ಇಂಟರ್ನೆಟ್ ಬಳಕೆ ಎಂದರೆ ಬೆಂಕಿಯೊಂದಿಗೆ ಸರಸ

By Shwetha
|

ಇಂದಿನ ಮಾಹಿತಿ ಯುಗ ಇಂಟರ್ನೆಟ್ ಮಯವಾಗುತ್ತಿದೆ. ಆನ್‌ಲೈನ್‌ನ ಬಳಕೆ ಇಲ್ಲದೆ ಯಾರೂ ಕೂಡ ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿ ಬದುಕಲಾರರು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ನೀವು ಬಳಸುವ ಪ್ರತಿಯೊಂದು ಡಿವೈಸ್‌ಗಳಲ್ಲೂ ಇಂದು ಇಂಟರ್ನೆಟ್ ಬಳಕೆ ನಡೆಯುತ್ತಿದ್ದು ನಿಮ್ಮ ಕೈಬೆರಳಲ್ಲೇ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಓದಿರಿ: ಮರೆಗುಳಿಗಳಿಗೆ ವರದಾನವಾಗಿರುವ ಅಪ್ಲಿಕೇಶನ್‌ಗಳು

ಆದರೆ ನೀವು ಸುರಕ್ಷಿತ ಎಂದು ಕಾಣುತ್ತಿರುವ ಇಂಟರ್ನೆಟ್ ಲೋಕ ನಿಮ್ಮ ಕುತ್ತಿಗೆಗೆ ಉರುಳಾಗುತ್ತಿದೆ ಎಂಬ ಅಂಶವನ್ನು ನೀವು ಬಲ್ಲಿರಾ? ನೀವು ಸೇಫ್ ಎಂದು ಭಾವಿಸಿ ನಿಮ್ಮೆಲ್ಲಾ ವೈಯಕ್ತಿಕ ಡೇಟಾಗಳನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಿಡುತ್ತಿದ್ದೀರಿ ಎಂದಾದಲ್ಲಿ ಈ ಲೇಖನ ನಿಮಗೊಂದು ಎಚ್ಚರಿಕೆಯ ಕರಘಂಟೆಯಾಗಿದೆ. ನಿಮ್ಮ ವೈಯಕ್ತಿಕ ಡೇಟಾವನ್ನು ಹೇಗೆ ಜೋಪಾನ ಮಾಡುವುದು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ಸಂಗ್ರಹ

ಸಂಗ್ರಹ

ನಿಮ್ಮ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಸ್ಟೇಟ್‌ಮೆಂಟ್ಸ್ ಮಾಹಿತಿಗಳನ್ನು ಐಸಿಒನಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.

ನಾಶ ಮಾಡಿ

ನಾಶ ಮಾಡಿ

ಬಿಲ್‌ಗಳು, ರಶೀದಿಗಳು ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ನಾಶ ಮಾಡಿ.

ಜಾಗರೂಕತೆಯಿಂದ ಕಳುಹಿಸುವುದು

ಜಾಗರೂಕತೆಯಿಂದ ಕಳುಹಿಸುವುದು

ವೈಯಕ್ತಿಕ ಡಾಕ್ಯುಮೆಂಟ್‌ಗಳನ್ನು ನೀವು ಪೋಸ್ಟ್ ಮಾಡುತ್ತಿದ್ದೀರಿ ಎಂದಾದಲ್ಲಿ ಪೋಸ್ಟ್ ಆಫೀಸ್ ಅನ್ನು ಬಳಸಿ.

ಪಾಸ್‌ವರ್ಡ್ ಬದಲಾವಣೆ

ಪಾಸ್‌ವರ್ಡ್ ಬದಲಾವಣೆ

ಬೇರೆ ಬೇರೆ ಖಾತೆಗಳಿಗಾಗಿ ವಿಭಿನ್ನ ಪಾಸ್‌ವರ್ಡ್‌ಗಳನ್ನು ಬಳಸಿ. ಸಾರ್ವಜನಿಕ ಕಂಪ್ಯೂಟರ್‌ಗಳನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಿ.

ಹಂಚಿಕೊಳ್ಳಬೇಡಿ

ಹಂಚಿಕೊಳ್ಳಬೇಡಿ

ಫೋನ್, ಫ್ಯಾಕ್ಸ್, ಇಮೇಲ್ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕಳುಹಿಸುತ್ತಿದ್ದೀರಿ ಎಂದಾದಲ್ಲಿ ಆದಷ್ಟು ಇಂತಹ ಪ್ರಕ್ರಿಯೆಗಳನ್ನು ನಡೆಸದಿರಿ.

