ಕನ್ನಡದಲ್ಲಿಯೇ ಏರ್‌ಟೆಲ್ ಆಫರ್‌ಗಳನ್ನು ನೋಡುವುದು ಹೇಗೆ?

ಏರ್‌ಟೆಲ್ ನೀಡಿರುವ ಹೊಸ ಹೊಸ ಆಫರ್‌ಗಳನ್ನು ಕನ್ನಡದಲ್ಲಿಯೇ ನಾವು ನೋಡಬಹುದಾಗಿದ್ದು, ಬ್ಯಾಲೆನ್ಸ್ ಚೆಕ್, ಗ್ರಾಹಕ ಸೇವೆ ಎಲ್ಲವೂ ಕನ್ನಡದಲ್ಲಿಯೇ ದೊರೆಯಲಿದೆ.!!

|

ಎಲ್ಲವೂ ಇಂಗ್ಲೀಷ್‌ಮಯವೇ ಆಗಿರುವಾಗ ಪ್ರಾದೇಶಿಕ ಭಾಷೆಗಳ ಮೂಲಕವೂ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕಿರುವುದು ಯಾವುದೇ ಒಂದು ಕಂಪೆನಿಯ ಕರ್ತವ್ಯ ಎಂದು ಹೇಳಬಹುದು. ಹಾಗಾಗಿಯೇ, ದೇಶದ ಬಹುದೊಡ್ಡ ಟೆಲಿಕಾಂ ಇದೀಗ ಪ್ರಾದೇಶಿಕ ಭಾಷೆಯಲ್ಲಿಯೇ ತನ್ನ ಸೇವೆ ನೀಡಲು ಮುಂದಾಗಿದೆ.!!

ಹಾಗಾಗಿ, ಏರ್‌ಟೆಲ್ ನೀಡಿರುವ ಹೊಸ ಹೊಸ ಆಫರ್‌ಗಳನ್ನು ಕನ್ನಡದಲ್ಲಿಯೇ ನಾವು ನೋಡಬಹುದಾಗಿದ್ದು, ಬ್ಯಾಲೆನ್ಸ್ ಚೆಕ್, ಗ್ರಾಹಕ ಸೇವೆ ಎಲ್ಲವೂ ಕನ್ನಡದಲ್ಲಿಯೇ ದೊರೆಯಲಿದೆ.!! ಇನ್ನು ಇತರ 10 ಪ್ರಾದೇಶಿಕ ಬಾಷೆಗಳಲ್ಲಿಯೂ ಕೂಡ ಏರ್‌ಟೆಲ್ ಇಂತಹದೊಂದು ಸೇವೆ ತಂದಿದ್ದು ಕನ್ನಡದಲ್ಲಿ ಏರ್‌ಟೆಲ್ ಆಫರ್‌ಗಳನ್ನು ಹೇಗೆ ನೋಡುವುದು ಎಂಬುದನ್ನು ತಿಳಿಯಿರಿ!!

ಪ್ರಾದೇಶಿಕ ಬಾಷೆ ಆಯ್ಕೆ

ಪ್ರಾದೇಶಿಕ ಬಾಷೆ ಆಯ್ಕೆ

ಇದೇ ಮೊದಲ ಬಾರಿಗಟ ಏರ್‌ಟೆಲ್ ಇಂತಹ ಒಂದು ಆಯ್ಕೆ ನೀಡಿದ್ದು, ಬಹಳ ಸುಲಭವಾಗಿ ಇಂಗ್ಲೀಷ್‌ನಿಂದ ಕನ್ನಡಕ್ಕೆ ಭಾಷೆ ಬದಲಾವಣೆ ಮಾಡಿಕೊಳ್ಳಬಹುದು. ಇದು ಇಂಗ್ಲೀಷ್ ತಿಳಿಯದ ಗ್ರಾಹಕರಿಗೆ ಅತ್ಯಂತ ಉಪಯೋಗಕಾರಿಯಾಗಿದೆ.!!

#121# ಗೆ ಡೈಲ್ ಮಾಡಿ!!

#121# ಗೆ ಡೈಲ್ ಮಾಡಿ!!

ಏರ್‌ಟೆಲ್‌ನ ಎಲ್ಲಾ ಸೇವೆಗಳನ್ನು ಕೇವಲ #121# ಗೆ ಡೈಲ್ ಮಾಡುವ ಮೂಲಕ ನೋಡಬಹುದಾಗಿದೆ. ಹಾಗಾಗಿ, #121# ಗೆ ಡೈಲ್ ಮಾಡಿ ಅಲ್ಲಿ ಬರುವ ಆಯ್ಕೆಗಳಲ್ಲಿ ಭಾಷೆ ಸೆಟ್ಟಿಂಗ್ ಎಂಬುದನ್ನು ಕ್ಲಿಕ್ ಮಾಡಿ. ನಂತರ ಮೂಡುವ ಆಯ್ಕೆಗಳಲ್ಲಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಿ.!!

ಕನ್ನಡಕ್ಕೆ ಬದಲಾಗಿದೆ.!!

ಕನ್ನಡಕ್ಕೆ ಬದಲಾಗಿದೆ.!!

ಒಮ್ಮೆ ನೀವು ಭಾಷೆಯನ್ನು ಬದಲಾವಣೆ ಮಾಡಿದ ನಂತರ ಮತ್ತೆ ವಾಪಸ್ #121# ಗೆ ಡೈಲ್ ಮಾಡಿ. ನಿಮ್ಮ ಭಾಷೆ ಕನ್ನಡಕ್ಕೆ ಬದಲಾವಣೆಯಾಗಿರುತ್ತದೆ. ನಂತರ ಅಲ್ಲಿನ ನಂಬರ್‌ಗಳನ್ನು ಬಳಸಿಕೊಂಡು ಕನ್ನಡದಲ್ಲಿಯೇ ಏರ್‌ಟೆಲ್ ಸೇವೆಗಳ ಮಾಹಿತಿ ತಿಳಿಯಿರಿ.!!

ಇಂಗ್ಲೀಷ್ ಗೊತ್ತಿದ್ದರೂ ಕನ್ನಡ ಬಳಸಿ.!!

ಇಂಗ್ಲೀಷ್ ಗೊತ್ತಿದ್ದರೂ ಕನ್ನಡ ಬಳಸಿ.!!

ಯಾವ ಭಾಷೆಯನ್ನು ಹೆಚ್ಚು ಬಳಸುತ್ತೇವೆಯೋ ಆ ಭಾಷೆ ಹೆಚ್ಚು ಉಳಿಯುತ್ತದೆ. ಹಾಗಾಗಿ, ಮಾತೃಭಾಷೆಯನ್ನು ಬಳಸುವ ಕೆಲಸ ಆಗಬೇಕಿದೆ. ಆದ್ದರಿಂದ ನಿಮಗೆ ಇಂಗ್ಲೀಷ್ ತಿಳಿದಿದ್ದರೂ ಸಹ ಕನ್ನಡ ಬಳಸಿ ಎಂಬುದು ನಮ್ಮ ಸಲಹೆ. ನೀವೆನಂತಿರಾ?

ಗೂಗಲ್‌ನಲ್ಲಿ ಗೂಗಲ್‌ನಲ್ಲಿ "Find My Phone" ಎಂದು ಟೈಪಿಸಿ, ಕಳೆದಿರುವ ಮೊಬೈಲ್ ಹುಡುಕಿ!!

Best Mobiles in India

English summary
Self-care platform provides information and enabling of services. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X