ಇಂಟರ್ನೆಟ್ ಅನ್ನು ಇನ್ನಷ್ಟು ವೇಗಗೊಳಿಸುವ ತಂತ್ರಗಳಿವು

By Shwetha
|

ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಮಾಹಿತಿ ಯಾರಿಗೆ ಇರಲಿಕ್ಕಿಲ್ಲ ಹೇಳಿ. ಈಗೀಗ ಗ್ರಾಮೀಣ ಪ್ರದೇಶಗಳಿಗೂ ತಾಂತ್ರಿಕ ಜ್ಞಾನ ದೊರಕುತ್ತಿದ್ದು ಇಂಟರ್ನೆಟ್ ಎಂಬುದು ಸರ್ವೇ ಸಾಮಾನ್ಯವಾಗಿದೆ. ಆದರೆ ಇಂಟರ್ನೆಟ್‌ನ ಬಳಕೆ ಹೆಚ್ಚು ಹೆಚ್ಚು ಮಾಡಿದಷ್ಟೂ ಅದನ್ನು ನವೀಕರಿಸುವ ತಂತ್ರಗಾರಿಕೆಯತ್ತ ಕೂಡ ನಾವು ಗಮನ ಹರಿಸಬೇಕು.

ಹಾಗಿದ್ದರೆ ನಿಧಾನಗತಿಯಲ್ಲಿರುವ ಇಂಟರ್ನೆಟ್ ಅನ್ನು ಇನ್ನಷ್ಟು ವೇಗಗೊಳಿಸುವುದು ಹೇಗೆಂಬುದನ್ನು ಕುರಿತು ಇಂದಿನ ಲೇಖನದಲ್ಲಿ ನಾವು ಸರಳ ಸಲಹೆಗಳನ್ನು ನೀಡುತ್ತಿದ್ದೇವೆ. ಈ ಸಲಹೆಗಳು ನಿಮಗೆ ಹೆಚ್ಚು ಅನುಕೂಲವಾಗಿದ್ದು ಇಂಟರ್ನೆಟ್‌ನ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವುದು ಖಂಡಿತ.

#1

#1

ಒಮ್ಮೊಮ್ಮೆ ನಿಮ್ಮ ಅಂತರ್ಜಾಲ ಸಂಪರ್ಕವು ನಿಧಾನವಾಗಿರುತ್ತದೆ, ಆಗ ನೀವು ತಿಳಿದುಕೊಳ್ಳಬೇಕಾದ್ದೆಂದರೆ ಹಿನ್ನಲೆಯಲ್ಲಿ ನಿಮ್ಮ ಸಂಪರ್ಕವನ್ನು ಯಾವುದೋ ಒಂದು ಭಾಗ ಬಳಸುತ್ತಿದೆ ಎಂದಾಗಿದೆ. ನಿಮ್ಮ ಬ್ರೌಸರ್‌ನ ಡೌನ್‌ಲೋಡ್ ಮ್ಯಾನೇಜರ್ ಅನ್ನು ಹುಡುಕಿ ಮತ್ತು ಯಾವುದೇ ಫೈಲ್ ಡೌನ್‌ಲೋಡ್ ಆಗುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ, ಮತ್ತು ಯಾವ ಪ್ರೋಗ್ರಾಮ್‌ಗಳು ರನ್ ಆಗುತ್ತಿವೆ ಎಂಬುದನ್ನು ಪರಿಶೀಲಿಸಿಕೊಳ್ಳಿ ಮತ್ತು ಅದರಲ್ಲಿ ಯಾವುದಾದರೂ ನಿಮ್ಮ ಸಂಪರ್ಕಕ್ಕೆ ತೊಡಕನ್ನು ಉಂಟುಮಾಡುತ್ತಿದೆಯೇ ಎಂಬುದನ್ನು ಗಮನಿಸಿಕೊಳ್ಳಿ.

#2

#2

ಇತ್ತೀಚಿನ ಆಧುನಿಕ ಕಂಪ್ಯೂಟರ್‌ಗಳನ್ನು ವೇಗಗೊಳಿಸುವ ಇನ್ನೊಂದು ಸುಲಭ ವಿಧಾನವೆಂದರೆ ಇಫೆಕ್ಟ್‌ಗಳನ್ನು ನಿಷ್ಕ್ರಿಯಗೊಳಿಸುವುದಾಗಿದೆ. ವಿಂಡೋಸ್‌ನಲ್ಲಿ, ಸಿಸ್ಟಮ್ ಕಂಟ್ರೋಲ್‌ ಪ್ಯಾನಲ್‌ನಲ್ಲಿ ಸುಧಾರಿತ ಸಿಸ್ಟಮ್ ಸೆಟ್ಟಿಂಗ್‌ಗಳನ್ನು ನಿಮಗೆ ಕಾಣಬಹುದು. ನಿಮ್ಮ ಕಂಪ್ಯೂಟರ್‌ನಲ್ಲಿ ನೀವು ಬಳಸುವ ಇಫೆಕ್ಟ್‌ಗಳು ಕಂಪ್ಯೂಟರ್‌ನ ವೇಗವನ್ನು ಕಡಿಮೆ ಮಾಡಬಹುದು.

