70GB ಅನ್‌ಲಿಮಿಟೆಡ್ ಏರ್‌ಟೆಲ್‌ ಡೇಟಾ ಪಡೆಯುವುದು ಹೇಗೆ?

ಜಿಯೋ ಧನ್ ಧನಾ ಧನ್ ಆಫರ್‌ಗೆ ವಿರುದ್ದವಾಗಿ ಬಿಡುಗಡೆಯಾಗಿರುವ ಏರ್‌ಟೆಲ್‌ನ 244 ರೂ. ಆಫರ್‌ ಅನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿಯಿರಿ.

Written By:

ಜಿಯೋ ಧನ್ ಧನಾ ಧನ್ ಆಫರ್‌ಗೆ ವಿರುದ್ದವಾಗಿ, ಏರ್‌ಟೆಲ್‌ನಿಂದ 244 ರೂ. ಆಫರ್ ಬಿಡುಗಡೆ ಮಾಡಿದ್ದು, ಈ ಆಫರ್ ಮೂಲಕ ಏರ್‌ಟೆಲ್ 4G ಬಳಕೆದಾರರರು ಜಿಯೋಗಿಂತಲೂ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸೇವೆ ಪಡೆಯಬಹುದಾಗಿದೆ.! ಇದೇ ಮೊದಲ ಬಾರಿಗೆ ಏರ್‌ಟೆಲ್ ಇಂತಹ ಆಫರ್ ನೀಡಿದೆ.!!

ಕೇವಲ 244 ರೂ. ರೀಚಾರ್ಜ್ ಮೂಲಕ ಏರ್‌ಟೆಲ್ 4G ಬಳಕೆದಾರರರು 70 ದಿವಸಗಳ ಕಾಲ 70GB ಡೇಟಾ ಪಡೆಯಬಹುದಾಗಿದ್ದು, ದೇಶದಾಧ್ಯಂತ ಎಸ್‌ಟಿಡಿ ಮತ್ತು ಸ್ಥಳೀಯ ಕರೆಗಳನ್ನು ಉಚಿತವಾಗಿ ನೀಡಿರುವ ಏರ್‌ಟೆಲ್, ಏರ್‌ಟೆಲ್‌ನಿಂದ ಎಲ್ಲಾ ಕರೆಗಳು ಪ್ರತಿವಾರ 1200 ಹಾಗೂ, ಏರ್‌ಟೆಲ್ ಟು ಏರ್‌ಟೆಲ್‌ಗೆ ಪ್ರತಿದಿನ 300 ಕರೆಗಳನ್ನು ನೀಡಿದೆ.!!

ಓದಿರಿ: ಜಿಯೋ ಧನ್ ಧನಾ ಧನ್‌ಗೆ ಸೆಡ್ಡು..ಯಾವ ಯಾವ ಕಂಪೆನಿಗಳಿಂದ ಏನೆಲ್ಲಾ ಆಫರ್?

ಹಾಗಾಗಿ, ಜಿಯೋ ಧನ್ ಧನಾ ಧನ್ ಆಫರ್‌ಗೆ ವಿರುದ್ದವಾಗಿ ಬಿಡುಗಡೆಯಾಗಿರುವ ಏರ್‌ಟೆಲ್‌ನ 244 ರೂ. ಆಫರ್‌ ಅನ್ನು ಪಡೆಯುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಕೇವಲ 244 ರೂ. ಆಫರ್..!!

ಜಿಯೋ ಧನ್ ಧನಾ ಧನ್ ಆಫರ್‌ಗೆ ವಿರುದ್ದವಾಗಿ ಕೇವಲ 244 ರೂ.ಗೆ ಏರ್‌ಟೆಲ್ ಈ ಆಫರ್ ಅನ್ನು ಬಿಡುಗಡೆ ಮಾಡಿದೆ. ಜಿಯೋ ಧನ್ ಧನಾ ಧನ್ ಆಫರ್ ಪಡೆಯಲು 309 ರೂಪಾಯಿಗಳ ರೀಚಾರ್ಜ್ ಮಾಡಬೇಕಿದ್ದು, ಅತ್ಯುತ್ತಮ ನೆಟ್‌ವರ್ಕ್ ಹೊಂದಿರುವ ಏರ್‌ಟೆಲ್‌ನ ಈ 244 ರೂ. ಆಫರ್ ಉತ್ತಮವಾಗಿದೆ ಎನ್ನಬಹುದು.

ಡೇಟಾ ಬಳಕೆಗೆ ಲಿಮಿಟ್ ಇಲ್ಲ.!!

ಏರ್‌ಟೆಲ್ ನೀಡಿರುವ 70GB ಡೇಟಾವನ್ನು ಪ್ರತಿದಿವಸ 1 GB ಡೇಟಾ ಬಳಸಬಹುದು ಎಂಬ ಷರತ್ತು ಇಲ್ಲ. ಪ್ರತಿದಿನ 1 GBಗಿಂತಲೂ ಹೆಚ್ಚು ಡೇಟಾ ಪಡೆಯಬಹುದು. ಇನ್ನು 1 GBಗಿಂತ ಕಡಿಮೆ ಡೇಟಾ ಬಳಕೆ ಮಾಡಿದರೂ ಮುಂದಿನ ದಿನಕ್ಕೆ ಆ ಡೇಟಾ ಸೇರ್ಪಡೆಯಾಗುತ್ತದೆ.

70GB ಡೇಟಾ ವನ್ನು ಪಡೆಯುವುದು ಹೇಗೆ?

ಏರ್‌ಟೆಲ್ ನೀಡುತ್ತಿರುವ 70GB ಡೇಟಾವನ್ನು ಪಡೆಯಲು ಏಟ್‌ಟೆಲ್ ಗ್ರಾಹಕರು ಮೈ ಏರ್‌ಟೆಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ. ನಂತರ ಏರ್‌ಟೆಲ್ ನಂಬರ್ ಮೂಲಕ ಆಪ್‌ಗೆ ಲಾಗಿನ್ ಆಗಿ. ನೆನಪಿಡಿ. ಈ ಆಫರ್ ಹೊಸದಾಗಿ ಸಿಮ್ ಖರೀದಿಸಿದವರಿಗೆ ಲಭ್ಯವಿಲ್ಲ.!

ಆಫರ್ ಕ್ಲೈಮ್ ಮಾಡಿ.

ಏರ್‌ಟೆಲ್ ನಂಬರ್ ಮೂಲಕ ಮೈ ಏರ್‌ಟೆಲ್ ಆಪ್‌ಗೆ ಲಾಗಿನ್ ಆದ ನಂತರ ಆಪ್‌ನಲ್ಲಿ ಹೋಂ ಐಕಾನ್ ಕ್ಲಿಕ್ ಮಾಡಿ. ನಂತರ ನಿಮಗೆ ಹಲವು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಮೈ ಪ್ಲಾನ್ಸ್ ಆಯ್ಕೆಯನ್ನು ಒತ್ತಿದರೆ ನಿಮಗೆ ಏರ್‌ಟೆಲ್ 244 ರೂ. ಆಫರ್ ಬಗ್ಗೆ ಮಾಹಿತಿ ಸಿಗುತ್ತದೆ. ನಿಮಗೆ ಆಫರ್ ಲಭ್ಯವಿದ್ದಲ್ಲಿ ಆಫರ್ ಕ್ಲೈಮ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Airtel has launched three new prepaid plans, with a Rs 244 pack. to know more visit to kannada.gizbot.com
Please Wait while comments are loading...
Opinion Poll

Social Counting