ಆಪಲ್ ಐಫೋನ್ ಖರೀದಿಸುವವರಿಗೆ ಏರ್‌ಟೆಲ್‌ನಿಂದ ಭರ್ಜರಿ ಆಫರ್

By Shwetha
|

ಅಂತೂ ಬಹು ನಿರೀಕ್ಷಿತ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಅನ್ನು ಆಪಲ್ ಲಾಂಚ್ ಮಾಡಿದೆ. ಆಪಲ್‌ನ ಥರ್ಡ್ ಪಾರ್ಟಿ ರಿಟೈಲ್ ಸ್ಟೋರ್‌ಗಳಲ್ಲಿ ಡಿವೈಸ್‌ಗಳು ಲಭ್ಯವಿದ್ದು ಆರಂಭ ಬೆಲೆ ರೂ 60,000 ಮತ್ತು 72,000 ಆಗಿದೆ. ಅತ್ಯಾಧುನಿಕ ಐಫೋನ್‌ಗಳಿಗಿರುವ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಏರ್‌ಟೆಲ್ ಮತ್ತು ಜಿಯೋ ಕಂಪೆನಿಗಳು ಕೂಡ ಐಫೋನ್ ಖರೀದಿಯೊಂದಿಗೆ ಅದ್ಭುತ ಡೀಲ್‌ಗಳನ್ನು ಒದಗಿಸುತ್ತಿವೆ.

ಓದಿರಿ: ವೋಲ್ಟ್ ಡಿವೈಸ್‎ಗಳಿಗೆ 4ಜಿ ಜಿಯೋ ಸಿಮ್ ಆಕ್ಟಿವೇಟ್ ಮಾಡುವುದು ಹೇಗೆ?

ನೀವು ಐಫೋನ್ 7 ಮತ್ತು 7 ಪ್ಲಸ್ ಅನ್ನು ಏರ್‌ಟೆಲ್ ಒಪ್ಪಂದದಲ್ಲಿ ಖರೀದಿಸಬೇಕು ಎಂದಾದಲ್ಲಿ ನೀವು ಇದರ ಷರತ್ತುಗಳನ್ನು ಅರಿತುಕೊಂಡಿರಬೇಕು. ಅದೇನು ಎಂಬುದಕ್ಕೆ ಮಾಹಿತಿ ಇಲ್ಲಿದೆ.

ಓದಿರಿ: ಎಸ್‎ಎಮ್ಎಸ್ ಮೂಲಕ ಫ್ರೀ ಏರ್‎ಟೆಲ್ ಡೇಟಾ ಪಡೆದುಕೊಳ್ಳುವುದು ಹೇಗೆ?

12 ತಿಂಗಳುಗಳವರೆಗೆ ಏರ್‌ಟೆಲ್ ಜೊತೆಯಲ್ಲಿರಬೇಕು

12 ತಿಂಗಳುಗಳವರೆಗೆ ಏರ್‌ಟೆಲ್ ಜೊತೆಯಲ್ಲಿರಬೇಕು

ಏರ್‌ಟೆಲ್ ಒಪ್ಪಂದದಲ್ಲಿ ನೀವು ಐಫೋನ್ 7 ಮತ್ತು 7 ಪ್ಲಸ್ ಅನ್ನು ಖರೀದಿ ಮಾಡುತ್ತೀರಿ ಎಂದಾದಲ್ಲಿ ನೀವು ಇನ್ನೊಂದು ಪ್ಲಾನ್, ಇನ್ನೊಂದು ನೆಟ್‌ವರ್ಕ್‌ಗೆ ಪೋರ್ಟ್ ಮಾಡುವುದು ಅಂತೆಯೇ ಇತರ ಬಳಕೆದಾರರಿಗೆ ಮಾಲೀಕತ್ವವನ್ನು ವರ್ಗಾಯಿಸುವುದು ಮೊದಲಾದುವನ್ನು ಮಾಡುವಂತಿಲ್ಲ.

ಉಚಿತ ಡೇಟಾ ಆಫರ್ ಭಾರತದಲ್ಲಿ ಐಫೋನ್ ಖರೀದಿ ಮಾಡಿದವರಿಗೆ ಮಾತ್ರ

ಉಚಿತ ಡೇಟಾ ಆಫರ್ ಭಾರತದಲ್ಲಿ ಐಫೋನ್ ಖರೀದಿ ಮಾಡಿದವರಿಗೆ ಮಾತ್ರ

ತಿಂಗಳಿಗೆ ಉಚಿತ 10 ಜಿಬಿ ಡೇಟಾ ಪ್ಲಾನ್ ಅನ್ನು ಆಕ್ಟಿವೇಟ್ ಮಾಡಲು ಏರ್‌ಟೆಲ್ ಇನ್‌ಫಿನಿಟಿ ಪೋಸ್ಟ್ ಪೇಡ್ ಪ್ಲಾನ್ ಬಳಕೆದಾರರು ಕಂಪೆನಿಯ ಐಫೋನ್ 7 / 7 ಪ್ಲಸ್ ಡೆಡಿಕೇಟೆಡ್ ವೆಬ್ ಪುಟದಲ್ಲಿ 'ಆಕ್ಟಿವೇಟ್ ನೌ' ಬಟನ್ ಅನ್ನು ಕ್ಲಿಕ್ ಮಾಡಬೇಕು. ಇಲ್ಲೂ ಒಂದು ಟ್ವಿಸ್ಟ್ ಇದ್ದು, ಈ ಆಫರ್ ಭಾರತದಲ್ಲಿ ಐಫೋನ್ ಖರೀದಿಸಿದವರಿಗೆ ಮಾತ್ರ ಅನ್ವಯಿಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮಗೆ ರೂ 19,990 ರಲ್ಲಿ ಐಫೋನ್ 7 ಲಭ್ಯ

