ಯೂಟ್ಯೂಬ್ ವೀಡಿಯೊಗಳನ್ನು ಜಿಫ್ ಆಗಿ ಕನ್‌ವರ್ಟ್ ಮಾಡುವುದು ಹೇಗೆ?

ಯೂಟ್ಯೂಬ್‌ ವೀಡಿಯೊಗಳನ್ನು ಆನಿಮೇಟೆಡ್ ಜಿಫ್‌ ಆಗಿ ಕ್ರಿಯೇಟ್ ಮಾಡಲು ಈ ಸರಳ ಹಂತಗಳನ್ನು ಫಾಲೋ ಮಾಡಿ.

Written By:

ಸ್ಮಾರ್ಟ್‌ಫೋನ್ ಸೇರಿದಂತೆ ಇಂದು ಎಲ್ಲಾ ಆಪ್‌ಗಳು ಮತ್ತು ಸಾಮಾಜಿಕ ತಾಣಗಳಲ್ಲಿ ಜಿಫ್‌ ಒಂದು ಹೊಸ ರೀತಿಯ ಎಕ್ಸ್‌ಪ್ರೆಶನ್ ಮಾದರಿ ಆಗಿದೆ. ಜಿಫ್‌, ಎಮೋಜಿ ಮತ್ತು ಇಮೇಜ್‌ಗಿಂತ ಕಡಿಮೆ ಗಾತ್ರದ ಡ್ರಾಮಾಟಿಕ್ ಎಕ್ಸ್‌ಪ್ರೆಶನ್ ಸಹ ಆಗಿದೆ. ಇಂದು ಹೆಚ್ಚು ಕ್ರೇಜ್‌ ಮತ್ತು ಕಾಮಿಡಿಗಾಗಿಯೂ ಜಿಫ್‌ ಅನ್ನು ಬಳಸಲಾಗುತ್ತಿದೆ. ಫೇಸ್‌ಬುಕ್‌, ಇನ್‌ಸ್ಟಗ್ರಾಂ, ವಾಟ್ಸಾಪ್‌ ಅಥವಾ ಇತರೆ ಸಾಮಾಜಿಕ ತಾಣಗಳಲ್ಲಿ ಇರುವವರಿಗೆ ಜಿಫ್‌ಗಿಂತ ಉತ್ತಮವಾದ ಎಕ್ಸ್‌ಫ್ರೆಶನ್‌ ಟೂಲ್ ಇನ್ನೊಂದಿಲ್ಲ ಎಂತಲೇ ಹೇಳಬಹುದು.

ಅಂದಹಾಗೆ ಇಂದು ಸ್ಮಾರ್ಟ್‌ಫೋನ್‌ ಬಳಸುವವರು ತಮ್ಮ ಸ್ವಂತ ಜಿಫ್‌ ಇಮೇಜ್‌ ಅನ್ನು ಕ್ರಿಯೇಟ್‌ ಮಾಡಬಹುದು. ಅಲ್ಲದೇ ಯೂಟ್ಯೂಬ್‌ ವೀಡಿಯೊಗಳನ್ನು ಸಹ ಜಿಫ್‌ ಆಗಿ ಕನ್‌ವರ್ಟ್ ಮಾಡಬಹುದು ಅದು ಹೇಗೆ ಎಂದು ತಿಳಿಯಲು ಈ ಕೆಳಗಿನ ಸರಳ ಹಂತಗಳನ್ನು ಫಾಲೋ ಮಾಡಿ.

