ಆಂಡ್ರಾಯ್ಡ್ ಲಾಕ್ ಓಪನ್ ಮಾಡಿದ್ರೂ ದುಡ್ಡು..! ವಿಚಿತ್ರವಾದ್ರೂ ಸತ್ಯ..!

ಸುಮ್ಮನೆ ಪೋನಿನ ಲಾಕ್ ಓಪನ್ ಮಾಡಿಯೂ ಹಣ ಗಳಿಸಬಹುದಾಗಿದೆ. ಲಾಕ್ ಒಮ್ಮೆ ಒಪನ್ ಮಾಡಿದರೆ ಹಣ ನಿಮ್ಮ ಖಾತೆಗೆ ಸೇರಲಿದ್ದು, ಅದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

Written By:

ಇಂದಿನ ದಿನದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಪೋನಿಗಳು ಸಾಮಾನ್ಯ ಜನರ ಕಿಸೆ ಸೇರಿದ್ದು, ಫೀಚರ್ ಪೋನುಗಳ ಅವನತಿಗೆ ಕಾರಣವಾಗಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಪೋನುಗಳು ಕೇವಲ ಮಾತುಕತೆ, ಸಂದೇಶ ವಿನಿಮಯಕ್ಕೆ ಮಾತ್ರ ಸಿಮೀತವಾಗದೆ ಇನ್ನು ಹಲವು ಕಾರ್ಯಗಳಿಗೂ ಬಳಸಬಹುದಾಗಿದ್ದು, ಹಣ ಮಾಡಬಹುದಾಗಿದೆ. ಸುಮ್ಮನೆ ಪೋನಿನ ಲಾಕ್ ಓಪನ್ ಮಾಡಿಯೂ ಹಣ ಗಳಿಸಬಹುದಾಗಿದೆ.

ಆಂಡ್ರಾಯ್ಡ್ ಲಾಕ್ ಓಪನ್ ಮಾಡಿದ್ರೂ ದುಡ್ಡು..! ವಿಚಿತ್ರವಾದ್ರೂ ಸತ್ಯ..!

ಓದಿರಿ: ಗೂಗಲ್-ಜಿಯೋ ದಿಂದ ಶೀಘ್ರವೇ ರೂ.2,000ಕ್ಕೆ ಉತ್ತಮ 4G ಸ್ಮಾರ್ಟ್‌ಪೋನ್..!!

ಈ ಹಿನ್ನಲೆಯಲ್ಲಿ ನಿಮ್ಮ ಕೈನಲ್ಲಿರುವ ಸ್ಮಾರ್ಟ್‌ಪೋನಿಂದಲೇ ಹಣಗಳಿಸುವುದು ಹೇಗೆ..? ಎಂಬುದನ್ನು ಇಲ್ಲಿ ತಿಳಿಸುವ ಪ್ರಯತ್ನ ಮಾಡಲಾಗಿದೆ. ಸ್ಮಾರ್ಟ್‌ಪೋನಿನ ಪ್ಯಾಟ್ರನ್ ಲಾಕ್ ಒಮ್ಮೆ ಒಪನ್ ಮಾಡಿದರೆ ಹಣ ನಿಮ್ಮ ಖಾತೆಗೆ ಸೇರಲಿದ್ದು, ಅದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ಓದಿರಿ: ಏರ್‌ಟೆಲ್ ನೀಡುವ 30GB ಉಚಿತ ಡೇಟಾವನ್ನು ಪಡೆದುಕೊಳ್ಳುವುದು ಹೇಗೆ..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಆಂಡ್ರಾಯ್ಡ್‌ನಲ್ಲಿ ಹಣ ಕೊಡಲಿವೆ ಆಪ್‌ಗಳು:

ನಿಮ್ಮ ಆಂಡ್ರಾಯ್ಡ್ ಪೋನಿನಲ್ಲಿರುವ ಪ್ಲೇ ಸ್ಟೋರಿನಲ್ಲಿ ನಿಮಗೆ ಕೈ ತುಂಬ ಹಣ ನೀಡುವ ಆಪ್‌ಗಳು ನೂರಾರು. ಅವುಗಳಲ್ಲಿ ಕೆಲವು ಮಾತ್ರ ಉತ್ತಮವಾಗಿದ್ದು, ಇನ್ನು ಕೆಲವು ಬಳಕೆದಾರರನ್ನು ಮೋಸ ಮಾಡಲೆಂದು ಹುಟ್ಟಿಕೊಂಡಿವೆ, ಈ ಹಿನ್ನಲೆಯಲ್ಲಿ ಯಾವ ಆಪ್‌ಗಳು ನಿಜವಾಗಿಯೂ ನಿಮಗೆ ಹಣವನ್ನು ನೀಡಲಿವೆ ಅವುಗಳ ಕುರಿತ ಮಾಹಿತಿ ಇಲ್ಲಿದೆ.

