ಕ್ಯಾಮೆರಾ ಎಲ್‌ಇಡಿಯನ್ನು ಕಾಲಿಂಗ್ ನೋಟಿಫಿಕೇಷನ್ ಮಾಡಿ.!! ಹೇಗೆ..?

ವೈಬ್ರೈಟ್, ರಿಂಗ್‌ಟೋನ್ ಮಾತ್ರವಲ್ಲದೇ ಕ್ಯಾಮೆರಾ ಎಲ್‌ಇಡಿ ಲೈಟ್‌ ನಿಂದಲೂ ನೀವೂ ಕರೆಯ ನೋಟಿಫಿಕೇಷನ್ ಪಡೆಯಬಹುದಾಗಿದೆ.

Written By:

ಆಂಡ್ರಾಯ್ಡ್ ಸ್ಮಾರ್ಟ್‌ಫೋನುಗಳು ತಮ್ಮ ಒಡಲಲ್ಲಿ ಸಾಕಷ್ಟು ಅಂಶಗಳನ್ನು ಇಟ್ಟುಕೊಂಡಿದ್ದು, ನಮಗೆ ತಿಳಿಯದ ಹಲವರು ಅಂಶಗಳು ಇದೆ. ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಪೋನಿನಲ್ಲಿ ಇನ್‌ಕಮಿಂಗ್ ಕಾಲ್ ಬರಬೇಕಾದರೆ ಕೇವಲ ವೈಬ್ರೈಟ್, ರಿಂಗ್‌ಟೋನ್ ಮಾತ್ರವಲ್ಲದೇ ಕ್ಯಾಮೆರಾ ಎಲ್‌ಇಡಿ ಲೈಟ್‌ ನಿಂದಲೂ ನೀವೂ ಕರೆಯ ನೋಟಿಫಿಕೇಷನ್ ಪಡೆಯಬಹುದಾಗಿದೆ. ಅದು ಹೇಗೆ..?

ಕ್ಯಾಮೆರಾ ಎಲ್‌ಇಡಿಯನ್ನು ಕಾಲಿಂಗ್ ನೋಟಿಫಿಕೇಷನ್ ಮಾಡಿ.!! ಹೇಗೆ..?

ಓದಿರಿ: ಜಿಯೋ ಆಯ್ತು, ಈಗ ಏರ್‌ಟೆಲ್ ನಿಂದ 4G VoLTE: ಶುರುವಾಗಲಿದೆ ಉಚಿತ ಸೇವೆಗಳ ಸುರಿಮಳೆ..!

ನಿಮ್ಮ ಫೋನನ್ನು ಸೈಲೆಂಟ್ ನಲ್ಲಿ ಇಟ್ಟ ಸಂದರ್ಭದಲ್ಲಿ ಯಾರೇ ಕರೆ ಮಾಡಿದರು ನಿಮಗೆ ತಿಳಿಯುವುದಿಲ್ಲ. ಇದಕ್ಕಾಗಿಯೇ ನಿಮ್ಮ ಸ್ಮಾರ್ಟ್‌ಫೋನಿನ ಕ್ಯಾಮೆರಾ ಎಲ್‌ಇಡಿಯನ್ನು ಕರೆಯ ಎಚ್ಚರಿಕೆಯ ಗಂಟೆಯಾಗಿ ಬಳಸಬಹುದಾಗಿದ್ದು, ನಿಮ್ಮ ಫೋನಿಗೆ ಕರೆ ಬಂದ ಸಂದರ್ಭದಲ್ಲಿ ಎಲ್‌ಇಡಿ ಬೆಳಗಲಿದೆ. ಇದರಿಂದ ನೀವು ಕರೆ ಸ್ವೀಕರಿಸುವುದು ಸುಲಭವಾಗಲಿದೆ.

ಓದಿರಿ: ಟಾಪ್‌ ಎಂಡ್ ಫೋನ್ ಶಿಯೋಮಿ Mi 6: 6GB RAM, 128 GB ROM ಇನ್ನು ಹಲವು..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಕಾಲಿಂಗ್ ನೋಟಿಫಿಕೇಷನ್ ಬಳಸಿಕೊಳ್ಳುವುದು ಹೇಗೆ..?

