ಜಿಮೇಲ್‌ನಲ್ಲಿ ಸೆಂಡ್ ಆದ ಮೆಸೇಜ್‌ಗಳನ್ನು ಎಡಿಟ್ ಮಾಡಬಹುದು!! ಹೇಗೆ ಗೊತ್ತಾ?

ಅವಸರದ ಜೀವನದಲ್ಲಿ ಇಂತಹ ತಪ್ಪುಗಳನ್ನು ಸಹಜವಾಗಿ ಎಲ್ಲರೂ ಮಾಡುತ್ತಾರೆ. ಆದರೆ, ಅಂತಹ ತಪ್ಪುಗಳನ್ನು ತಿದ್ದುವಂತಿದ್ದರೆ.? ಹೌದು, ಇದಕ್ಕೆ ಜಿ ಮೇಲ್‌ನಲ್ಲಿ ಮಾರ್ಗವಿದೆ.!

|

ಯಾರಿಗೋ ಹೋಗಬೇಕಾದ ಮೇಲ್‌ ಇನ್ಯಾರಿಗೋ ಹೋಗುವುದು, ಮೇಲ್‌ನಲ್ಲಿದ್ದ ಟೆಕ್ಸ್ಟ್‌ನ ತಪ್ಪುಗಳು ಹಾಗೆಯೇ ಸೆಂಡ್‌ ಆಗುವುದು, ನೀವು ಕಳಿಸಬೇಕಾದ ಫೈಲ್‌ ಬದಲಿಗೆ ಇನ್ಯಾವುದೋ ಫೈಲ್‌ ಸೆಲೆಕ್ಟ್‌ ಆಗಿರುವುದು. ಇಂತಹ ತಪ್ಪುಗಳಿಂದಾಗಿ ಹಲವು ಬಾರಿ ಪೇಚಿಗೆ ಸಿಲುಕುವ ಸಂದರ್ಭ ಬಂದಿರುತ್ತದೆ.!!

ಅವಸರದ ಜೀವನದಲ್ಲಿ ಇಂತಹ ತಪ್ಪುಗಳನ್ನು ಸಹಜವಾಗಿ ಎಲ್ಲರೂ ಮಾಡುತ್ತಾರೆ. ಆದರೆ, ಅಂತಹ ತಪ್ಪುಗಳನ್ನು ತಿದ್ದುವಂತಿದ್ದರೆ.? ಹೌದು, ಇದಕ್ಕೆ ಜಿ ಮೇಲ್‌ನಲ್ಲಿ ಮಾರ್ಗವಿದೆ.! ಜಿಮೇಲ್‌ನಲ್ಲಿ ಮಿಸ್ ಆಗಿ ಸೆಂಡ್ ಆದ ಮೇಲ್‌ಗಳನ್ನು ಸಹ ತಡೆಹಿಯಬಹುದು ಮತ್ತು ಎಡಿಟ್ ಮಾಡಬಹುದು.!!

ಹಾಗಾದರೆ, ಜಿಮೇಲ್‌ನಲ್ಲಿ ಮಿಸ್ ಆಗಿ ಸೆಂಡ್ ಆದ ಮೇಲ್‌ಗಳನ್ನು ಹೇಗೆ ತಡೆಹಿಡಿಯುವುದು? ಎಡಿಟ್ ಮಾಡುವುದು ಹೇಗೆ? ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.! ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!!

ಅನ್‌ಡು ಸೆಂಡ್ (Undo Send) ಆಯ್ಕೆ

ಅನ್‌ಡು ಸೆಂಡ್ (Undo Send) ಆಯ್ಕೆ

ಜಿಮೇಲ್‌ನಲ್ಲಿ ‘ಅನ್‌ಡು ಸೆಂಡ್' (Undo Send) ಆಯ್ಕೆ ಎನೆಬಲ್ ಮಾಡಿದರೆ ನೀವು ಕಳಿಸಬೇಕಿರುವ ಮೇಲ್‌ ಸೆಂಡ್ ಬಟನ್ ಕ್ಲಿಕ್ಕಿಸಿದ ತಕ್ಷಣವೇ ಹೋಗುವುದಿಲ್ಲ.!! ನೀವು ಆಯ್ಕೆ ಮಾಡಿದಷ್ಟು ಸಮಯ ಅನ್‌ಡು ಆಯ್ಕೆಯ ಅವಕಾಶ ಇಲ್ಲಿರುತ್ತದೆ. ನೀವು ಮೇಲ್‌ನಲ್ಲಿ ಮಾಡಿರುವ ತಪ್ಪು ಸೆಂಡ್ ಬಟನ್ ಒತ್ತಿದ ಬಳಿಕ ನಿಮಗೆ ತಕ್ಷಣ ಅನ್‌ಡು ಆಯ್ಕೆಯಿಂದ ಮೇಲ್ ತಡೆಹಿಡಿಯಬಹುದು.!!

