ಗೂಗಲ್‌ ಅಕೌಂಟ್‌ ಹೊಂದಿದ ಬಳಕೆದಾರರಿಗೆ ಉಪಯುಕ್ತವಾದ ಯುಆರ್‌ಎಲ್‌ಗಳು

By Ashwath
|

ಗೂಗಲ್‌ ತನ್ನ ಬಳಕೆದಾರರಿಗೆ ನೆರವಾಗಲು ವಿವಿಧ ಸೇವೆಗಳನ್ನು ಆರಂಭಿಸಿದೆ.ಈ ಸೇವೆಗಳನ್ನು ಪ್ರತಿನಿತ್ಯ ಬಳಸದಿದ್ದರೂ ಬಳಕೆದಾರರು ತಿಳಿದಿರುವುದು ಅತ್ಯಗತ್ಯ. ಈ ಸೇವೆಗಳ ಉಪಯೋಗ ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಹೀಗಾಗಿ ಇಲ್ಲಿ ಗೂಗಲ್‌‌ ಬಳಕೆದಾರರು ತಿಳಿಯಲೇಬೇಕಾದ ಹತ್ತು ಉಪಯುಕ್ತವಾದ ಯುಆರ್‌ಎಲ್‌ ಲಿಂಕ್‌ಗಳ ಮಾಹಿತಿಯಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ:ಗೂಗಲ್‌ ಕ್ರೋಮ್‌ ಬ್ರೌಸರ್‌ನಲ್ಲಿ ಸುಲಭವಾಗಿ ಸರ್ಚ್‌ ಮಾಡಲು ಟಿಪ್ಸ್‌

#1

#1


ಗೂಗಲ್‌ ನಿಮ್ಮ ಆಸಕ್ತಿ,ಅಭಿರುಚಿಗೆ ತಕ್ಕಂತೆ ಫಲಿತಾಂಶವನ್ನು ತೋರಿಸುತ್ತದೆ.'Ads Settings' ಹೋಗಿ ನಿಮಗೆ ಬೇಕಾದ ಇಷ್ಟವಾದ ವಿಚಾರವನ್ನು ಆರಿಸಿಕೊಂಡು ಸುಲಭವಾಗಿ ಗೂಗಲ್‌ನಲ್ಲಿ ಹುಡುಕಬಹುದು.
ಕ್ಲಿಕ್‌ ಮಾಡಿ: www.google.com/ads/preferences

#2

#2


ನಿಮ್ಮ ಗೂಗಲ್‌ ಅಕೌಂಟ್‌ನಲ್ಲಿರುವ ಎಲ್ಲಾ ದತ್ತಾಂಶಗಳನ್ನು ಡೌನ್‌ಲೋಡ್‌‌ ಮಾಡಲು ಸಾಧ್ಯವಿದೆ.ಫೋಟೋ,ಕಾಂಟಾಕ್ಟ್‌‌‌‌,ಜಿಮೇಲ್‌‌‌ ಸಂದೇಶ, ಯೂಟ್ಯೂಬ್‌ ವಿಡಿಯೋ, ಗೂಗಲ್‌ ಡ್ರೈವ್‌ನ ದತ್ತಾಂಶಗಳನ್ನು ಟೇಕ್‌ಔಟ್‌‌ಗೆ ಹೋಗಿ ಡೌನ್‌ಲೋಡ್‌‌ ಮಾಡಬಹುದು.

ಕ್ಲಿಕ್‌ ಮಾಡಿ:www.google.com/takeout

#3

#3


ನೀವು ಬರೆದ ಯಾವುದೋ ವಿಚಾರವನ್ನು ಬೇರೆ ಯಾವುದೋ ವೆಬ್‌ಸೈಟ್‌ ನಕಲು ಮಾಡಿ ಅವರ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದರೆ, ಆ ವೆಬ್‌ಸೈಟ್‌ ವಿರುದ್ದ ಗೂಗಲ್‌ಗೆ ಡಿಎಂಸಿಎ(Digital Millennium Copyright Act) ದೂರು ನೀಡಬಹುದು.ನಿಮ್ಮ ದೂರು ಸ್ವೀಕೃತವಾದಲ್ಲಿ ಗೂಗಲ್‌‌ ತನ್ನಸರ್ಚ್‌ ಫಲಿತಾಂಶದಲ್ಲಿ ಆ ಪೇಜ್‌‌ ಕಾಣದಂತೆ ಮಾಡುತ್ತದೆ.
ಕ್ಲಿಕ್‌ ಮಾಡಿ: www.support.google.com/legal

