ಆನ್‌ಲೈನ್‌ನಲ್ಲಿ ಸರ್ಕಾರಿ ದರದಲ್ಲಿ (250ರೂ.) ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಹೇಗೆ? ಫುಲ್‌ ಡೀಟೆಲ್ಸ್!!

ಹಾಗಾಗಿ, ಆನ್‌ಲೈನ್‌ನಲ್ಲಿಯೇ ಡಿಎಲ್‌ಗೆ ಅಪ್ಲಿಕೇಶನ್ ತುಂಬಿ ಕೇವಲ 30 ರೂಪಾಯಿಗಳಲ್ಲಿ ಹೇಗೆ ಡಿಎಲ್ ಮಾಡಿಸುವುದು ಎಂಬುದನ್ನು ನಾವು ಪೂರ್ಣ ಡೀಟೆಲ್ಸ್ ಮೂಲಕ ತಿಳಿಸಿಕೊಡುತ್ತೇವೆ.

By Bhaskar
|

ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಎಂದರೆ ಸುಲಭದಲ್ಲ. ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡಿ ತಿಂಗಳುಗಟ್ಟಲೆ ಕಾಯಬೇಕು ಎಂದು ಎಲ್ಲರ ಭಾವನೆ. ಆದರೆ, ಸರಿಯಾದ ಮಾರ್ಗದಲ್ಲಿ ಡಿಎಲ್‌ ಮಾಡಿಸುವುದು ಬಹಳ ಸುಲಭ ಮತ್ತು ಕಡಿಮೆ ಬೆಲೆಯ ಕೆಲಸ ಎನ್ನಬಹುದು.

ಹಾಗಾಗಿ, ಆನ್‌ಲೈನ್‌ನಲ್ಲಿಯೇ ಡಿಎಲ್‌ಗೆ ಅಪ್ಲಿಕೇಶನ್ ತುಂಬಿ ಸರ್ಕಾರಿ ದರದಲ್ಲಿ(250ರೂ.) ಹೇಗೆ ಡಿಎಲ್ ಮಾಡಿಸುವುದು ಎಂಬುದನ್ನು ನಾವು ಪೂರ್ಣ ಡೀಟೆಲ್ಸ್ ಮೂಲಕ ತಿಳಿಸಿಕೊಡುತ್ತೇವೆ. ಎಲ್ಲಾ ಅಂಶಗಳನ್ನು ತಿಳಿದು ದಲ್ಲಾಳಿಗಳಿಂದ ಮೋಸ ಹೋಗುವುದರಿಂದ ತಪ್ಪಿಸಿಕೊಳ್ಳಿರಿ.!!

ನಮೂನೆ -2 (CMVR-2): ಅರ್ಜಿ ತುಂಬಿರಿ.

https://sarathi.nic.in ವೆಬ್‌ಸೈಟ್‌ ಲಿಂಕ್‌ ಮೇಲೆ ಕ್ಲಿಕ್ ಮಾಡಿ ನಂತರ ತೆರೆಯುವ ಆನ್‌ಲೈನ್‌ ಅಪ್ಲಿಕೇಶನ್ ತುಂಬಿರಿ. ಎಲ್ಲಾ ಸರಿಯಾದೆ ಮಾಹಿತಿಗಳನ್ನು ತುಂಬಿದ ನಂತರ ಸಬ್‌ಮಿಟ್ ಕೊಡಿ. ನಂತರ ನಿಮ್ಮ ಅರ್ಜಿ ಕ್ರಿಯೇಟ್ ಆಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿ, ನಿಮ್ಮ ಸಹಿಯನ್ನು ಹಾಕಿರಿ. ನಂತರ ಮುಂದೆ ಏನು ಮಾಡಬೇಕು? ಹೇಗೆ ಡಿಎಲ್‌ ಪಡೆಯುವುದು ಎಂಬುದನ್ನು ಕೆಳಗಿನ ಸ್ಲೈಡರ್‌ ಮೂಲಕ ತಿಳಿಯಿರಿ.

#1.ಸಲ್ಲಿಸಬೇಕಾಗಿರುವ ಅರ್ಜಿ ಮತ್ತು ದಾಖಲೆಗಳು

#1.ಸಲ್ಲಿಸಬೇಕಾಗಿರುವ ಅರ್ಜಿ ಮತ್ತು ದಾಖಲೆಗಳು

  • ನಮೂನೆ -2 (CMVR-2): ಆನ್ ಲೈನ್ ಅರ್ಜಿ ತುಂಬಿದ ನಂತರ ಮುದ್ರಿತ ಪ್ರತಿಯನ್ನು (Print out) ತೆಗೆದುಕೊಳ್ಳಬೇಕು.
  • ವಯಸ್ಸಿನ ಪುರಾವೆ
  • ವಿಳಾಸ ಪುರಾವೆ
  • ಪಾಸ್ ಪೋರ್ಟ್ ಅಳತೆಯ 3 ಭಾವಚಿತ್ರಗಳು
  • ನಿಗದಿತ ಶುಲ್ಕ ರೂ.30/- (Rule 32 of CMV Rules 1989). ಈ ಶುಲ್ಕವನ್ನು ಸಂಬಂಧಿಸಿದ ಆರ್.ಟಿ.ಒ. ಕಛೇರಿಯ ನಗದು ಕೌಂಟರ್ನಲ್ಲಿ ಪಾವತಿ ಮಾಡಬೇಕು.
  • ಸಾರಿಗೆ ವಾಹನಗಳಿಗೆ ಕಲಿಕಾ ಚಾಲನಾ ಅನುಜ್ಞಾನಪತ್ರ ಸಲ್ಲಿಸುವವರು ವಯಸ್ಸಿನ ಲೆಕ್ಕ ಮಿತಿಯಿಲ್ಲದೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು.
    1. ವಯೋ ಮಿತಿ
    • ಸಾರಿಗೇತರ ವಾಹನಗಳು ಅಂದರೆ ಗೇರ್ ಮತ್ತು ಗೇರ್ ಇಲ್ಲದೆ ಇರುವ ವಾಹನಗಳು, ಲಘು ಮೋಟಾರು ವಾಹನಗಳು ಮತ್ತು ಇತರ ನಿರ್ದಿಷ್ಟ ವಾಹನಗಳ ಡಿಎಲ್‌ ಪಡೆಯಲು 18 ವರ್ಷ ತುಂಬಿದ ಮತ್ತು ಮೇಲ್ಪಟ್ಟ ಅರ್ಜಿದಾರರು ಅರ್ಹರಾಗಿರುತ್ತಾರೆ.
    • #3 ಸಾರಿಗೆ ವಾಹನಗಳಿಗೆ ಸಂಬಂಧಿಸಿದಂತೆ ಇತರ ಅವಶ್ಯಕ ಮಾಹಿತಿ.

