ಸ್ಮಾರ್ಟ್‌ಫೋನ್ ಭದ್ರತೆಗಾಗಿ ಎಂಟು ವಿಧಾನಗಳು

By Super Admin
|

ನೀವು ದುಬಾರಿ ಫೋನ್ ಕೊಂಡು ಅದನ್ನು ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಿಲ್ಲ ಎಂದಾದಲ್ಲಿ ನಿಮ್ಮ ಫೋನ್ ವೈರಸ್, ಕಳ್ಳತನ, ಮೊದಲಾದ ಹಾನಿಗಳಿಗೆ ಒಳಗಾಗಲಿದೆ. ಹಾಗಿದ್ದರೆ ನಿಮ್ಮ ಸ್ಮಾರ್ಟ್‌ಫೋನ್‌ನ ಸುರಕ್ಷತೆಯನ್ನು ಹೇಗೆ ಮಾಡುವುದು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಈ ಆವಶ್ಯಕ ಟಿಪ್ಸ್‌ಗಳು ನಿಮ್ಮ ಫೋನ್‌ ಭದ್ರತೆಯನ್ನು ವ್ಯವಸ್ಥಿತವಾಗಿ ಮಾಡಲಿವೆ.

ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವುದು ಆಗಿರಬಹುದು, ಲಾಕ್ ವ್ಯವಸ್ಥೆಯನ್ನು ಹೊಂದಿಸುವುದಾಗಿರಬಹುದು, ಪಾಸ್‌ವರ್ಡ್ ಸೆಟ್ ಮಾಡುವುದಾಗಿರಬಹುದು ಹೀಗೆ ಫೋನ್‌ನ ಭದ್ರತೆಯನ್ನು ನೀವು ಹಲವಾರು ವಿಧಾನದಲ್ಲಿ ಮಾಡುವುದರ ಮೂಲಕ ನಿಮ್ಮ ಡಿವೈಸ್ ಅನ್ನು ಕಾಪಾಡಿಕೊಳ್ಳಬಹುದಾಗಿದೆ. ಬನ್ನಿ ಆ ವ್ಯವಸ್ಥೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

#1

#1

ಫೋನ್ ಕಳೆದುಕೊಳ್ಳುವುದು ಎಂದರೆ ಒತ್ತಡ ಖಂಡಿತ ಇದ್ದೇ ಇರುತ್ತದೆ. ಸಂಪೂರ್ಣ ಮೊಬೈಲ್ ಸುರಕ್ಷತೆಯನ್ನು ಅನುಸರಿಸುವುದರ ಮೂಲಕ ಈ ತೊಂದರೆಯಿಂದ ರಕ್ಷಣೆ ಪಡೆದುಕೊಳ್ಳಿ. ಇದರಿಂದ ರೀಪ್ಲೇಸ್‌ಮೆಂಟ್ ಡಿವೈಸ್ ಅನ್ನು ನೀವು ಪಡೆದುಕೊಳ್ಳುವಿರಿ.

#2

#2

ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಲೊಕೇಶನ್ ಏಂಡ್ ಸೆಕ್ಯುರಿಟಿ ಸೆಟ್ಟಿಂಗ್ಸ್‌ಗೆ ಹೋಗಿ ಇಲ್ಲಿ ಸೂಚನೆಗಳನ್ನು ಪಾಲಿಸಿ ಪಾಸ್‌ವರ್ಡ್ ಹೊಂದಿಸಬಹುದಾಗಿದೆ. ಐಓಎಸ್ ಬಳಕೆದಾರರಿಗೆ ತಮ್ಮ ಸೆಟ್ಟಿಂಗ್‌ಗಳಲ್ಲಿ ಇದು ಜನರಲ್ ಆಪ್ಶನ್‌ಗಳಲ್ಲಿ ಇರುತ್ತದೆ.

#3

#3

ನೀವು ಗೇಮ್ ಅಥವಾ ಇತರೆ ಉತ್ಪನ್ನಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದೀರಿ ಎಂದಾದಲ್ಲಿ ನಂಬಿಕಸ್ಥ ಮೂಲಗಳಿಂದ ಇದನ್ನು ಮಾಡಿ. ಅಂದರೆ ಗೂಗಲ್ ಪ್ಲೇ.

