ಸರ್ಕಾರದ ಈ 5 ಯೋಜನೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲೇಬೇಕು!! ಯಾವುವು?

ರೇಷನ್‌ ಕಾರ್ಡ್‌ನಿಂದ ಧಾನ್ಯ ಪಡೆಯುವುದರಿಂದ ಹಿಡಿದು ಎಲ್‌ಪಿಜಿ ಸಬ್ಸಿಡಿ ಪಡೆಯಲು , ಪಾಸ್‌ಪೋರ್ಟ್ ಮಾಡಿಸಲು ಪ್ರಮುಖವಾಗಿರುವ ಈ ಆಧಾರ್‌ ಕಾರ್ಡ್‌ ಅನ್ನು ಈ ಎಲ್ಲಾ ಯೋಜನೆಗಳ ಜೊತೆ ಲಿಂಕ್ ಮಾಡಿಸದಿದ್ದರೆ ಇವುಗಳ ಫಲಾನುಭವಿಗಳಾಗಲು ಸಾಧ್ಯವಿಲ್ಲ.

Written By:

ಆಧಾರ್ ಕಾರ್ಡ್‌ ಇಲ್ಲದಿದ್ದರೆ ಇಂದಿನ ದಿನಗಳಲ್ಲಿ ಅನುಭವಿಸಬೇಕಾದ ಕಷ್ಟ ಅಷ್ಟಿಷ್ಟಲ್ಲ.! ಸರ್ಕಾರದ ಎಲ್ಲಾ ಯೋಜನೆಗಳಿಗೂ ಆಧಾರ್‌ಕಾರ್ಡ್‌ ಬಹುಮುಖ್ಯವಾಗಿ ಬೇಕಾಗಿದೆ. ಆಧಾರ್‌ ಕಾರ್ಡ್‌ ಮಾತ್ರ ಎಲ್ಲಾ ದಾಖಲಾತಿಗಳಿಗೆ ಸರಿಸಮ ಎನ್ನಬಹುದಾಗಿದೆ.

ರೇಷನ್‌ ಕಾರ್ಡ್‌ನಿಂದ ಧಾನ್ಯ ಪಡೆಯುವುದರಿಂದ ಹಿಡಿದು ಎಲ್‌ಪಿಜಿ ಸಬ್ಸಿಡಿ ಪಡೆಯಲು , ಪಾಸ್‌ಪೋರ್ಟ್ ಮಾಡಿಸಲು ಪ್ರಮುಖವಾಗಿರುವ ಈ ಆಧಾರ್‌ ಕಾರ್ಡ್‌ ಅನ್ನು ಈ ಎಲ್ಲಾ ಯೋಜನೆಗಳ ಜೊತೆ ಲಿಂಕ್ ಮಾಡಿಸದಿದ್ದರೆ ಈ ಯೋಜನೆಗಳ ಫಲಾನುಭವಿಗಳಾಗಲು ಸಾಧ್ಯವಿಲ್ಲ. 

ಆಧಾರ್ ಇ-ಕೆವೈಸಿ ಸೇವೆ ಏಕೆ ಪಡೆಯಬೇಕು? ನಿಮ್ಮ ಭವಿಷ್ಯಕ್ಕೆ ಏನಿದರ ಕೊಡುಗೆ ತಿಳಿಯಿರಿ?

ಹಾಗಾಗಿ, ನಾವು ನಮ್ಮ ಆಧಾರ್‌ ಕಾರ್ಡ್‌ ಅನ್ನು ಯಾವ ಯಾವ ಸರ್ಕಾರದ ಯೋಜನೆಗಳಿಗೆ ಲಿಂಕ್ ಮಾಡಿಸಲೇಬೇಕು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಪಡಿತರ ಮತ್ತು ಎಲ್‌ಪಿಜಿ ಸಬ್ಸಿಡಿ

ಸರ್ಕಾರ ಪಡಿತರ ಮತ್ತು ಎಲ್‌ಪಿಜಿ ಸಬ್ಸಿಡಿ ಮೊತ್ತವನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಹಾಕುವ ಚಿಂತನೆ ಮಾಡಿದ್ದು, ಈ ಸೌಲಭ್ಯವನ್ನು ಪಡೆಯಲು ರೇಷನ್ ಕಾರ್ಡ್ ಮತ್ತು LPG ಗ್ರಾಹಕ ಸಂಖ್ಯೆಯನ್ನು ನಿಮ್ಮ ಆಧಾರ್ ನಂಬರಿನೊಂದಿಗೆ ಲಿಂಕ್ ಮಾಡಬೇಕು.

