜಿಮೇಲ್‌ ಖಾತೆಗೆ ಕನೆಕ್ಟ್ ಆಗಿದೆಯೇ ಚೆಕ್ ಮಾಡಿ

ಸೆಕ್ಯೂರಿಟಿ ರೀವೀವ್‌ನ ಎರಡನೇ ಹಂತವೆಂದರೆ, ನಿಮ್ಮ ಡಿವೈಸ್ ಜಿಮೇಲ್ ಖಾತೆ ಆಕ್ಸೆಸ್ ಮಾಡಲು ಬಳಕೆಯಾಗುತ್ತಿರುತ್ತದೆ. ಇದು ಜಿಮೇಲ್‌ ಖಾತೆಯನ್ನು ಪ್ರಸ್ತುತದಲ್ಲಿ ಯಾವ ಡಿವೈಸ್‌ನಿಂದ ಆಕ್ಸೆಸ್ ಮಾಡಲಾಗಿದೆ ಎಂದು ತಿಳಿಸುತ್ತದೆ. ಅದು ನೀವೆ ಎಂದು ಖಚಿತಪಡಿಸಬೇಕು.

ಒಂದು ವೇಳೆ ಎರಡು ಡಿವೈಸ್‌ಗಳಲ್ಲಿಯೂ ನೀವೆ ಖಾತೆ ಆಕ್ಸೆಸ್ ಮಾಡಿದ್ದರೆ 'Looks Good' ಎಂಬುದನ್ನು ಕ್ಲಿಕ್ ಮಾಡಿ. ಅಥವಾ ಒಂದು ವೇಳೆ ನೀವು ಬಳಸದ ಇತರೆ ಡಿವೈಸ್ ತೋರಿಸುತ್ತಿದ್ದಲ್ಲಿ ಕೆಳಗೆ ಸ್ಕ್ರಾಲ್‌ ಮಾಡಿ 'Something looks wrong' ಕ್ಲಿಕ್‌ ಮಾಡಿ. ಇತರೆ ಮಾಹಿತಿ ಚೆಕ್‌ ಮಾಡಿ.

 

ಜಿಮೇಲ್‌ ಆಕ್ಸೆಸ್‌ ನೀಡಿ ಆಪ್‌ ಮತ್ತು ವೆಬ್‌ಸೈಟ್‌ಗಳ ರಿವೀವ್ ನೋಡಿ

ನಿಮ್ಮ ಡಿವೈಸ್‌ನಲ್ಲಿ ಬಳಸದ ಆಪ್‌ ಅನ್ನು ಕ್ಲೀನಪ್‌ ಮಾಡಲು ಗೂಗಲ್‌ ಸಹಾಯ ಮಾಡುತ್ತದೆ. ಗೂಗಲ್ ಮುಖಾಂತರ ಆಕ್ಸೆಸ್‌ ಪಡೆದ ಆಪ್‌ಗಳು, ನೀವು ಎಷ್ಟು ದಿನದಿಂದ ಆಪ್‌ ಬಳಸುತ್ತಿದ್ದೀರಿ ಎಂಬ ಹಲವು ಮಾಹಿತಿಗಳನ್ನು ಹೊಂದಿರುತ್ತದೆ. ಒಂದು ವೇಳೆ ಇದನ್ನು ರದ್ದು ಮಾಡಬೇಕು ಎನಿಸಿದರೆ ಕೆಳಗೆ ಸ್ಕ್ರಾಲ್ ಮಾಡಿ 'Remove' ಎಂಬಲ್ಲಿ ಕ್ಲಿಕ್ ಮಾಡಿ. ಚಿತ್ರ ಗಮನಿಸಿ.

2 ಹಂತದ ವೆರಿಫಿಕೇಶನ್ ಸೆಟ್ಟಿಂಗ್ ರಿವೀವ್

ಗೂಗಲ್ ಖಾತೆ ಬಳಕೆದಾರರಿಗೆ 2 ಹಂತದ ವೆರಿಫಿಕೇಶನ್ ಸೆಟ್ಟಿಂಗ್ ಅತಿ ಮುಖ್ಯವಾಗಿದೆ. ಬ್ಯಾಕಪ್ ಫೋನ್ ನಂಬರ್ ಅನ್ನು ನೇರವಾಗಿ ಮತ್ತು ಬ್ಯಾಕಪ್ ಕೋಡ್ ಅಥವಾ ಗೂಗಲ್ ಅಥೆಂಟಿಕೇಟರ್ ಆಪ್‌ ಮೂಲಕ ರಿವೀವ್ ನೋಡಬಹುದು. ಎರಡು ಸಹ ಕೋಡ್ ಜೆನೆರೇಟ್ ಮಾಡಲು ಬಳಕೆಯಾಗುತ್ತವೆ. ನಂತರ ಗೂಗಲ್‌ ಖಾತೆ ನಂಬದ ಡಿವೈಸ್‌ನಲ್ಲಿ ಖಾತೆ ಆಕ್ಸೆಸ್ ಪಡೆಯಬಹುದು. ಆದರ ಸ್ಟ್ರಾಂಗ್ ಪಾಸ್‌ವರ್ಡ್ ಸೆಟ್‌ ಮಾಡಬೇಕು.

ಕೊನೆಯ ಬಾರಿ ಪಾಸ್‌ವರ್ಡ್ ಬದಲಿಸಿದ ರಿವೀವ್ ನೋಡಿ

ಸೆಕ್ಯೂರಿಟಿ ವ್ಯವಸ್ಥೆಗೊಳಿಸಿದ ನಂತರ, 'Sign In & Security' ಟ್ಯಾಬ್ ಕ್ಲಿಕ್ ಮಾಡಿ. ನಂತರ ನೇರವಾಗಿ ಕೊನೆಯ ಬಾರಿ ಪಾಸ್‌ವರ್ಡ್ ಬದಲಿಸಿದ ಪೇಜ್‌ಗೆ ರೀಡೈರೆಕ್ಟ್ ಆಗುತ್ತೀರಿ. ಅಲ್ಲಿ 2 ಹಂತದ ವೆರಿಫಿಕೇಶನ್‌ ಮುಗಿದಿದೆಯೇ ಎಂಬುದನ್ನು ಸಹ ನೋಡಬಹುದು. ಪುನಃ ಪಾಸ್‌ವರ್ಡ್‌ ಬದಲಿಸಬಹುದು ಮತ್ತು 2 ಹಂತದ ಪಾಸ್‌ವರ್ಡ್‌ ವೆರಿಫಿಕೇಶನ್ ಸ್ಟೇಟಸ್ ಚೆಕ್‌ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿRead more about:
English summary
5 Google Account Security Tips You Should Not Ignore. To know more visit kannada.gizbot.com
Please Wait while comments are loading...
Opinion Poll

Social Counting