ಒನ್ ಪ್ಲಸ್ 3 ಫೋನಿನಲ್ಲಿ ಆಕ್ಸಿಜನ್ ಒಎಸ್ 3.2.6 ಅಪ್ ಡೇಟ್ ಪಡೆಯುವುದು ಹೇಗೆ?

ಒನ್ ಪ್ಲಸ್ ಬಳಕೆದಾರರು ತಮ್ಮ ಮೊಬೈಲಿನಿಂದ ಬಹಳಷ್ಟು ಕಷ್ಟಗಳನ್ನೆದುರಿಸುತ್ತಿದ್ದಾರೆ. ಆಕ್ಸಿಜನ್ ಒಎಸ್ 3.2.6 ಅಪ್ ಡೇಟ್ ಮಾಡಿಕೊಂಡು ಆ ಸಮಸ್ಯೆಗಳಿಂದ ಮುಕ್ತಿ ಪಡೆಯುವುದೇಗೆಂದು ಇಲ್ಲಿ ವಿವರಿಸಲಾಗಿದೆ.

Written By:

ಒನ್ ಪ್ಲಸ್ 3 ಇತ್ತೀಚೆಗಷ್ಟೇ ಆಕ್ಸಿಜನ್ ಒಎಸ್ 3.2.6 ಸಾಫ್ಟ್ ವೇರ್ ಅಪ್ ಡೇಟ್ ಪಡೆದುಕೊಂಡಿದೆ. ಇದು ಒನ್ ಪ್ಲಸ್ ಬಳಕೆದಾರರ ತೊಂದರೆಗಳಿಗೆಲ್ಲ ಪರಿಹಾರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಒನ್ ಪ್ಲಸ್ 3 ಫೋನಿನಲ್ಲಿ ಆಕ್ಸಿಜನ್ ಒಎಸ್ 3.2.6 ಅಪ್ ಡೇಟ್ ಪಡೆಯುವುದು ಹೇಗೆ?

ಅತಿಯಾಗಿ ಬಿಸಿಯಾಗುವುದು, ಪುಶ್ ನೋಟಿಫಿಕೇಶನ್ಸ್ ಮತ್ತು ಇನ್ನೂ ಅನೇಕ ತೊಂದರೆಗಳನ್ನು ಒನ್ ಪ್ಲಸ್ ಬಳಕೆದಾರರು ಎದುರಿಸುತ್ತಿದ್ದರು.ಹೊಸ ಆಕ್ಸಿಜನ್ ಒಎಸ್ 3.2.6 ಅಪ್ ಡೇಟ್ ನಲ್ಲಿ ಹಲವು ಬದಲಾವಣೆಗಳಾಗಿವೆ, ಬಿಸಿಯಾಗುವ ತೊಂದರೆ ಕಡಿಮೆಯಾಗಿದೆ, ಕರೆಯ ಗುಣಮಟ್ಟ ಹೆಚ್ಚಿದೆ, ಕ್ಯಾಮೆರ ಉತ್ತಮಗೊಂಡಿದೆ ಮತ್ತು ಒನ್ ಪ್ಲಸ್ 3 ನಲ್ಲಿದ್ದ ಎಲ್ಲಾ ಸಾಫ್ಟ್ ವೇರ್ ಸಮಸ್ಯೆಗಳೂ ಪರಿಹಾರವಾಗಿದೆ.

ಓದಿರಿ: ಆಪಲ್‌ ಸಿರಿ'ಯೊಂದಿಗೆ ಕಾರ್ಯನಿರ್ವಹಿಸುವ ಟಾಪ್‌ 5 ಆಪ್‌ಗಳು ಯಾವುವು ಗೊತ್ತೇ?

ಒಂದು ವೇಳೆ ನೀವು ಒನ್ ಪ್ಲಸ್ 3 ಬಳಸುತ್ತಿದ್ದರೆ ನಿಮ್ಮ ಮೊಬೈಲನ್ನು ಅಪ್ ಡೇಟ್ ಮಾಡಲಿರುವ ಎಲ್ಲಾ ವಿಧಾನಗಳನ್ನೂ ಇಲ್ಲಿ ನೀಡಲಾಗಿದೆ. ಒಮ್ಮೆ ಗಮನಿಸಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

#1 ನಿಮ್ಮ ಒನ್ ಪ್ಲಸ್ 3 ಸ್ಮಾರ್ಟ್ ಫೋನಿನ ಸೆಟ್ಟಿಂಗ್ಸಿಗೆ ಹೋಗಿ.

