ನಿಮ್ಮ ಮೊಬೈಲ್ ಶುಲ್ಕವನ್ನು ಹೀಗೆ ನಿಯಂತ್ರಿಸಿ

By Shwetha
|

ದೈನಂದಿನ ಜೀವನದಲ್ಲಿ ಎಲ್ಲಾ ವಸ್ತುಗಳ ಬೆಲೆ ನಮಗೆ ತುಟ್ಟಿಯಾಗುತ್ತಿದೆ. ಫೋನ್‌ನ ಬಿಲ್‌ನಿಂದ ಹಿಡಿದು ತರಕಾರಿ ಹೀಗೆ ದಿನಬಳಕೆಯ ವಸ್ತುಗಳು ತುಟ್ಟಿಯಾಗಿ ಇದು ಸಮಸ್ಯೆಯನ್ನು ತಂದೊಡ್ಡುತ್ತಿದೆ ಹಾಗಿದ್ದರೆ ಇಂದಿನ ಲೇಖನದಲ್ಲಿ ನಮಗೆ ತುಂಬಾ ಕಷ್ಟ ಎಂದೆನಿಸಿರುವ ಫೋನ್ ಬಿಲ್ ಅನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

#1

#1

ನಿಮ್ಮ ತಿಂಗಳ ಮೊಬೈಲ್ ಬಿಲ್‌ನಲ್ಲಿ ನೀವು ಬಹಳಷ್ಟನ್ನು ಪಾವತಿಸುವವರಾಗಿದ್ದಲ್ಲಿ ಕೊಂಚ ಇಲ್ಲಿ ಗಮನ ನೀಡಿ. ಹೆಚ್ಚಿನ ಮೊಬೈಲ್ ಸೇವೆಗಳು ಬಹಳಷ್ಟು ಕೊಡುಗೆಗಳನ್ನು ಪ್ರಸ್ತುತಪಡಿಸುತ್ತಿದ್ದು ಇದರ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ. ನಿಮ್ಮ ಮೊಬೈಲ್ ಸೇವೆಯನ್ನು ಅನುಸರಿಸಿ ಈ ಯೋಜನೆಗಳ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ.

#2

#2

ಹೆಚ್ಚಿನ ಹೊಸ ಸ್ಮಾರ್ಟ್‌ಫೋನ್ ಯೋಜನೆಗಳು ಅನಿಯಮಿತ ರಾಷ್ಟ್ರೀಯ ಕರೆಗಳನ್ನು ಒದಗಿಸುತ್ತಿವೆ, ನಿಮಿಷಕ್ಕೆ ದರವನ್ನು ನಿಗದಿಪಡಿಸುವ ಯೋಜನೆಯನ್ನು ನೀವು ಬಳಸುತ್ತೀರಿ ಎಂದಾದಲ್ಲಿ ಇದು ನಿಮಗೆ ಹೆಚ್ಚುವರಿ ದರವನ್ನು ವಿಧಿಸಬಹುದು. ಇದಕ್ಕಾಗಿ ನೀವು ಆಂಡ್ರಾಯ್ಡ್ ಒದಗಿಸುತ್ತಿರುವ ಸ್ಕೈಪ್ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಬಹುದು. ಇದೇ ರೀತಿ ಐಓಎಸ್‌ನ ಸೇವೆಯನ್ನು ಕೂಡ ನಿಮಗೆ ಬಳಸಬಹುದಾಗಿದೆ.

#3

#3

ಕೆಲವೊಂದು ಮೊಬೈಲ್ ಕಂಪೆನಿಗಳು ವಿದ್ಯಾರ್ಥಿಗಳಿಗಾಗಿ ಮತ್ತು ವ್ಯವಹಾರಸ್ಥರಿಗಾಗಿ ಕೆಲವೊಂದು ಯೋಜನೆಗಳನ್ನು ಪರಿಚಯಿಸುತ್ತಿದ್ದು ಅದರ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ.

