ಫೇಸ್‌ಬುಕ್‌ನಲ್ಲಿ ಬಳಕೆದಾರರ ಸಂಪೂರ್ಣ‌ ಡೇಟಾವನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

By Ashwath
|

ಫೇಸ್‌‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಫೋಟೋಗಳನ್ನು ಡೌನ್‌ಲೋಡ್‌ ಮಾಡುವುದು ಸುಲಭ.ಫೋಟೋ ಮೇಲೆ ಕ್ಲಿಕ್‌ ಮಾಡಿ ಸೇವ್‌‌ ಮಾಡಬಹುದು. ಆದರೆ ಆಲ್ಬಂನಲ್ಲಿರುವ ಎಲ್ಲಾ ಫೋಟೋಗಳು ಬೇಕಿದ್ದಲ್ಲಿ ಒಂದೊಂದೆ ಫೋಟೋ ಓಪನ್‌ ಮಾಡಿ ಡೌನ್‌ಲೋಡ್‌ ಮಾಡಿ ಸೇವ್‌ ಮಾಡುವ ಪ್ರಕ್ರಿಯೆಗೆ ತುಂಬಾ ಸಮಯ ಹಿಡಿಯುತ್ತದೆ. ಇಷ್ಟೆಲ್ಲ ಕಷ್ಟ ಪಡದೇ ಒಂದೇ ಬಾರಿಗೆ ಫೇಸ್‌ಬುಕ್‌ನಲ್ಲಿರುವ ಎಲ್ಲಾ ಫೋಟೋ,ಪೋಸ್ಟ್‌ಗಳು, ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಬಹುದು.

ಫೇಸ್‌ಬುಕ್‌ ಒಂದೇ ಬಾರಿಗೆ ತನ್ನ ಬಳಕೆದಾರರಿಗೆ ಈ ಅವಕಾಶವನ್ನು ನೀಡಿದೆ.ಹೇಗೆ ಡೌನ್‌ಲೋಡ್‌ ಮಾಡಬೇಕು ಎಂಬುದನ್ನು ಮುಂದಿನ ಪುಟದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ:ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿ

1

1


ಮೊದಲು ಬಲಗಡೆ ಇರುವ gear iconನಲ್ಲಿ ಸೆಟ್ಟಿಂಗ್ಸ್ ಮೆನುವನ್ನು ಆರಿಸಿಕೊಳ್ಳಿ.

2

2


General Account Settings ನಲ್ಲಿ Download a Copy of your Facebook data ಆಯ್ಕೆಯನ್ನು ಆರಿಸಿಕೊಳ್ಳಿ.

3

3


ಇಲ್ಲಿ ಕನ್‌ಫರ್ಮ್‌ ಮಾಡುವುದಕ್ಕೆ ಮತ್ತೊಮ್ಮೆ ಫೇಸ್‌ಬುಕ್‌ ಪಾಸ್‌ವರ್ಡ್‌‌ನ್ನು ಟೈಪ್‌ ಮಾಡಿ'submit' ಬಟನ್‌ ಒತ್ತಿ

4

4


ಈಗ ನಿಮ್ಮ ಇಮೇಲ್‌ಗೆ ಫೇಸ್‌ಬುಕ್‌ನಿಂದ ನಿಮ್ಮ ಅಕೌಂಟ್‌ಗೆ ಸಂಬಂಧಿಸಿದ ಒಂದು ಮೇಲ್‌ ಬರುತ್ತದೆ.ಇಲ್ಲಿ ಅಲ್ಲಿ ನೀಡಲಾಗಿರುವ ಲಿಂಕ್‌ನ್ನು ಕ್ಲಿಕ್‌ ಮಾಡಿ.

5

5


ಇಲ್ಲಿ 'Download Archive' ಆಯ್ಕೆಯನ್ನು ಆರಿಸಿ, ಮತ್ತೊಮ್ಮೆ ನಿಮ್ಮ ಪಾಸ್‌ವರ್ಡ್‌ ಟೈಪ್‌ ಮಾಡಿದಾಗ ನಿಮ್ಮ ಫೇಸ್‌ಬುಕ್‌ ಅಕೌಂಟ್‌ನ ಸಂಪೂರ್ಣ‌ ಡೇಟಾಗಳು ಡೌನ್‌ಲೋಡ್‌ ಆಗಿರುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X