ಏರ್‌ಟೆಲ್‌ನಿಂದ 12 ತಿಂಗಳ ಫ್ರೀ ಡೇಟಾ ಪಡೆಯುವುದು ಹೇಗೆ? ಕಂಪ್ಲೀಟ್ ಡಿಟೇಲ್ಸ್!!!

12 ತಿಂಗಳ ಫ್ರೀ ಡಾಟಾ ಆಫರ್ ನೀಡಿರುವ ಏರ್‌ಟೆಲ್ ಜಿಯೋಗೆ ಸೆಡ್ಡು ಹೊಡೆದರು, ತನ್ನ ನೂತನ ಆಫರ್‌ಗೆ ಕೆಲವು ಷರತ್ತುಗಳನ್ನು ಹಾಕಿದೆ.!

|

ಜಿಯೋ ಆರಂಭವಾದ ನಂತರ ದಿನದಿಂದಲೂ ಸ್ಪರ್ಧೆ ನೀಡಲು ಪ್ರಯತ್ನಿಸುತ್ತಿದ್ದ ಏರ್‌ಟೆಲ್ ಇದೀಗ ಭಾರಿ ಹೊಸ ಸಾಹಸಕ್ಕೆ ಕೈ ಹಾಕಿದೆ. 12 ತಿಂಗಳ ಫ್ರೀ ಡಾಟಾ ಆಫರ್ ನೀಡಿರುವ ಏರ್‌ಟೆಲ್ ಜಿಯೋಗೆ ಸೆಡ್ಡು ಹೊಡೆದರು, ತನ್ನ ನೂತನ ಆಫರ್‌ಗೆ ಕೆಲವು ಷರತ್ತುಗಳನ್ನು ಹಾಕಿದೆ.!

ಎಚ್ಚರ!..."ಭೀಮ್" ಆಪ್ ನಕಲಿಯಾಗಿದೆ!!

ಏರ್‌ಟೆಲ್‌ನ 12 ತಿಂಗಳ ಫ್ರೀ ಡೇಟಾ ಆಫರ್ ಇಂದಿನಿಂದ ಚಾಲ್ತಿಯಾಗಿದ್ದ ಬರಲಿದೆ. ಇಂದಿನಿಂದ ಆರಂಭಗೊಳ್ಳುವ ಏರ್‌ಟೆಲ್ ಆಫರ್ ಫೆಬ್ರವರಿ 28 ಕ್ಕೆ ಮುಗಿಯಲಿದೆ. ಈ ಸಮಯದ ಒಳಗಾಗಿ ಏರ್‌ಟೆಲ್ ಕೊಡುಗೆಯ ಲಾಭ ಪಡೆಯಬೇಕಿದೆ. ಹಾಗಾದರೆ, ಏರ್‌ಟೆಲ್‌ನ 12 ತಿಂಗಳ ಫ್ರೀ ಡಾಟಾ ಆಫರ್ ಹೇಗೆ ಪಡೆಯಬಹುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಏರ್‌ಟೆಲ್ ನೀಡುತ್ತಿರುವ ಆಫರ್ ಪೂರ್ಣ ಉಚಿತವೇ?

ಏರ್‌ಟೆಲ್ ನೀಡುತ್ತಿರುವ ಆಫರ್ ಪೂರ್ಣ ಉಚಿತವೇ?

ಏರ್‌ಟೆಲ್ ನೀಡುತ್ತಿರುವ 12 ತಿಂಗಳ ಫ್ರೀ ಡಾಟಾ ಆಫರ್ ಪೂರ್ಣ ಉಚಿತ ಎನ್ನಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ಏರ್‌ಟೆಲ್ ನೀಡಿದ್ದ ಅತ್ಯುತ್ತಮ ಆಫರ್‌ ಜೊತೆಯಲ್ಲಿಯೇ ಈ ಆಫರ್‌ ಅಹ ಸೇರಿದೆ.

ಏರ್‌ಟೆಲ್ ಆಫರ್ ಅತ್ಯುತ್ತಮ ಆಫರ್ ಎನ್ನಬಹುದೇ?

ಏರ್‌ಟೆಲ್ ಆಫರ್ ಅತ್ಯುತ್ತಮ ಆಫರ್ ಎನ್ನಬಹುದೇ?

ಹೌದು, ಏರ್‌ಟೆಲ್ ನೀಡುತ್ತಿರುವ ಈ ಆಫರ್ ಅತ್ಯತ್ತಮ ಆಫರ್‌ ಎನ್ನಬಹುದು. 345 ರೂಪಾಯಿಗಳನ್ನು ರೀಚಾರ್ಜ್ ಮಾಡಿಸಿಕೊಂಡರೆ ದೇಶದಾದ್ಯಂತ ಅನ್‌ಲಿಮಿಟೆಡ್ ಕಾಲ್ ಮತ್ತು 3GB ಡೇಟಾ ದೊರೆಯಲಿದೆ. ಹಾಗಾಗಿ, ಇದನ್ನು ಪ್ರಸ್ತುತದ ಅತ್ಯುತ್ತಮ ಆಫರ್ ಎನ್ನಬಹುದು.

ಏರ್‌ಟೆಲ್ ಆಫರ್ ಲಾಭ ಏನಿದೆ.?

ಏರ್‌ಟೆಲ್ ಆಫರ್ ಲಾಭ ಏನಿದೆ.?

ಏರ್‌ಟೆಲ್ ನೀಡುತ್ತಿರುವ ಈ ಹೊಸ ಕೊಡುಗೆಯಲ್ಲಿ ಉಚಿತ ಕರೆ, ಉಚಿತ ಇಂಟರ್‌ನೆಟ್ ಮತ್ತು ಉಚಿತ ಸಂದೇಶ ಸೇವೆಯೂ ಇದೆ. ಜೊತೆಗೆ ಒಂದು ವರ್ಷದ ಪ್ರತಿ ತಿಂಗಳೂ ಕೇವಲ 345 ರೂಪಾಯಿ ರೀಚಾರ್ಜ್ ಮಾಡಿಸಿದರೆ ಸ್ಮಾರ್ಟ್‌ಫೋನ್‌ ಉಪಯೊಗಕ್ಕೆ ತೊಂದರೆ ಇಲ್ಲ!

ಜಿಯೋಗಿಂತಲು ಬೆಸ್ಟ್ ಯಾಕೆ.?

ಜಿಯೋಗಿಂತಲು ಬೆಸ್ಟ್ ಯಾಕೆ.?

ಜಿಯೋ ಪೂರ್ಣ ಉಚಿತ ಸೇವೆ ನೀಡುತ್ತಿದ್ದರೂ ಸಹ ಮಾರ್ಚ್‌ಗೆ ಅದರ ಉಚಿತ ಸೇವೆ ಕೊನೆಯಾಗಲಿದೆ.ಟೆಲಿಕಾಂ ದಿಗ್ಗಜ ಏರ್‌ಟೆಲ್‌ನ ಈ ಸೇವೆ ವರ್ಷ ಪೂರ್ತಿ ಇರಲಿದ್ದು, ಜಿಯೋಗಿಂತಲೂ ಬೆಸ್ಟ್ ಆಫರ್ ಎನ್ನಬಹುದು

Best Mobiles in India

English summary
India's biggest telecom operator, Airtel, said that the free data offer will be available across India starting Wednesday and will be valid till February 28.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X