ಫೋನ್‌ ಬ್ಯಾಟರಿ ಡ್ಯಾಮೇಜ್ ಸಮಸ್ಯೆ ತಡೆಗಟ್ಟಲು 6 ಟಿಪ್ಸ್

By Suneel
|

ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾನಿ (ಡ್ಯಾಮೇಜ್‌) ಸಮಸ್ಯೆ ಫೋನ್‌ ಬಳಸುವ ಎಲ್ಲರನ್ನೂ ಕಾಡುವ ಸಮಸ್ಯೆ. ಕೆಲವು ಸಂದರ್ಭಗಳಲ್ಲಿ ಬ್ಯಾಟರಿ ಪವರ್‌ ಬೇಗ ಖಾಲಿಯಾಗುವುದು, ಚಾರ್ಜಿಂಗ್‌ ಆಗುವ ವೇಳೆ ಬ್ಯಾಟರಿ ಹೆಚ್ಚು ಬಿಸಿಯಾಗುವುದು ಇನ್ನು ಮುಂತಾದ ಸಮಸ್ಯೆಗಳು ಸ್ಮಾರ್ಟ್‌ಫೋನ್‌ ಬ್ಯಾಟರಿಯಿಂದ ಇದ್ದದ್ದೆ.

ಬಿಸಿ ಹೇಗಾದ್ರು ಆಗ್ಲಿ, ಬ್ಯಾಟರಿ ಪವರ್‌ ಬೇಗನಾದ್ರು ಖಾಲಿಯಾಗ್ಲಿ, ಆದ್ರೆ ಫೋನ್‌ ಚಾರ್ಜ್‌ ಮಾಡುವಾಗ, ಮಾತನಾಡುವಾಗ ಬ್ಲಾಸ್ಟ್‌ ಆಗದಿದ್ದರೆ ಸಾಕಪ್ಪ ಅನ್ನುವವರ ಸಂಖ್ಯೆಯು ಹೆಚ್ಚಾಗೆ ಇದೆ. ಅಂದಹಾಗೆ ನೀವು ಈ ರೀತಿ ಭಯಪಡಬಾರದು ಎಂದರೆ ಬ್ಯಾಟರಿ ಡ್ಯಾಮೇಜ್‌ ಆಗದಿರುವ ಹಾಗೆ ಸುರಕ್ಷತೆ ಬಗ್ಗೆ ತಿಳಿಯಲೇಬೇಕು.

ಬ್ಯಾಟರಿ ಡ್ಯಾಮೇಜ್ ಆಗುವುದರಿಂದ, ಬ್ಯಾಟರಿಯಿಂದ ಉಂಟಾಗುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಎಂತಹ ಕ್ರಮ ಕೈಗೊಳ್ಳಬೇಕು ಎಂಬ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಫೋನ್‌ ಬಳಕೆದಾರರೆಲ್ಲರೂ ತಿಳಿದುಕೊಳ್ಳಿ.

ಡ್ರೈವಿಂಗ್‌ ಲೈಸೆನ್ಸ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?

 ಚಾರ್ಜರ್‌

ಚಾರ್ಜರ್‌

ಫೋನ್‌ ಚಾರ್ಜ್‌ ಮಾಡಲು ನಿಮ್ಮ ಫೋನ್‌ನೊಂದಿಗೆ ಬಂದ ಚಾರ್ಜರ್‌ ಅನ್ನೇ ಬಳಸಿ. ಇತರೆ ಚಾರ್ಜರ್‌ಗಳು ನಿಮ್ಮ ಫೋನ್ ಚಾರ್ಜಿಂಗ್‌ ಅನ್ನು ನಿಧಾನಗೊಳಿಸುವುದಲ್ಲದೇ ಬ್ಯಾಟರಿ ಮತ್ತು ಫೋನ್‌ಗೆ ಸಮಸ್ಯೆ ಉಂಟುಮಾಡುತ್ತವೆ ಎಂದು ಗೂಗಲ್‌ ಸೂಚನೆ ನೀಡಿದೆ.

