ಆಂಡ್ರಾಯ್ಡ್‌ನಲ್ಲಿ ಇಂಟರ್ನೆಟ್‌ ಇಲ್ಲದೇ ಫೋಟೋ ಆನಿಮೇಷನ್‌ ಕ್ರಿಯೇಟ್ ಹೇಗೆ?

ಆಂಡ್ರಾಯ್ಡ್ ಬಳಕೆದಾರರು ಇಂಟರ್ನೆಟ್ ಸಂಪರ್ಕ ಇಲ್ಲದೇ ಗೂಗಲ್‌ ಫೋಟೋಸ್‌ ಆಪ್‌ನಲ್ಲಿ ಫೋಟೋ ಆನಿಮೇಷನ್ ಮಾಡುವುದು ಹೇಗೆ ಎಂದು ತಿಳಿಯಿರಿ.

Written By:

ಗೂಗಲ್‌ ಫೋಟೋ ಆಪ್ ತನ್ನ ಬಳಕೆದಾರರಿಗಾಗಿ ಅತ್ಯಾಕರ್ಷಕ ಅಪ್‌ಡೇಟ್‌ಗಳನ್ನು ಹೊರತಂದಿದೆ. ಆಪ್‌ ಬಳಸಲು ಹೆಚ್ಚು ಪ್ರೇರಣೆ ನೀಡುವಂತಹ ಹೊಸ ಹೊಸ ಫೀಚರ್‌ಗಳನ್ನು ಗೂಗಲ್ ಫೋಟೋಸ್ ಅಪ್‌ಡೇಟ್ ಪಡೆದಿದೆ.

ಗೂಗಲ್‌ ಫೋಟೋದ(Photo) ಲೇಟೆಸ್ಟ್‌ ಅಪ್‌ಡೇಟ್‌ನಿಂದ ಆಂಡ್ರಾಯ್ಡ್ ಬಳಕೆದಾರರು ಫೋಟೋಗಳ ಆಯೋಜನೆ, ಎಡಿಟ್, ಶೇರ್‌ ಮತ್ತು ಫೋಟೋ ಆನಿಮೇಷನ್‌ ಮಾಡಬಹುದು. ಅಲ್ಲದೇ ಉತ್ತಮವಾಗಿ ಫೋಟೋಗಳನ್ನು ಮೊಬೈಲ್‌ ಗ್ಯಾಲರಿಯಲ್ಲಿ ಶಾರ್ಟ್‌ ಔಟ್‌ ಮಾಡಬಹುದು ಮತ್ತು ಸ್ವತಃ ತಾವೆ ಫೋಟೋ ಆನಿಮೇಷನ್ ಅನ್ನು ಇಂಟರ್ನೆಟ್‌ಗೆ ಕನೆಕ್ಟ್‌ ಆಗದೇ ಮಾಡಬಹುದು.

ಆಂಡ್ರಾಯ್ಡ್ ಫೋನ್‌ ರೂಟ್ ಮಾಡಲೇಬಾರದು: 5 ಕಾರಣಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಹೊಸ ಫೀಚರ್‌ಗಳ ಬಗ್ಗೆ

ಗೂಗಲ್ ಫೋಟೋ ಪ್ರಸ್ತುತದಲ್ಲಿ ಆಂಡ್ರಾಯ್ಡ್ ಬಳಕೆದಾರರು ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ಫೋಟೋ ಆನಿಮೇಷನ್‌ ಮಾಡಲು ಅವಕಾಶ ನೀಡುತ್ತದೆ. ಈ ಫೀಚರ್‌ನಿಂದ ಬಳಕೆದಾರರು 50 ಫೋಟೋಗಳನ್ನು ಒಮ್ಮೆಲೇ ಸೆಲೆಕ್ಟ್ ಮಾಡಿ ಆನಿಮೇಟೆಡ್‌ ವೀಡಿಯೋಗಳನ್ನು ಕ್ರಿಯೇಟ್ ಮಾಡಬಹುದು.

