ಗೂಗಲ್‌ ಅಕೌಂಟ್‌ಗೆ ಎರಡು ಹಂತದ ಲಾಗಿನ್ ವೆರಿಫಿಕೇಷನ್ ಹೇಗೆ ?

ಆನ್‌ಲೈನ್‌ನಲ್ಲಿ ಪಾಸ್‌ವರ್ಡ್‌ಗಳು ಎಷ್ಟು ಸುರಕ್ಷಿತವಾಗಿದ್ದರೂ ಸಹ ಕಷ್ಟವೇ.!

|

ಆನ್‌ಲೈನ್‌ನಲ್ಲಿ ಪಾಸ್‌ವರ್ಡ್‌ಗಳು ಎಷ್ಟು ಸುರಕ್ಷಿತವಾಗಿದ್ದರೂ ಸಹ ಕಷ್ಟವೇ.! ಹ್ಯಾಕರ್ಸ್ ಕಾಟ ಯಾವಾಗಲೂ ತಪ್ಪಿದಲ್ಲ. ನಾವಷ್ಟೇ ಸುರಕ್ಷಿತವಾದ ಪಾಸ್‌ವರ್ಡ್‌ ಕೊಟ್ಟರೂ ಸಹ ಹ್ಯಾಕರ್‌ಗಳು ತುಂಬಾ ಚಾಲಾಕಿಗಳಾಗಿರುತ್ತಾರೆ. ಹಾಗಾಗಿ, ಅಕೌಂಟ್‌ಗಳನ್ನು ಉತ್ತಮ ರೀತಿಯಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಬೇಕಾದ್ದು ಅತ್ಯಗತ್ಯ.

ಆದ್ದರಿಂದ ಇಂತಹ ಹ್ಯಾಕರ್ಸ್‌ಗಳಿಗೆ ಕನ್ನಹಾಕಲು ಅವಕಾಶ ನೀಡಬಾರದೆಂಬ ಉದ್ದೇಶದಿಂದ ಗೂಗಲ್‌ ತನ್ನ ಸೇವೆಗಳ ಸೈನ್‌ಇನ್‌ಗಾಗಿ ಎರಡು ಹಂತದ ಸುರಕ್ಷತಾ ವಿಧಾನವನ್ನು ನಿಡಿದೆ.!! ಅಂದರೆ ನಿಮ್ಮ ಮೊಬೈಲ್ ನಂಬರ್ ಮೂಲಕ ನಿಮ್ಮ ಗೂಗಲ್‌ ಅಕೌಂಟ್ ಸುರಕ್ಷಿತವಾಗಿರಿಸಿಕೊಳ್ಳಲು ಈ ಎರಡು ಹಂತದ ಸುರಕ್ಷಾ ವಿಧಾನ ಸಹಾಯವಾಗುತ್ತದೆ.!!

ಹಾಗಾದರೆ, ಗೂಗಲ್‌ ಅಕೌಂಟ್‌ಗೆ ಎರಡು ಹಂತದ ಲಾಗಿನ್ ವೆರಿಫಿಕೇಷನ್ ಹೇಗೆ ಮಾಡುವುದು? ಎರಡು ಹಂತದ ಲಾಗಿನ್ ವೆರಿಫಿಕೇಷನ್ ಎಷ್ಟು ಉಪಯೋಗ ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.!

2step ಲಿಂಕ್‌ ಕ್ಲಿಕ್ಕಿಸಿ.

2step ಲಿಂಕ್‌ ಕ್ಲಿಕ್ಕಿಸಿ.

ನಿಮ್ಮ ಬ್ರೌಸರ್ ತೆರೆದು google.com/landing/2step/ ಲಿಂಕ್‌ ಕ್ಲಿಕ್ಕಿಸಿ. ಪುಟ ತೆರೆದ ನಂತರ Get Started ಮೇಲೆ ಕ್ಲಿಕ್‌ ಮಾಡಿ. ನಿಮ್ಮ ಜಿಮೇಲ್‌ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಟೈಪ್‌ ಮಾಡಿ ಸೈನ್‌ಇನ್‌ ಆಗಿ. ಈಗ ತೆರೆದುಕೊಳ್ಳುವ ಪುಟದಲ್ಲಿ ಮತ್ತೆ Get Started ಮೇಲೆ ಕ್ಲಿಕ್ಕಿಸಿ. ಮತ್ತೊಮ್ಮೆ ಪಾಸ್‌ವರ್ಡ್‌ ಟೈಪಿಸಿ ಎಂಟರ್‌ ಒತ್ತಿ.