ದಿಪಾವಳಿ ವಿಶೇಷತೆ: 'ಗ್ಯಾಲಕ್ಸಿ ನೋಟ್ 7'ನೊಂದಿಗೆ ರಾಕಿಂಗ್ ಸ್ಟೈಲ್‌ನಲ್ಲಿ ಹಬ್ಬ ಆಚರಣೆ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಹಂತ 1

ಯಾವುದೇ ಯೂಟ್ಯೂಬ್ ವೀಡಿಯೊ ಆಯ್ಕೆ ಮಾಡಿ, 'gif' ಎಂದು URL ನಲ್ಲಿ ಟೈಪ್‌ ಮಾಡಿ. ಉದಾಹರಣೆಗೆ www.gifyoutube.com

ಹಂತ 2

ಮೇಲಿನ ರೀತಿಯಲ್ಲಿ ಟೈಪ್‌ ಮಾಡಿದ ನಂತರ ನೀವು gif.com ಗೆ ರೀಡೈರೆಕ್ಟ್‌ ಆಗುತ್ತೀರಿ. ಈ ವೆಬ್‌ಸೈಟ್‌ನಲ್ಲಿ ವೀಡಿಯೊ ಸಹ ಪ್ಲೇ ಆಗುತ್ತಿರುತ್ತದೆ. ಈ ಸೈಟ್‌ನಲ್ಲಿ ಆರಂಭಿಕ ಟೈಮ್‌ ಮತ್ತು ಅಂತ್ಯದ ಟೈಮ್‌ ಅನ್ನು ಪಿಕ್‌ ಮಾಡಬೇಕು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 3

ಟೈಮ್‌ ಸೆಲೆಕ್ಟ್ ಮಾಡಿದ ನಂತರ ಜಿಫ್‌ ಪ್ರಿವೀವ್‌ ಅನ್ನು ನೋಡಿ, ನಂತರ 'Create Gif' ಎಂಬುದನ್ನು ಕ್ಲಿಕ್ ಮಾಡಿ.

ಹಂತ 4

'Create Gif' ಮೇಲೆ ಕ್ಲಿಕ್‌ ಮಾಡಿದ ನಂತರ ಹಲವು ಆಪ್ಶನ್‌ಗಳಾದ Caption, effects, change gif name ಪ್ರದರ್ಶನವಾಗುತ್ತವೆ. ಅವುಗಳನ್ನು ಆಡ್‌ ಮಾಡಬಹುದು.

ಹಂತ 5

ಫಿಲ್ಟರ್‌ ಅನ್ನು ಮುಗಿಸಿದ ನಂತರ, 'Download Gif' ಮೇಲೆ ಕ್ಲಿಕ್‌ ಮಾಡಿ. ನಂತರ ನಿಮ್ಮ ಜಿಫ್‌ ರೆಡಿಯಾಗಿರುತ್ತದೆ.

gif.com ಕೇವಲ ಜಿಫ್‌ ಕ್ರಿಯೇಟ್ ಮಾಡಲು ಮಾತ್ರವಲ್ಲದೇ, ವೀಡಿಯೊಗಳನ್ನು ಡೈರೆಕ್ಟ್ ಶೇರ್‌ ಮಾಡಲು ಅವಕಾಶ ನೀಡುತ್ತದೆ. ಹಂತ 1 ರಿಂದ ಹಂತ 4 ವರೆಗೆ ಪೂರ್ಣಗೊಳಿಸಿದ ನಂತರ, ಡೌನ್‌ಲೋಡ್ ಮಾಡುವ ಮುನ್ನವೇ ಡೈರೆಕ್ಟ್ ಶೇರ್‌ ಬಟನ್‌ ಲಭ್ಯ. ಫೇಸ್‌ಬುಕ್‌, ಟ್ವಿಟರ್, ಥಂಬ್ಲರ್, ಪಿಂಟೆರೆಸ್ಟ್ ಮತ್ತು ಇತರೆ ತಾಣಗಳಿಗೆ ಶೇರ್‌ ಮಾಡುವ ಡೈರೆಕ್ಟ್ ಸಿಂಗಲ್‌ ಬಟನ್‌ಗಳು ಲಭ್ಯ. ಯಾವುದಾದರೂ ಒಂದು ಬಟನ್‌ ಮೇಲೆ ಕ್ಲಿಕ್‌ ಮಾಡಿ, ಲಾಗಿನ್‌ ಆಗಿ ನಂತರ ಶೇರ್‌ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 English summary
Easy way to convert YouTube videos into GIF [5 Simple Steps]. To know more visit kannada.gizbot.com
Please Wait while comments are loading...
Opinion Poll

Social Counting