ಹ್ಯಾಕರ್‌ಗಳಿಂದ ಲ್ಯಾನ್‌ ನೆಟ್‌ವರ್ಕ್‌ ಸುರಕ್ಷತೆಗಾಗಿ ಪಾಲಿಸಲೇಬೇಕಾದ 5 ಟಿಪ್ಸ್‌ಗಳು

Written By:

ಮನೆಗಳಲ್ಲಿ, ಕಛೇರಿಗಳಲ್ಲಿ ಇಂಟರ್ನೆಟ್‌ ಬಳಸುವವರಿಗೆ ಸಾಮಾನ್ಯವಾಗಿ LAN(ಲ್ಯಾನ್) ಅಥವಾ Local Area Network ಬಗ್ಗೆ ತಿಳಿದೇ ಇರುತ್ತದೆ. ಲ್ಯಾನ್ ನೆಟ್‌ವರ್ಕ್‌ ಅನ್ನು ಲಿಮಿಟೆಡ್ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕಕ್ಕಾಗಿ ಬಳಸಲಾಗುತ್ತದೆ.

ಅಂದಹಾಗೆ ಮೊದಲೇ ಹೇಳಿದಂತೆ ಈ ರೀತಿಯ ನೆಟ್‌ವರ್ಕ್ ಸಂಪರ್ಕಗಳನ್ನು ಮನೆಗಳು, ಕಂಪನಿ ಮತ್ತು ಇತರೆ ಪ್ರದೇಶಗಳಲ್ಲಿ ಬಳಸಲಾಗುತ್ತದೆ. ಅನುಭವಿ ಹ್ಯಾಕರ್‌ಗಳು ಲ್ಯಾನ್‌ ನೆಟ್‌ವರ್ಕ್‌ ಅನ್ನು ಹ್ಯಾಕ್ ಮಾಡುವ ಸಾಧ್ಯತೆಗಳು ಇತ್ತೀಚೆಗೆ ಹೆಚ್ಚುತ್ತದ್ದು, ಲ್ಯಾನ್‌ ನೆಟ್‌ವರ್ಕ್‌ನ ಸಂಪೂರ್ಣ ಸುರಕ್ಷತೆಗಾಗಿ 5 ಟ್ರಿಕ್ಸ್‌ಗಳನ್ನು ನಾವು ನಿಮಗೆ ನೀಡುತ್ತಿದ್ದೇವೆ. ಲೇಖನದ ಸ್ಲೈಡರ್‌ಗಳನ್ನು ಓದಿರಿ.

ಆಂಡ್ರಾಯ್ಡ್ 7.1 ನ್ಯೂಗಾ ಅಪ್‌ಡೇಟ್‌: ಟಾಪ್‌ 5 ಫೀಚರ್‌ಗಳು ಏನು ಗೊತ್ತೇ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಡೀಫಾಲ್ಟ್‌ ಬದಲಿಸಿ

ಸಾಮಾನ್ಯವಾಗಿ ಪ್ರತಿಯೊಂದು ರೂಟರ್‌ಗಳು ಅನನ್ಯವಾದ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಅನ್ನು ಹೊಂದಿರುತ್ತವೆ. ಈ ಬಗ್ಗೆ ಹಲವು ಜನರಿಗೆ ತಿಳಿದಿರುವುದಿಲ್ಲ. ಆದ್ದರಿಂದ ನಿಮ್ಮ ರೂಟರ್‌ ಪಾಸ್‌ವರ್ಡ್‌ ಮತ್ತು ಯೂಸರ್ ನೇಮ್‌ ತಿಳಿದಿರುವವರು ನಿಮಗೆ ತಿಳಿಯದಂತೆ ಡಾಟಾವನ್ನು ಬಳಸುತ್ತಾರೆ. ಈ ರೀತಿ ಆಗದಂತೆ ಎಚ್ಚರ ವಹಿಸಲು ನಿಮ್ಮ ರೂಟರ್‌ನ ಪಾಸ್‌ವರ್ಡ್ ಮತ್ತು ಯೂಸರ್‌ ನೇಮ್‌ ಅನ್ನು ವರ್ಷಕ್ಕೆ 3 ಬಾರಿ ಬದಲಿಸಿ. ಬದಲಿಸಲು ತಿಳಿಯದಿದ್ದಲ್ಲಿ ರೂಟರ್‌ ತಯಾರಕರನ್ನು ಸಂಪರ್ಕಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಟ್ರಾಂಗ್ ಪಾಸ್‌ವರ್ಡ್‌ಗೆ ಆದ್ಯತೆ ಇರಲಿ

