ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್‌ನಲ್ಲಿ ಡೇಟಾ ಬಳಕೆ ಪರಿಶೀಲನೆ ಹೇಗೆ?

By Shwetha
|

ಹೆಚ್ಚುವರಿ ಡೇಟಾ ಬಳಕೆ ನಿಮ್ಮನ್ನು ಚಿಂತೆಗೆ ಈಡುಮಾಡುವುದು ಸಹಜವೇ ಆಗಿದೆ. ನಿಮ್ಮ ಉಚಿತ ಇಂಟರ್ನೆಟ್ ಅಥವಾ ಡೇಟಾ ಮಿತಿ ದಾಟಿದಲ್ಲಿ, ನಿಮ್ಮ ಹೆಚ್ಚುವರಿ ಡೇಟಾ ಬಳಕೆಗೆ ನೀವು ಅತ್ಯಧಿಕ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ನಿಮ್ಮ ಇಂಟರ್ನಟ್ ಬಳಕೆಗೆ ಹೆಚ್ಚು ಪಾವತಿ ಮಾಡುವುದರ ಬದಲಿಗೆ, ನಿಮ್ಮ ಡೇಟಾ ಮಿತಿ ಹೇಗಿದೆ ಯಾವುದಕ್ಕೆ ಎಷ್ಟು ಖರ್ಚಾಗುತ್ತಿದೆ ಎಂಬುದರ ಮೇಲೆ ಗಮವನ್ನು ಹರಿಸಿ.

ಓದಿರಿ: ಹುರ್ರೇ! ಜಿಯೋದಿಂದ 'ಉಚಿತ ಅಂತರರಾಷ್ಟ್ರೀಯ ಕರೆಗಳು'

ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್‌ನಲ್ಲಿ ಡೇಟಾ ಬಳಕೆ ಪರಿಶೀಲನೆ ಹೇಗೆ?

ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೂ ಅನಧಿಕೃತ ಬಳಕೆಯನ್ನು ನಿವಾರಿಸಿಕೊಳ್ಳಲು ನಾವು ಸಲಹೆಗಳನ್ನು ನೀಡುತ್ತಿದ್ದು ಇದು ಹೆಚ್ಚುವರಿ ಇಂಟರ್ನೆಟ್ ಬಿಲ್ ಅನ್ನು ಕಡಿಮೆ ಮಾಡಿಕೊಳ್ಳಲು ನಿಮಗೆ ಅನುಕೂಲಕರವಾಗಿದೆ. ನೀವು ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಬಳಕೆದಾರರಾಗಿದ್ದು ನಿಮ್ಮ ಬಳಕೆಯನ್ನು ಪರಿಶೀಲಿಸಿಕೊಳ್ಳಬೇಕೆಂದಿದ್ದಲ್ಲಿ ಈ ಕೆಳಗೆ ಹಂತಗಳನ್ನು ನಾವು ನೀಡುತ್ತಿದ್ದೇವೆ. ಆನ್‌ಲೈನ್ ಪೋರ್ಟಲ್ ಅನ್ನು ಬಳಸಿಕೊಂಡು ಇನ್ನೊಂದು ಎಸ್ಎಮ್‌ಎಸ್ ಮುಖಾಂತರ ಅದು ಹೇಗೆ ಎಂಬುದನ್ನು ಇಂದಿಲ್ಲಿ ನೋಡಿ.

ಓದಿರಿ: ಬರಲಿದೆ 4ಜಿಗಿಂತ 20 ಪಟ್ಟು ವೇಗ ಅಧಿಕವಾಗಿರುವ 5ಜಿ

ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್‌ನಲ್ಲಿ ಡೇಟಾ ಬಳಕೆ ಪರಿಶೀಲನೆ ಹೇಗೆ?

ಖಾತೆಗೆ ರಿಜಿಸ್ಟರ್ ಮಾಡಿಕೊಳ್ಳಿ
ಬಿಎಸ್‌ಎನ್‌ಎಲ್ ಲಾಂಚ್ ಮಾಡಿರುವ ಆನ್‌ಲೈನ್ ಸೆಲ್ಫ್‌ಕೇರ್ ಪೋರ್ಟಲ್ ಇದಾಗಿದ್ದು ನೀವು ಇದಕ್ಕೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಇದು ಬ್ರಾಡ್‌ಬ್ಯಾಂಡ್ ಬಳಕೆ ಮತ್ತು ಲ್ಯಾಂಡ್ ಲೈನ್ ಬಳಕೆಯ ವಿವರಗಳನ್ನು ನಿಮಗೆ ನೀಡುತ್ತದೆ. ಪೋರ್ಟಲ್‌ನಿಂದ ನೀವು ಹೆಚ್ಚಿನ ಕೆಲಸಗಳನ್ನು ಮಾಡಬಹುದಾಗಿದೆ ಪ್ಲಾನ್ ಬದಲಾವಣೆ, ದೂರು ದಾಖಲಿಸುವುದು, ಬಿಲ್‌ಗಳ ವೀಕ್ಷಣೆ, ಪಾವತಿಗಳನ್ನು ಮಾಡುವುದು, ಪ್ರೊಫೈಲ್ ಅಪ್‌ಡೇಟ್ ಮತ್ತು ಇನ್ನಷ್ಟನ್ನು ಮಾಡಬಹುದಾಗಿದೆ.

ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್‌ನಲ್ಲಿ ಡೇಟಾ ಬಳಕೆ ಪರಿಶೀಲನೆ ಹೇಗೆ?

