ಹೊಸ ಜಿಯೋ ಸಿಮ್'ನೊಂದಿಗೆ 'ಹ್ಯಾಪಿ ನ್ಯೂ ಇಯರ್' ಆಫರ್ ಪಡೆಯುವುದು ಹೇಗೆ?

ಹೊಸದಾಗಿ ರಿಲಾಯನ್ಸ್ ಜಿಯೋ ಸಿಮ್ ಪಡೆಯುವವರು, ಹ್ಯಾಪಿ ನ್ಯೂ ಇಯರ್ ಆಫರ್ ಪಡೆಯುವುದು ಹೇಗೆ ಎಂದು ತಿಳಿಯಿರಿ.

By Suneel
|

ರಿಲಾಯನ್ಸ್ ಜಿಯೋ ಮುಖ್ಯಸ್ಥ 'ಮುಕೇಶ್ ಅಂಬಾನಿ' ರವರು ತಮ್ಮ ಭಾಷಣದಲ್ಲಿ 'ಹ್ಯಾಪಿ ನ್ಯೂ ಇಯರ್‌ ಆಫರ್' ಹೊಸ ಗ್ರಾಹಕರು ಮತ್ತು ಹಳೆ ಗ್ರಾಹಕರಿಬ್ಬರಿಗೂ ಲಭ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಡಿಸೆಂಬರ್ 4 ರಿಂದ ಜಿಯೋ ಸಿಮ್‌ ಪಡೆದವರು ಹ್ಯಾಪಿ ನ್ಯೂ ಇಯರ್‌ ಆಫರ್ ಅನ್ನು ಸಿಮ್‌ ಜೊತೆಯಲ್ಲೇ ಪಡೆಯುತ್ತಾರೆ ಎಂದು ಹೇಳಿದ್ದಾರೆ.

ಅಂದಹಾಗೆ ಹಳೆಯ ಗ್ರಾಹಕರಿಗೆ ರಿಲಾಯನ್ಸ್ ಜಿಯೋ ವೆಲ್ಕಮ್ ಆಫರ್ ಡಿಸೆಂಬರ್ 31 ರವರೆಗೆ ಮುಂದುವರೆಯಲಿದ್ದು, ಹ್ಯಾಪಿ ನ್ಯೂ ಇಯರ್‌ ಆಫರ್ ಜನವರಿ ಆರಂಭದಿಂದ ಅಪ್ಲೇ ಅಗಲಿದ್ದು, ಆತಂಕ ಪಡುವ ಅವಶ್ಯಕತೆ ಇಲ್ಲ. ಕೆಲವು ಸಂಶಯಗಳು ಈಗಾಗಲೇ ಬಗೆಹರಿದಿರಬೇಕು. ಆದರೆ ರಿಲಾಯನ್ಸ್ ಜಿಯೋ ಸಿಮ್ ಅನ್ನು ಹೊಸದಾಗಿ ಖರೀದಿಸುವವರು ಹ್ಯಾಪಿ ನ್ಯೂ ಇಯರ್‌ ಆಫರ್ (Happy New Year Offer) ಅನ್ನು ಪಡೆಯುವುದು ಹೇಗೆ ತಿಳಿಯಿರಿ.

 ಮೈಜಿಯೋ ಆಪ್‌ ಡೌನ್‌ಲೋಡ್‌ ಮಾಡಿ

ಮೈಜಿಯೋ ಆಪ್‌ ಡೌನ್‌ಲೋಡ್‌ ಮಾಡಿ

ರಿಲಾಯನ್ಸ್ ಜಿಯೋ ಅಧಿಕೃತ ವೆಬ್‌ಸೈಟ್ ಹೇಳಿರುವ ಪ್ರಕಾರ, ಮೊದಲಿಗೆ 4G ಸ್ಮಾರ್ಟ್‌ಫೋನ್‌ ಬಳಕೆದಾರರಾಗಿದ್ದಲ್ಲಿ ಮೈಜಿಯೋ ಆಪ್‌ ಅನ್ನು ಡೌನ್‌ಲೋಡ್‌ ಮಾಡಿ.

 'Get SIM' ಕ್ಲಿಕ್ ಮಾಡಿ

'Get SIM' ಕ್ಲಿಕ್ ಮಾಡಿ

ಮೈಜಿಯೋ ಆಪ್‌ ಯಶಸ್ವಿಯಾಗಿ ಡೌನ್‌ಲೋಡ್‌ ಆದ ನಂತರ ಬಳಕೆದಾರರು ಆಪ್‌ ಲಾಂಚ್‌ ಮಾಡಿ 'Get SIM' ಆಪ್ಶನ್ ಕ್ಲಿಕ್ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿವರಗಳನ್ನು ಎಂಟರ್ ಮಾಡಿ

ವಿವರಗಳನ್ನು ಎಂಟರ್ ಮಾಡಿ

ಪೇಜ್‌ ಒಂದು ಓಪನ್‌ ಆಗುತ್ತದೆ. ಅಲ್ಲಿ ಬಳಕೆದಾರರು ತಮ್ಮ ಬಗೆಗಿನ ವಿವರಣೆಯನ್ನು ನಿಖರವಾಗಿ ಹೆಸರು, ಸಂಪರ್ಕ ನಂಬರ್, ಎಲ್ಲವನ್ನು ಎಂಟರ್‌ ಮಾಡಿ. ನಂತರ ಆಪ್‌ ಒಮ್ಮೆ ಒನ್‌ ಟೈಮ್‌ ಪಾಸ್‌ವರ್ಡ್‌ ಸೆಂಡ್‌ ಮಾಡುತ್ತದೆ. ಪಾಸ್‌ವರ್ಡ್‌ ಅನ್ನು ಆಪ್‌ನಲ್ಲಿ ನೀಡಬೇಕು.