ಹೊಸ ಮೊಬೈಲ್‌

ಹೊಸ ಮೊಬೈಲ್‌

ಹೊಸ ಮೊಬೈಲ್‌ ಖರೀದಿಸಿದಾಗ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಮಾಪನಾಂಕ ಮಾಡಬೇಕು. ಕೆಲವೊಮ್ಮೆ ಕಳಪೆ ಗುಣಮಟ್ಟದ ಬ್ಯಾಟರಿ ನೀಡಲಾಗಿರುತ್ತದೆ. ಆದ್ದರಿಂದ ಚಾರ್ಜ್‌ ಮಾಡುವ ವೇಳೆ ಮತ್ತು ಪವರ್‌ ಖಾಲಿಯಾಗುವ ಸಮಯವನ್ನು ಮಾಪನಾಂಕ ಮಾಡಿ ಸಾಮರ್ಥ್ಯ ಪರೀಕ್ಷಿಸಿ.

ಫೋನ್‌ ಕೂಲ್‌ ಆಗಿರಲಿ

ಫೋನ್‌ ಕೂಲ್‌ ಆಗಿರಲಿ

ಬ್ಯಾಟರಿಗೆ ಬಿಸಿ ಎಂಬುದು ಎಂದಿಗೂ ಶತ್ರು. ಬ್ಯಾಟರಿ ಬಿಸಿಯಾದಷ್ಟು ಬಹುಬೇಗ ಪವರ್‌ ಖಾಲಿಯಾಗುತ್ತದೆ. ಆದ್ದರಿಂದ ಬ್ಯಾಟರಿ ಬಿಸಿ ಯಾಗುತ್ತಿದ್ದಲ್ಲಿ ಚಾರ್ಜಿಂಗ್‌ ಅನ್ನು ನಿಲ್ಲಿಸಿ. ಹಾಗೂ ಹೆಚ್ಚು ಆಗಾಗ ಚಾರ್ಜಿಂಗ್ ಮಾಡುವುದನ್ನು ಕಡಿಮೆಗೊಳಿಸಿ. ಬ್ಯಾಟರಿ ತಂಪಾಗಿರುವಂತೆ ಎಚ್ಚರ ವಹಿಸಿ.

ಬ್ಯಾಟರಿ ಅರ್ಧ ಭರ್ತಿ ಇರಲಿ

ಬ್ಯಾಟರಿ ಅರ್ಧ ಭರ್ತಿ ಇರಲಿ

ಬ್ಯಾಟರಿ ಪವರ್‌ ಸಾಮಾನ್ಯವಾಗಿ ಅರ್ಧ ಭರ್ತಿಯಾಗಿ ಇಟ್ಟುಕೊಳ್ಳಿ. ಬ್ಯಾಟರಿಯ ಉತ್ತಮ ಬಾಳಿಕೆಗಾಗಿ ಬ್ಯಾಟರಿ ಯಾವಾಗಲು ಶೇಕಡ 50 ಕ್ಕಿಂತ ಹೆಚ್ಚು ಚಾರ್ಜ್‌ ಆಗಿರಲಿ ಎಂದು ಗೂಗಲ್‌ ಗುರು ಹೇಳಿದ್ದಾರೆ.

ಬ್ಯಾಟರಿ ಚಾರ್ಜಿಂಗ್

ಬ್ಯಾಟರಿ ಚಾರ್ಜಿಂಗ್

ಡಾಕ್ಟರ್‌ ಹೇಳುವಂತೆ ದಿನನಿತ್ಯ ಹೆಚ್ಚಾಗಿ ಮಧ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಅಂತೆಯೇ ಬ್ಯಾಟರಿಯನ್ನು ಸೊನ್ನೆ ಇಂದ ನೂರರ ವರೆಗೆ ಒಮ್ಮೆಯೇ ಚಾರ್ಜ್‌ ಮಾಡುವುದು ಹಾನಿಕಾರಕವಾಗಿದ್ದು, ದಿನನಿತ್ಯ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಚಾರ್ಜ್‌ ಮಾಡುವುದು ಒಳ್ಳೆಯದು.