ಅನುಮಾನ ಮೂಡಿದರೆ ಅನ್‌ಡು ಸೆಂಡ್ ಕ್ಲಿಕ್ ಮಾಡಿ.!!

ಅನುಮಾನ ಮೂಡಿದರೆ ಅನ್‌ಡು ಸೆಂಡ್ ಕ್ಲಿಕ್ ಮಾಡಿ.!!

ಮೇಲ್‌ ಸೆಂಡ್ ಮಾಡಿದ ನಂತರ ನಿಮ್ಮ ತಪ್ಪು ಅರಿವಿಗೆ ಬಂದರೆ ಅಥವಾ ತಪ್ಪಾಗಿರಬಹುದು ಎಂಬ ಅನುಮಾನ ಮೂಡಿದರೆ ತಕ್ಷಣ ಜಿಮೇಲ್ ಸರ್ಚ್ ಆಯ್ಕೆಯ ಕೆಳಭಾಗದಲ್ಲಿ ಕಾಣುವ Undo ಮೇಲೆ ಕ್ಲಿಕ್ಕಿಸಿ. ಈಗ ನೀವು ಕಂಪೋಸ್‌ ಹಂತಕ್ಕೆ ಹಿಂದಿರುಗುತ್ತೀರಿ. ಬಳಿಕ ಮೇಲ್ ಎಡಿಟ್ ಮಾಡಿ ಆ ಮೇಲ್‌ ಅನ್ನು ಮತ್ತೆ ಸೆಂಡ್ ಮಾಡಬಹುದು.!!

Send ಆಯ್ಕೆಯನ್ನು ಎನೆಬಲ್ ಮಾಡುವುದು ಹೇಗೆ?

Send ಆಯ್ಕೆಯನ್ನು ಎನೆಬಲ್ ಮಾಡುವುದು ಹೇಗೆ?

ಜಿಮೇಲ್‌ನಲ್ಲಿ Undo Send ಆಯ್ಕೆಯನ್ನು ಎನೆಬಲ್ ಮಾಡಲು ಮೊದಲು ಸೆಟಿಂಗ್ಸ್‌ಗೆ ಹೋಗಿ. ಬಳಿಕ ಸೆಟಿಂಗ್ಸ್‌ ಆಯ್ಕೆಯಲ್ಲಿ General ಮೇಲೆ ಕ್ಲಿಕ್ಕಿಸಿ. ಇಲ್ಲಿನ ಏಳೆಂಟು ಆಯ್ಕೆಗಳ ಬಳಿಕ ಕಾಣುವ Undo Send ಆಯ್ಕೆಯ ಮುಂಭಾಗದಲ್ಲಿರುವ Enable Undo Send ಆಯ್ಕೆಯನ್ನು ಕ್ಲಿಕ್ಕಿಸಿ.!!

ಟೈಮ್ ಲಿಮಿಟ್ ಇದೆ.!!

ಟೈಮ್ ಲಿಮಿಟ್ ಇದೆ.!!

ಜಿಮೇಲ್‌ನಲ್ಲಿ ಮಿಸ್ ಆಗಿ ಸೆಂಡ್ ಆದ ಮೇಲ್‌ಗಳನ್ನು ಎಡಿಟ್ ಮಾಡಲು ಜಿಮೇಲ್ ಕನಿಷ್ಠ 5 ಸೆಕೆಂಡ್‌ನಿಂದ ಗರಿಷ್ಠ 30 ಸೆಕೆಂಡ್‌ವರೆಗೆ ನಿಮ್ಮ ಮೇಲ್‌ ತಡೆಹಿಡಿಯುವ ಆಯ್ಕೆಯನ್ನು ನೀಡಿದೆ.!! ಹಾಗಾಗಿ, 30 ಸೆಕೆಂಡ್‌ ನಂತರ ಇದನ್ನು ತಡೆಯಲು ಸಾಧ್ಯವಿಲ್ಲಾ!!

<strong>ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ತಪ್ಪುಗಳನ್ನು ಸರಿಪಡಿಸುವುದು ಹೇಗೆ?</strong>ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ತಪ್ಪುಗಳನ್ನು ಸರಿಪಡಿಸುವುದು ಹೇಗೆ?

Best Mobiles in India

Read more about:
English summary
Now scroll down to 'Undo Send' and click Enable. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X