ಫೇಸ್‌ಬುಕ್ ಸರ್ಚ್‌ಹಿಸ್ಟರಿ ಡಿಲೀಡ್ ಮಾಡುವುದು ಹೇಗೆ? ಯಾವತ್ತಾದ್ರೂ ಟ್ರೈ ಮಾಡಿದ್ರಾ?!

ನೀವು ಫೆಸ್‌ಬುಕ್ ಅಕೌಂಟ್ ತೆರೆದ ದಿನದಿಂದಲೂ ಹಿಡಿದು ಇಲ್ಲಿಯವರೆಗೂ, ನೀವು ಲೈಕ್ ಮಾಡಿರುವ ಪೋಸ್ಟ್‌ಗಳು, ನೀವು ಸರ್ಚ್ ಮಾಡಿರುವ ಹೆಂರುಗಳು, ನೀವು ಮಾಡಿರುವ ಕಾಮೆಂಟ್‌ಗಳೆಲ್ಲವೂ ಫೇಸ್‌ಬುಕ್‌ನಲ್ಲಿಯೇ ಶೇಖರವಾಗಿರುತ್ತದೆ.!!

|

ಫೇಸ್‌ಬುಕ್ ಇಂದು ನಮ್ಮ ಸ್ವಂತಿಕೆಯ ಪ್ರಂಪಚ. ಅದರಲ್ಲಿ ನಾವು ಏನೆ ಮಾಡಿದರೂ ಯಾರೂ ತಿಳಿಯಲು ಸಾಧ್ಯವಿಲ್ಲ.! ಹಾಗಾಗಿ, ಇದು ನಮ್ಮ ಪ್ರಪಂಚ ಎಂದು ಬೇಕಾದುದ್ದೆಲ್ಲವನ್ನು ಸರ್ಚ್ ಮಾಡಿದರೆ ಅದು ಫೆಸ್‌ಬುಕ್‌ನಲ್ಲಿಯೇ ಉಳಿದುಕೊಂಡುಬಿಡುತ್ತದೆ.!!

ಹೌದು, ನೀವು ಫೆಸ್‌ಬುಕ್ ಅಕೌಂಟ್ ತೆರೆದ ದಿನದಿಂದಲೂ ಹಿಡಿದು ಇಲ್ಲಿಯವರೆಗೂ, ನೀವು ಲೈಕ್ ಮಾಡಿರುವ ಪೋಸ್ಟ್‌ಗಳು, ನೀವು ಸರ್ಚ್ ಮಾಡಿರುವ ಹೆಂರುಗಳು, ನೀವು ಮಾಡಿರುವ ಕಾಮೆಂಟ್‌ಗಳೆಲ್ಲವೂ ಫೇಸ್‌ಬುಕ್‌ನಲ್ಲಿಯೇ ಶೇಖರವಾಗಿರುತ್ತದೆ.!!

ಹಾಗಾಗಿ, ಇದು ಕೆಲವೊಮ್ಮೆ ಮುಜುಗರಕ್ಕೆ ಕಾರಣವಾಗಬಹುದು. ಫ್ರೆಂಡ್ಸ್, ಫ್ಯಾಮಿಲಿ ಸದಸ್ಯರು ನಿಮ್ಮ ಫೆಸ್‌ಬುಕ್‌ ಅನ್ನು ಅಚಾನಕ್‌ಆಗಿ ಬಳಕೆ ಮಾಡಬಹುದು. ಬಳಕೆ ಮಾಡುತ್ತಾ ಅವರು ಸರ್ಚ್ ಮಾಡಲು ಹೋದರೆ ನಿಮ್ಮ ಹಳೆಯ ಸರ್ಚ್ ಹಿಸ್ಟರಿಯನ್ನು ಅವರು ನೋಡಬಹುದು.!! ಹಾಗಾಗಿ, ಫೇಸ್‌ಬುಕ್‌ನಲ್ಲಿ ನೀವು ಸರ್ಚ್ ಮಾಡಿರುವ ಮಾಹಿತಿಯನ್ನು ಪರ್ಮನೆಂಟ್ ಆಗಿ ಡಿಲೀಟ್ ಮಾಡುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ..!!

'ಆಕ್ಟಿವಿಟಿ ಲಾಗ್' ಹುಡುಕಿ.!!

'ಆಕ್ಟಿವಿಟಿ ಲಾಗ್' ಹುಡುಕಿ.!!

