ಮೊಬೈಲ್ ಬಿಲ್ ಪಾವತಿ ಮಾಡಲು ಇನ್ನು ಆನ್‌ಲೈನ್ ಸಾಕು

By Shwetha
|

ನಿಮ್ಮ ಮೊಬೈಲ್‌ಗಳಿಗೆ ರಿಚಾರ್ಜ್ ಮಾಡುವುದು ಮತ್ತು ಬಿಲ್‌ಗಳನ್ನು ಪಾವತಿ ಮಾಡುವುದು ಈಗ ಹಳೆಯ ಕಥೆಯಾಗಿದೆ. ಟೆಲಿಕಾಮ್ ದೈತ್ಯರು ಎಂದೇ ಹೆಸರು ಗಳಿಸಿಕೊಂಡಿರುವ ಏರ್‌ಟೆಲ್ ವೊಡಾಫೋನ್, ಬಿಎಸ್‌ಎನ್‌ಎಲ್ ಡೊಕೊಮೆ ತ್ವರಿತ ರೀಚಾರ್ಜ್ ಸೌಲಭ್ಯಗಳೊಂದಿಗೆ ಬಂದಿದ್ದು ಇದು ನಿಮ್ಮ ಡಿವೈಸ್‌ಗೆ ರಿಚಾರ್ಜ್ ಅನ್ನು ಕೆಲವೇ ಸೆಕೆಂಡ್‌ಗಳಲ್ಲಿ ಮಾಡಲಿದೆ.

ಓದಿರಿ: ವಾಟ್ಸಾಪ್‌ನಲ್ಲಿ ಸಂಪರ್ಕ ಬ್ಲಾಕ್ ಮಾಡಿದ ಮೇಲೆ ಚಿಂತೆಯೇ ಮಾಡದಿರಿ!

ಇಂದಿನ ಲೇಖನದಲ್ಲಿ ತ್ವರಿತ ರಿಚಾರ್ಜ್‌ಗೆ ಅನುಕೂಲವನ್ನು ಉಂಟುಮಾಡಿರುವ ಉತ್ತಮ ಅಪ್ಲಿಕೇಶನ್‌ಗಳೊಂದಿಗೆ ನಾವು ಬಂದಿದ್ದು ನಿಮ್ಮ ಸ್ಮಾರ್ಟ್ ಡಿವೈಸ್‌ಗಳಿಗೆ ಉತ್ತಮ ಯೋಜನೆಗಳೊಂದಿಗೆ ಇದು ಶುಲ್ಕ ಪಾವತಿ ಮಾಡಲಿದೆ.

ಏರ್‌ಟೆಲ್ ಬಳಕೆದಾರರು ಸಾಲುಗಟ್ಟಿ ನಿಲ್ಲಬೇಕಾಗಿಲ್ಲ

ಏರ್‌ಟೆಲ್ ಬಳಕೆದಾರರು ಸಾಲುಗಟ್ಟಿ ನಿಲ್ಲಬೇಕಾಗಿಲ್ಲ

ಏರ್‌ಟೆಲ್ ಬಳಕೆದಾರರಿಗೆ, ಮೈಏರ್‌ಟೆಲ್ ಅಪ್ಲಿಕೇಶನ್ ಅನ್ನು ಟೆಲಿಕಾಮ್ ಸಂಸ್ಥೆ ಹೊಂದಿದ್ದು, ಇಲ್ಲಿ ನಿಮಗೆ ಉತ್ತಮ ಎಂದೆನಿಸಿರುವ ಏರ್‌ಟೆಲ್ ಯೋಜನೆಗಳನ್ನು ಕಂಡುಕೊಳ್ಳಬಹುದಾಗಿದೆ. ಮೈಏರ್‌ಟೆಲ್ ಅಪ್ಲಿಕೇಶನ್ ಅನ್ನು ಸ್ಮಾರ್ಟ್ ಡಿವೈಸ್‌ಗೆ ಡೌನ್‌ಲೋಡ್ ಮಾಡಿಕೊಂಡು ಏರ್‌ಟೆಲ್ ಬಿಡುಗಡೆ ಮಾಡಿರುವ ಹೊಸ ಯೋಜನೆಗಳನ್ನು ಕಂಡುಕೊಳ್ಳಬಹುದಾಗಿದೆ. ಇನ್ನು ಸರತಿ ಸಾಲಿನಲ್ಲಿ ಏರ್‌ಟೆಲ್ ಬಳಕೆದಾರರು ನಿಲ್ಲಬೇಕಾದ ಅವಶ್ಯಕತೆಯೇ ಇಲ್ಲ.

