ಬಿಸಿಲಿನಲ್ಲಿ ಒಣಗಿಸಿದರೆ ನೀರಿಗೆ ಬಿದ್ದ ಸ್ಮಾರ್ಟ್‌ಫೋನ್‌ ಸರಿಯಾಗೊಲ್ಲಾ!! ಬೇರೆ ಏನು ಮಾಡಬೇಕು?

ಹಾಗಂತ ನೀರಿಗೆ ಬಿದ್ದ ತಕ್ಷಣ ಸ್ಮಾರ್ಟ್‌ಫೋನ್‌ ಹಾಳಾಗಿದೆ ಎಂದು ಅರ್ಥವಲ್ಲ. ನಾವು ಸ್ಮಾರ್ಟ್‌ಫೋನ್‌ ನೀರಿಗೆ ಬಿದ್ದ ತಕ್ಷಣವೇ ಮುನ್ನೆಚರಿಕೆ ತೆಗೆದುಕೊಂಡರೆ ಸ್ಮಾರ್ಟ್‌ಫೋನ್ ಹಾಳಾಗುವುದನ್ನು ತಪ್ಪಿಸಬಹುದು.!

Written By:

ಇತ್ತೀಚಿಗೆ ವಾಟರ್‌ ಫ್ರೂಫ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಿದ್ದರೂ ಕೂಡ ಎಲ್ಲಾ ಸ್ಮಾರ್ಟ್‌ಫೊನ್‌ಗಳು ವಾಟರ್‌ ಫ್ರೂಫ್ ರಕ್ಷಣೆಯನ್ನು ಹೊಂದಿರುವುದಿಲ್ಲ. ಇನ್ನು, ನಾವು ಎಷ್ಟೇ ಹುಷಾರಾಗಿದ್ದರೂ ಸಹ ಸ್ಮಾರ್ಟ್‌ಫೋನ್ ನೀರಿಗೆ ಬೀಳುವುದನ್ನು ತಪ್ಪಿಸುವುದಕ್ಕೆ ಆಗುವುದಿಲ್ಲ.!

ಯಾವುದೋ ಕಾರಣದಿಂದ ಅಕಸ್ಮಾತ್ ಆಗಿ ಸ್ಮಾರ್ಟ್‌ಫೋನ್ ನೀರಿಗೆ ಬಿದ್ದಿರುತ್ತದೆ. ಹಾಗಂತ ನೀರಿಗೆ ಬಿದ್ದ ತಕ್ಷಣ ಸ್ಮಾರ್ಟ್‌ಫೋನ್‌ ಹಾಳಾಗಿದೆ ಎಂದು ಅರ್ಥವಲ್ಲ. ನಾವು ಸ್ಮಾರ್ಟ್‌ಫೋನ್‌ ನೀರಿಗೆ ಬಿದ್ದ ತಕ್ಷಣವೇ ಮುನ್ನೆಚರಿಕೆ ತೆಗೆದುಕೊಂಡರೆ ಸ್ಮಾರ್ಟ್‌ಫೋನ್ ಹಾಳಾಗುವುದನ್ನು ತಪ್ಪಿಸಬಹುದು.!

ಸ್ನಾಪ್‌ಡೀಲ್‌ ನೀಡುತ್ತಿದೆ ಜಿಯೋ ಸಿಮ್ ಹೋಂ ಡೆಲಿವರಿ!! ಬುಕ್ ಮಾಡೋದು ಹೇಗೆ?

ಹೌದು, ಸ್ಮಾರ್ಟ್‌ಫೋನ್ ನೀರಿಗೆ ಬಿದ್ದ ನಂತರ ಅದನ್ನು ಸರಿಯಾದ ಕ್ರಮದಲ್ಲಿ ರಕ್ಷಣೆ ಮಾಡಿದರೆ ಸ್ಮಾರ್ಟ್‌ಫೋನ್‌ ಸ್ವಲ್ಪವೂ ಹಾಳಾಗುವುದಿಲ್ಲ!!. ಹಾಗಾದರೆ ನೀರಿಗೆ ಬಿದ್ದ ಸ್ಮಾರ್ಟ್‌ಫೋನ್‌ ರಕ್ಷಣೆ ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಸ್ಮಾರ್ಟ್‌ಫೋನ್ ಬ್ಯಾಟರಿ ತೆರೆಯಿರಿ.