ಈ ಹೊಸ ಫೀಚರ್‌ಗಳನ್ನು ಎಂಜಾಯ್‌ ಮಾಡಲು, ಆಂಡ್ರಾಯ್ಡ್ ಬಳಕೆದಾರರು 'ಗೂಗಲ್‌ ಫೋಟೋಸ್‌' ಲೇಟೆಸ್ಟ್ ವರ್ಸನ್‌ ಅನ್ನು ಪಡೆಯಬೇಕು. ಲೇಟೆಸ್ಟ್‌ ವರ್ಸನ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಅಪ್‌ಡೇಟ್‌ ಮಾಡಿಕೊಳ್ಳಬಹುದು. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಕೆದಾರರು ಫೋಟೋ ಆನಿಮೇಷನ್‌ ಕ್ರಿಯೇಟ್ ಹೇಗೆ ಎಂದು ಲೇಖನದ 4 ಹಂತಗಳನ್ನು ಓದಿ ತಿಳಿಯಿರಿ.

ಗೂಗಲ್ ಪೋಟೋಸ್‌ ಆಪ್‌ ಅಪ್‌ಡೇಟ್‌ ಮಾಡಿ

ಮೊದಲಿಗೆ ಆಂಡ್ರಾಯ್ಡ್ ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌'ಗೆ ಹೋಗಿ, ಗೂಗಲ್‌ ಫೋಟೋಸ್‌ನ ಲೇಟೆಸ್ಟ್‌ ವರ್ಸನ್ ಅನ್ನು ಅಪ್‌ಡೇಟ್‌ ಮಾಡಿ.

ಇಂಟರ್ನೆಟ್ ಡಿಸ್‌ಕನೆಕ್ಟ್ ಮಾಡಿ ಮತ್ತು ಗೂಗಲ್ ಫೋಟೋಸ್ ಓಪನ್‌ ಮಾಡಿ

ಗೂಗಲ್‌ ಫೋಟೋಸ್ ಆಪ್‌ ಅಪ್‌ಡೇಟ್‌ ಮತ್ತು ಇನ್‌ಸ್ಟಾಲ್ ನಂತರ, ಬಳಕೆದಾರರು ಇಂಟರ್ನೆಟ್ ಡಿಸ್‌ಕನೆಕ್ಟ್ ಮಾಡಿ, ಆಪ್‌ ಓಪನ್‌ ಮಾಡಿ.

'Create New Animation' ಟ್ಯಾಪ್‌ ಮಾಡಿ

ಗೂಗಲ್ ಫೋಟೋಸ್ ಆಪ್‌ ಓಪನ್‌ ಮಾಡಿದ ನಂತರ, ಆಪ್‌ ಸ್ಕ್ರೀನ್‌ನ ಬಲಭಾಗದ ಮೇಲ್ಭಾಗದಲ್ಲಿ 'Create New Animation' ಆಪ್ಶನ್ ಟ್ಯಾಪ್‌ ಮಾಡಿ.

ಫೋಟೋಗಳ ಆಯ್ಕೆ ಮಾಡಿ ಮತ್ತು ಆನಿಮೇಷನ್‌ ಕ್ರಿಯೇಟ್ ಮಾಡಿ

ನ್ಯೂ ಆನಿಮೇಷನ್ ಕ್ರಿಯೇಟ್ ಆಪ್ಶನ್‌ ಮೇಲೆ ಕ್ಲಿಕ್ ಮಾಡಿದ ನಂತರ, ಬಳಕೆದಾರರು ಫೋಟೋ ಆಯ್ಕೆಗಾಗಿ ಕೇಳಲಾಗುತ್ತದೆ. ಬಳಕೆದಾರರು 50 ಫೋಟೋಗಳ ವರೆಗೂ ಸೆಲೆಕ್ಟ್ ಮಾಡಿ ನಂತರ, ಸ್ಕ್ರೀನ್‌ನಲ್ಲಿ ಡಿಸ್‌ಪ್ಲೇ ಆಗುವ ಕ್ರಿಯೇಟ್ ಆಪ್ಶನ್‌ ಮೇಲೆ ಕ್ಲಿಕ್ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 English summary
Here's How Android Users Can Create Photo Animation Without Internet. To know more visit kannada.gizbot.com
Please Wait while comments are loading...
Opinion Poll

Social Counting