ಆನ್‌ಲೈನ್‌ನಲ್ಲಿ ಆಧಾರ್ ಜೊತೆ ಪಾನ್‌ಕಾರ್ಡ್ ಲಿಂಕ್ ಹೇಗೆ?

ಆಧಾರ್ ಕಾರ್ಡ್‌ ನಂಬರ್ ಜೊತೆಗೆ ಪಾನ್‌ ಕಾರ್ಡ್‌ ಸಂಪರ್ಕಿಸದಿದ್ದಲ್ಲಿ ಪಾನ್ ಕಾರ್ಡ್‌ ಅಮಾನ್ಯಗೊಳ್ಳಲಿದೆ ಎನ್ನುವ ಶಾಕಿಂಗ್ ಸುದ್ದಿ ಇದೀಗ ಹೊರಬಿದ್ದಿದೆ.!!

|

12 ಅಂಕಿಗಳ ಆಧಾರ್ ಕಾರ್ಡ್‌ ಬಯೋಮೆಟ್ರಿಕ್‌ ಗುರುತು ಯೋಜನೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಆಧಾರ್ ಕಾರ್ಡ್‌ ನಂಬರ್ ಜೊತೆಗೆ ಪಾನ್‌ ಕಾರ್ಡ್‌ ಸಂಪರ್ಕಿಸದಿದ್ದಲ್ಲಿ ಪಾನ್ ಕಾರ್ಡ್‌ ಅಮಾನ್ಯಗೊಳ್ಳಲಿದೆ ಎನ್ನುವ ಶಾಕಿಂಗ್ ಸುದ್ದಿ ಇದೀಗ ಹೊರಬಿದ್ದಿದೆ.!!

ಮಧ್ಯಾಹ್ನದ ಬಿಸಿ ಊಟದಂತಹ ಯೋಜನೆಗಳಿಂದ ಹಿಡಿದು ಬ್ಯಾಂಕಿಂಗ್ ಕ್ಷೇತ್ರ, ಪಾಸ್‌ಪೋರ್ಟ್ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯವರೆಗೂ ಸರ್ಕಾರ ಆಧಾರ್‌ ಕಡ್ಡಾಯಗೊಳಿಸಿರುವ ಮಸೂದೆಯನ್ನು ಅನುಮೋದಿಸಿದೆ. ಇನ್ನು ಪಾನ್‌ಕಾರ್ಡ್‌ ಪಡೆಯಲು ಸಹ ಆಧಾರ್ ಬೇಕಾಗಿದೆ.!!

ಸರ್ಕಾರದ ಎಲ್ಲಾ ಇ-ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡೊದು ಹೇಗೆ?

ಹಾಗಾಗಿ, ಆನ್‌ಲೈನ್‌ನಲ್ಲಿ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ ಮೂಲಕ ಆಧಾರ್ ಮತ್ತು ಪಾನ್ ಕಾರ್ಡ್‌ ಹೇಗೆ ಸಂಪರ್ಕಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ. ಕೆಳಗಿನ ಸ್ಲೈಡರ್‌ಗಳಲ್ಲಿ ಪೂರ್ಣ ಮಾಹಿತಿಯನ್ನು ಪಡೆಯಿರಿ.

ಪಾನ್ ಕಾರ್ಡ್‌ ಅಮಾನ್ಯ ಯಾವಾಗ?

ಪಾನ್ ಕಾರ್ಡ್‌ ಅಮಾನ್ಯ ಯಾವಾಗ?

ಆಧಾರ್‌ನೊಂದಿಗೆ ಸಂಪರ್ಕ ಹೊಂದಿರದ ಪಾನ್ ಕಾರ್ಡ್‌ಗಳು 2017 ಡಿಸೆಂಬರ್‌ 31ರ ನಂತರ ಅಮಾನ್ಯಗೊಳ್ಳುತ್ತವೆ ಎನ್ನಲಾಗಿದ್ದು, ಈ ಸಮಯದ ಒಳಗಾಗಿ ಪಾನ್‌ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ನಂಬರ್ ಅನ್ನು ಸಂಪರ್ಕಿಸಬಹುದಾಗಿದೆ.

ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ.

ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ.

ಆದಾಯ ತೆರಿಗೆ ಇಲಾಖೆಯ ಅಫಿಶಿಯಲ್ ವೆಬ್‌ಸೈಟ್‌ ತೆರೆಯಿರಿ. ನಂತರ ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಿರಿ.( ರಿಜಿಸ್ಟರ್ ಆಗಿಲ್ಲದಿದ್ದರೆ ರಿಜಿಸ್ಟರ್ ಆಗಬೇಕಿದೆ. ಹಾಗಾಗಿ, ಮಾಹಿತಿ ಭರ್ತಿ ಮಾಡಿ ರಿಜಿಸ್ಟರ್ ಆಗಿರಿ.) ವೆಬ್‌ಸೈಟ್‌ ತೆರೆಯಲಿ ಈ ಲಿಂಕ್ ಕ್ಲಿಕ್ ಮಾಡಿ ( https://incometaxindiaefiling.gov.in/)

ಲಾಗಿನ್ ಆದ ನಂತರ ಏನು ಮಾಡಬೇಕು?

ಲಾಗಿನ್ ಆದ ನಂತರ ಏನು ಮಾಡಬೇಕು?

ಆದಾಯ ತೆರಿಗೆ ಇಲಾಖೆಯ ಅಫಿಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆದ ನಂತರ ಹೆಸರು, ಜನ್ಮ ದಿನಾಂಕ ವಿವರಗಳನ್ನು ಪರಿಶೀಲಿಸಿ ಆದಾಯ ತೆರಿಗೆ ಇಲಾಖೆ ನಿಮ್ಮ ಎಲ್ಲಾ ವಿವರಗಳನ್ನು ಮೌಲ್ಯೀಕರಿಸುತ್ತದೆ. ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ ನಿಮ್ಮ ನಂಬರ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ ಪಾನ್‌ಕಾರ್ಡ್‌ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ವೆಬ್‌ಸೈಟ್‌ ಕೇಳುತ್ತದೆ. ನಿಮ್ಮೆಲ್ಲಾ ಮಾಹಿತಿಗಳು ಆಗಲೆ ಪಾನ್‌ಕಾರ್ಡ್ ದಾಖಲೆಯಲ್ಲಿ ಇರುವುದರಿಂದ ನೀವು ಕೇವಲ ನಿಮ್ಮ ಆಧಾರ್ ಕಾರ್ಡ್ ನಂಬರ್ ತುಂಬಿ.!!

ಪಾನ್‌ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ.!!

ಪಾನ್‌ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ.!!

ಆದಾಯ ತೆರಿಗೆ ಇಲಾಖೆಯ ಅಫಿಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ ನಿಮ್ಮ 12 ಅಂಕಿಗಳ ಆಧಾರ್ ನಂಬರ್ ತುಂಬಿದ ನಂತರ ಪಾನ್‌ಕಾರ್ಡ್‌ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬಗ್ಗೆ ನಿಮಗೆ ದೃಡಿಕೃತವಾಗಲಿದೆ. ಜೊತೆಗೆ ನಿಮ್ಮ ಪಾನ್‌ಕಾರ್ಡ್ ಸಹ ಸೇಫ್ ಆಗಿರಲಿದೆ. ಈ ಮಾಹಿತಿಯನ್ನು ಇತರರಿಗೂ ತಿಳಿಸಲು ಈ ಲೇಖನವನ್ನು ಶೇರ್ ಮಾಡಿ

Best Mobiles in India

English summary
5 easy steps to How to Link aadhar with PAN. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X