ಸ್ಮಾರ್ಟ್‌ಫೋನ್‌ ಎಲೆಕ್ಟ್ರಾನಿಕ್ ವಸ್ತು ಆಗಿರುವುದರಿಂದ ನೀರಿಗೆ ಬಿದ್ದ ತಕ್ಷಣ ಶಾರ್ಟ್ ಆಗುವ ಸಂಭವವಿರುತ್ತದೆ. ಹಾಗಾಗಿ, ನೀರಿಗೆ ಬಿದ್ದ ಸ್ಮಾರ್ಟ್‌ಫೋನ್‌ ಹೊರತೆಗೆದು ಬ್ಯಾಟರಿ ತೆರೆದಿಡಿ.

ಬ್ಯಾಟರಿ ತೆಗೆದ ನಂತರ ಏನು ಮಾಡಬೇಕು?

ನೀರಿನಿಂದ ಫೋನ್ ಅನ್ನು ಹೊರಕ್ಕೆ ತೆಗೆದ ನಂತರ ನೀವೆ ಅದನ್ನು ರಿಪೇರಿ ಮಾಡುವ ಸಾಹಸ ಬೇಡ.!! ಒಮ್ಮೆ ನೀರಿಗೆ ಬಿದ್ದ ಸ್ಮಾರ್ಟ್‌ಫೋನ್ ಅನ್ನು ನೀವು ಬಿಸಿಲಿನಲ್ಲಿ ಒಣಗಿಸಿದರೂ ಸರಿಯಾಗದು. ಹಾಗಾಗಿ ಮತ್ತೆ ತಕ್ಷಣ ಬ್ಯಾಟರಿ ಹಾಕುವ ಗೋಜಿಗೆ ಹೋಗಬೇಡಿ.

ಕೆಮಿಕಲ್‌ನಿಂದ ಕ್ಲೀನ್ ಮಾಡಿಸಿ.

ಹತ್ತಿರದ ಮೊಬೈಲ್ ರಿಪೇರಿ ಅಂಗಡಿಗೆ ಹೋಗಿ ಸ್ಮಾರ್ಟ್‌ಫೋನ್‌ ಅನ್ನು ಕೆಮಿಕಲ್ ಕ್ಲೀನ್ ಮಾಡಿಸಿ. ಈ ಕೆಮಿಕಲ್ ಸ್ಮಾರ್ಟ್‌ಫೋನ್‌ನಲ್ಲಿನ ನೀರಿನ ಎಲ್ಲಾ ಅಂಶಗಳನ್ನು ಹೊರತೆಗೆಯುತ್ತದೆ. ಮತ್ತು ಈ ರೀತಿಯ ಕೆಮಿಕಲ್ ಕ್ಲೀನ್ ಮಾಡಲು ಹೆಚ್ಚೆಂದರೆ 100 ರೂ.ಗಳನ್ನು ಚಾರ್ಜ್ ಮಾಡುತ್ತಾರೆ.

ಸ್ಮಾರ್ಟ್‌ಫೋನ್‌ ಬಗ್ಗೆ ಎಚ್ಚರಿಕೆ ಇರಲಿ.

ಬಿಸಿಲಿನಲ್ಲಿ ಎಷ್ಟು ದಿನ ಸ್ಮಾರ್ಟ್‌ಫೋನ್‌ ಒಣಗಿಸಿದರೂ ನೀರಿಗೆ ಬಿದ್ದ ಸ್ಮಾರ್ಟ್‌ಫೋನ್ ಅನ್ನು ಕೆಮಿಕಲ್ ವಾಶ್ ಮಾಡಿಸಲೇ ಬೇಕು. ಇಲ್ಲದಿದ್ದರೆ ಸ್ಮಾರ್ಟ್‌ಫೋನ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Have you ever accidentally dropped your smartphone in water? read this. to know more visit to kannada.gizbot.com
Please Wait while comments are loading...
Opinion Poll

Social Counting