ಹೊಸ ಬ್ಯಾಂಕ್ ಖಾತೆ ತೆರೆಯಲು

ಇಂದು ಬ್ಯಾಂಕ್‌ಗಳಲ್ಲಿ ಹೊಸ ಖಾತೆ ತೆರೆಯಬೇಕಾದಲ್ಲಿಯೂ ಸಹ ಆಧಾರ್ ನಂಬರ್ ಕೊಡಬೇಕಾಗಿದೆ. ವಿಳಾಸದ ದಾಖಲಾತಿಯಾಗಿ ಕಾರ್ಯನಿರ್ವಹಿಸಲಿದ್ದು, ಹೆಚ್ಚಿನ ದಾಖಲಾತಿಗಳನ್ನು ಕೊಡುವುದನ್ನು ತಪ್ಪಿಸಬಹುದಾಗಿದೆ.

ಸರ್ಕಾರದ ಡಿಜಿಟಲ್ ಆಪ್ ಲಾಕರ್

ಭಾರತ ಸರ್ಕಾರ ಡಿಜಿಟಲ್ ಲಾಕರ್ ಆಪ್‌ ವ್ಯವಸ್ಥೆಯನ್ನು ಜಾರಿಗೆತಂದಿದ್ದು, ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ದಾಖಲಾತಿಗಳನ್ನು ಸರ್ಕಾರದ ಸರ್ವರ್ ಆಪ್‌ನಲ್ಲಿನಲ್ಲಿ ಸಂಗ್ರಹಿಸಿಡಬಹುದು. ಹಾಗಾಗಿ, ಜಿಟಲ್ ಲಾಕರ್ ಆಪ್‌ ಸೈನ್ ಅಪ್ ಪ್ರಕ್ರಿಯೆಗಾಗಿ ಪ್ರತಿಯೊಬ್ಬರೂ ಆಧಾರ್ ಲಿಂಕ್ ಮಾಡಬೇಕಾಗುತ್ತದೆ.

ವೋಟರ್ ಐಡಿ ಲಿಂಕ್

ನಕಲಿ ಮತದಾರರ ಸಮಸ್ಯೆಯನ್ನು ಬಗೆಹರಿಸಲು ಚುನಾವಣಾ ಚೀಟಿಯೊಂದಿಗೆ ಆಧಾರ್ ಕಾರ್ಡ್‌ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಆಧಾರ್ ಲಿಂಕ್ ಮಾಡಿದರೆ ಕಾನೂನು ಬಾಹಿರವಾಗಿ ಒಂದಂಕ್ಕಿಂತ ಹೆಚ್ಚಿನ ಚುನಾವಣಾ ಚೀಟಿಗಳನ್ನು ಪಡೆಯುವುದು ಕಷ್ಟ. ಹೀಗಾಗಿ ನೀವು ಸ್ವತ ಅಧಿಕಾರಿಗಳನ್ನು ಭೇಟಿಯಾಗಿ ಆಧಾರ್ ಲಿಂಕ್ ಮಾಡಿಸಬೇಕಾಗುತ್ತದೆ.

ಜನ್ ಧನ್ ಯೋಜನೆ

ಪ್ರಧಾನ ಮಂತ್ರಿ ಜನಧನ್ ಯೋಜನೆಯ ಬ್ಯಾಂಕ್ ಖಾತೆಯನ್ನು ತೆರೆಯಲು ಆಧಾರ್ ಕಾರ್ಡ್/ನಂಬರ್ ಒಂದಿದ್ದರೆ ಸಾಕು. ಬೇರೆ ಯಾವ ಗುರುತಿನ ಚೀಟಿಯೂ ಬೇಕಾಗಿಲ್ಲ. ಅಲ್ಲದೇ ಬೇರೆ ದಾಖಲಾತಿಗಳನ್ನು ಕೊಟ್ಟ ನಂತರವೂ PMJDY ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್ ಮೂಲಕ ತೆರೆಯಬಹುದು.ಇದು ಶೂನ್ಯ ಉಳಿತಾಯದ ಖಾತೆಯಾಗಿರುತ್ತದೆ. ಹಾಗಾಗಿ, ಈ ಎಲ್ಲಾ ಮಾಹಿತಿಯನ್ನು ಶೇರ್‌ ಮಾಡಿ ಇತರರಿಗೂ ಸಹಾಯ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
should be link Aadhar card to 5 government projects. to know more visit to kannada.gizbot.com
Please Wait while comments are loading...
Opinion Poll

Social Counting