#4

#4

ನಿಮ್ಮ ಮೊಬೈಲ್ ಅನ್ನು ಹೆಚ್ಚು ನೀವು ವೈಫೈಯ ಸಂಪರ್ಕದಲ್ಲಿ ಬಳಸುತ್ತೀರಿ ಎಂದಾದಲ್ಲಿ ನಿಮಗೆ ತಗಲುವ ಮಾಸಿಕ ಪಾವತಿಯಲ್ಲಿ ಕಡಿತಗಳನ್ನು ಪಡೆಯಬಹುದು. ಆದಷ್ಟು ಅಂತರ್ಜಾಲದ ಬಳಕೆಯನ್ನು ಮಾಡುವುದು ನಿಮಗೆ ಅದರ ಜ್ಞಾನವನ್ನು ವೃದ್ಧಿಸುವುದರೊಂದಿಗೆ ನಿಮಗೆ ಉಳಿತಾಯವನ್ನು ಮಾಡುತ್ತದೆ.

#5

#5

ಫೋನ್‌ನ ಬದಲಿಗೆ ಆದಷ್ಟು ಸಂದೇಶಗಳನ್ನು ರಚಿಸಿ ರವಾನಿಸುವುದು ಹೆಚ್ಚು ಸೂಕ್ತವಾಗಿದೆ ಮತ್ತು ಅತ್ಯಮೂಲ್ಯ ಯೋಜನೆಯಾಗಿದೆ. ಇದರಿಂದ ಕೂಡ ನೀವು ಅಮಿತ ಖರ್ಚನ್ನು ಉಳಿಸಬಹುದಾಗಿದೆ.

#6

#6

ಫೇಸ್‌ಬುಕ್‌ನ ಆಟೋಪ್ಲೇ ಆವೃತ್ತಿಯನ್ನು ಆನ್ ಮಾಡಿಟ್ಟುಕೊಂಡಿರುವುದು ಅವರ ಮೊಬೈಲ್ ಬಿಲ್ ಅನ್ನು ಹೆಚ್ಚಿಸಿದೆ ಎಂದಾಗಿ ಬಹಳಷ್ಟು ಬಳಕೆದಾರರು ದೂರನ್ನಿತ್ತಿದ್ದಾರೆ. ಆದ್ದರಿಂದ ಈ ವೈಶಿಷ್ಟ್ಯವನ್ನು ಆದಷ್ಟು ಆಫ್ ಮಾಡಿಟ್ಟುಕೊಂಡಿರಿ.

#7

#7

ನೀವು ಹೊರದೇಶಕ್ಕೆ ಪ್ರಯಾಣಿಸುತ್ತಿದ್ದೀರಿ ಎಂದಾದಲ್ಲಿ ಸ್ಥಳೀಯ ಸಿಮ್ ಅನ್ನು ಬಳಸಿ ಇದರಿಂದ ನಿಮಗೆ ಕಡಿಮೆ ರೋಮಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ. ಇದರಿಂದ ಆದಷ್ಟು ಹೊರದೇಶದಲ್ಲಿ ಸ್ಥಳೀಯ ಸಿಮ್ ಅನ್ನು ಬಳಸಿ.

#8

#8

ನೀವು ಕೆಲವೊಂದು ಯೋಜನೆಗಳ ಬಗ್ಗೆ ತಿಳಿದುಕೊಂಡರೆ ಕಡಿಮೆ ದರದಲ್ಲಿ ಕೂಡ ನಿಮ್ಮ ಮೊಬೈಲ್ ಸೇವೆಯನ್ನು ನಿಮಗೆ ಬಳಸಬಹುದು. ಕೆಲವೊಂದು ಮೊಬೈಲ್ ಕಂಪೆನಿಗಳು ತಮ್ಮ ಗ್ರಾಹಕರನ್ನು ಸಂತೋಷವಾಗಿರಿಸಲು ಕೆಲವೊಂದು ಅತ್ಯುತ್ತಮ ಯೋಜನೆಗಳನ್ನು ಆಗಾಗ ಪ್ರಸ್ತುತಪಡಿಸುತ್ತಿರುತ್ತವೆ.

Best Mobiles in India

English summary
This article tells about 8 Ways to Slash Your Cellphone Bill.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X