#4

#4


ಗೂಗಲ್‌ ಸರ್ಚ್‌ನಲ್ಲಿ ಏನು ಟೈಪ್‌ ಮಾಡುತ್ತಿರೋ ಆ ಎಲ್ಲಾ ಕೀ ವರ್ಡ್‌‌ ಮಾಹಿತಿ,ಭೇಟಿ ನೀಡಿದ ವೆಬ್‌ ತಾಣಗಳನ್ನು ಗೂಗಲ್‌‌ನಲ್ಲಿ ನೋಡಬಹುದು.
ಕ್ಲಿಕ್‌ ಮಾಡಿ: www.history.google.com

#5

#5


ಗೂಗಲ್‌ ಅಕೌಂಟ್‌ ಹೊಂದಿದ್ದು 9ತಿಂಗಳ ಕಾಲ ಅದನ್ನು ಬಳಸದೇ ಇದ್ದಲ್ಲಿ ಗೂಗಲ್‌ ಆಟೋಮ್ಯಾಟಿಕ್‌ ಆಗಿ ಆ ಅಕೌಂಟ್‌‌ನ್ನು ಡಿಲೀಟ್‌ ಮಾಡುತ್ತದೆ. ಗೂಗಲ್‌ ತನ್ನ ಜಿಮೇಲ್‌ ಪ್ರೋಗ್ರಾಮ್ ನೀತಿಯಲ್ಲಿ ಈ ವಿಚಾರವನ್ನು ಸ್ಪಷ್ಟವಾಗಿ ತಿಳಿಸಿದೆ.

ಕ್ಲಿಕ್‌ ಮಾಡಿ: www.google.com/mail/help

#8

#8


ಗೂಗಲ್‌ ಇತರ ಪ್ರೊಡಕ್ಟ್‌‌ಗಳಲ್ಲಿ ನೀವು ಏನೇನು ಇಲ್ಲಿಯವರಗೆ ಆಕ್ಟಿವಿಟಿ ಮಾಡಿದ್ದೀರಿ ಆ ಎಲ್ಲಾ ಮಾಹಿತಿಗಳು ನಿಮಗೆ ಒಂದೇ ಪುಟದಲ್ಲಿ ನೋಡಬೇಕಿದ್ದಲ್ಲಿ ಡ್ಯಾಶ್‌ಬೋರ್ಡ್‌‌ಗೆ ಹೋಗಿ ನೋಡಬಹುದು.

ಕ್ಲಿಕ್‌ಮಾಡಿ: www.google.com/settings/dashboard

#6

#6


ನಿಮ್ಮ ಗೂಗಲ್‌ ಅಕೌಂಟ್‌ನ್ನು ಬೇರೆ ವ್ಯಕ್ತಿಗಳು ಬಳಸುತ್ತಿದ್ದಾರೆ ಎನ್ನುವ ಸಂಶಯ ನಿಮಗಿದ್ದಲ್ಲಿ ಅದನ್ನು ಗೂಗಲ್‌ನಲ್ಲಿ ಪರೀಕ್ಷಿಸಬಹುದು. ಸಂಶಯ ನಿವಾರಣೆಗೆ ಯಾವ ಬ್ರೌಸರ್‌,ಯಾವ ಸ್ಥಳದಿಂದ ಜಿಮೇಲ್‌ ಅಕೌಂಟ್‌‌ ಲಾಗಿನ್‌ ಆಗಿದೆ ಎಂಬುದನ್ನು ನೋಡಬಹುದು.
ಕ್ಲಿಕ್‌ ಮಾಡಿ: www.security.google.com/settings/security