ಸ್ಪೈವೇರ್ ನಿಲ್ಲಿಸಿ

ಸ್ಪೈವೇರ್ ನಿಲ್ಲಿಸಿ

ಉತ್ತಮ ಗುಣಮಟ್ಟದ ಆಂಟಿವೈರಸ್ ಸಾಫ್ಟ್‌ವೇರ್‌ಗಳನ್ನು ಖರೀದಿಸಿ. ನಿಮ್ಮ ಕಂಪ್ಯೂಟರ್ ಅನ್ನು ವೈರಸ್‌ಗಳಿಂದ ಕಾಪಾಡಲು ಇದು ಅತ್ಯುತ್ತಮವಾಗಿದೆ.

ಟೆಕ್ಸ್ಟ್‌ಗಳನ್ನು ಸಂರಕ್ಷಿಸಿ

ಟೆಕ್ಸ್ಟ್‌ಗಳನ್ನು ಸಂರಕ್ಷಿಸಿ

ಟೈಗರ್ ಟೆಕ್ಸ್ಟ್ ಎಂಬ ಅಪ್ಲಿಕೇಶನ್ ಸಮಯ ಮಿತಿಯನ್ನು ಕಳುಹಿಸುವವರಿಗೆ ಹೊಂದಿಸಲು ನೆರವಾಗಲಿದೆ. 30 ದಿನಗಳ ನಂತರ ಕಂಪೆನಿಯ ಸರ್ವರ್‌ಗಳಿಂದ ಇದು ಅಗೋಚರವಾಗುತ್ತದೆ.

ಡೇಟಾ ನಾಶಪಡಿಸಿ

ಡೇಟಾ ನಾಶಪಡಿಸಿ

ವಾಶಿಂಗ್ಟನ್ ಯೂನಿವರ್ಸಿಟಿಯ ಸಂಶೋಧಕರು ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸುತ್ತಿದ್ದು ವಾನಿಶ್ ಎಂಬ ಹೆಸರನ್ನು ನೀಡಲಾಗಿದೆ. ಇದು ನಿರ್ದಿಷ್ಟ ಸಮಯದಲ್ಲಿ ಎಲ್ಲಾ ಡೇಟಾವನ್ನು ನಾಶಪಡಿಸುತ್ತದೆ.

ಆಫ್‌ಶೋರ್

ಆಫ್‌ಶೋರ್

ಕೆಲವೊಂದು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ ಅಥವಾ ವಿಪಿಎನ್ ನಿಮ್ಮೆದುರಿಗೇ ಇಂಟರ್ನೆಟ್‌ಗೆ ಸಂಪರ್ಕವನ್ನೇರ್ಪಡಿಸುತ್ತದೆ ಇದರಿಂದ ನೀವು ಎಲ್ಲಿ ಇಂಟರ್ನೆಟ್ ಬಳಸುತ್ತಿದ್ದೀರಿ ಎಂಬುದು ವೆಬ್ ಸರ್ವೀಸಸ್‌ಗೆ ತಿಳಿಯುವುದಿಲ್ಲ. ಆ ದೇಶದ ಕಾನೂನಿನ ಅನ್ವಯ ನಿಮ್ಮ ಚಟುವಟಿಕೆಯ ಮೇಲೆ ಕಣ್ಣಿಡಲು ಅವುಗಳಿಗೆ ಸಾಧ್ಯವಾಗುವುದಿಲ್ಲ.

ಬ್ರೌಸರ್ ನವೀಕರಿಸಿ

ಬ್ರೌಸರ್ ನವೀಕರಿಸಿ

ನಿಮ್ಮ ವೆಬ್ ಬ್ರೌಸರ್ ಅನ್ನು ಆಗಾಗ್ಗೆ ನವೀಕರಿಸುತ್ತಿರುವುದು ನಿಮ್ಮ ವೈಯಕ್ತಿಕ ಡೇಟಾ ಸೋರಿಕೆಯಾಗದಂತೆ ತಡೆಹಿಡಿಯುವಲ್ಲಿ ಸಹಾಯಕವಾಗಲಿದೆ.

Best Mobiles in India

English summary
The hacking group, Impact, first released 10GB of personal data that includes millions of users on the dating and affair site. Just a few days after, the team has released a bigger batch of data that is about double the size of previously revealed data.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X