ಸ್ಮಾರ್ಟಫೋನ್ ಹೆಚ್ಚು ಬಿಸಿಯಾಗದಂತೆ ತಡೆಯುವುದು ಹೇಗೆ?

ಸ್ಮಾರ್ಟ್‌ಫೊನ್‌ಗಳಲ್ಲಿ ಕೂಲರ್ ವ್ಯವಸ್ಥೆ ಸಹ ಇರುವುದಿಲ್ಲ. ಇದರಿಂದ ಹೆಚ್ಚು ಹೀಟ್ ಆಗುವ ಸ್ಮಾರ್ಟ್‌ಫೊನ್‌ಗಳು ಬಹುಬೇಗ ಹಾಳಾಗಿ ಪ್ರಾಣಕ್ಕೂ ಸಂಚಕಾರ ತರುತ್ತವೆ !!

Written By:

ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡು, ಗಾತ್ರದಲ್ಲಿ ಚಿಕ್ಕಾದಾಗುತ್ತಾ ಮಾರುಕಟ್ಟೆಗೆ ಬರುತ್ತಿರುವ ಸ್ಮಾರ್ಟ್‌ಫೊನ್‌ಗಳು ಸ್ಪೋಟಗೊಳ್ಳುವ ತೊಂದರೆಗೆ ಸಿಲುಕಿವೆ ಎನ್ನಬಹುದು.! ಒಂದು ಚಿಕ್ಕ ಡಿವೈಸ್‌ನಲ್ಲಿ ಸಾವಿರಾರು ತಂತ್ರಾಂಶಗಳು ಒಟ್ಟಿಗೆ ರನ್ ಆಗುವಾಗ ಬಿಡುಗಡೆಯಾಗುವ ಶಾಖ ಸ್ಪೋಟಕ್ಕೆ ಕಾರಣವೂ ಹೌದು.!!

ಇತ್ತೀಚಿಗೆ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಾಕ್ಸಿ 7 ಸೇರಿದಂತೆ ಹಲವು ಅತ್ಯುತ್ತಮ ಕಂಪೆನಿಯ ಸ್ಮಾರ್ಟ್‌ಫೊನ್‌ಗಳು ಸಹ ಇದೇ ತೊಂದರೆ ಸಿಲುಕಿದ್ದು, ತಾಂತ್ರಿಕ ಕಾರಣಗಳ ಜೊತೆಯಲ್ಲಿ ಸ್ಮಾರ್ಟ್‌ಫೊನ್‌ಗಳು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಈ ರೀತಿಯ ಸಮಸ್ಯೆ ಎದುರಾಗುತ್ತದೆ.

ಜಿಯೋ ಪರವಾಗಿ ಕನ್ನಡಿಗರು ಬರೆದ ಟಾಪ್ 5 ಫೇಸ್‌ಬುಕ್ ಕಾಮೆಂಟ್ ಇವು!!

ಇನ್ನು ಈ ಸ್ಮಾರ್ಟ್‌ಫೊನ್‌ಗಳಲ್ಲಿ ಕೂಲರ್ ವ್ಯವಸ್ಥೆ ಸಹ ಇರುವುದಿಲ್ಲ. ಇದರಿಂದ ಹೆಚ್ಚು ಹೀಟ್ ಆಗುವ ಸ್ಮಾರ್ಟ್‌ಫೊನ್‌ಗಳು ಬಹುಬೇಗ ಹಾಳಾಗಿ ಪ್ರಾಣಕ್ಕೂ ಸಂಚಕಾರ ತರುತ್ತವೆ !! ಹಾಗಾಗಿ, ಸ್ಮಾರ್ಟ್‌ಫೊನ್ ಹೆಚ್ಚು ಬಿಸಿಯಾಗದಂತೆ ಹೇಗೆ ಮಾಡಬಹುದು ಮತ್ತು ಹೇಗೆ ಉಪಯೋಗಿಸಬೇಕು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಅತ್ಯುತ್ತಮ ಚಾರ್ಜರ್ ಬಳಕೆ ಮಾಡಿ

ಸ್ಮಾರ್ಟ್‌ಪೊನ್ ಚಾರ್ಜ್ ಮಾಡುವಾಗ ಕಂಪೆನಿ ನೀಡಿರುವ ಅತ್ಯುತ್ತಮ ಚಾರ್ಜರ್ ಮೂಲಕವೇ ಸ್ಮಾರ್ಟಫೋನ್ ಚಾರ್ಜ್ ಮಾಡಿ. ಕಳಪೆ ಗುಣಮಟ್ಟದ ಚಾರ್ಜರ್‌ಗಳನ್ನು ಬಳಕೆ ಮಾಡುವುದರಿಂದ ಸ್ಮಾರ್ಟ್‌ಫೋನ್ ತಂತ್ರಾಂಶಗಳು ಸಪೋರ್ಟ್ ಆಗದೆ ಹೀಟ್ ಆಗುವ ತೊಂದರೆಗೆ ಸಿಲುಕುತ್ತದೆ. ಹಾಗಾಗಿ, ಅತ್ಯುತ್ತಮ ಚಾರ್ಜರ್ ಬಳಕೆ ಮಾಡಿ

ಬಿಸಿಲಿನಲ್ಲಿ ಸ್ಮಾರ್ಟ್‌ಫೊನ್ ಬಳಸಬೇಡಿ.