ನಿಮಗೆ ರೂ 19,990 ರಲ್ಲಿ ಐಫೋನ್ 7 ಲಭ್ಯ

ಡೌನ್ ಪೇಮೆಂಟ್ ರೂ 19,990 ಅನ್ನು ಪಾವತಿ ಮಾಡುವುದರ ಮೂಲಕ ನಿಮಗೆ ಐಫೋನ್ 7 ಅನ್ನು ನಿಮ್ಮ ಕೈಯಲ್ಲಿ ಪಡೆದುಕೊಳ್ಳಬಹುದಾಗಿದೆ. ಆದರೆ ಇದನ್ನು ನಿಮ್ಮದಾಗಿಯೇ ಇರಿಸಿಕೊಳ್ಳಲು ಸಾಧ್ಯವಿಲ್ಲ. 12 ತಿಂಗಳ ಒಪ್ಪಂದದ ಕೊನೆಯಲ್ಲಿ ನೀವು ಉಳಿದ ಪಾವತಿಯನ್ನು ಮಾಡಬೇಕು ಇಲ್ಲವೇ ಮುಂದಿನ ಐಫೋನ್‌ಗೆ ಅಪ್‌ಗ್ರೇಡ್ ಆಗಬೇಕು. ವರ್ಷಕ್ಕೆ ಲೀಸ್ ಮಾದರಿಯಲ್ಲಿ ಆಪಲ್ ಐಫೋನ್ 7 ಅನ್ನು ನಿಮಗೆ ನೀಡುತ್ತದೆ.

ಡ್ಯಾಮೇಜ್ ಐಫೋನ್‌ಗಳಿಗೆ ಈ ಅವಕಾಶವಿಲ್ಲ

ಡ್ಯಾಮೇಜ್ ಐಫೋನ್‌ಗಳಿಗೆ ಈ ಅವಕಾಶವಿಲ್ಲ

ಮುಂದಿನ ಐಫೋನ್‌ಗೆ ನೀವು ಅಪ್‌ಗ್ರೇಡ್ ಮಾಡುವ ವಿಚಾರದಲ್ಲಿ ಇದು ದೈಹಿಕ ನಷ್ಟಕ್ಕೆ ಒಳಗಾದಲ್ಲಿ ಇಲ್ಲವೇ ಕಾರ್ಯನಿರ್ವಹಣಾ ಸ್ಥಿತಿಯಲ್ಲಿ ಇಲ್ಲ ಎಂದಾದಲ್ಲಿ ಅಪ್‌ಗ್ರೇಡ್ ಮಾಡಲಾಗುವುದಿಲ್ಲ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತಿ ಏರ್‌ಟೆಲ್ ಮತ್ತು ಎಚ್‌ಸಿಎಲ್ ಉದ್ಯೋಗಿಗಳಿಗೆ ಮಾತ್ರ ಆಫರ್ ಸೀಮಿತ

ಭಾರತಿ ಏರ್‌ಟೆಲ್ ಮತ್ತು ಎಚ್‌ಸಿಎಲ್ ಉದ್ಯೋಗಿಗಳಿಗೆ ಮಾತ್ರ ಆಫರ್ ಸೀಮಿತ

ಆರಂಭದಲ್ಲಿ, ಆಫರ್ ಅನ್ನು ಎಲ್ಲಾ ಏರ್‌ಟೆಲ್ ಪೋಸ್ಟ್ ಪೇಡ್ ಬಳಸುತ್ತಿರುವ ನೋಯಿಡಾ ಮತ್ತು ಕರ್ನಾಟಕ ವಾಸಿಗಳಿಗೆ ಆಫರ್ ಮಾನ್ಯವಾಗಿರುತ್ತದೆ. ಒಂದು ವರದಿಯ ಪ್ರಕಾರ ಈ ಆಫರ್ ಎಚ್‌ಸಿಎಲ್ ಮತ್ತು ಭಾರತಿ ಏರ್‌ಟೆಲ್ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿದೆ. ಏರ್‌ಟೆಲ್ ಡೆಡಿಕೇಟೆಡ್ ಐಫೋನ್ 7 ಪುಟವನ್ನು ನೀವು ಪ್ರವೇಶಿಸಲು ಪ್ರಯತ್ನಿಸಿದಾಗ 404 ಎರರ್ ನಿಮಗೆ ಇನ್ನಷ್ಟು ವಿವರವಾಗಿ ಎಲ್ಲವನ್ನೂ ತಿಳಿಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
We've already listed out the differences between the offers provided by Airtel and Reliance Jio. In case you're planning to buy the iPhone 7/ 7 Plus under Airtel's contract, here are 5 terms and conditions you should be aware of.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X