ನಿಮ್ಮ ಫೇಸ್‌ಬುಕ್ ಪೇಜ್‌ಗೆ ಹೋಗಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ. ಇಲ್ಲಿ 'ಆಕ್ಟಿವಿಟಿ ಲಾಗ್' ಅಥವಾ 'ವ್ಯೂ ಆಕ್ಟವಿಟಿ ಲಾಗ್' ಆಪ್ಶನ್ ಆಯ್ಕೆ ಮಾಡಿ. ನಿಮ್ಮ ಕವರ್ ಪುಟದ ಬಲ ಮೇಲ್ಭಾಗದಲ್ಲಿ ಆಪ್ಶನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ ನಂತರ ನೀವು ಲೈಕ್ ಮಾಡಿದ, ರಿಯಾಕ್ಟ್ ಮಾಡಿದ, ಕಮೆಂಟ್ ಅಥವಾ ಶೇರ್ ಮಾಡಿದ ನಿಮ್ಮ ಚಟುವಟಿಕೆಗಳನ್ನು ಕಾಣಿಸುತ್ತವೆ.!!

ಮೋರ್ ಆಯ್ಕೆ ಮಾಡಿ.!!

ಮೋರ್ ಆಯ್ಕೆ ಮಾಡಿ.!!

ಫೋಟೋಗಳ, ಲೈಕ್ಸ್ ಮತ್ತು ಕಾಮೆಂಟ್ ಸೆಕ್ಷನ್‌ಗಳ ಕೆಳಗೆ ಎಡಭಾಗದಲ್ಲಿ ಮೋರ್ ಆಪ್ಶನ್ ಕಾಣಿಸುತ್ತದೆ. 'ಮೋರ್' ಆಪ್ಶನ್ ಕ್ಲಿಕ್ ಮಾಡಿ, ಕೆಲವು ವಿಸ್ತರಿತ ಪಟ್ಟಿಯು ತೆರೆಯುತ್ತದೆ. ಈ ಪಟ್ಟಿಯಲ್ಲಿ 'ಸರ್ಚ್' ಟ್ಯಾಬ್ ನಿಮಗೆ ಕಾಣಿಸುತ್ತದೆಅದನ್ನು ಕ್ಲಿಕ್ ಮಾಡಿ!!

ಸಾರ್ಟ್ ಆಗಿದೆ ನೋಡಿ.!

ಸಾರ್ಟ್ ಆಗಿದೆ ನೋಡಿ.!

ಸರ್ಚ್ ಟ್ಯಾಬ್‌ನಲ್ಲಿ ನಿಮಗೆ ಎಲ್ಲಾ ಪುಟಗಳ ಸಂಪೂರ್ಣ ಪಟ್ಟಿ ದೊರೆಯುತ್ತದೆ ಮತ್ತು ನೀವು ಇದುವರೆಗೆ ಹುಡುಕಾಡಿದ ಬಳಕೆದಾರರ ಪಟ್ಟಿ ಕೂಡ. ಸಮಯ, ದಿನಾಂಕ, ತಿಂಗಳು ಮತ್ತು ವರ್ಷವನ್ನು ಅನುಸರಿಸಿ ಈ ಹುಡುಕಾಟಗಳನ್ನು ಸಾರ್ಟ್ ಮಾಡಿರಲಾಗುತ್ತದೆ.!!

ಕ್ಲಿಯರ್ ಸರ್ಚಸ್' ಟ್ಯಾಬ್‌ ಕ್ಲಿಕ್ ಮಾಡಿ.!!

ಕ್ಲಿಯರ್ ಸರ್ಚಸ್' ಟ್ಯಾಬ್‌ ಕ್ಲಿಕ್ ಮಾಡಿ.!!

ಸಮಯ, ದಿನಾಂಕ, ತಿಂಗಳು ಮತ್ತು ವರ್ಷವನ್ನು ಅನುಸರಿಸಿ ಈ ಹುಡುಕಾಟಗಳನ್ನು ಸಾರ್ಟ್ ಮಾಡಿರಲಾಗಿರುವ ಪುಟದಲ್ಲಿಯೇ ಬಲ ಮೇಲ್ಭಾಗದಲ್ಲಿ 'ಕ್ಲಿಯರ್ ಸರ್ಚಸ್' ಟ್ಯಾಬ್‌ ಕಾಣಿಸುತ್ತದೆ. ಸರ್ಚ್ ಹಿಸ್ಟರಿ ಕ್ಲಿಯರ್ ಅನ್ನು ಶಾಶ್ವತವಾಗಿ ಅಳಿಸಲು ಅದರ ಮೇಲೆ ಕ್ಲಿಕ್ ಮಾಡಿ!!

Best Mobiles in India

English summary
Facebook keeps a record of everything you search for on its Website. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X