SlideJoy ಆಪ್ ಬಳಸಿ:

SlideJoy ಆಪ್‌ ಡೌನ್ ಲೋಡ್ ಮಾಡಿಕೊಂಡು ನಿಮ್ಮ ಸ್ಮಾರ್ಟ್‌ಪೋನನ್ನು ಬಳಕೆ ಮಾಡಲು ಶುರು ಮಾಡಿದರೆ ನಿಮಗೆ ಹಣ ದೊರೆಯಲಿದೆ. ಪ್ರತಿ ಬಾರಿ ನಿಮ್ಮ ಪೋನಿನ ಲಾಕ್ ಓಪನ್ ಮಾಡಿದ ಸಂದರ್ಭದಲ್ಲಿ ಇಂತಿಷ್ಟು ಹಣ ನಿಮಗೆ ಬಂದು ಸೇರಲಿದೆ.

SlideJoy ಆಪ್ ಬಳಸುವುದು ಹೇಗೆ??

ನೀವು ಬಳಸುವ ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನ ಪ್ಲೇ ಸ್ಟೋರಿನಲ್ಲಿ ಲಭ್ಯವಿರುವ SlideJoy ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು, Slidejoy- Lock Screen Cash ಎಂಬ ಹೆಸರಿನಲ್ಲಿ ಈ ಆಪ್ ಪ್ಲೇಸ್ಟೋರಿನಲ್ಲಿದೆ.

ಸೈನ್‌ ಇನ್ ಆಗಿರಿ:

SlideJoy ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡ ನಂತರ ಆಪ್‌ ಅನ್ನು ಓಪನ್ ಮಾಡಿರಿ. ಈ ಸಂದರ್ಭದಲ್ಲಿ ಆಪ್ ಸೈನ್‌ ಇನ್ ಕೇಳಿದ್ದು, ಅಲ್ಲಿ ನಿಮ್ಮ ಮಾಹಿತಿ ನೀಡಿ ಸೈನ್‌ಇನ್ ಆಗಬಹುದು. ಇಲ್ಲವೇ ನಿಮ್ಮ ಫೇಸ್‌ಬುಕ್ ಆಕೌಂಟ್ ಮೂಲಕವೂ ಸೈನ್‌ ಇನ್ ಆಗಬಹುದಾಗಿದೆ.

ಹೇಗೆ ಬಳಸುವುದು ತಿಳಿಯಿರಿ:

ಸೈನ್‌ ಇನ್ ಆದ ನಂತರದಲ್ಲಿ ಆಪ್‌ ಬಳಸುವುದು ಹೇಗೆ ಎಂಬುದರ ಕುರಿತು ಮತ್ತು ಹಣ ಹೇಗೆ ನಿಮಗೆ ದೊರೆಯಲಿದೆ ಎನ್ನುವ ಮಾಹಿತಿಯ ಟ್ಯೂಟೊರಿಯಲ್ ಆಪ್‌ನಲ್ಲೇ ದೊರೆಯಲಿದೆ. ನಿಮ್ಮ ಪೋನಿನ ಲಾಕ್ ತೆರೆದು ಹಣ ಮಾಡುವುದು ಹೇಗೆ ಎಂಬುದನ್ನು ಇದು ತಿಳಿಸಲಿದೆ.

ಹಣಗಳಿಕೆ ಶುರು ಮಾಡಿ:

ನೀವು ಒಮ್ಮೆ ಸೈನ್‌ ಇನ್ ಆದ ನಂತರದಲ್ಲಿ ಪ್ರತಿ ಬಾರಿ ನಿಮ್ಮ ಪೋನಿ ಸ್ಕ್ರಿನ್ ಲಾಕ್ ಓಪನ್ ಮಾಡಿದ ನಂತರದಲ್ಲಿ ನ್ಯೂಸ್, ಪ್ರಮೋಷನ್ ಸೇರಿದಂತೆ ಹಲವು ವಿಷಯಗಳು ಸ್ಕ್ರಿನಿನಲ್ಲಿ ಬರಲಿದ್ದು, ಅವಗಳನ್ನು ನೋಡಿ ಹಣವನ್ನ ಪಡೆಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
a method that will help you earn some handy money using your Android Lockscreen. to know more visit kannada.gizbot.com
Please Wait while comments are loading...
Opinion Poll

Social Counting