ವೊಡಾಫೋನ್ ಬಳಕೆದಾರರಿಗೂ ಇದೇ ಅವಕಾಶ

ವೊಡಾಫೋನ್ ಬಳಕೆದಾರರಿಗೂ ಇದೇ ಅವಕಾಶ

ವೊಡಾಫೋನ್ ಬಳಕೆದಾರರು ಕೂಡ ನಿಮಗೆ ಒದಗಿಸಿರುವ ಸೌಲಭ್ಯಗಳ ಮಾಹಿತಿಯನ್ನು ಅರಿತುಕೊಳ್ಳಲು ಮೈವೊಡಾಫೋನ್ ಅಪ್ಲಿಕೇಶನ್ ಅನ್ನು ಫೋನ್‌ಗೆ ಡೌನ್‌ಲೋಡ್ ಮಾಡಿಕೊಂಡರೆ ಸಾಕು. ಇಲ್ಲಿ ಉತ್ತಮ ಟಾರಿಫ್ ಯೋಜನೆಗಳು, ಮೊಬೈಲ್ ಶುಲ್ಕಗಳ ಪಾವತಿ, ತ್ವರಿತ ರಿಚಾರ್ಜ್, ಬೋನಸ್ ಕಾರ್ಡ್‌ಗಳ ಖರೀದಿ ಹೀಗೆ ಅವಕಾಶಗಳ ಪೂರವನ್ನೇ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಇಲ್ಲಿ ಡೇಟಾ ಬಳಕೆಯನ್ನು ಬಳಕೆದಾರರು ಕಂಡುಕೊಳ್ಳಬಹುದಾಗಿದೆ, ಇದು ಹೆಚ್ಚಿನ ಫೋನ್ ಬಳಕೆದಾರರಿಗೆ ದೊಡ್ಡ ಸಮಸ್ಯೆಯಾಗಿದೆ.

ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಇರುವ ಸೌಲಭ್ಯಗಳೇನು

ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಇರುವ ಸೌಲಭ್ಯಗಳೇನು

ಬಿಎಸ್‌ಎನ್‌ಎಲ್ ಕೂಡ ಇತರ ಟೆಲಿಕಾಮ್ ಕಂಪೆನಿಗಳಂತೆ ಮೈಬಿಎಸ್‌ಎನ್‌ಎಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದು ಇಲ್ಲಿ ಬಳಕೆದಾರರು ಉತ್ತಮ ಪ್ಲಾನ್‌ಗಳ ನಿಖರ ಮಾಹಿತಿಯನ್ನು ಕಂಡುಕೊಳ್ಳಬಹುದಾಗಿದೆ. ಯಾವುದೇ ನೆಟ್‌ವರ್ಕ್ ಸಮಸ್ಯೆಗೆ ಇಲ್ಲಿ ಪರಿಹಾರ ಇದೆ ಅಂತೆಯೇ ಬಳಕೆದಾರರಿಗೆ ಸುಲಭವಾಗಿರುವ ವಿಧಾನವನ್ನು ಕೂಡ ಬಿಎಸ್‌ಎನ್‌ಎಲ್ ಒದಗಿಸಿದೆ.

ಡೊಕೊಮೆ ಬಳಕೆದಾರರಿಗೆ ಸುವರ್ಣವಕಾಶ

ಡೊಕೊಮೆ ಬಳಕೆದಾರರಿಗೆ ಸುವರ್ಣವಕಾಶ

ಇನ್ನು ಡೊಕೊಮೆ ಬಳಕೆದಾರರೂ ಕೂಡ ಇಂತಹುದೇ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಉತ್ತಮ ಟಾರಿಫ್ ಯೋಜನೆಗಳು, ನಿಮ್ಮ ಬಿಲ್‌ಗಳ ಪಾವತಿ, ನಿಮ್ಮ ನೆಟ್‌ವರ್ಕ್ ಬಗೆಗಿನ ಮಾಹಿತಿ ಇದಕ್ಕಾಗಿ ಮೈ ಟಾಟಾ ಡೊಕೊಮೊ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ಫೋನ್‌ನಲ್ಲಿ ಈ ಅಪ್ಲಿಕೇಶನ್ ಅನ್ನು ಇರಿಸಿಕೊಳ್ಳುವುದು ನಿಮ್ಮ ಸಂಪರ್ಕದಲ್ಲಿ ನೀವು ವ್ಯಯಿಸುವ ಪ್ರತಿಯೊಂದು ಖರ್ಚಿನ ವಿವರವನ್ನು ಇರಿಸುತ್ತದೆ.

Best Mobiles in India

English summary
We at GIZBOT have analyzed the best apps that can help you recharge your smart devices with best plans, and also pay bills, all in one single platform.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X