#4

#4

ನಿಮ್ಮ ಎಲ್ಲಾ ಮಾಹಿತಿಗಳನ್ನು ಬ್ಯಾಕಪ್ ಮಾಡುವುದರಿಂದ ನಿಮ್ಮ ಸಂಪರ್ಕಗಳು, ಮ್ಯೂಸಿಕ್, ಪಿಕ್ಚರ್ಸ್, ವೀಡಿಯೊಗಳು ಮೊದಲಾದವಗಳನ್ನು ಉಳಿಸಿಟ್ಟುಕೊಳ್ಳಬಹುದಾಗಿದೆ.

#5

#5

ಕಾಲಕಾಲಕ್ಕೆ ಅಪ್‌ಡೇಟ್‌ಗಳನ್ನು ಓಎಸ್‌ಗಳು ಬಿಡುಗಡೆ ಮಾಡುತ್ತಿದ್ದು ಅವುಗಳನ್ನು ಬಳಸಿ ಫೋನ್ ಸುರಕ್ಷತೆಯನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ.

#6

#6

ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನೀವು ಶಾಪಿಂಗ್ ಅಥವಾ ಬ್ಯಾಂಕ್ ಕೆಲಸಗಳನ್ನು ನಿರ್ವಹಿಸುತ್ತಿದ್ದೀರಿ ಎಂದಾದಲ್ಲಿ ಟ್ರಾನ್ಸೇಕ್ಶನ್ಸ್ ಮುಗಿದ ನಂತರ ಈ ಸೈಟ್‌ಗಳನ್ನು ಲಾಗ್ ಔಟ್ ಮಾಡಿ.

#7

#7

ಇದು ಯಾವಾಗಲೂ ಆನ್ ಆಗಿಯೇ ಇರುತ್ತದೆ ಎಂದಾದಲ್ಲಿ ಕಳ್ಳರು ಇದನ್ನು ಬಳಸಿಕೊಂಡು ನಿಮ್ಮ ಫೋನ್‌ನ ಮಾಹಿತಿಗಳನ್ನು ಕದಿಯಬಹುದು.

#8

#8

ನಿಮ್ಮ ಬ್ಯಾಂಕ್‌ನಿಂದ ಬಂದಿರುವ ಪಠ್ಯ ಸಂದೇಶವೇ ಆಗಿರಬಹುದು ಅದನ್ನು ಯಾರಿಗೂ ನೀಡಬೇಡಿ. ಖಾತೆ ಮಾಹಿತಿಗಾಗಿ ಇಮೇಲ್ ಅಥವಾ ಪಠ್ಯ ನಿಮಗೆ ಬಂದಲ್ಲಿ ಮೊದಲಿಗೆ ಇದನ್ನು ಪರಿಶೀಲಿಸಿಕೊಳ್ಳಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಅಳಿಸಿ ಹೋದ ವಾಟ್ಸಾಪ್ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ?</a><br /><a href=ಯೂಟ್ಯೂಬ್‌ ವೀಡಿಯೋಗಳನ್ನ ಗೂಗಲ್‌ ಡ್ರೈವ್‌ಗೆ ಸೇವ್‌ ಮಾಡಲು 4 ಸ್ಟೆಪ್ಸ್‌
ಫೋನ್ ಓವರ್ ಹೀಟ್‌ಗೆ ಪರಿಹಾರ ಕಂಡುಕೊಳ್ಳುವುದು ಹೇಗೆ?" title="ಅಳಿಸಿ ಹೋದ ವಾಟ್ಸಾಪ್ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ?
ಯೂಟ್ಯೂಬ್‌ ವೀಡಿಯೋಗಳನ್ನ ಗೂಗಲ್‌ ಡ್ರೈವ್‌ಗೆ ಸೇವ್‌ ಮಾಡಲು 4 ಸ್ಟೆಪ್ಸ್‌
ಫೋನ್ ಓವರ್ ಹೀಟ್‌ಗೆ ಪರಿಹಾರ ಕಂಡುಕೊಳ್ಳುವುದು ಹೇಗೆ?" loading="lazy" width="100" height="56" />ಅಳಿಸಿ ಹೋದ ವಾಟ್ಸಾಪ್ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ?
ಯೂಟ್ಯೂಬ್‌ ವೀಡಿಯೋಗಳನ್ನ ಗೂಗಲ್‌ ಡ್ರೈವ್‌ಗೆ ಸೇವ್‌ ಮಾಡಲು 4 ಸ್ಟೆಪ್ಸ್‌
ಫೋನ್ ಓವರ್ ಹೀಟ್‌ಗೆ ಪರಿಹಾರ ಕಂಡುಕೊಳ್ಳುವುದು ಹೇಗೆ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
From locking your smartphone with a pin to installing a security app, these tips will help keep your information protected.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X