ಮೊಬೈಲ್‌ ಸಂಖ್ಯೆ ನಮೂದಿಸಿ

ಮೊಬೈಲ್‌ ಸಂಖ್ಯೆ ನಮೂದಿಸಿ

Let's set up your phone ಪುಟದಲ್ಲಿ ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ. ನಿಮಗೆ ಸಂದೇಶದ ಮೂಲಕ ಅಥವಾ ಕರೆಯ ಮೂಲಕ ವೆರಿಫಿಕೇಷನ್ ಕೋಡ್‌ ಸ್ವೀಕರಿಸುವ ಆಯ್ಕೆ ಇರುತ್ತದೆ. ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ TRY IT ಮೇಲೆ ಕ್ಲಿಕ್ಕಿಸಿ.

ವೆರಿಫಿಕೇಶನ್ ಕೋಡ್‌!!

ವೆರಿಫಿಕೇಶನ್ ಕೋಡ್‌!!

ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ TRY IT ಮೇಲೆ ಕ್ಲಿಕ್ಕಿಸಿದರೆ ನಿಮ್ಮ ಮೊಬೈಲ್‌ಗೆ ಸಂದೇಶ ಅಥವಾ ಕರೆಯ ಮೂಲಕ ಕೋಡ್‌ ಬರುತ್ತದೆ. ಮೊಬೈಲ್‌ಗೆ ಬಂದ ಆರು ಅಂಕಿಗಳ ಕೋಡ್‌ ಅನ್ನು ನಮೂದಿಸಿ NEXT ಮೇಲೆ ಕ್ಲಿಕ್‌ ಮಾಡಿ. ನಂತರ ಬರುವ ಪುಟದಲ್ಲಿ ಕಾಣಿಸುವ TURN ON ಮೇಲೆ ಕ್ಲಿಕ್ಕಿಸಿ. ನಿಮ್ಮ ಗೂಗಲ್‌ ಅಕೌಂಟ್‌ ಎರಡು ಹಂತದ ಸುರಕ್ಷತೆಗೆ ಒಳಗಾಗಿರುತ್ತದೆ.!!

 ವೆರಿಫಿಕೇಷನ್‌ ಕೋಡ್ ನಮೂದಿಸಬೇಕಾಗುತ್ತದೆ.!!

ವೆರಿಫಿಕೇಷನ್‌ ಕೋಡ್ ನಮೂದಿಸಬೇಕಾಗುತ್ತದೆ.!!

ನೀವು ಪ್ರತಿ ಬಾರಿ ಗೂಗಲ್‌ ಅಕೌಂಟ್‌ಗೆ ಸೈನ್‌ಇನ್‌ ಆಗುವಾಗ ನಿಮ್ಮ ಮೊಬೈಲ್‌ಗೆ ಬರುವ ವೆರಿಫಿಕೇಷನ್‌ ಕೋಡ್ ನಮೂದಿಸಬೇಕಾಗುತ್ತದೆ. ನೀವು ನಿತ್ಯ ಬಳಸುವ ಡಿವೈಸ್‌ ಅಥವಾ ನಿಮ್ಮ ಕಂಪ್ಯೂಟರ್‌ಗೆ ಈ ವೆರಿಫಿಕೇಷನ್‌ ಅಗತ್ಯವಿಲ್ಲ ಎನಿಸಿದರೆ ಸೈನ್‌ಇನ್‌ ವೇಳೆ 'ಡೋಟ್ ಆಸ್ಕ್ ಎಗೇನ್" ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

<strong>ನೀವು ಬಳಸುತ್ತಿರುವ ಆಪ್‌ಗಳು ನಿಮ್ಮನ್ನು ಸುಲಿಗೆ ಮಾಡುತ್ತಿವೆ!! ಹೇಗೆ ಗೊತ್ತಾ?</strong>ನೀವು ಬಳಸುತ್ತಿರುವ ಆಪ್‌ಗಳು ನಿಮ್ಮನ್ನು ಸುಲಿಗೆ ಮಾಡುತ್ತಿವೆ!! ಹೇಗೆ ಗೊತ್ತಾ?

Best Mobiles in India

English summary
Gmail is one of the most preferred and widely accepted email services amongst all. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X