ಫೇಸ್‌ಬುಕ್ ಫೇಕ್ ಖಾತೆಯನ್ನು ಹುಡುಕುವುದು ಹೇಗೆ?

By Shwetha
|

ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಖಾತೆ ತೆರೆಯಲು ಕೆಲವೊಂದು ನಿಯಮಗಳು ನಿಶ್ಚಯವಾಗಿಯೂ ಇದೆ. ಆ ನಿಯಮಗಳನ್ನು ಅನುಸರಿಸಿಕೊಂಡು ಖಾತೆ ತೆರೆಯುವವರು ಕೆಲವೊಮ್ಮೆ ಸುಳ್ಳು ಖಾತೆಯ ಜಾಲಕ್ಕೆ ಬಲಿಯಾಗುತ್ತಾರೆ.

ಹಾಗಿದ್ದರೆ ಆ ಖಾತೆ ಸುಳ್ಳು ಎಂಬುದನ್ನು ಕಂಡುಹಿಡಿಯುವುದು ಹೇಗೆ? ಮತ್ತು ಅಂತಹವರು ನಿಮ್ಮ ಖಾತೆಯನ್ನು ಪ್ರವೇಶಿಸುವ ಮುನ್ನ ಅವರನ್ನು ತಡೆಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಇಲ್ಲಿ ನಾವು ನೀಡಿರುವ ಕೆಲವೊಂದು ಮಾಹಿತಿಗಳು ಖಂಡಿತ ನಿಮ್ಮ ಸುಳ್ಳು ಖಾತೆಯನ್ನು ತಿಳಿಯುವಲ್ಲಿ ಸಹಾಯ ಮಾಡುತ್ತದೆ.

ಫೇಸ್‌ಬುಕ್ ಫೇಕ್ ಖಾತೆಯನ್ನು ಹುಡುಕುವುದು ಹೇಗೆ?

*ಪ್ರೊಫೈಲ್‌ನಲ್ಲಿರುವ ಪೋಟೋಗಳಿಗಾಗಿ ನೋಡಿ. ಪೂರ್ಣವಾದ ಪ್ರೊಫೈಲ್‌ನಲ್ಲಿ ಕೇವಲ ಒಂದೇ ಒಂದು ಪೋಟೋ ಕಂಡುಬಂದಲ್ಲಿ ಆ ಖಾತೆ ಫೇಕ್ ಆಗಿದೆ ಎಂದರ್ಥ.

*ಸ್ಟೇಟಸ್ ಅಪ್‌ಡೇಟ್‌ಗಳಿಗಾಗಿ, ವಾಲ್ ಪೋಸ್ಟ್ ಮತ್ತು ಕಾಮೆಂಟ್‌ಗಳಿಗಾಗಿ ನೋಡಿ. ದೀರ್ಘ ಸಮಯದಿಂದ ಬಳಕೆದಾರ ಸ್ಟೇಟಸ್ ಅನ್ನು ಅಪ್‌ಡೇಟ್ ಮಾಡದಿದ್ದಲ್ಲಿ ಅಥವಾ ವಾಲ್‌ ಪೋಸ್ಟ್ ಅಥವಾ ಕಾಮೆಂಟ್ ಅನ್ನು ಮಂಡಿಸದಿದ್ದಲ್ಲಿ ಆ ಖಾತೆ ಫೇಕ್ ಎಂದು ಅರ್ಥ.

*ಇತ್ತೀಚಿನ ಚಟುವಟಿಕೆಗಳತ್ತ ಗಮನ ಕೊಡಿ. ಬಳಕೆದಾರ ಸ್ನೇಹಿತರನ್ನು ಮಾಡಿಕೊಂಡು ಯಾವುದೇ ಗುಂಪು ಅಥವಾ ಪುಟಗಳನ್ನು ಇಷ್ಟಪಡದಿದ್ದಲ್ಲಿ ಆ ಖಾತೆ ಸುಳ್ಳು ಎಂದು ಅರಿತುಬಿಡಿ.

*ಸ್ನೇಹಿತರ ಪಟ್ಟಿಯನ್ನು ನೋಡಿ. ವಿರುದ್ಧ ಲಿಂಗದ ಖಾತೆ ಕಂಡುಬಂದಲ್ಲಿ, ಈ ಖಾತೆಯನ್ನು ಮೋಜಿಗಾಗಿ ಅಥವಾ ಸಮಯ ಕಳೆಯಲು ರಚಿಸಲಾಗಿದೆ ಎಂದು ಭಾವಿಸಿ.