      #3 ಸಾರಿಗೆ ವಾಹನಗಳಿಗೆ ಸಂಬಂಧಿಸಿದಂತೆ ಇತರ ಅವಶ್ಯಕ ಮಾಹಿತಿ.

      • ಸಾರಿಗೆ ವಾಹನಗಳಿಗೆ ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು ಪಡೆಯಲು ಕನಿಷ್ಠ 8ನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು. (CMVR -8).
        1. ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು
        • ಬೆಂಗಳೂರು ಜಿಲ್ಲೆ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಅರ್ಜಿದಾರರು ಆಯಾ ಜಿಲ್ಲೆಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು / ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.ಪರಿಶೀಲನೆಗಾಗಿ ಅರ್ಜಿ ಮತ್ತು ಮೂಲ ದಾಖಲೆಗಳೊಂದಿಗೆ ಅರ್ಜಿದಾರರು ಚಾಲನಾ ಅನುಜ್ಞಾ ಪ್ರಾಧಿಕಾರದ ಮುಂದೆ ಖುದ್ದಾಗಿ ಹಾಜರಾಗಬೇಕು.
        •  #3 ಪ್ರಾಥಮಿಕ ಪರೀಕ್ಷೆ

          #3 ಪ್ರಾಥಮಿಕ ಪರೀಕ್ಷೆ

          • ಈಗಾಗಲೇ ಕಲಿಕಾ ಚಾಲನಾ ಅನುಜ್ಞಾ ಪತ್ರ / ಚಾಲನಾ ಅನುಜ್ಞಾ ಪತ್ರ ಹೊಂದಿರುವವರಿಗೆ ಪ್ರಾಥಮಿಕ ಪರೀಕ್ಷೆಯಿಂದ(ಲಿಖಿತ / ಮೌಖಿಕ) ವಿನಾಯಿತಿ ನೀಡಲಾಗಿದೆ. ಇದು ಇತರ ಹೊಸ ವರ್ಗ ವಾಹನಗಳಿಗೆ ಅರ್ಜಿ ಸಲ್ಲಿಸುವವರಿಗೆ ಅನ್ವಯಿಸುತ್ತದೆ.
            1. ಪ್ರಾಧಮಿಕ ಪರೀಕ್ಷೆಯ ವಿಷಯಗಳು:
            • ಸಂಚಾರಿ ಚಿನ್ನೆಗಳು ಮತ್ತು ಸಿಗ್ನಲ್ ಗಳು, ಮೋಟಾರು ವಾಹನ ಕಾಯ್ದೆ 1989ರ ಅಧಿನಿಯಮ 118ರಲ್ಲಿ ನಮೂದಿಸಿರುವ ಸಂಚಾರಿ ನಿಯಂತ್ರಣ ನಿಯಮಗಳೂ
            • ವಾಹನವನ್ನು ಅಪಘಾತಕ್ಕೆ ಈಡಾಗಿದಾಗ ಅದರಿಂದ ಸಂಭವಿಸುವ ಪ್ರಾಣಾಪಾಯ ಹಾಗೂ ಗಾಯಗೊಳ್ಳುವಿಕೆ ಅಥವಾ ರಸ್ತೆಅಪಘಾತದ ಸಮಯದಲ್ಲಿ ವಾಹನ ಚಾಲಕ ನಿರ್ವಹಿಸಬೇಕಾದ ಕರ್ತವ್ಯಗಳು.
            • ಮಾನವ ರಹಿತ ರೈಲ್ವೇ ಕ್ರಾಸಿಂಗ್ ಗಳಲ್ಲಿ ವಾಹನ ಚಲಿಸುವಾಗ ಚಾಲಕರು ಕೈಗೊಳ್ಳಬೇಕಾದ ಪೂರ್ವ ಜಾಗರುಕತೆ ಬಗ್ಗೆ.
            • ವಾಹನ ಚಾಲನೆ ಸಮಯದಲ್ಲಿ ವಾಹನದಲ್ಲಿ ಕಡ್ಡಾಯವಾಗಿ ಇಡಬೇಕಾಗಿರುವ ದಾಖಲೆಗಳ ಬಗ್ಗೆ.
            • #4 ತೇರ್ಗಡೆಯಾದ ನಂತರ ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು ಎಲ್ಲಿ ಪಡೆಯಬೇಕು?

              #4 ತೇರ್ಗಡೆಯಾದ ನಂತರ ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು ಎಲ್ಲಿ ಪಡೆಯಬೇಕು?

Best Mobiles in India

English summary
In Karnataka, driving licence aspirants has to obtain a Learners License first and then obtain a Permanent Driving License in six months.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X