ಹೌದು, ಬಿಸಿಲಿನ ಶಾಖಕ್ಕೆ ಸ್ಮಾರ್ಟ್‌ಫೋನ್ ಹೀಟ್‌ ಆಗುತ್ತವೆ. ಕೇವಲ 10 ನಿಮಿಷಗಳು ಸ್ಮಾರ್ಟ್‌ಫೋನ್ ಬಿಸಿಲಿನಲ್ಲಿದ್ದರೆ, ಮೂರು ಗಂಟೆಗಳ ಕಾಲ ಸ್ಮಾರ್ಟ್‌ಫೋನ್ ಬಳಕೆ ಮಾಡಿದಷ್ಟು ಹೀಟ್ ಬಿಸಿಲಿನ ಸಮಯದಲ್ಲಿ ಬಿಡುಗಡೆಯಾಗುತ್ತದೆ. ಹಾಗಾಗಿ, ಬಿಸಿಲಿನಲ್ಲಿ ಸ್ಮಾರ್ಟ್‌ಫೊನ್ ಬಳಸಬೇಡಿ.

ಅಪ್ಲಿಕೇಷನ್ ಹೆಚ್ಚು ರನ್ ಬೇಡ.!!

ಸಾವಿರಾರು ಆಪ್‌ಗಳಿವೆ ಎಂದು ಸ್ಮಾರ್ಟ್‌ಫೋನ್‌ನಲ್ಲಿ ಏಕಕಾಲದಲ್ಲಿ ಹಲವು ಅಪ್ಲಿಕೇಷನ್‌ಗಳನ್ನು ಉಪಯೋಗಿಸಬೇಡಿ. ಈ ಎಲ್ಲಾ ಆಪ್‌ಗಳನ್ನು ಪ್ರೊಸೆಸರ್‌ಗೆ ನಿಭಾಯಿಸುವ ಶಕ್ತಿಯಿದ್ದರೂ ಕೂಡ ಒಮ್ಮೆಲೆ ಹಲವು ಅಪ್ಲಿಕೇಷನ್ ಉಪಯೋಗಿಸಿದರೆ ಹೆಚ್ಚು ಶಾಖ ಬಿಡುಗಡೆಯಾಗುತ್ತದೆ.!!

ಸ್ಮಾರ್ಟ್‌ಫೋನ್ ಹೆಚ್ಚು ಬಳಕೆ ಬೇಡ.!!

ಸ್ಮಾರ್ಟ್‌ಫೋನ್ ಇರುವುದೇ ಉಪಯೋಗಿಸುವುದಕ್ಕೆ ಎನ್ನುವುದನ್ನು ಬಿಡಬೆಕು. ದಿನಕ್ಕೆ 24 ಗಂಟೆಯೂ ಸ್ಮಾರ್ಟ್‌ಫೋನ್‌ಗೆ ಬಿಡುವು ನೀಡದೇ ಇರುವ ಸ್ಮಾರ್ಟ್‌ಪೊನ್ ಬಳಕೆ ಮಾಡುವವರಿದ್ದಾರೆ. ಮೂವಿಸ್, ಗೇಮಿಂಗ್ ಎಂದು ಹೆಚ್ಚು ಸ್ಮಾರ್ಟ್‌ಪೋನ್ ಬಳಕೆ ಮಾಡದೇ ಇರುವುದು ಒಳ್ಳೆಯದು.

ಸ್ಮಾರ್ಟ್‌ಫೋನ್ ಕೂಡಲೇ ಅಪ್‌ಡೇಟ್ ಮಾಡಿ.

ಹಳೆ ತಂತ್ರಂಶಗಳಿಗಿಂತ ಹೊಸದಾಗಿ ಬಿಡುಗಡೆಯಾಗುವ ಆಪ್‌ಗಳು ಉತ್ತಮವಾಗಿರುತ್ತವೆ. ಆಪ್ ಸ್ಟೋರೇಜ್ ಮತ್ತು ಕಾರ್ಯನಿರ್ವ್ಹಣೆಯಲ್ಲಿಯೂ ಈ ಆಪ್‌ಗಳು ಹೆಚ್ಚು ಶಕ್ತಿಶಾಲಿಯಾಗಿರುವುದರಿಮದ ಸ್ಮಾರ್ಟ್‌ಫೋನ್ ಕೂಡಲೇ ಅಪ್‌ಡೇಟ್ ಮಾಡಿ ಬಳಸಿರಿ.!!

ಎಲೆಕ್ಟ್ರಾನಿಕ್ ಕಾಂಡಮ್ ಬಿಡುಗಡೆ!!.. ತಂತ್ರಜ್ಞಾನ ಏನಿದೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿRead more about:
English summary
Avoid direct sunlight to your phone.to know more visit to kannada.gizbot.com
Please Wait while comments are loading...
Opinion Poll

Social Counting