#3

#3

ನೀವು ಬ್ರೌಸರ್‌ನ ಹಳೆಯ ಆವೃತ್ತಿಯನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಇಂಟರ್ನೆಟ್ ನಿಧಾನವಾಗುತ್ತದೆ. ನಿಮ್ಮ ಪ್ರಸ್ತುತ ಬ್ರೌಸರ್ ಅನ್ನು ನವೀಕರಿಸುವ ಮೂಲಕ ಸಮಸ್ಯೆಯನ್ನು ನಿವಾರಿಸಿ.

#4

#4

ಅಡ್ವೇರ್ ಮತ್ತು ಸ್ಪೈವೇರ್ ಪ್ರೊಗ್ರಾಮ್‌ಗಳಾಗಿದ್ದು ಇವುಗಳನ್ನು ಉಚಿತವಾಗಿ ಇನ್‌ಸ್ಟಾಲ್ ಮಾಡಬಹುದಾಗಿದೆ, ಆದರೆ ಇದನ್ನು ಮಾಡುವಾಗ ನೀವು ತುಂಬಾ ಜಾಗರೂಕರಾಗಿರಬೇಕು.

#5

#5

ವಿಂಡೋಸ್ ಬಳಕೆದಾರರು ಉಚಿತ ಪ್ರೊಗ್ರಾಮ್ ಆಗಿರುವ ಸ್ಪೈಬೋಟ್ ಸರ್ಚ್ ಮತ್ತು ಡಿಸ್ಟ್ರೋಯ್ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಇದಕ್ಕಾಗಿ ನೀವು ಪಾವತಿಸಬೇಕಾಗುತ್ತದೆ.

#6

#6

ಶಕ್ತಿಯುತವಾದ ಆಂಟಿವೈರಸ್ ಅನ್ನು ಬಳಸಿ ನಿಮ್ಮ ಕಂಪ್ಯೂಟರ್‌ನ ಮೇಲೆ ದಾಳಿ ಮಾಡುವ ವೈರಸ್ ಅನ್ನು ತಡೆಗಟ್ಟಬಹುದು. ಆಂಟಿವೈರಸ್ ಪ್ರೊಗ್ರಾಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ನಿಮ್ಮ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

#7

#7

ಕೆಲವೊಮ್ಮೆ ನಿಮ್ಮ ಕಂಪ್ಯೂಟರ್‌ನಲ್ಲಿ ಸ್ಥಳಾವಕಾಶದ ಕೊರತೆ ಇದ್ದಾಗ ನಿಮ್ಮ ಕಂಪ್ಯೂಟರ್‌ನ ಕಾರ್ಯನಿರ್ವಹಣೆ ನಿಧಾನವಾಗುತ್ತದೆ. ನಿಮ್ಮ ತಾತ್ಕಾಲಿಕ ಇಂಟರ್ನೆಟ್ ಡೇಟಾವನ್ನು ಅಳಿಸುವ ಮೂಲಕ ನಿಮ್ಮ ಇಂಟರ್ನೆಟ್ ಅನ್ನು ವೇಗವಾಗಿಸಿ.

#8

#8

ವೈರ್‌ಲೆಸ್ ನೆಟ್‌ವರ್ಕ್ ಮೂಲಕ ನೀವು ಇಂಟರ್ನೆಟ್ ಅನ್ನು ಪ್ರವೇಶಿಸುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಸಂಪರ್ಕವನ್ನು ಇತರರು ಬಳಸುವಾಗ ಇಂಟರ್ನೆಟ್‌ನ ವೇಗ ಕುಗ್ಗುತ್ತದೆ. ನೆಟ್‌ವರ್ಕ್ ಪಾಸ್‌ವರ್ಡ್ ಅನ್ನು ಹೊಂದಿಸುವ ಮೂಲಕ ನಿಮ್ಮ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಿ.

Best Mobiles in India

English summary
This article tells about How to make your internet go faster and telling some simple steps to resolve these problems...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X