ಬದಲಾದ ವಾಟ್ಸಾಪ್ ಸೆಟ್ಟಿಂಗ್ಸ್ ಕುರಿತು ತಿಳಿಯಬೇಕೇ?

By Shwetha
|

ವಾಟ್ಸಾಪ್‌ನ ತಿಂಗಳ 700 ಮಿಲಿಯನ್ ಬಳಕೆದಾರರಲ್ಲಿ ನೀವು ಒಬ್ಬರು ಎಂದಾದಲ್ಲಿ, ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಿರುವ ವಾಟ್ಸಾಪ್ ಸಲಹೆಗಳನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ನೀಡುತ್ತಿದ್ದೇವೆ.

[ಓದಿರಿ: ಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟ]

ನಿಮ್ಮ ಐಓಎಸ್ ನೋಟಿಫಿಕೇಶನ್‌ಗಳನ್ನು ಹೆಚ್ಚು ಖಾಸಗಿಯಾಗಿ ಮಾಡುವಂತೆಯೇ ನಿಮ್ಮ ಲಾಸ್ಟ್ ಸೀನ್ ಸ್ಟೇಟಸ್ ಅನ್ನು ಇನ್ನಷ್ಟು ಗೌಪ್ಯವಾಗಿರಿಸುವ ಸಲಹೆಗಳನ್ನು ಈ ಲೇಖನ ಒಳಗೊಂಡಿದೆ. ಬನ್ನಿ ಹಾಗಿದ್ದರೆ ತಡ ಮಾಡದೇ ವಾಟ್ಸಾಪ್‌ನ ಬದಲಾದ ಈ ಭದ್ರತಾ ಟಿಪ್ಸ್‌ಗಳನ್ನು ನೀವು ಅನುಸರಿಸಿ.

'ಇನ್‌ಕಮಿಂಗ್ ಮೀಡಿಯಾ' ಉಳಿಸಬೇಡಿ

'ಇನ್‌ಕಮಿಂಗ್ ಮೀಡಿಯಾ' ಉಳಿಸಬೇಡಿ

ವಾಟ್ಸಾಪ್‌ನಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡಿರುವ ವೀಡಿಯೊ ಅಥವಾ ಫೋಟೋಗಳು ನಿಮ್ಮ ಫೋನ್‌ನ ಆಲ್ಬಮ್ ಅಥವಾ ಕ್ಯಾಮೆರಾ ರೋಲ್‌ನಲ್ಲಿ ಸೇವ್ ಆಗುತ್ತದೆ. ನಿಮಗೆ ಇದು ಬೇಡ ಎಂದಾದಲ್ಲಿ ಸೆಟ್ಟಿಂಗ್ಸ್ ಮೆನುಗೆ ಹೋಗಿ ಇಲ್ಲಿ "ಚಾಟ್ ಸೆಟ್ಟಿಂಗ್ಸ್" ಆಯ್ಕೆಮಾಡಿ ಮತ್ತು "ಸೇವ್ ಇನ್‌ಕಮಿಂಗ್ ಮೀಡಿಯಾ" ಆಯ್ಕೆಯನ್ನು ಆಫ್ ಮಾಡಿ.

ಸಂದೇಶ ಪೂರ್ವವೀಕ್ಷಣೆಗಳನ್ನು ಮರೆಮಾಡಿ

ಸಂದೇಶ ಪೂರ್ವವೀಕ್ಷಣೆಗಳನ್ನು ಮರೆಮಾಡಿ

ಸೆಟ್ಟಿಂಗ್ಸ್ ಹೋಗಿ ಇಲ್ಲಿ ನೋಟಿಫಿಕೇಶನ್ ಆರಿಸಿ ಇಲ್ಲಿ "ಶೊ ಪ್ರಿವ್ಯು" ಆಯ್ಕೆಯನ್ನು ಆಫ್ ಮಾಡಿ.

ನಿಮ್ಮ ಸ್ಥಾನ ಹಂಚಿಕೊಳ್ಳಲು

ನಿಮ್ಮ ಸ್ಥಾನ ಹಂಚಿಕೊಳ್ಳಲು

ನಿಮ್ಮ ಲೊಕೇಶನ್ ಡೇಟಾವನ್ನು ಪ್ರವೇಶಿಸಲು ವಾಟ್ಸಾಪ್‌ನ ಅನುಮತಿಯನ್ನು ನೀವು ಪಡೆದುಕೊಳ್ಳಬೇಕಾಗುತ್ತದೆ. ನಿಮ್ಮ ಫೋನ್‌ನಲ್ಲಿ ಈ ಸೆಟ್ಟಿಂಗ್ ಅನ್ನು ನೀವು ಮಾಡಿಕೊಂಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಯಾವುದೇ ಚಾಟ್‌ಗೆ ಹೋಗಿ ಮತ್ತು ಪಠ್ಯ ಬಾಕ್ಸ್‌ನ ಎಡಭಾಗದಲ್ಲಿರುವ ಬಾಣದ ಗುರುತನ್ನು ಸ್ಪರ್ಶಿಸಿ. ಇಲ್ಲಿ ಶೇರ್ ಲೊಕೇಶನ್ ನಿಮಗೆ ಲಭ್ಯವಾಗುತ್ತದೆ.

ಲಾಸ್ಟ್ ಸೀನ್ ಮರೆಮಾಡುವುದು

ಲಾಸ್ಟ್ ಸೀನ್ ಮರೆಮಾಡುವುದು

ನಿಮ್ಮ ಲಾಸ್ಟ್ ಸೀನ್ ಫೀಚರ್ ಅನ್ನು ಯಾರು ಬೇಕಾದರೂ ನೋಡುವ ಅನುಮತಿಯನ್ನು ವಾಟ್ಸಾಪ್ ಬಳಕೆದಾರರಿಗೆ ನೀಡಿದೆ. ನಿಮಗೆ ಇದು ಇಷ್ಟವಾಗುವುದಿಲ್ಲ ಎಂದಾದಲ್ಲಿ, ಸೆಟ್ಟಿಂಗ್ಸ್, ಇಲ್ಲಿ ಅಕೌಂಟ್ > ಪ್ರೈವಸಿ > ಲಾಸ್ಟ್ ಸೀನ್. ನಿಮಗೆ ಆನ್ ಅಥವಾ ಆಫ್ ಆಯ್ಕೆ ದೊರೆಯುತ್ತದೆ.

ಸ್ವಯಂಚಾಲಿತ ಬ್ಯಾಕಪ್ ಹೊಂದಿಸುವುದು

ಸ್ವಯಂಚಾಲಿತ ಬ್ಯಾಕಪ್ ಹೊಂದಿಸುವುದು

ಸೆಟ್ಟಿಂಗ್ಸ್ > ಚಾಟ್ ಸೆಟ್ಟಿಂಗ್ಸ್ > ಚಾಟ್ ಬ್ಯಾಕಪ್. ಇಲ್ಲಿ "ಆಟೊ ಬ್ಯಾಕಪ್" ಆಯ್ಕೆಯನ್ನು ನಿಮಗೆ ಆರಿಸಬಹುದು.

Best Mobiles in India

English summary
If you're one of WhatsApp's 700 million monthly users, we have some suggestions for which settings you should consider tweaking right now. Read on for our simple "how-to" guide.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X