ಏರ್‌ಟೆಲ್ ನೀಡುವ 30GB ಉಚಿತ ಡೇಟಾವನ್ನು ಪಡೆದುಕೊಳ್ಳುವುದು ಹೇಗೆ..?

ಸರ್ಪ್ರೈಸ್ ಆಫರ್‌ ಹೆಸರಿನಲ್ಲಿ ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ 30 GB 4G ಡೇಟಾವನ್ನು ಉಚಿತವಾಗಿ ನೀಡುವ ಘೋಷಣೆ ಮಾಡಿತ್ತು.

Written By:

ದೇಶಿಯ ಟೆಲಿಕಾಮ್ ವಕಯದಲ್ಲಿ ನಡೆಯುತ್ತಿರು ದರ ಸಮರದಲ್ಲಿ ಏರ್‌ಟೆಲ್ ಗ್ರಾಹಕರು ಅತೀ ಹೆಚ್ಚಿನ ಲಾಭವನ್ನು ತಮ್ಮದಾಗಿಸಿಕೊಳ್ಳುತ್ತಿದ್ದು, ಜಿಯೋ ಎದುರಾಗಿ ಅನ್‌ಲಿಮಿಟೆಡ್ ಕಾಲ್‌ ಮತ್ತು ಪ್ರತಿ ನಿತ್ಯ 1 GB ಡೇಟಾವನ್ನು ನೀಡುವ ಆಫರ್‌ ಘೋಷಿಸಿದ ಏರ್‌ಟೆಲ್‌, ಸರ್ಪ್ರೈಸ್ ಆಫರ್‌ ಹೆಸರಿನಲ್ಲಿ ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ 30 GB 4G ಡೇಟಾವನ್ನು ಉಚಿತವಾಗಿ ನೀಡುವ ಘೋಷಣೆ ಮಾಡಿತ್ತು.

ಏರ್‌ಟೆಲ್ ನೀಡುವ 30GB ಉಚಿತ ಡೇಟಾವನ್ನು ಪಡೆದುಕೊಳ್ಳುವುದು ಹೇಗೆ..?

ಓದಿರಿ: ಗೂಗಲ್-ಜಿಯೋ ದಿಂದ ಶೀಘ್ರವೇ ರೂ.2,000ಕ್ಕೆ ಉತ್ತಮ 4G ಸ್ಮಾರ್ಟ್‌ಪೋನ್..!!

ಈ ಹಿನ್ನಲೆಯಲ್ಲಿ ಏರ್‌ಟೆಲ್ ಗ್ರಾಹಕರು ಮಾರ್ಚ್ 13ರ ನಂತರದಿಂದ ಈ ಕೊಡುಗೆಯ ಲಾಭಪಡೆಯಬಹುದಾಗಿದೆ. ಈ ಸರ್ಪೈಸ್‌ ಆಫರ್‌ ಎಂದರೇನು.? ಇದರ ಲಾಭ ಪಡೆಯುವುದು ಹೇಗೆ ಎಂಬುದನ್ನು ಮುಂದೆ ತಿಳಿದುಕೊಳ್ಳುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಏನೀದು ಏರ್‌ಟೆಲ್ ಸರ್ಪೈಸ್ಸ್ ಆಫರ್:

ಏರ್‌ಟೆಲ್ ತನ್ನ ಪೋಸ್ಟ್‌ಪೇಯ್ಡ್‌ ಗ್ರಾಹಕರಿಗಾಗಿಯೇ ಈ ಕೊಡುಗೆ ನೀಡಿದ್ದು, ಇದರ ಅನ್ವಯ ಪ್ರತಿ ತಿಂಗಳು ಈ ಕೊಡಗೆಯ ಲಾಭ ಪಡೆದ ಗ್ರಾಹಕರಿಗೆ 10 GB ಡೇಟಾವನ್ನು ಮೂರು ತಿಂಗಳ ಕಾಲ ನೀಡಲಿದ್ದು, ಒಟ್ಟಾಗಿ 30GB ಆಗಲಿದ್ದು, ಮಾರ್ಚ್ 31 ಒಳಗೆ ಈ ಕೊಡುಗೆ ಲಾಭ ಪಡೆಯಬೇಕಾಗಿದೆ.

30 GB ಡೇಟಾವನ್ನು ಪಡೆಯುವುದು ಹೇಗೆ:

ಏರ್‌ಟೆಲ್ ನೀಡುತ್ತಿರುವ 30 GB ಡೇಟಾವನ್ನು ಪಡೆಯಲು ಪೋಸ್ಟ್‌ಪೇಯ್ಡ್ ಗ್ರಾಹಕರು ಮೈ ಏರ್‌ಟೆಲ್ ಆಪ್ ಡೌನ್‌ಲೋಡ್ ಮಾಡಬೇಕಾಗಿದೆ. ಮಾಡಿದ ನಂತರ ಆಪ್‌ನಲ್ಲಿರುವ ಕ್ಲೈಮ್ ಸರ್ಪ್ರೈಸ್ ಮೇಸೆಜ್ ಮೇಲೆ ಕ್ಲಿಕ್ ಮಾಡಬೇಕಾಗಿದೆ. ಇದನ್ನು ಮಾಡಿದರೆ ಪ್ರತಿ ತಿಂಗಳು 10 GB ಡೇಟಾವನ್ನು ಪಡೆಯಬಹುದಾಗಿದೆ.

ಪ್ರತಿ ತಿಂಗಳೂ 10 GB ಡೇಟಾ:

ಹೀಗೆ ಮೈ ಏರ್‌ಟೆಲ್ ಆಫ್ ಡೋನ್‌ಲೋಡ್ ಮಾಡಿಕೊಂಡ ನಂತರದಲ್ಲಿ ಪೋಸ್ಟ್‌ಪೇಯ್ಡ್‌ ಗ್ರಾಹಕರು ಪ್ರತಿ ತಿಂಗಳು 10 GB ಗಳಂತೆ ಮೂರು ತಿಂಗಳ ಕಾಲ 10 GB ಡೇಟಾವನ್ನು ಪಡೆಯಲಿದ್ದಾರೆ. ಇದರಿಂದಾಗಿ ಪೊಸ್ಟ್‌ಪೇಯ್ಡ್ ಗ್ರಾಹಕರು ಮೂರು ತಿಂಗಳ ಕಾಲ ಈ ಹೊಸ ಕೊಡುಗೆಯ ಲಾಭ ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
Airtel is providing its postpaid customers 30GB data free of cost as part of its Airtel Surprise offer. to know more visit kannada.gizbot.com
Please Wait while comments are loading...
Opinion Poll

Social Counting