ಬ್ರಾಡ್‌ಬ್ಯಾಂಡ್ ಯೋಜನೆಯ ಡೇಟಾ ಬಳಕೆಯನ್ನು ಪರಿಶೀಲಿಸುವುದು ಹೇಗೆ
ನೀವು ರಿಜಿಸ್ಟರ್ ಮಾಡಿರುವ ಖಾತೆಗೆ ಸೈನ್ ಇನ್ ಮಾಡಿಕೊಂಡ ನಂತರ, ಡ್ಯಾಶ್‌ಬೋರ್ಡ್‌ಗೆ ನೀವು ಹೋಗಬೇಕು ಮತ್ತು ಸರ್ವೀಸ್‌ಗಳ ಮೇಲೆ ಕ್ಲಿಕ್ ಮಾಡಬೇಕು. ಸರ್ವೀಸ್ ಅಡಿಯಲ್ಲಿ, ಆಪ್ಶನ್ ಕಂಡುಬರುತ್ತದೆ. "ನನ್ನ ಅನ್‌ಬಿಲ್ ಮಾಡಿರುವ ಬ್ರಾಡ್‌ಬ್ಯಾಂಡ್ ಬಳಕೆ ವಿವರಗಳನ್ನು ಪರಿಶೀಲಿಸಿ" ಎಂಬುದು ಈ ಸಂದೇಶವಾಗಿರುತ್ತದೆ.

ಓದಿರಿ: ಏರ್‌ಟೆಲ್‌ನಲ್ಲಿ ಉಚಿತವಾಗಿ 60 ಜಿಬಿ 4ಜಿ ಡೇಟಾ ಪಡೆದುಕೊಳ್ಳುವುದು ಹೇಗೆ?

ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್‌ನಲ್ಲಿ ಡೇಟಾ ಬಳಕೆ ಪರಿಶೀಲನೆ ಹೇಗೆ?

ಈ ಕೆಳಗೆ ನೀಡಿರುವ ಬಿಎಸ್‌ಎನ್‌ಎಲ್ ಸೆಲ್ಫ್ ಕೇರ್ ಪೋರ್ಟಲ್‌ಗೆ ನೀವು ಭೇಟಿ ನೀಡಬೇಕು.
http://selfcare.sdc.bsnl.co.in for South Zone
http://selfcare.ndc.bsnl.co.in for North Zone
http://selfcare.wdc.bsnl.co.in for West Zone
http://selfcare.edc.bsnl.co.in for East Zone

ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್‌ನಲ್ಲಿ ಡೇಟಾ ಬಳಕೆ ಪರಿಶೀಲನೆ ಹೇಗೆ?

ರಿಜಿಸ್ಟ್ರೇಶನ್ ಪ್ರೊಸೆಸ್
ಮೊದಲಿಗೆ, ನೀವು 52295 ಗೆ ಎಸ್‌ಎಮ್‌ಎಸ್ ಕಳುಹಿಸುವ ಮೂಲಕ ನಿಮ್ಮ ಲ್ಯಾಂಡ್ ಲೈನ್ ಸಂಖ್ಯೆಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. "REG space Landline Number prefixed with STD code" ಎಂಬುದಾಗಿ ಸಂದೇಶದಲ್ಲಿರಬೇಕು.

ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್‌ನಲ್ಲಿ ಡೇಟಾ ಬಳಕೆ ಪರಿಶೀಲನೆ ಹೇಗೆ?

ಬಿಎಸ್‌ಎನ್‌ಎಲ್ ಅಲ್ಲದ ಗ್ರಾಹಕರಿಗೆ ರಿಜಿಸ್ಟ್ರೇಶನ್
ಬಿಎಸ್‌ಎನ್‌ಎಲ್ ಅಲ್ಲದ ಇತರ ನೆಟ್‌ವರ್ಕ್ ಗ್ರಾಹಕರೂ ಕೂಡ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ, ಆದರೆ ಪ್ರಕ್ರಿಯೆ ಕೊಂಚ ಭಿನ್ನವಾಗಿರುತ್ತದೆ. ""REG space Landline Number prefixed with STD code" ಎಂಬ ಸಂದೇಶವನ್ನು ನೀವು 919448077777 ಗೆ ಕಳುಹಿಸಬೇಕು.

ಓದಿರಿ: ರಿಲಾಯನ್ಸ್ ಜಿಯೋ ಆಫರ್ ಕುರಿತು ನೀವು ಅರಿಯದ ಟಾಪ್ ಸತ್ಯಗಳು

ಎಸ್‌ಎಮ್‌ಎಸ್ ಮೂಲಕ ಡೇಟಾ ಬಳಕೆ ಪರಿಶೀಲಿಸಿ
ರಿಜಿಸ್ಟ್ರೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಇನ್ನೊಂದು ಎಸ್‌ಎಮ್‌ಎಸ್, "BBU space Landline Number prefixed with STD code" ಎಂದು ಹೇಳಲಾದ ಸಂದೇಶವನ್ನು ಬಿಎಸ್‌ಎನ್‌ಎಲ್ ಬಳಕೆದಾರರು 52295 ಗೆ ಕಳುಹಿಸಿ ಮತ್ತು ಇತರ ನೆಟ್‌ವರ್ಕ್ ಬಳಕೆದಾರರು ಇದೇ ಸಂದೇಶವನ್ನು 09448077777 ಸಂಖ್ಯೆಗೆ ಕಳುಹಿಸಿ.

Best Mobiles in India

English summary
BSNL offers two ways for the broadband users to check the data usage - one is using the online portal and the other is with an SMS. Take a look.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X