ಕಂಪ್ಯೂಟರ್ ವೇಗ ಹೆಚ್ಚಿಸುವುದು ಹೇಗೆ? ಸುಲಭವಾದ 5 ಸ್ಟೆಪ್‌ಗಳು!!

ಕಂಪ್ಯೂಟರ್‌ ಸ್ಲೋ ಆಗಲು ನಮ್ಮ ತಪ್ಪುಗಳು ಸಹ ಕಾರಣವಾಗಿರಬಹುದೇ? ಹಾಗಾದರೆ ಮತ್ತೆ ಕಂಪ್ಯೂಟರ್‌ ವೇಗವನ್ನು ಹೆಚ್ಚಿಸುವುದು ಹೇಗೆ?

Written By:

ಕಂಪ್ಯೂಟರ್ ಕೊಳ್ಳುವುದಕ್ಕಿಂತ ಹೆಚ್ಚು ಅದರ ಸುರಕ್ಷತೆಯೇ ಕಷ್ಟ ಎನ್ನಬಹುದು!. ಖರೀದಿಸಿದ ಕೆಲವು ದಿನಗಳು ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸುವ ಕಂಪ್ಯೂಟರ್‌ಗಳು ನಂತರ ನಿಧಾನವಾಗಿ ಸ್ಲೋ ಆಗುತ್ತವೆ ಎನ್ನುವುದು ಎಲ್ಲರ ದೂರು.

ಇನ್ನು ಈ ರೀತಿಯ ಕಾರ್ಯ ನಿರ್ವಹಣೆ ಸಮಸ್ಯೆಯಿಂದ ಅನುಭವಿಸುವ ತೊಂದರೆ ಅಷ್ಟಿಷ್ಟಲ್ಲ! ಕಂಪ್ಯೂಟರ್‌ ಮೂಲಕ ಏನಾದರೂ ಪ್ರಮುಖ ಕಾರ್ಯಗಳನ್ನು ನಿರ್ವಹಿಸುವಾಗ ಈ ರೀತಿಯ ತೊಂದರೆಗಳು ಉಂಟಾದರೆ ನಮಗೆ ನಷ್ಟವೂ ಸಂಭವಿಸಬಹುದು. ಹಾಗಾಗಿ ನಮ್ಮ ಜೀವನದ ಅವಿಭಾಜ್ಯ ಅಂಗಗಳಲ್ಲಿ ಒಂದಾದ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.

2016ರ ಫೇಸ್‌ಬುಕ್‌ನಲ್ಲಿ ಭಾರತೀಯರು ಚರ್ಚಿಸಿದ ಟಾಪ್ 10 ವಿಷಯಗಳು!!

ಹಾಗಾದರೆ ಕಂಪ್ಯೂಟರ್ ಯಾಕೆ ಸ್ಲೋ ಆಗುತ್ತದೆ. ಕಂಪ್ಯೂಟರ್‌ ಸ್ಲೋ ಆಗಲು ನಮ್ಮ ತಪ್ಪುಗಳು ಸಹ ಕಾರಣವಾಗಿರಬಹುದೇ? ಹಾಗಾದರೆ ಮತ್ತೆ ಕಂಪ್ಯೂಟರ್‌ ವೇಗವನ್ನು ಹೆಚ್ಚಿಸುವುದು ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಡೆಸ್ಕ್‌ಟಾಪ್ ಕ್ಲೀನ್ ಆಗಿರಲಿ

ಎಲ್ಲಾ ಫೈಲ್‌ಗಳನ್ನು ಡೆಸ್ಕ್‌ಟಾಪ್‌ನಲ್ಲೇ ಇರಿಸಿಕೊಳ್ಳುವ ಅಭ್ಯಾಸ ಹೊಂದಿದ್ದರೆ ಅದನ್ನು ಬಿಟ್ಟುಬಿಡಿ. ಡೆಸ್ಕ್‌ಟಾಪ್ ಖಾಲಿ ಇಲ್ಲದಿದ್ದರೆ ನಿಮ್ಮ ಕಂಪ್ಯೂಟರ್ ಸ್ಲೋ ಆಗುತ್ತದೆ.