*ಮಾಹಿತಿಯನ್ನು ಗಮನಿಸಿ. ಅದರಲ್ಲಿ ಶಾಲೆಯ ಹೆಸರು ಕೆಲಸ ಮಾಡುವ ಕಚೇರಿ ಮಾಹಿತಿ ಇರದಿದ್ದಲ್ಲಿ ಇದು ಸುಳ್ಳು ಖಾತೆ ಎಂದು ಪರಿಗಣಿಸಲಾಗುತ್ತದೆ.

*ಹುಟ್ಟಿದ ದಿನಾಂಕವನ್ನು ಗಮನಿಸಿ. ಸುಳ್ಳು ದಾಖಲೆಯನ್ನು ನೀಡುವುದು ಸುಲಭ ಮತ್ತು ಸರಳವಾಗಿರುತ್ತದೆ.

*ಹುಡುಗಿಯರ ಸುಳ್ಳು ದಾಖಲೆಗಳು ಸಂಪರ್ಕ ಸಂಖ್ಯೆಯನ್ನು ಹೊಂದಿರುತ್ತದೆ. ಇದನ್ನು ಅವರು ಸಾರ್ವಜನಿಕರಿಗೆ ಬಹಿರಂಗಪಡಿಸುವುದಿಲ್ಲ.

*ಇತ್ತೀಚಿನ ವಾಲ್ ಪೋಸ್ಟ್‌ಗಳತ್ತ ಗಮನ ಹರಿಸಿ. 'ಸೇರಿಸಿದ್ದಕ್ಕಾಗಿ ಧನ್ಯವಾದಗಳು' 'ನನ್ನನ್ನು ನಿಮಗೆ ತಿಳಿದಿದೆಯೇ' ಎಂದು ಹೆಚ್ಚಿನ ಜನರು ಕೇಳುತ್ತಿದ್ದರೆ, ಮತ್ತು ಈ ಪೋಸ್ಟ್‌ಗಳನ್ನು ಉತ್ತರಿಸದೆ ಹಾಗೆಯೇ ಬಿಟ್ಟಿದ್ದರೆ ಇದನ್ನು ಸುಳ್ಳು ಖಾತೆ ಎಂದು ತಿಳಿದುಕೊಳ್ಳಿ.

*ಬಳಕೆದಾರರ ಖಾತೆಯಲ್ಲಿ ಕೆಲವೊಂದು ಅಪ್ಲಿಕೇಶನ್‌ಗಳನ್ನು ಅವರು ಬಳಸಿದ್ದರೆ ಅಂದರೆ ಆ ಅಪ್ಲಿಕೇಶನ್‌ಗಳು ಇತರರ ಬಳಿ ಇಲ್ಲದಿದ್ದಲ್ಲಿ, ಇದನ್ನು ಫೇಕ್ ಖಾತೆ ಎಂದು ತಿಳಿದುಕೊಳ್ಳಿ.

*ನಿಮಗೆ ಸುಳ್ಳು ಖಾತೆಗಳ ಬಗ್ಗೆ ತಿಳಿದಿದ್ದರೆ ಮತ್ತು ನಿಮಗೆ ಖಾತ್ರಿ ಇದ್ದಲ್ಲಿ, ಕೆಲವೊಂದು ಪ್ರೊಫೈಲ್ ಚಿತ್ರಗಳಿಗಾಗಿ ಗೂಗಲ್ ಅನ್ನು ಬ್ರೌಸ್ ಮಾಡಿ.

ಈ ವಿಧಾನಗಳ ಮೂಲಕ ನಿಮ್ಮ ಖಾತೆಗೆ ಬಂದಿರುವ ಸುಳ್ಳು ಖಾತೆಗಳ ಕೋರಿಕೆಯನ್ನು ಅಥವಾ ನಿಮಗೆ ತಿಳಿಯದೇ ನಿಮ್ಮ ಹೆಸರಿನಲ್ಲಿ ಅವರದನ್ನು ತೆರೆದಿದ್ದರೆ ನಿಮಗೆ ತಿಳಿಯುವುದು.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X