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಕ್ಯಾಮೆರಾ ಎಲ್‌ಇಡಿಯನ್ನು ಕಾಲಿಂಗ್ ನೋಟಿಫಿಕೇಷನ್ ಆಗಿ ಬಳಸಿಕೊಳ್ಳಲು ನೀವು ಒಂದು ಆಪ್‌ ಡೌನಲೋಡ್ ಮಾಡಿಕೊಳ್ಳುವ ಅವಶ್ಯಕತೆ ಇದೆ. ಇದಕ್ಕಾಗಿ Flash Alert 2 ಎಂಬ ಆಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ. ಇದು ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ. ಇದರಿಂದ ಕ್ಯಾಮೆರಾ ಎಲ್‌ಇಡಿಯನ್ನು ಕಾಲಿಂಗ್ ನೋಟಿಫಿಕೇಷನ್ ಆಗಿ ಬಳಸಿಕೊಳ್ಳಬಹುದಾಗಿದೆ.

Flash Alert 2 ಡೌನ್‌ಲೋಡ್ ಮಾಡಿಕೊಳ್ಳಿ:

ಸ್ಮಾರ್ಟ್‌ಫೋನಿನ ಕ್ಯಾಮೆರಾ ಎಲ್‌ಇಡಿಯನ್ನು ಕಾಲಿಂಗ್ ನೋಟಿಫಿಕೇಷನ್ ಬಳಸಿಕೊಳ್ಳಲು ಪ್ಲೇ ಸ್ಟೋರಿನಲ್ಲಿ ಲಭ್ಯವಿರುವ Flash Alert 2 ಆಪ್‌ ಡೌನಲೋಡ್ ಮಾಡಿಕೊಂಡು, ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳಿರಿ.

ಆಪ್ ಲಾಂಚ್ ಮಾಡಿಕೊಳ್ಳಿ:

Flash Alert 2 ಆಪ್‌ ಡೌನಲೋಡ್ ಮಾಡಿ, ಇನ್‌ಸ್ಟಾಲ್ ಮಾಡಿದ ನಂತರದಲ್ಲಿ ಆಪ್ ಲಾಂಚ್ ಮಾಡಿಕೊಳ್ಳಿ. ಇದಾದ ನಂತರ ಅಲ್ಲಿ ನೀಡಿರುವ ಸೆಟಪ್ ಕಂಪ್ಲೀಟ್ ಮಾಡಿರಿ. ಇದರಿಂದ ಆಪ್ ಕಾರ್ಯ ನಿರ್ವಹಿಸಲು ಶುರು ಮಾಡಲಿದೆ.

ನಂತರ ಫ್ಲಾಷ್ ಆಲರ್ಟ್ ಆನ್ ಮಾಡಿ:

ಆಪ್ ಇನ್‌ಸ್ಟಾಲ್ ಮಾಡಿದ ನಂತರ ಇನ್‌ಕಮಿಂಗ್ ಕಾಲ್ ಮತ್ತು ಇನ್‌ಕಮಿಂಗ್ ಟೆಕ್ಸ್ಟ್ ಗೆ ಆಲರ್ಟ್ ಮಾಡಿಕೊಳ್ಳಿ. ಇದನ್ನು ಮಾಡಿದ ನಂತರ ನಿಮ್ಮ ಕರೆ ಬಂದ ಸಂದರ್ಭದಲ್ಲಿ ಮೇಸೆಜ್ ಬಂದ ಸಂದರ್ಭದಲ್ಲಿ ಎಲ್‌ಇಡಿ ಲೈಟ್ ಬೆಳಗಲಿದೆ.

ನಂತರ ಮೊಬೈಲ್ ರೀಬೂಟ್ ಮಾಡಿರಿ:

ಆಪ್ ಇನ್‌ಸ್ಟಾಲ್ ಮಾಡಿದ ನಂತರ, ಸೆಟಿಂಗ್ಸ್ ಬದಲಾವಣೆ ಮಾಡಿದ ನಂತರದಲ್ಲಿ ನಿಮ್ಮ ಸ್ಮಾರ್ಟ್‌ಪೋನನ್ನು ರೀಬೂಟ್ ಮಾಡಿರಿ. ಇದಾದ ನಂತರದಲ್ಲಿ ನೀವು ಬಯಸಿದಂತೆ ಎಲ್‌ಇಡಿ ಲೈಟ್ ಕರೆ ಬಂದಾಗ ನಿಮ್ಮನ್ನು ಎಚ್ಚರಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
your phone flash will get activated during incoming calls. It’s hard to believe I comprehend but this is possible. to know more visit kannada.gizbot.com
Please Wait while comments are loading...
Opinion Poll

Social Counting