ಫೇಸ್‌ಬುಕ್‌ ಅಕೌಂಟ್ ಹೆಸರು ಚೇಂಜ್ ಮಾಡುವುದು ಹೇಗೆ?

ಕೆಲವರಿಗೆ ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿರುವ ಹೆಸರನ್ನು ಚೇಂಜ್ ಮಾಡುವ ಅವಶ್ಯಕತೆ ಇರುತ್ತದೆ. ಇನ್ನು ಹೇಗೆ ಚೇಜ್ ಮಾಡುವುದು ಬಹಳ ಸಿಂಪಲ್ ಆದರೂ ಹೆಚ್ಚು ಜನರು ತಿಳಿಯಲು ಕಷ್ಟವಾಗಿರುತ್ತದೆ.

Written By:

ಪ್ರಪಂಚದಲ್ಲಿ ಮತ್ತೊಂದು ಪ್ರಪಂಚವಾಗಿ ರೂಪುಗೊಂಡಿರುವ ಫೇಸ್‌ಬುಕ್ ಉಪಯೋಗಿಸದೇ ಇರುವವರು ಬಹಳ ಕಡಿಮೆ ಜನ ಎನ್ನಬಹುದು.!! ಫೇಸ್‌ಬುಕ್ ಅಕೌಂಟ್ ಹೊಂದಿಲ್ಲದವರು ಇದ್ದಾರೆಯೇ ಎಂದು ಆಶ್ಚರ್ಯಪಡುವಂತಹ ಕಾಲ ಇದು!!. ಆದರೆ, ಫೇಸ್‌ಬುಕ್ ಉಪಯೋಗಿಸುತ್ತಿರುವ ಎಲ್ಲರೂ ಫೇಸ್‌ ಬಗ್ಗೆ ಸಂಪೂರ್ಣವಾಗಿ ತಿಳಿದಿರಲು ಸಾಧ್ಯವೇ?

ನಿಜವಾಗಿತೂ ಸಾಧ್ಯ ಇಲ್ಲ! ಯಾರು ಸಹ ಫೇಸ್‌ಬುಕ್ ಬಗ್ಗೆ ಪೂರ್ತಿ ತಿಳಿದಿಲ್ಲ ಎನ್ನಬಹುದು.! ಪ್ರತಿದಿನವೂ ಅಪ್‌ಡೇಟ್‌ ಆಗುವ ಫೇಸ್‌ಬುಕ್‌ ಬಗ್ಗೆ ಅಷ್ಟು ಸುಲಭವಾಗಿ ಸಾಧ್ಯವಿಲ್ಲ! ಹಾಗಾಗಿ, ನಾವು ಫೇಸ್‌ಬುಕ್ ಬಗ್ಗೆ ತಿಳಿಯದೇ ಇರಬಹುದಾದಂತಹ ಕೆಲವು ಸಲಹೆಗಳನ್ನು ನಿಮಗೆ ನೀಡುತ್ತಿದ್ದೇವೆ. ಇನ್ನು ಇದಕ್ಕಾಗಿ ನಮಗೆ ಸಾಕಷ್ಟು ವಿನಂತಿಗಳು ಬಂದಿವೆ.

900 ದಶಲಕ್ಷ ಸ್ಮಾರ್ಟ್‌ಫೋನ್‌ ಸುರಕ್ಷಿತವಾಗಿಲ್ಲ!! ವರದಿ ನೀಡಿದ್ದು ಯಾರು ಗೊತ್ತಾ?

ಕೆಲವರಿಗೆ ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿರುವ ಹೆಸರನ್ನು ಚೇಂಜ್ ಮಾಡುವ ಅವಶ್ಯಕತೆ ಇರುತ್ತದೆ. ಇನ್ನು ಹೇಗೆ ಚೇಜ್ ಮಾಡುವುದು ಬಹಳ ಸಿಂಪಲ್ ಆದರೂ ಹೆಚ್ಚು ಜನರು ತಿಳಿಯಲು ಕಷ್ಟವಾಗಿರುತ್ತದೆ. ಹಾಗಾಗಿ, ಬೇರೆ ಅಕೌಂಟ್‌ ತೆರೆಯದೇ ಫೇಸ್‌ಬುಕ್‌ ಅಕೌಂಟ್‌ ಹೆಸರನ್ನು ಬದಲಾಯಿಸುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಫೇಸ್‌ಬುಕ್ ಲಾಗಿನ್ ಆಗಿ ಮೋರ್ ಕ್ಲಿಕ್ ಮಾಡಿ.

ಫೇಸ್‌ಬುಕ್ ಲಾಗಿನ್ ಆದ ನಂತರ ಮೋರ್ ಐಕಾನ್ ಕ್ಲಿಕ್ ಮಾಡಿದ ನಂತರ ಹಲವು ಆಯ್ಕೆಗಳು ತೆರೆಯುತ್ತವೆ. ಅದರಲ್ಲಿ "Settings" ಐಕಾನ್‌ ಕ್ಲಿಕ್ ಮಾಡಿ.

ಜನರಲ್ ಅಕೌಂಟ್‌ ಸೆಟ್ಟಿಂಗ್ ತೆರೆಯಿರಿ.

"Settings" ಐಕಾನ್‌ ಕ್ಲಿಕ್ ಮಾಡಿದ ನಂತರ ಜನರಲ್ ಅಕೌಂಟ್‌ ಸೆಟ್ಟಿಂಗ್ ತೆರೆಯುತ್ತದೆ. ಅದನ್ನು ಕ್ಲಿಕ್ ಮಾಡಿ ನಿಮ್ಮ ಹೆಸರು, ನಿಮ್ಮ ಫೇಸ್‌ಬುಕ್ ಐಡಿ ಎಲ್ಲಾ ಲೀಸ್ಟ್‌ಗಳು ಕಾಣಿಸುತ್ತದೆ.

ನಿಮ್ಮ ಹೆಸರಿನ ಮೇಲೆ ಕ್ಲಿಕ್ ಮಾಡಿ.

ಜನರಲ್ ಅಕೌಂಟ್‌ ಸೆಟ್ಟಿಂಗ್ ತೆರೆದ ನಂತರ ಆ ಲೀಸ್ಟ್‌ನಲ್ಲಿ ನಿಮ್ಮ ಹೆಸರಿನ ಮುಂದಿರುವ ಎಡಿಟ್‌ ಆಯ್ಕೆ ಕ್ಲಿಕ್ ಮಾಡಿ.!

ಹೆಸರನ್ನು ಬದಲಾಯಿಸಿ.

ಹೆಸರಿನ ಮುಂದಿರುವ ಎಡಿಟ್‌ ಆಯ್ಕೆ ಕ್ಲಿಕ್ ಮಾಡಿದ ನಂತರ ನಿಮ್ಮ ಹೆಸರನ್ನು ಚೇಂಜ್ ಮಾಡುವ ಆಯ್ಕೆ ತೆರೆಯುತ್ತದೆ ಅಲ್ಲಿ ನಿಮಗೆ ಬೇಕಿರುವ ಹೆಸರನ್ನು ಹಾಕಿ ರಿವ್ಯೂ ಚೇಂಜ್ ಐಕಾನ್‌ ಕ್ಲಿಕ್ ಮಾಡಿ. ನಿಮ್ಮ ಹೆಸರು ಬದಲಾಯಿಸಿರುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
If you'd like to list a name on your facebook account that's different from the name on your ID. to know more visit to kannada.gizbot.com
Please Wait while comments are loading...
Opinion Poll

Social Counting