ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಳ್ಳಲೇಬಾರದ ಸಂಗತಿಗಳು ಏನೇನು ?

By Shwetha
|

ಸಾಮಾಜಿಕ ಜಾಲತಾಣವೆಂಬುದು ಮುಕ್ತ ವೇದಿಕೆಯೇನೋ ನಿಜ ಆದರಿಲ್ಲಿ ನೀವು ನಿಮಗೆ ಬೇಕಾದ್ದನ್ನು ಹಂಚಿಕೊಳ್ಳುವಂತಿಲ್ಲ ಎಂಬ ಸತ್ಯ ನಿಮಗೆ ಗೊತ್ತೇ? ನೀವು ಮುಗ್ಧವಾಗಿ ತಾಣದಲ್ಲಿ ಹಾಕಿರುವ ಪೋಸ್ಟ್ ಕೂಡ ನಿಮ್ಮ ಭವಿಷ್ಯಕ್ಕೆ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಇದೆ. ಆದರೆ ತಾಣದಲ್ಲಿ ಯಾವುದನ್ನು ಹಂಚಬೇಕು ಯಾವುದನ್ನು ಹಂಚಬಾರದು ಎಂಬ ಸತ್ಯವನ್ನು ನೀವು ತಿಳಿದುಕೊಂಡಿರುವುದು ಅತ್ಯವಶ್ಯಕವಾಗಿದೆ.

ಓದಿರಿ: ಸ್ಮಾರ್ಟ್‌ಫೋನ್ ಸ್ಕ್ರೀನ್ ಒಡೆದಿದ್ದರೆ ಇಲ್ಲಿದೆ ಪರಿಹಾರ

ಇಂದಿನ ಲೇಖನ ಈ ಮಾದರಿಯ ಯಾವೆಲ್ಲಾ ಅಂಶಗಳನ್ನು ಹಂಚಿಕೊಳ್ಳಬಾರದು ಎಂಬುದನ್ನು ನಾವು ತಿಳಿಸಲಿದ್ದು ಇದು ಏಕೆ ಎಂಬುದನ್ನು ನೀವು ಅರಿತುಕೊಳ್ಳಿರುವಿರಿ.

ರಜಾದಿನಗಳಲ್ಲಿ ಹೊರಹೋಗಿದ್ದಾಗ

ರಜಾದಿನಗಳಲ್ಲಿ ಹೊರಹೋಗಿದ್ದಾಗ

ನೀವು ಎಲ್ಲಿಗಾದರೂ ಪ್ರಯಾಣ ಬೆಳೆಸುತ್ತಿದ್ದೀರಿ ಎಂದಾಗ ಅದನ್ನು ತಾಣದಲ್ಲಿ ಪೋಸ್ಟ್ ಮಾಡಲು ಹೋಗದಿರಿ. ನೀವು ಇಂತಹ ಮಾಹಿತಿಗಳನ್ನು ತಾಣದಲ್ಲಿ ಪೋಸ್ಟ್ ಮಾಡಿದಾಗ ಇದನ್ನು ಬೇರೆ ರೀತಿಯಲ್ಲಿ ಬಳಸುವ ಸಾಧ್ಯತೆ ಇರುತ್ತದೆ. ನಿಮ್ಮ ಪ್ರಯಾಣದ ವಿಚಾರಗಳನ್ನು ತಾಣದಲ್ಲಿ ಹಾಕಲೇಬೇಕು ಎಂದಾದಲ್ಲಿ ಪ್ರಯಾಣ ಮುಗಿಸಿದ ನಂತರ ಈ ಕೆಲಸವನ್ನು ಮಾಡಿ.

ಜಿಯೋಲೊಕೇಶನ್ ಮತ್ತು ಚೆಕ್ ಇನ್ಸ್

ಜಿಯೋಲೊಕೇಶನ್ ಮತ್ತು ಚೆಕ್ ಇನ್ಸ್

ಸ್ಮಾರ್ಟ್‌ಫೋನ್‌ನಂತೆಯೇ, ನಿಮ್ಮ ಬ್ರೌಸರ್ ನಿಮ್ಮ ಜಿಪಿಎಸ್ ಕೋರ್ಡಿನೇಶನ್‌ಗಳನ್ನು ಟ್ರ್ಯಾಕ್ ಮಾಡುತ್ತದೆ. ಇದರಿಂದಾಗಿಯೇ ನಿಮ್ಮ ತಾಣಗಳು ನೀವು ಅಪ್‌ಡೇಟ್ ಮಾಡಿದಂತೆಯೇ ಅದನ್ನು ಟ್ರ್ಯಾಕ್ ಮಾಡುತ್ತದೆ. ಇದನ್ನು ಜಿಯೋಲೊಕೇಶನ್ ಎಂಬುದಾಗಿ ಕರೆಯುತ್ತಾರೆ. ನಿಮ್ಮ ಈ ಮಾಹಿತಿಯನ್ನು ಬಳಸಿಕೊಂಡು ಇತರರು ದುರುಪಯೋಗಪಡಿಸಿಕೊಳ್ಳಬಹುದಾಗಿದೆ.