ಕಂಪ್ಯೂಟರ್ ಅಪ್‌ಡೇಟ್ ಮಾಡಿ

ಕಂಪ್ಯೂಟರ್ ಕಂಪನಿಗಳು ನೂತನವಾಗಿ ಬಿಡುಗಡೆ ಮಾಡುವ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ. ಇದರಿಂದ ನೀವು ಕಂಪ್ಯೂಟರ್ ಸುರಕ್ಷಿತವಾಗಿ ಇಟ್ಟಿಕೊಳ್ಳಬಹುದು ಮತ್ತು ಕಂಪ್ಯೂಟರ್ ವೇಗವಾಗಿಯೂ ಕಾರ್ಯನಿರ್ವಹಿಸುವಂತೆ ಮಾಡಬಹುದು.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅನಗತ್ಯ ಟೂಲ್‌ಬಾರ್‌ಗಳು ಬೇಡ:

ಹೊಸ ತಂತ್ರಾಂಶ ಅಳವಡಿಸಿಕೊಳ್ಳುವಾಗ ಹೆಚ್ಚಿನ ಟೂಲ್‌ಬಾರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಡಿ. ಈ ರೀತಿಯ ಅನಗತ್ಯ ತಂತ್ರಾಂಶಗಳು ನಿಮಗೆ ತಿಳಿಯದೆಯೇ ಇನ್‌ಸ್ಟಾಲ್ ಆಗಿ ನಿಮ್ಮ ಕಂಪ್ಯೂಟರ್ ಅನ್ನು ಸ್ಲೋ ಮಾಡಬಹುದು.

ಹಾರ್ಡ್‌ಡಿಸ್ಕ್ ಕ್ಲೀನ್ ಮಾಡಿ:

ನಿಮ್ಮ ಕಂಪ್ಯೂಟರ್‌ನ ಎಲ್ಲಾ ಜಂಕ್ ಫೈಲ್‌ಗಳೂ ಹಾರ್ಡ್ ಡಿಸ್ಕ್‌ನಲ್ಲಿ ಬಂದು ಕೂರುತ್ತವೆ. ಉಪಯೋಗವಿಲ್ಲದ ಫೈಲ್‌ಗಳನ್ನು ಡಿಲೀಟ್ ಮಾಡಿ. ಪ್ರೋಗ್ರಾಮ್ ಐಕಾನ್ ಕ್ಲಿಕ್ ಮಾಡಿ ಸಿಸ್ಟಂ ಟೂಲ್ಸ್ ನಲ್ಲಿರುವ ಡಿಸ್ಕ್ ಕ್ಲೀನ್ ಆಯ್ಕೆ ಮಾಡಿ ಇದು ಫೈಲುಗಳನ್ನು ವ್ಯವಸ್ಥಿತವಾಗಿರಿಸುತ್ತದೆ.

ಆಂಟಿವೈರಿಸ್ ಬಳಸಿ.

ಇಂದಿನ ದಿನಗಳಲ್ಲಿ ವೈರಸ್‌ಗಳು ಕಂಪ್ಯೂಟರ್ ಪ್ರವೇಶಿಸದಂತೆ ತಡೆಯಲು ಸಾಧಯವಿಲ್ಲ ಎನ್ನಬಹುದು!. ವೈರಸ್‌ಗಳು ನಿಮ್ಮ ಕಂಪ್ಯೂಟರನ್ನು ನಿಧಾನವಾಗಿಸುತ್ತವೆ ಮತ್ತು ಕಂಪ್ಯೂಟರ್‌ ಅನ್ನು ಹಾಳುಮಾಡುತ್ತವೆ. ಹಾಗಾಗಿ ಉತ್ತಮ ಗುಣಮಟ್ಟದ ಆಂಟಿವೈರಸ್ ಸಿಸ್ಟಮ್ ಅಲವಡಿಸಿಕೊಳ್ಳಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
your PC has gradually become slower or it suddenly ground to a halt a few minutes ago, there could be quite a few reasons for that slowness. To Know More Visit To kannada.gizbot.com
Please Wait while comments are loading...
Opinion Poll

Social Counting