 ಬಾರ್‌ಕೋಡ್‌ ಜೆನೆರೇಟ್ ಮಾಡಿ, ಜಿಯೋ ಸ್ಟೋರ್ ಲೊಕೇಟ್ ಮಾಡಿ

ಬಾರ್‌ಕೋಡ್‌ ಜೆನೆರೇಟ್ ಮಾಡಿ, ಜಿಯೋ ಸ್ಟೋರ್ ಲೊಕೇಟ್ ಮಾಡಿ

ಒನ್‌ ಟೈಮ್‌ ಪಾಸ್‌ವರ್ಡ್‌ ನೀಡಿದ ನಂತರ ಬಾರ್‌ಕೋಡ್ ಜೆನೆರೇಟ್ ಆಗುತ್ತದೆ. ನಂತರ ಕೊನೆಯದಾಗಿ ಅಗತ್ಯವಾಗಿ ಬೇಕಿರುವ ಡಾಕ್ಯುಮೆಂಟ್ ತಿಳಿಸುವುದರೊಂದಿಗೆ ನಿಖರ ಮಾಹಿತಿ ನೀಡಲಾಗುತ್ತದೆ. ರಿಲಾಯನ್ಸ್ ಜಿಯೋ ಸ್ಟೋರ್‌ಗೆ ಹೋಗುವ ವೇಳೆ ಗುರುತಿನ ಚೀಟಿಗಾಗಿ ನಿಮ್ಮ ಆಧಾರ್ ಕಾರ್ಡ್‌ ತೆಗೆದುಕೊಂಡು ಹೋಗಿ. ಜಿಯೋ ಸಿಮ್‌ ಖರೀದಿಸಲು ಅಗತ್ಯವಾಗಿ ಬೇಕು.

 ಜಿಯೋ ಸಿಮ್‌ ಆಕ್ಟಿವೇಟ್ ಮಾಡಿ

ಜಿಯೋ ಸಿಮ್‌ ಆಕ್ಟಿವೇಟ್ ಮಾಡಿ

ರಿಲಾಯನ್ಸ್ ಜಿಯೋ ಡಿಜಿಟಲ್ ಸ್ಟೋರ್‌ಗೆ ಹೋಗಿ ನಿಮ್ಮ ಫೊಟೋಕಾಪಿ ಡಾಕ್ಯುಮೆಂಟ್ ನೀಡಿ. ಒರಿಜಿನಲ್ ಡಾಕ್ಯುಮೆಂಟ್ ನಿಮ್ಮ ಬಳಿ ಇರಲಿ. ಅತಿವೇಗವಾಗಿ ಜಿಯೋ ಸಿಮ್ ಪಡೆಯಿರಿ.

ನಂತರ ಜಿಯೋ ಬಳಕೆದಾರರು 1977 ಗೆ ಡಯಲ್‌ ಮಾಡಿ ಸಿಮ್‌ ಅನ್ನು ಟೆಲಿವೆರಿಫೈ ಮಾಡಿ ಜಿಯೋ ನಂಬರ್ ಆಕ್ಟಿವೇಟ್ ಮಾಡಬಹುದು. ನಂತರ ನಿಮಗೆ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಬೆನಿಫಿಟ್ ಸಿಗುತ್ತದೆ.

ಹ್ಯಾಪಿ ನ್ಯೂ ಇಯರ್‌ ಆಫರ್‌ನೊಂದಿಗೆ ಸಿಮ್ ಮನೆಗೆ ಡೆಲಿವರಿ ಪಡೆಯಿರಿ

ಹ್ಯಾಪಿ ನ್ಯೂ ಇಯರ್‌ ಆಫರ್‌ನೊಂದಿಗೆ ಸಿಮ್ ಮನೆಗೆ ಡೆಲಿವರಿ ಪಡೆಯಿರಿ

ಜಿಯೋ ಅಧಿಕೃತ ವೆಬ್‌ಸೈಟ್‌ಗೆ ಹೋಗಿ, 'SIM home delivery' ಆಪ್ಶನ್ ಕ್ಲಿಕ್ ಮಾಡಿ. ನಂತರ ನಿಮ್ಮ ವಿವರಣೆ ಎಂಟರ್ ಮಾಡಿ ಜಿಯೋ ಕಾರ್ಯನಿರ್ವಾಹಕ ಜಿಯೋ ಸಿಮ್ ಮನೆಗೆ ಡೆಲಿವರಿ ಮಾಡಲು ಮನವಿ ಮಾಡಿ.
ನಂತರ ಜಿಯೋ ಸಿಮ್ ನಿಮ್ಮ ಮನೆಗೆ 30 ನಿಮಿಷಗಳಲ್ಲಿ ಬರುತ್ತದೆ. ಆದರೆ ಗುರುತಿನ ಚೀಟಿ ಡಾಕ್ಯುಮೆಂಟ್ ಮತ್ತು ಆಧಾರ್ ಕಾರ್ಡ್‌ ಅನ್ನು ಸಿದ್ಧವಾಗಿ ಇಟ್ಟುಕೊಳ್ಳಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Here is How To Get Jio New sim with Happy New Year Offer. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X