#7

#7


ನಿಮ್ಮ ಖಾಸಗಿ ಮಾಹಿತಿಯನ್ನು ನಿಮ್ಮ ಅನುಮತಿಯಿಲ್ಲದೇ ಯಾರು ಬೇಕಾದರೂ ಇಂಟರ್‌ನೆಟ್‌ನಲ್ಲಿ ಹಾಕಬಹುದು. ಹೀಗಾಗಿ ಯಾರೆಲ್ಲ ಅನುಮತಿಯಿಲ್ಲದೇ ನಿಮ್ಮ ಮಾಹಿತಿ ಉದಾ.ಇಮೇಲ್‌,ಫೋನ್‌ ನಂಬರ್‌ ಇತ್ಯಾದಿ ಮಾಹಿತಿಗಳು ಆನ್‌ಲೈನ್‌ನಲ್ಲಿ ಪ್ರಕಟಗೊಂಡಿದ್ದಲ್ಲಿ ಆ ಮಾಹಿತಿಯನ್ನು ಗೂಗಲ್‌ ಆಲರ್ಟ್‌ ಮೂಲಕ ತಿಳಿಯಬಹುದು.ನಿಮ್ಮ ಮಾಹಿತಿಯನ್ನು ಈ ವಿಭಾಗದಲ್ಲಿ ದಾಖಲಿಸಿದ್ದರೆ ಸುಲಭವಾಗಿ ಯಾರೆಲ್ಲ ನಿಮ್ಮ ವೆಬ್‌ಸೈಟ್‌‌,ಹೆಸರು ದಾಖಲಿಸಿದ್ದಾರೆ ಎನ್ನುವುದನ್ನು ಪತ್ತೆಹಚ್ಚಬಹುದು.

ಕ್ಲಿಕ್‌ ಮಾಡಿ: www.google.com/settings/me

#9

#9


ಯಾವ ಬ್ರೌಸರ್‌ ಮೂಲಕ ಗೂಗಲ್‌ ಅಕೌಂಟ್‌ ಓಪನ್‌ ಮಾಡಿದ್ದೀರಿ?ಎಷ್ಟು ಸಂಖ್ಯೆ ಇಮೇಲ್‌‌ ಕಳುಹಿಸಿದ್ದೀರಿ? ಎಷ್ಟು ಇಮೇಲ್‌ ನಿಮ್ಮ ಅಕೌಂಟ್‌ಗೆ ಬಂದಿದೆ ಎನ್ನುವುದನ್ನು ನೋಡಬಹುದು.

ಕ್ಲಿಕ್‌ಮಾಡಿ: www.google.com/settings/dashboard

#10

#10


ಒಂದುಪತ್ರಿಕೆ ಪ್ರಸಾರದ ಮಾಹಿತಿ ತಿಳಿಯುವುದು ಎಬಿಸಿ ರಿಪೋರ್ಟ್‌ನಿಂದ.ವಾಹಿನಿಗಳ ಪ್ರಸಾರದ ಮಾಹಿತಿ ಟಿಆರ್‌ಪಿ ರೇಟಿಂಗ್‌ನಿಂದ ತಿಳಿದರೆ ವೆಬ್‌ಸೈಟ್‌‌ಗಳಿಗೆ ಓದುಗರ ಮಾಹಿತಿ ತಿಳಿಯುವುದು ಗೂಗಲ್‌ ಅನಾಲಿಟಿಕ್ಸ್‌ನಿಂದ.ಒಂದು ವೆಬ್‌ಸೈಟ್‌‌ಗೆ ಎಷ್ಟು ಜನ(ಟ್ರಾಫಿಕ್‌) ಬರುತ್ತಿದ್ದಾರೆ ಎಂದು ಆ ವೆಬ್‌ಸೈಟ್‌ಗೆ ತಿಳಿಸುವುದು ಗೂಗಲ್‌ ಅನಾಲಿಟಿಕ್ಸ್‌. ಒಂದು ಸುದ್ದಿಯನ್ನು ಸದ್ಯ ಎಷ್ಟು ಜನ ಓದುತ್ತಿದ್ದಾರೆ? ದೇಶದ ಯಾವ ಮೂಲೆಯಲ್ಲಿ ಓದುತ್ತಿದ್ದಾರೆ? ಯಾವ ಬ್ರೌಸರ್‌ ಮೂಲಕ ವೆಬ್‌ಸೈಟ್‌ ಬಂದಿದ್ದಾರೆ ಸೇರಿದಂತೆ ಆ ವೆಬ್‌ಸೈಟ್‌‌ನ ಪೇಜ್‌ ವ್ಯೂನ ಸಂಪೂರ್ಣ‌ ಮಾಹಿತಿ ಈ ಗೂಗಲ್‌ ಅನಾಲಿಟಿಕ್ಸ್‌ನಲ್ಲಿ ಕಾಣುತ್ತಿರುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X