ದೀರ್ಘ ಕಾಲ ಚಾರ್ಜಿಂಗ್ ಅಪಾಯ

ದೀರ್ಘ ಕಾಲ ಚಾರ್ಜಿಂಗ್ ಅಪಾಯ

ಸ್ಮಾರ್ಟ್‌ಫೋನ್‌ ಬ್ಯಾಟರಿಗಳನ್ನು ಎಲ್ಲಾ ಸಮಯದಲ್ಲೂ ದೀರ್ಘಕಾಲ ಚಾರ್ಜ್‌ ಮಾಡಿ ಶೇಕಡ 100 ರಷ್ಟು ಪವರ್ ಚಾರ್ಜ್‌ ಆಗುವಂತೆ ಮಾಡುತ್ತೇವೆ. ಆದರೆ ಗೂಗಲ್‌ ಪ್ರಕಾರ ಬ್ಯಾಟರಿ ಅರ್ಧ ಪವರ್‌ ಶೇಕರಣೆ ಹೊಂದುವುದು ಅಗತ್ಯ ಎಂದು ಹೇಳಲಾಗಿದೆ.

 ಬ್ಯಾಟರಿ ಪವರ್‌ ಬಹುಬೇಗ ಕ್ಷೀಣಿಸದಿರಲು ಹೀಗೆ ಮಾಡಿ

ಬ್ಯಾಟರಿ ಪವರ್‌ ಬಹುಬೇಗ ಕ್ಷೀಣಿಸದಿರಲು ಹೀಗೆ ಮಾಡಿ

ನೆಟ್‌ವರ್ಕ್‌ ಇಲ್ಲದ ಪ್ರದೇಶಗಳಲ್ಲಿ ಫೋನ್‌ ಅನ್ನು ಫ್ಲೈಟ್‌ ಮೋಡ್‌ನಲ್ಲಿ ಇರಿಸಿ.

ಮೊಬೈಲ್‌ ಡಾಟಾ ಆನ್‌

ಮೊಬೈಲ್‌ ಡಾಟಾ ಆನ್‌

ಬಹುಸಂಖ್ಯಾತ ವಾಟ್ಸಾಪ್‌ ಮತ್ತು ಫೇಸ್‌ಬುಕ್‌ ಬಳಕೆದಾರರು ಎಲ್ಲಾ ಸಮಯದಲ್ಲೂ ಇಂಟರ್ನೆಟ್‌ ಸಂಪರ್ಕಕ್ಕಾಗಿ ಮೊಬೈಲ್‌ ಡಾಟಾ ಆನ್‌ ಮಾಡುವ ಬದಲು ಅಗತ್ಯ ಸಮಯಗಳಲ್ಲಿ ಮೊಬೈಲ್‌ ಡಾಟಾ ಆನ್‌ ಮಾಡಿ. ಹೀಗೆ ಮಾಡುವುದರಿಂದ ಬ್ಯಾಟರಿ ಪವರ್‌ ಬೇಗ ಕ್ಷೀಣಿಸುವುದರಿಂದ ತಪ್ಪಿಸಬಹುದು.

ಗಿಜ್‌ಬಾಟ್‌

ಗಿಜ್‌ಬಾಟ್‌

ಆಂಡ್ರಾಯ್ಡ್ ಬಳಕೆದಾರರಿಗೆ ಅತ್ಯಗತ್ಯವಾಗಿರುವ ಟಾಪ್ ಟಿಪ್ಸ್ಆಂಡ್ರಾಯ್ಡ್ ಬಳಕೆದಾರರಿಗೆ ಅತ್ಯಗತ್ಯವಾಗಿರುವ ಟಾಪ್ ಟಿಪ್ಸ್

ಒಂದೇ ಕ್ಲಿಕ್‌ನಿಂದ ಯೂಟ್ಯೂಬ್ ವೀಡಿಯೋ ಪ್ಲೇಲೀಸ್ಟ್ ಡೌನ್‌ಲೋಡ್‌ ಹೇಗೆ? ಒಂದೇ ಕ್ಲಿಕ್‌ನಿಂದ ಯೂಟ್ಯೂಬ್ ವೀಡಿಯೋ ಪ್ಲೇಲೀಸ್ಟ್ ಡೌನ್‌ಲೋಡ್‌ ಹೇಗೆ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
6 tips to avoid damage to battery while charging phone. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X