ಯಾವಾಗಲು ಪಾಸ್‌ವರ್ಡ್‌ ನೀಡುವಾಗ ಸ್ಟ್ರಾಂಗ್ ಪಾಸ್‌ವರ್ಡ್‌ಗೆ ಆದ್ಯತೆ ಇರಲಿ. ಸ್ಟ್ರಾಂಗ್‌ ಪಾಸ್‌ವರ್ಡ್‌ಗಾಗಿ ಸಿಂಬಲ್‌, ಅಕ್ಷರಗಳು, ಸಂಖ್ಯೆಗಳು ಇರಲಿ. ಇಂತಹ ಪಾಸ್‌ವರ್ಡ್‌ ಅನ್ನು ಹ್ಯಾಕರ್‌ಗಳು ಪತ್ತೆ ಮಾಡಲು ಆಗುವುದಿಲ್ಲ.

ರೂಟರ್‌ ದೋಷಗಳಿಗಾಗಿ ಸ್ಕ್ಯಾನ್‌ ಮಾಡಿ

6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ಒಮ್ಮೆ, ನಿಮ್ಮ ರೂಟರ್‌ಗೆ ಇತರ ಡಿವೈಸ್‌ಗಳು ಕನೆಕ್ಟ್ ಆಗಿವೆಯೇ ಎಂಬುದನ್ನು ಪರಿಶೀಲಿಸಿ. ನಿಮ್ಮ ನೆಟ್‌ವರ್ಕ್‌ ಸುರಕ್ಷತೆಗಾಗಿ ಇದು ಅವಶ್ಯಕ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಂಟಿ-ವೈರಸ್ ಪ್ರೋಗ್ರಾಮ್

ನಿಮ್ಮ ಕಂಪ್ಯೂಟರ್‌ನಲ್ಲಿ ಕೆಲವು ಸ್ಪ್ಯಾಮ್‌ ಫೈಲ್‌ಗಳು ಕೀಲಾಗರ್‌ ರೀತಿಯಲ್ಲಿ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿ, ಸ್ಪೈ ಸಾಫ್ಟ್‌ವೇರ್‌ಗಳು ಹ್ಯಾಕರ್‌ಗಳಿಗೆ ಮಾಹಿತಿಯನ್ನು ಸೆಂಡ್‌ ಮಾಡುತ್ತವೆ. ಈ ಪ್ರಕ್ರಿಯೆಗಳನ್ನು ತಡೆಗಟ್ಟಲು, ನಿಮ್ಮ ಸಿಸ್ಟಮ್‌ಗಳನ್ನು ದಿನನಿತ್ಯ ಆಂಟಿ ವೈರಸ್‌ನಿಂದ ಸ್ಕ್ಯಾನ್‌ ಮಾಡಿರಿ.

ರ್ಯಾಡಮ್ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಿರಿ

ಸ್ಪ್ಯಾಮ್ ಲಿಂಕ್‌ ಅಥವಾ ಅಪರಿಚಿತ ಸೈಟ್‌ಗಳ ಮೇಲೆ ಕ್ಲಿಕ್ ಮಾಡದಿರಿ. ಇಂತಹ ಲಿಂಕ್‌ಗಳನ್ನು ಕ್ಲಿಕ್‌ ಮಾಡುವುದರಿಂದ ಹ್ಯಾಕಿಂಗ್ ಸಮಸ್ಯೆ ಎದುರಾಗುತ್ತವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
5 Tips to Protect Your LAN Network From Hackers. To know more visit kannada.gizbot.com
Please Wait while comments are loading...
Opinion Poll

Social Counting