ದೂರುಗಳನ್ನು ದಾಖಲಿಸುವುದು

ದೂರುಗಳನ್ನು ದಾಖಲಿಸುವುದು

ನಿಮ್ಮ ಕಚೇರಿಯಲ್ಲಿ ನಡೆದಿರುವ ಘಟನೆಗಳನ್ನು ತಾಣದಲ್ಲಿ ಪೋಸ್ಟ್ ಮಾಡದಿರಿ. ಅಂತೆಯೇ ನಿಮ್ಮ ಮೇಲಾಧಿಕಾರಿಗಳ ಮೇಲೆ ದೂರು ಸಲ್ಲಿಸುತ್ತಿದ್ದೀರಿ ಎಂದಾದಲ್ಲಿ ಹೆಚ್ಚು ಕಾಳಜಿಯಿಂದಿರಿ. ಇದರಿಂದ ನಿಮಗೆ ತೊಂದರೆಯಾಗುವ ಸಂಭವ ಇರುತ್ತದೆ.

ಸ್ವಯಂ ದೋಷಾರೋಪಣೆ

ಸ್ವಯಂ ದೋಷಾರೋಪಣೆ

ತಾಣದಲ್ಲಿ ನೀವು ಕಾಣುತ್ತಿರುವುದೆಲ್ಲಾ ನಿಜವಾಗಬೇಕೆಂದಿಲ್ಲ. ಕೆಲವೊಮ್ಮೆ ಜನರು ಮಾಡುವ ಅಪಾಯಕಾರಿ ಕೃತ್ಯಗಳೆಂದರೆ ಅಪಾಯಕಾರಿ ವಿಧಾನದಲ್ಲಿ ಸೆಲ್ಫಿ ತೆಗೆಸಿಕೊಳ್ಳುವುದು, ಕುಡಿದು ಡ್ರೈವ್ ಮಾಡುವುದು ಇದೆಲ್ಲಾ ಸಾಹಸಗಳಾದರೂ ಇಂತಹ ಪೋಸ್ಟ್‌ಗಳನ್ನು ದಾಖಲಿಸುವುದಕ್ಕೆ ಸಾಕ್ಷಿಗಳು ಬೇಕಾಗುತ್ತದೆ. ಇದರಿಂದ ನಿಮಗೆ ಜೈಲು ಆಗುವ ಸಂಭವ ಕೂಡ ಇರುತ್ತದೆ.

ದುಬಾರಿ ವಸ್ತುಗಳ ಖರೀದಿ

ದುಬಾರಿ ವಸ್ತುಗಳ ಖರೀದಿ

ನೀವು ದುಬಾರಿ ವಸ್ತುಗಳಾದ ಕಾರು, ಫ್ರಿಡ್ಜ್, ಬೈಕ್ ಮೊದಲಾದವುಗಳನ್ನು ಖರೀದಿಸಿ ಅವುಗಳನ್ನು ತಾಣದಲ್ಲಿ ಪೋಸ್ಟ್ ಮಾಡುವುದು ನಿಮಗೆ ಸಂತೋಷವನ್ನುಂಟು ಮಾಡಿದರೂ ಇದರಿಂದ ನೀವು ಅಪಾಯಕ್ಕೆ ಸಿಲುಕಿತ್ತೀರಿ. ನಿಮ್ಮನ್ನು ಕಳ್ಳಕಾರು ದೋಚುವ ಸಂಭವ ಕೂಡ ಇರುತ್ತದೆ.

ವೈಯಕ್ತಿಕ ಸಲಹೆಗಳನ್ನು ನೀಡುವುದು

ವೈಯಕ್ತಿಕ ಸಲಹೆಗಳನ್ನು ನೀಡುವುದು

ನೀವು ವೈದ್ಯರು ಅಥವಾ ನ್ಯಾಯವಾದಿಗಳಾಗಿದ್ದಲ್ಲಿ ಜನರಿಗೆ ವೈಯಕ್ತಿಕ ಸಲಹೆಗಳನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡುವುದು ಸರಿಯಲ್ಲ. ಇದರಿಂದ ಸಲಹೆ ಪಡೆದುಕೊಂಡ ಜನರಿಗೆ ಮತ್ತು ಸಲಹೆ ನೀಡಿದ ನಿಮಗೆ ತೊಂದರೆ ಖಂಡಿತ. ಆರ್ಥಿಕ, ಡಯೆಟ್, ತೂಕ ಇಳಿಕೆ, ಸಂಬಂಧ ಮೊದಲಾದ ಸಲಹೆಗಳನ್ನು ನೀಡದಿರಿ.

ಸ್ಕ್ಯಾಮ್‌ಗಳು

ಸ್ಕ್ಯಾಮ್‌ಗಳು

ನಿಮ್ಮ ಸ್ನೇಹಿತರಿಗೆ ಈ ತಾಣಗಳ ಮೂಲಕ ತೊಂದರೆಗಳನ್ನು ಉಂಟುಮಾಡಬೇಡಿ. ಸಂಪರ್ಕಗಳನ್ನು ಹಂಚಿಕೊಳ್ಳುವುದು, ಆಹ್ವಾನಗಳನ್ನು ಆಮಂತ್ರಿಸುವುದು, ಗಿವ್ ಅವೇ ಮೊದಲಾದ ಕಾರ್ಯಗಳನ್ನು ನಡೆಸದಿರಿ.

Best Mobiles in India

English summary
You need to know that using Facebook and sharing information on the social network should be done cautiously. Before you share anything on the network, you need to know the value of your safety and privacy. Take a look at things that you should never share on social media.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X