ನೀವು ಮಾಡಬೇಕಾದ ಮೊದಲ ಕೆಲಸ ಒನ್ ಪ್ಲಸ್ 3 ಫೋನಿನ ಮೆನುವಿಗೆ ಹೋಗಿ ಸೆಟ್ಟಿಂಗ್ಸ್ ಅನ್ನು ತೆರೆಯಿರಿ.

#2 ಅಬೌಟ್ ಡಿವೈಸ್ ಆಯ್ಕೆಗೆ ಹೋಗಿ.

ಮೆನುವಿನಲ್ಲಿ ಸೆಟ್ಟಿಂಗ್ಸ್ ಅನ್ನು ಆಯ್ಕೆ ಮಾಡಿಕೊಂಡ ನಂತರ, ಕೆಳಗೆ ಸ್ಕ್ರಾಲ್ ಮಾಡಿ ಸಿಸ್ಟಮ್ ಆಪ್ಷನ್ ಗೆ ಹೋಗಿ ಅಬೌಟ್ ಡಿವೈಸ್ ಅನ್ನು ಆಯ್ಕೆ ಮಾಡಿ. ಸಾಮಾನ್ಯವಾಗಿ ಇದು ಸೆಟ್ಟಿಂಗ್ಸ್ ಪಟ್ಟಿಯಲ್ಲಿರುವ ಕೊನೆಯ ಆಯ್ಕೆ ಆಗಿರುತ್ತದೆ.

#3 ಡೌನ್ ಲೋಡ್ ಅಪ್ ಡೇಟ್ಸ್ ಅನ್ನು ಆಯ್ಕೆ ಮಾಡಿ.

ಈಗ ಒನ್ ಪ್ಲಸ್ 3 ಬಳಕೆದಾರರು 'ಡೌನ್ ಲೋಡ್ ಅಪ್ ಡೇಟ್ಸ್' ಆಯ್ಕೆಯನ್ನು ಕ್ಲಿಕ್ಕಿಸಿ ಒಕೆ ಒತ್ತಿ. ಸಾಫ್ಟ್ ವೇರ್ ಅಪ್ ಡೇಟ್ ಆಗಲು ಸಮಯ ಕೊಡಿ.

#4 ಸಾಫ್ಟ್ ವೇರ್ ಅಪ್ ಡೇಟ್ ಆಗುತ್ತದೆ.

ಫೋನ್ ರಿಸ್ಟಾರ್ಟ್ ಆಗಲು ನಿಮ್ಮ ಅನುಮತಿ ಕೇಳುತ್ತದೆ, ಸ್ಟಾರ್ಟ್ ಬಟನ್ನಿನ ಮೇಲೆ ಒತ್ತಿ ಒಕೆ ಒತ್ತಿರಿ.

ಹೊಸ ಆಕ್ಸಿಜನ್ ಒಎಸ್ 3.2.6.

ಗೂಗಲ್ ಆ್ಯಂಡ್ರಾಯ್ಡ್ ಮಾರ್ಷ್ ಮೆಲ್ಲೊ 6.0.1 ಆಧಾರಿತ ಹೊಸ ಆಕ್ಸಿಜನ್ ಒಎಸ್ 3.2.6 ಹೆಚ್ಚುಕಡಿಮೆ 40ಎಂಬಿಯಷ್ಟಿದೆ. ಸಾಫ್ಟ್ ವೇರ್ ಅಪ್ ಡೇಟ್ ಮಾಡುವ ಮೂಲಕ ಕೆಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು, ಫೋನ್ ಒಂದಷ್ಟು ಉತ್ತಮಗೊಳ್ಳುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Follow these 4 simple steps to get OxygenOS 3.2.6 update on your OnePlus 3 phone manually and fix all the bugs.
Please Wait while comments are loading...
Opinion Poll

Social Counting